Wednesday, November 16, 2011

ಜ್ಞಾನದ ಕಿಚ್ಚನ್ನು ಹಚ್ಚುವ "ಪ್ರಕಾಶ"ರ ಜೊತೆ ಜ್ಞಾನದ ಒಡತಿ "ಶಾರದೆ" - ಮೈತ್ರಿ

ಮನೆ ಬೇಕಾ ಅಥವಾ ಅನುಗ್ರಹವಿರುವ ಸದನ ಬೇಕಾ ಅಂದ್ರೆ ಯಾವಾಗಲು ನನ್ನ ಮನ ಸದನಕ್ಕೆ ಹಾತೊರೆಯುತ್ತದೆ..

ಮೈತ್ರಿ ಹೊರಗಿನಿಂದ!!!!
ನಾನು ಸುಮಾರು ಮನೆಗಳಿಗೆ, ಗೃಹಪ್ರವೇಶಕ್ಕೆ ಹೋಗಿದ್ದೇನೆ..ಒಂದು ಮನೆ ತನ್ನ ವಿನ್ಯಾಸದಿಂದ, ಅಲಂಕಾರಗಳಿಂದ ಕಣ್ಣು ಸೆಳೆಯುತಿತ್ತು...ಆದ್ರೆ ನನ್ನ ಮನ ಸದಾ  ಮನಸನ್ನು ಸೂರೆಗೊಳ್ಳುವ ಮನೆಯನ್ನು ಹುಡುಕುತ್ತಲೇ ಇತ್ತು...

ಅಂತಹ  ಒಂದು ಸುಂದರ ಸುವರ್ಣ ಕ್ಷಣಗಳು ಹಾಸನದಲ್ಲಿ ಸಾಲಗಾಮೆ ರಸ್ತೆಯಲ್ಲಿನ ಒಂದು "ಮೈತ್ರಿ" ಕೂಟದಲ್ಲಿ ಸಿಕ್ಕಿತು..
ಈ "ಮೈತ್ರಿ"ಯಾ  ಆತ್ಮವಾಗಿರುವುದು ನನ್ನ ಚಿಕ್ಕಪ್ಪ ಆದ ಆನಂದದ ಹಾಗು ಜ್ಞಾನದ ಚಿಲುಮೆ ಹತ್ತಿಸುವ "ಪ್ರಕಾಶ"..ಅವರ ಮನದೊಡತಿ ನನ್ನ ಚಿಕ್ಕಮ್ಮ "ಶಾರದ"..

ಎಂತಹ ಒಂದು ಅದ್ಬುತ ಸುಯೋಗ ಹಾಗು ಸಂಯೋಗ...

"ಮೈತ್ರಿ"ಯ ಮೈತ್ರಿ ಜೋಡಿ
ಜ್ಞಾನದ ಕಿಚ್ಚನ್ನು ಹಚ್ಚುವ "ಪ್ರಕಾಶ"ರ ಜೊತೆ ಜ್ಞಾನದ ಒಡತಿ "ಶಾರದೆ"

ಎಲ್ಲವು ಅಚ್ಚು ಕಟ್ಟು...ಪ್ರತಿಯೊಂದು ವಸ್ತುವು ಒಂದು ಕಥೆ ಹೇಳುತ್ತೆ!!!
ಹೊರಗಿನಿಂದ ಮನೆ ವಿನ್ಯಾಸ ನೋಡಿದರೆ...ಎಲ್ಲವು ಖಾಲಿ ಖಾಲಿ ಯಾಕೆ ಇಷ್ಟೊಂದು ಸ್ಥಳ ವ್ಯರ್ಥ ಮಾಡಿದ್ದರೆ ಅಂತ ಅನ್ನಿಸೋದು ಬಹು ಸಹಜ...ಒಳಗೆ ನಿಧಾನವಾಗಿ ಹೊಕ್ಕಂತೆ..ಮನೆ ಅಚಾನಕ್ಕಾಗಿ "ಗೃಹ"/"ಸದನ"ವಾಗಿ ಮಾರ್ಪಾಡಾಗುವುದು ಇಲ್ಲಿನ ಸೋಜಿಗಗಳಲ್ಲಿ ಒಂದು...

ಮನುಜನಿಗೆ ಮನೆಯಲ್ಲಿ ಎಷ್ಟು ಜಾಗ ಬೇಕೂ ಅಷ್ಟೇ ತನ್ನ ಮನಸಿಗೂ ಜಾಗ ಬೇಕು ಅನ್ನಿಸುವ ಒಂದು ಸಣ್ಣ ಕೋಣೆ ನನಗೆ ತುಂಬಾ ಕಾಡಿತು...ಇಂತಹ ಒಂದು ಅದ್ಬುತ ಸನ್ನಿವೇಶ "ಅಮೃತವರ್ಷಿಣಿ"ಸಿನೆಮಾದಲ್ಲೂ ಮೂಡಿ ಬಂದಿದೆ...ಒಂದು ಕೋಣೆಯಲ್ಲಿ ಏನು ಇಲ್ಲದೆ ಖಾಲಿ ಕೋಣೆಯಲ್ಲಿ ತಮ್ಮ ಮನಸಿನ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ ದೃಶ್ಯ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ನಿರ್ದೇಶಕ ದಿನೇಶ್ ಬಾಬು.

ಜ್ಞಾನ ಪ್ರಕಾಶ ಹಚ್ಚುವ ಶಾರದ ವಿಲಾಸ
ಅಂತಹ ಒಂದು ಸೊಗಸಾದ ಕೋಣೆ ಈ ಸದನದಲ್ಲೂ ಕಂಡು ಬಂದಿತು......ಅದಕ್ಕೆ ನಾನು ಕೊಟ್ಟ ಹೆಸರು
"ಜ್ಞಾನ ಪ್ರಕಾಶ ಹಚ್ಚುವ ಶಾರದ ವಿಲಾಸ"

ಜ್ಞಾನ ಭಂಡಾರ
ಚಿಕ್ಕಪ್ಪ "ಪ್ರಕಾಶ" ರಚಿಸಿದ ರೇಖಾ ಚಿತ್ರ
ಈ ಸದನದಲ್ಲಿ ಪ್ರತಿಯೊಂದು ವಸ್ತುವು ಅಚ್ಚುಕಟ್ಟು..ವಸ್ತುಸಂಗ್ರಹಾಲಯ, ಗ್ರಂಥಾಲಯ, ಜ್ಞಾನ ಭಂಡಾರ, ಎಲ್ಲವು ಸಮೃದ್ಧ

ಮೈತ್ರಿಯ ಯಜಮಾನ ಹೆಮ್ಮೆಯ ಮೈತ್ರಿಯ ನಗುಮುಖದೊಂದಿಗೆ
ಈ ಸದನದ ವಿನ್ಯಾಸಕಾರರು,ಯಜಮಾನರು,ಯಜಮಾನತಿ, ಸದಸ್ಯರಿಗೂ ಎಲ್ಲರಿಗು ಮನದಲ್ಲೇ ನಮನ ಹೇಳುತ್ತಾ ಹೊರಗೆ ಬಂದಾಗ ಮನಸು ಏನನ್ನೋ ಪಡೆದ,ಸಾಧಿಸಿದ ಒಂದು ಅದ್ಬುತವನ್ನು ನೋಡಿ ಪುಲಕಿತನಾಡೆ ಎಂದು ನನ್ನ ಬೆನ್ನನ್ನು ತಾನೇ ತಟ್ಟಿತು...

6 comments:

  1. Thank you putty..yes indeed..wonderful soothing effect when you come out of...

    ReplyDelete
  2. I liked it mosttttttttttt sooooperrr mane :) Japanese 5s+1 principle illi acchukattagi paalisiddare.

    ReplyDelete
  3. Thank you giri...yes..first thing it is very clean...we should commend the efforts to keep the slate neat...and second thing is the plan, the execution, and the maintenance...just it keeps your soul on a high pedestal when we walk around...

    Hatts off to the Maitri.

    ReplyDelete
  4. Dear sreekanth,
    Thank you for your beautiful photographs.It looks beautiful than what it is! thanks for sharing this with your friends and their comments. Yesterday I had an opportunity to talk to my friend Architect to share some of the pictures of the low cost houses which he planned and built. He has agreed to share. During your next visit let us plan to visit some of the beautiful low cost houses in and around Hassan, in turn this helps the common man to think in this direction if he has any plans to construct a new house. If you can inform me one day early, it is enough.
    Thank you
    Prakash H N

    ReplyDelete
  5. Thanks you chikkappa for the nice words, and encouraging thoughts...will be visiting hassan frequently..but i will it make it to a point to spend sufficient amount in "mythri" as well...my recharging point for the soothing soul....

    ReplyDelete