"ಮಂಜಣ್ಣ ತಗೋ ಈ ಹೊಸ ಶರ್ಟ್ ಹಾಕಿಕೋ..ಬೆಂಗಳೂರಿಗೆ ಹೋಗ್ತಾ ಇದ್ದೀಯ ಅಲ್ವ..?"
ಇದು ಯಾವುದೇ ಚಿಕ್ಕ ಮಗು ಹೇಳಿದ ಮಾತಲ್ಲ..ಸುಮಾರು ಒಂದೇ ವಯಸ್ಸಿನವರಾದ ನಮ್ಮ ಅಪ್ಪ ಮತ್ತು ಅವರ ಚಿಕ್ಕಜ್ಜಿ ಮಗನ ನಡುವೆ ನಡೆದ ಸಂಭಾಷಣೆ..
ನಮ್ಮಪ್ಪ ಬೇಕು ಎಂದು ಕೇಳಲಿಲ್ಲ..ಆದ್ರೆ ಪರಿಸ್ಥಿತಿ ಅರ್ಥ ಮಾಡಿಕೊಂಡು ಆಗ ತಾನೇ ಅಂಗಡಿಯಿಂದ ತಂದಿದ್ದ ಹೊಚ್ಚ ಹೊಸ ಶರ್ಟನ್ನು ಕೊಟ್ಟವರು..ಇವರು
ನಾವು ನಮ್ಮ ವಸ್ತುವನ್ನು ಕೊಡಬೇಕೆಂದು ಸಾಮಾನ್ಯವಾಗಿ ಅನ್ನಿಸುವುದು ವಸ್ತು ಹಳೆಯದಾದಾಗ ಇಲ್ಲವೇ ಅದು ನಮಗೆ ಬೇಡವೆನಿಸಿದಾಗ..ಹೊಸ ವಸ್ತುಗಳನ್ನು ಕೊಡುವುದು ಇರಲಿ...ಇನ್ನೊಬ್ಬರಿಗೆ ತೋರಿಸಿದರೆ ಅವರು ಕೇಳಿಬಿಡುತ್ತಾರೆನೋ ಅನ್ನುವ ಅಳುಕು ಇರುತ್ತೆ..ಅಂಥಹ ಒಂದು ಮುಗ್ಧ ಮನಸಿನ ಯಜಮಾನ "ಪುಟ್ಟು" ಎನ್ನುವ ಈ ಮಹಾನುಭಾವರು.
ಸುಬ್ರಮಣ್ಯ ಎನ್ನುವ ಹೆಸರಿಂದ ನಾಮಾಂಕಿತರಾಗಿ "ಪುಟ್ಟು" ಎನ್ನುವ ಹೆಸರೇ ಶಾಶ್ವತವಾಗಿ ಉಳಿದು ಸಂಬಂಧಿಕರಲ್ಲಿ ಅದೇ ಹೆಸರಿನಿಂದ ಗುರುತಿಸಿಕೊಂಡರು ಇವರು..
ಶಿವಮೊಗ್ಗದಲ್ಲಿ ಎರಡು ಮನೆಯನ್ನು ಕೇವಲ ಒಂದೇ ಒಂದು ಗೋಡೆ ಬೇರೆ ಮಾಡಿತ್ತು..ಆದ್ರೆ ಆ ಗೋಡೆಗೂ ಒಂದು ಬಾಗಿಲು ಇತ್ತು..ಆ ಬಾಗಿಲು ಸದಾ ತೆರೆದೇ ಇತ್ತು..ಇಂತಹ ಎರಡು ಮನೆಯಲ್ಲಿ ಎರಡು ಕುಟುಂಬಗಳು ಒಂದೇ ಕುಟುಂಬದಂತೆ ಸುಮಾರು ಏಳೆಂಟು ವರುಷ ಸಂಸಾರ ಮಾಡಿತ್ತು..ರಕ್ತ ಸಂಬಂಧಕ್ಕಿಂತ ಮಾನವೀಯ ಸಂಬಂಧ ಅಧಿಕವಾಗಿದ್ದ ಆ ಕಾಲದಲ್ಲಿ ನಮ್ಮ ಕುಟುಂಬ ಹಾಗು "ಪುಟ್ಟು" ಅವರ ಕುಟುಂಬ ಎರಡು ಸೇರಿ ಸುಮಾರು ೧೨ ಮಂದಿ ಸುಖವಾಗಿ ಕಳೆದ ಆ ದಿನಗಳು ನಮ್ಮೆಲ್ಲರ ಬದುಕಿನಲ್ಲಿ ಒಂದು ಸುವರ್ಣ ಅಧ್ಯಾಯ ಎನ್ನಬಹುದು..
ಮಗುವಿನ ಮನಸು ಹೇಗೆ ಇರಬೇಕು..ಹೇಗೆ ಇರುತ್ತೆ ಅನ್ನುವುದು ಯಾವಾಗಲೂ ಯಕ್ಷ ಪ್ರಶ್ನೆಯಾಗಿ ಕಾಡಿತ್ತು..ಆದ್ರೆ ಸುಮಾರು ೭೪ -೭೫
ವಸಂತಗಳನ್ನು ಕಂಡರೂ ಮಗುವಿನ ಮುಗ್ದತೆ, ಮೃದು ಮಾತು, ಹಗುರ ಮನಸು ಇವೆಲ್ಲರ ಯಜಮಾನ ಇಂದು(೨೨ನೆ ಸೆಪ್ಟೆಂಬರ್ ೨೦೧೨) ನಮ್ಮೆಲ್ಲರನ್ನೂ ಬೆಳಿಗ್ಗೆ ಸುಮಾರು ಏಳು ಘಂಟೆಗೆ ಅಗಲಿದ್ದಾರೆ.
ಶ್ರೀ ಸುಬ್ರಮಣ್ಯ ("ಪುಟ್ಟು) |
ನಿಮ್ಮ ಆಶಿರ್ವಾದ ನಮ್ಮ ಮೇಲೆ ಇರಲಿ..ನಾವೆಲ್ಲರೂ ನಿಮ್ಮ ಕುಟುಂಬದ ಜೊತೆ ಸದಾ ಇರುತ್ತೇವೆ..
ಶ್ರೀ ಕಾಂತ್ ನಿಮ್ಮ ಈ ಲೇಖನ ಬಹಳ ನೆನಪುಗಳನ್ನು ಹೊತ್ತು ತಂದಿತು. ಆ ಹಿರಿಯರಿಗೆ ನನ್ನ ಗೌರವ ಪೂರ್ವಕ ನಮನಗಳು. ಅರ್ಥ ಪೂರ್ಣ ಲೇಖನ ನೀಡಿದ ನಿಮಗೆ ನನ್ನ ಸಲಾಂ.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಆತ್ಮೀಯ ಶ್ರೀಕಾಂತ,
ReplyDeleteಪುಟ್ಟು ಅವರ ಬಗ್ಗೆ ಬರೆದ ನಿನ್ನ ಶ್ರದ್ಧಾಂಜಲಿ ಮಾತುಗಳು ನನ್ನ ಹೃದಯವನ್ನು ತಟ್ಟಿದೆ. ಅವರ ಬಗ್ಗೆ ಹೆಚ್ಚು ಗೊತ್ತಿರದ ನನಗೆ ಒಂದು ಒಳ್ಳೆಯ ಘಟನೆಯ ಮೂಲಕ ಅವರ ಒಳ್ಳೆತನದ ಪರಿಚಯ ಮಾಡಿಸಿರುವೆ. " ಒಬ್ಬ ವ್ಯಕ್ತಿಯ ಒಳ್ಳೆ ಗುಣಗಳನ್ನು ಸ್ಮರಣೆ ಮಾಡುವುದರ ಮೂಲಕ ಆತನ ಜೀವನದ ಸಾಫಲ್ಯವನ್ನು ಎತ್ತಿ ಹಿಡಿಯಬಹುದು. ಯಾರ ಜೀವನವು ನಿಷ್ಪ್ರಯೋಜಕವಲ್ಲ , ಪ್ರತಿಯೊಬ್ಬರೂ ಪ್ರಯೋಜಕರೆ! ಆದರೆ ಅದನ್ನು ಗುರುತಿಸುವ ದೊಡ್ಡತನ ಬೇಕು" ಎಂದಿದ್ದಾರೆ ವಿವೇಕಾನಂದರು.
ಶ್ರೀಕಾಂತ ಇಂದು ನೀನು ಈ ಕೆಲಸ ಮಾಡಿರುವೆ. ನನಗೆ ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ. ನಿನ್ನೊಡನೆ ನಾವು ಪುಟ್ಟು ಮಾವನಿಗೆ ಶ್ರದ್ದ ಭಕ್ತಿಯಿಂದ ಶ್ರದ್ದಾಂಜಲಿ ಅರ್ಪಿಸುತ್ತೇವೆ.
ಇಂತು ನಿನ್ನ ಆತ್ಮೀಯ
ಆ ಮುಗ್ಧ ಮನಸ್ಸಿನ ಹಿರಿ ಚೇತನದ ಅಗಲಿಕೆಯನ್ನು ತುಂಬುವ ಶಕ್ತಿಯನ್ನು ಆ ದೇವರು ಕರುಣಿಸಲಿ.
ReplyDeleteಹಿರಿಯ ಚೇತನದ ಅಗಲಿಕೆಯು ನಮಗೆ ಯಾವಾಗಲೂ ವ್ಯಥೆಯ ಮಾತೇ. ಪುಟ್ಟುವಿರಂತಹ ನಿಸ್ವಾರ್ಥರು ನಮಗೆ ಅಪರೂಪಕ್ಕೆ ಸಿಗುತ್ತಾರೆ.
ReplyDeleteಅವರ ಆತ್ಮಕ್ಕೆ ದೇವರು ಶಾಂತಿಕೊಡಲಿ.
ಪುಟ್ಟು ಅವರ ಆತ್ಮಕ್ಕೆ ಶಾಂತಿ ಸಿಗಲಿ.. ನನಗೆ ಯಾವಾಗಲೂ.... ದೇವರು ಒಳ್ಳೆಯವರನ್ನು ಬೇಗ ತನ್ನ ಬಳಿಗೆ ಕರೆಸಿಕೊಳ್ತಾನೆ ಅನಿಸುವುದುಂಟು....
ReplyDeleteಭಾವ (ಪುಟ್ಟು) ನವರ ಬಗ್ಗೆ ಎಷ್ಟು ಬರೆದರೂ ಸಾಲದು... ಅವರ ಸರಳ ಸಜ್ಜನಿಕೆ ಜೀವನ ನಮಗೆಲ್ಲ ದಾರಿದೀಪ.... ಅವರ ಆತ್ಮಕ್ಕೆ ಶಾಂತಿ ಕೊರುವುದೊಂದೇ ನಾವು ಅವರಿಗೆ ತೋರುವ ಗೌರವ
ReplyDeleteಶ್ರೀಕಾಂತ, ಚೆನ್ನಾಗಿದೆ ಅನ್ನದೆ ಬೇರೆ ಶಬ್ದ ತೋಚುತ್ತಿಲ್ಲ. ಈ ಸಾಲುಗಳು ನನ್ನನ್ನು ತಾಕಿದವು...
ReplyDelete.... ಎರಡು ಮನೆಯನ್ನು ಕೇವಲ ಒಂದೇ ಒಂದು ಗೋಡೆ ಬೇರೆ ಮಾಡಿತ್ತು..ಆದ್ರೆ ಆ ಗೋಡೆಗೂ ಒಂದು ಬಾಗಿಲು ಇತ್ತು..ಆ ಬಾಗಿಲು ಸದಾ ತೆರೆದೇ ಇತ್ತು....
ನಿನ್ನವ
ರಜನೀಶ
ಸರ್,
ReplyDeleteಮನೆಗಳ ಆ ಬಾಗಿಲು ಸದಾ ತೆರೆದೇ ಇತ್ತು..ಈಗ ಅದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತೆ ಸ್ಥಿತಿಯುಂಟಾಗಿದೆ...
ಮಗು ಮನಸ್ಸಿನ ಚೇತನದ ಆಗಲಿಕೆಯ ನೋವು ಬರಿಸುವ ಶಕ್ತಿಯನ್ನು ದೇವರು ನೀಡಲಿ...
Srikanth: Namma puttuvina bagge tilisalu nannabaali bekaadashtu ide aadare avana mugda nageyonde sadaa nenepu irutte. Nanage yaavagalu avanu bahala hattiraviddata- Aravattu samvatsaragalalli nannodane bittu hodaddu eega nenepu matra. 'Bhagavantha avana atmakke Chirashanthi needali' ennuvudonde nanna korike.
ReplyDeleteGOPAL SHIKARIPUR
ಹಿರಿಯ ಜೀವಕ್ಕೆ ಕಂಬನಿ ಮಿಡಿದ, ಶ್ರದ್ಧಾಂಜಲಿ ಅರ್ಪಿಸಿದ ಎಲ್ಲರಿಗೂ ವಂದನೆಗಳು
ReplyDelete