Friday, December 23, 2011

ನಾಗರತ್ನ ಅಜ್ಜಿಯ ಸುಂದರ ಬದುಕಿಗೆ ಒಂದು ನಮನ

 ನಮ್ಮ ಅಜ್ಜಿಯ ತಂಗಿಯಾದ ನಾಗರತ್ನ ಅಜ್ಜಿ ಸುಮಾರು ಎಂಬತ್ತೈದು ವಸಂತಗಳನ್ನು ಕಳೆದು ಇಂದು ಮುಂಜಾನೆ ಸುಮಾರು ೧೨.೩೦ ನಮ್ಮನ್ನ ಅಗಲಿ ಪರಲೋಕದ ಕಡೆಗೆ ಪ್ರಯಾಣ ಬೆಳಸಿದರು.

ನಾನು ಸುಮಾರು ಐದು-ಆರು ವರುಷದ ಕೂಸಾಗಿದ್ದಾಗ ನಮ್ಮನ್ನ ಬಿಟ್ಟು ಅಗಲಿದ ಅಜ್ಜಿಯಾ ನಂತರ ಅವರ ಸೋದರಿಯಾದ ನಾಗರತ್ನ ಅಜ್ಜಿಯೇ ಆ ಸ್ಥಾನವನ್ನು ತುಂಬಿದ್ದರು. ಯಾವಗೆಲ್ಲ ಅಜ್ಜಿಯ ನೆನಪಾದಾಗ ಮನಸು ಶಿವಮೊಗ್ಗದ ಕಡೆ ಹೊರಳುತ್ತಿತ್ತು. 

ನಮ್ಮ ಕೊರವಂಗಲ ಕುಟುಂಬಕ್ಕೆ ಸದಾ ಹತ್ತಿರ ಇದ್ದ, ಆಶಿರ್ವದಿಸುತಿದ್ದ ಒಂದು ಹಿರಿಯ ಚೇತನ ನಮ್ಮನ್ನ ಅಗಲಿದ್ದಾರೆ.  ಕಳೆದ ಒಂದು ವರುಷದ ಅವದಿಯಲ್ಲಿ ಎರಡು ಬಾರಿ ನೋಡಿ, ನಲಿದು ಆಶೀರ್ವಾದ ಪಡೆದ ಬಗ್ಗೆ ನೆನದರೆ ಕಣ್ಣಾಲಿಗಳು ತುಂಬಿ ಬರುತ್ತೆ..

ನಾಗರತ್ನ ಅಜ್ಜಿಯು ಜೀವನದ ಸುಂದರ ಕ್ಷಣಗಳಲ್ಲಿ  ದಾಖಲಿಸಬೇಕಾದ್ದು ತುಂಬಾ ಇದೆ ಅದರಲ್ಲಿ ಕೆಲವು
  • ತುಂಬು ಸಂಸಾರವನ್ನು ಸುಂದರವಾಗಿ ಯಶಸ್ಸಿನತ್ತ ನಡೆಸಿದರು
  • ನಮ್ಮ ಅಪ್ಪನಿಗೆ ತೋರಿಸಿದ ಪ್ರೀತಿ, ವಿಶ್ವಾಸ ಯಾವಾಗಲು ಸ್ಮರಣೀಯ
  • ಬಸುರಿ, ಬಾಣಂತಿಯರಿಗೆ ಕೊಡುವ ಮದ್ದು ಶಿವಮೊಗ್ಗ ಹಾಗು ಸುತ್ತಲ ಪ್ರದೇಶದಲ್ಲಿ ಜನ-ಜನಿತವಾಗಿ ಪತ್ರಿಕೆಯಲ್ಲೂ ಪ್ರಕಟವಾಗಿದ್ದು ಸಂತಸದ ಕ್ಷಣಗಳು. 
  • ಸತತ ಮೂರು ಪೀಳಿಗೆಯಲ್ಲಿ ಮೊದಲ ಮಗು ಗಂಡಾಗಿ..ಸುವರ್ಣ ಅಭಿಷೇಕ ಮಾಡಿಸಿಕೊಂಡಿದ್ದು
  • ತನ್ನ ಮೊಮ್ಮಕ್ಕಳ ಮದುವೆಯ ಸಂಭ್ರಮದಲ್ಲಿ ನಲಿದ ಹಿರಿಯ ಚೇತನ
 ಅವರ ಜೀವನದ ರೂಪು ರೇಷೆಗಳು, ನಡೆದ ಮಾರ್ಗ, ನುಡಿದ ಮಾತುಗಳು ಯಾವಾಗಲು ನಮಗೆ ದಾರಿ ದೀಪ..

2 comments:

  1. ಹಿರಿಯ ಜೀವಕ್ಕೆ ಸಾಷ್ಟಾಂಗ ಪ್ರಣಾಮ.
    ಮಾಗಿದಂತೆ ಮನ ಶುದ್ದವಾದರೆ ಬದುಕು ಸಾರ್ಥಕವೆನಿಸುತ್ತದೆ. ನಾವು ಬದುಕುವ ಈ ಸುಂದರ ಜಗತ್ತಿನಲ್ಲಿ ಕಾಣಲು ಇಂತಹ ಹಿರಿಯ ಜೀವಗಳ ಸಾರ್ಥಕ ಬದುಕು ಸಿಗುತ್ತವೆ. ನೋಡುವ ಕಣ್ಣಿನ ಜೊತೆಗೆ ಸಾರ್ಥಕತೆಯನ್ನು ಗುರುತಿಸುವ ಹೃದಯ ವೈಶಾಲ್ಯ ಬೇಕು. ಈ ಕೆಲಸ ನೀನು ಮಾಡಿದ್ದಿಯ. ಇದರಿಂದ ಅವರ ಸಾರ್ಥಕ ಬದುಕಿಗೆ ಗೌರವ ನೀಡುವುದರ ಜೊತೆಗೆ ನಮ್ಮಂತಹ ಸಾಮಾನ್ಯರಿಗೆ ದಿಕ್ಸೂಚಿ ಸಿಕ್ಕಂತಾಗುತ್ತದೆ.
    ಸಾರ್ಥಕ ಬದುಕಿನತ್ತ ಸಾಗೋಣ,
    ಧನ್ಯವಾದಗಳು,
    ಪ್ರಕಾಶ್

    ReplyDelete
  2. Hi Srikanth
    Thanks to your comments pasted on the face book regarding our BELOVED MOTHER and the love you all showing. It is just symbolizes the affection reciprocation towards elders who nurished your loving nature in your young age. Convey our concern over health equally on your loving FATHER and MOTHER. -Gopal and Vasantha

    ReplyDelete