ವಿಶ್ವಾಮಿತ್ರ : ರಾಜ ಸತ್ಯಹರಿಶ್ಚಂದ್ರ, ಪ್ರಪಂಚದಲ್ಲಿ ನೀನು ತುಂಬಾ ಸತ್ಯವಂತ ಎಂದು ಬಿರುದು ಇದೆ... ಅದನ್ನು ನಾನು ಪರೀಕ್ಷೆಮಾಡಬೇಕು
ಸತ್ಯಹರಿಶ್ಚಂದ್ರ : ನಮಸ್ಕಾರ ಮುನಿಶ್ರೇಷ್ಟರೆ..ಹೇಳಿ...ನಿಮ್ಮ ಪರೀಕ್ಷೆಗೆ ನಾನು
ಸಿದ್ದ
ವಿಶ್ವಾಮಿತ್ರ : ಪ್ರಪಂಚದಲ್ಲಿ ಅತಿ ತೆಳ್ಳಗೆ ಇರುವ ವಸ್ತು ಯಾವುದು
ಸತ್ಯಹರಿಶ್ಚಂದ್ರ : ಶ್ರೀಕಾಂತನ ವಲ್ಲಭೆ , ಪ್ರಾಣವಲ್ಲಭೆ,
ವಿಶ್ವಾಮಿತ್ರ : ರಾಜ, ಏನಾಯಿತು ನಿನ್ನ ಸತ್ಯ-ಸಂಧತೆ, ನಿನ್ನ ಉತ್ತರ ನನಗೆ
ಸರಿ ಅನ್ನಿಸಲಿಲ್ಲ
ಸತ್ಯಹರಿಶ್ಚಂದ್ರ :ಮುನಿ ಪುಂಗವ, ಸವಿತಾ, ಸೂರ್ಯನ ಬೆಳಕಿಗಿಂಥಲೂ ಸಣ್ಣ...ಬೆಂಗಳೂರಿನಂಥ ಮಹಾನಗರದಲ್ಲಿ, ಆರಕ್ಷಕನು ಹಣ ತೆಗೆದುಕೊಳ್ಳುವ ಬದಲು, ಹಣವನ್ನೇ ಕೊಟ್ಟಂಥಹ ಘಟನೆ ಇದೆ..ಹಿಂಗಾಗಿ..ಶ್ರೀಮತಿ ಸವಿತಾ ಶ್ರೀಕಾಂತ್ ಪ್ರಪಂಚದಲ್ಲಿ ಅತಿ ತೆಳು, ಸಣ್ಣ, ಹಂಚಿ ಕಡ್ಡಿ ತರಹ ಇರುವ ವಸ್ತು,ಮಾನವಳು, ಜೀವ ಸೃಷ್ಟಿ....
ವಿಶ್ವಾಮಿತ್ರ : ತಿಳಿಯಿತು, ತಿಳಿಯಿತು...ನೀನು ಸುಳ್ಳು ಹೇಳುವುದು, ಸವಿತಾ ದಪ್ಪ
ಆಗುವುದು, ಎರಡು ಅಸಂಭವ....ನಾನು ಸವಿತಳಿಗೆ ಆರೋಗ್ಯಪೂರ್ಣ, ಅಭಿವೃದ್ಧಿಪೂರ್ಣ, ಸಂತೋಷಪೂರ್ಣ ಶುಭಘಳಿಗೆ ಹಾಗು ಸಂವತ್ಸರಗಳನ್ನು ನನ್ನ ತಪಸ್ಸು ಮತ್ತು ಶಕ್ತಿ ಧಾರೆ ಎರೆಯುತ್ತಿದ್ದೇನೆ.....ಕೊರವಂಗಲ ಕುಟುಂಬದ ಪರವಾಗಿ
ಅವಳ ಜನ್ಮ ಶುಭದಿನದ ಶುಭಾಶಯ ಕೋರುತ್ತೇನೆ ಹಾಗು ಹಾರೈಸುತ್ತೇನೆ.
ಹೆಂಡತಿ ಮೇಲೆ ಕೋಪ ತಿರಿಸಿಕೊಳ್ಳೋಕೆ ಒಳ್ಳೆ ಉಪಾಯ
ReplyDeleteGood 1..
ReplyDeleteWish U r wife Happy Birthday from my side.. :)