ನಮ್ಮ ಅಜ್ಜಿಯ ತಂಗಿಯಾದ ನಾಗರತ್ನ ಅಜ್ಜಿ ಸುಮಾರು ಎಂಬತ್ತೈದು ವಸಂತಗಳನ್ನು ಕಳೆದು ಇಂದು ಮುಂಜಾನೆ ಸುಮಾರು ೧೨.೩೦ ನಮ್ಮನ್ನ ಅಗಲಿ ಪರಲೋಕದ ಕಡೆಗೆ ಪ್ರಯಾಣ ಬೆಳಸಿದರು.
ನಾನು ಸುಮಾರು ಐದು-ಆರು ವರುಷದ ಕೂಸಾಗಿದ್ದಾಗ ನಮ್ಮನ್ನ ಬಿಟ್ಟು ಅಗಲಿದ ಅಜ್ಜಿಯಾ ನಂತರ ಅವರ ಸೋದರಿಯಾದ ನಾಗರತ್ನ ಅಜ್ಜಿಯೇ ಆ ಸ್ಥಾನವನ್ನು ತುಂಬಿದ್ದರು. ಯಾವಗೆಲ್ಲ ಅಜ್ಜಿಯ ನೆನಪಾದಾಗ ಮನಸು ಶಿವಮೊಗ್ಗದ ಕಡೆ ಹೊರಳುತ್ತಿತ್ತು.
ನಮ್ಮ ಕೊರವಂಗಲ ಕುಟುಂಬಕ್ಕೆ ಸದಾ ಹತ್ತಿರ ಇದ್ದ, ಆಶಿರ್ವದಿಸುತಿದ್ದ ಒಂದು ಹಿರಿಯ ಚೇತನ ನಮ್ಮನ್ನ ಅಗಲಿದ್ದಾರೆ. ಕಳೆದ ಒಂದು ವರುಷದ ಅವದಿಯಲ್ಲಿ ಎರಡು ಬಾರಿ ನೋಡಿ, ನಲಿದು ಆಶೀರ್ವಾದ ಪಡೆದ ಬಗ್ಗೆ ನೆನದರೆ ಕಣ್ಣಾಲಿಗಳು ತುಂಬಿ ಬರುತ್ತೆ..
ನಾಗರತ್ನ ಅಜ್ಜಿಯು ಜೀವನದ ಸುಂದರ ಕ್ಷಣಗಳಲ್ಲಿ ದಾಖಲಿಸಬೇಕಾದ್ದು ತುಂಬಾ ಇದೆ ಅದರಲ್ಲಿ ಕೆಲವು
- ತುಂಬು ಸಂಸಾರವನ್ನು ಸುಂದರವಾಗಿ ಯಶಸ್ಸಿನತ್ತ ನಡೆಸಿದರು
- ನಮ್ಮ ಅಪ್ಪನಿಗೆ ತೋರಿಸಿದ ಪ್ರೀತಿ, ವಿಶ್ವಾಸ ಯಾವಾಗಲು ಸ್ಮರಣೀಯ
- ಬಸುರಿ, ಬಾಣಂತಿಯರಿಗೆ ಕೊಡುವ ಮದ್ದು ಶಿವಮೊಗ್ಗ ಹಾಗು ಸುತ್ತಲ ಪ್ರದೇಶದಲ್ಲಿ ಜನ-ಜನಿತವಾಗಿ ಪತ್ರಿಕೆಯಲ್ಲೂ ಪ್ರಕಟವಾಗಿದ್ದು ಸಂತಸದ ಕ್ಷಣಗಳು.
- ಸತತ ಮೂರು ಪೀಳಿಗೆಯಲ್ಲಿ ಮೊದಲ ಮಗು ಗಂಡಾಗಿ..ಸುವರ್ಣ ಅಭಿಷೇಕ ಮಾಡಿಸಿಕೊಂಡಿದ್ದು
- ತನ್ನ ಮೊಮ್ಮಕ್ಕಳ ಮದುವೆಯ ಸಂಭ್ರಮದಲ್ಲಿ ನಲಿದ ಹಿರಿಯ ಚೇತನ