ವಿಶ್ವರೂಪ ನೋಡಿದ ಅರ್ಜುನ ಸ್ವಲ್ಪ ಘಳಿಗೆ ಮಂಕಾಗಿ ಹೋಗಿಬಿಟ್ಟ...
ಕೃಷ್ಣ ಕೇಳಿದ ಯಾಕೆ ಪಾರ್ಥ ಏನಾಯಿತು...ಯಾಕೆ ಹೀಗೆ ಕುಳಿತುಬಿಟ್ಟೆ
ಪರಮಾತ್ಮ ನಿನ್ನ ವಿಶ್ವರೂಪ ನೋಡಿದ ಮೇಲೆ ನನಗೆ ಒಂದು ಸಂದೇಹ.....
ನಿನ್ನಲ್ಲಿ ಎಲ್ಲವು, ಎಲ್ಲರು ಸೇರಿ ಹೋಗಿದ್ದಾರೆ...ಹಾಗೆಯೇ ಮನುಕುಲ ಸಂಕುಲದಲ್ಲಿ ಹೀಗೂ ಉಂಟೆ ಅಂತ TV9 ನಾರಾಯಣಸ್ವಾಮಿ ಕೇಳ್ತಾ ಇದ್ದಾರೆ...ಇದಕ್ಕೆ ಏನು ಹೇಳಲಿ ಅಂತ
ಕೃಷ್ಣ ನಾರಾಯಣಸ್ವಾಮಿಗೆ ಕರೆ ಮಾಡಿ, ನಾಣಿ ವಿಶ್ವರೂಪ ಸದ್ಯಕ್ಕೆ ಬೇಡ....ರಜನಿರೂಪ ನೋಡಿ ಬಾ ಅಂತ....
ಪಾರ್ಥನಿಗೆ ಕಸಿವಿಸಿ ಆಯಿತು...ಇದೇನಪ್ಪ ಹೊಸ ವಿಷ್ಯ, ರಜನಿರೂಪ ಅಂತ...
ಕೃಷ್ಣ ಹೇಳ್ತಾನೆ...ರಜನಿರೂಪ ಕೂಡ ವಿಶ್ವರೂಪದ ಹಾಗೆ..ಎಲ್ಲ ವಿಷಯವು ಎಲ್ಲರ ಮಾಹಿತಿಯು ಸಿಗುತ್ತೆ...ಯಾಕೆಂದರೆ...ಅವರ ಪುತ್ರ ರತ್ನ ನಮ್ಮ ಭಾರತ ದೇಶದ ಆದಿ ಪುರುಷನ ಹೆಸರೇ ಇದೆ...
ಹಾಗಾಗಿ ರಜನೀಶ + ರೂಪ = ರಜನಿರೂಪ ಅಂದ್ರೆ ಭರತ್ ಆಗುತ್ತೆ...
ಈದಿನ ಅವರ ವೈವಾಹಿಕ ಜೀವನದ ಮಹೋತ್ಸವ ಅವರಿಗೆ ಶುಭಾಶಯ ಹೇಳೋಕೆ ನಾವು ಖುಶಿಪದುತ್ತೇವೆ
ನೀವು ನಮ್ಮಂತೆ ಆಗಬೇಕೆ....ಹಾಗಿದ್ದರೆ ವೀಕ್ಷಿಸಿ ಹಿಂಗೆ ಉಂಟೋ.....
ಪ್ರತಿಕ್ರಿಯೆ ತಡವಾಗ್ತಿದೆ... ಎಲ್ಲರ ಕ್ಷಮೆ ಇರಲಿ...
ReplyDeleteವಿವಾಹೋತ್ಸವದ ಸಂಭ್ರಮದಲ್ಲಿದ್ವಿ ಹಾಗಾಗಿ!!
*****
ನಾನೂ ಅಷ್ಟೇ ದಂಗಾಗಿಬಿಟ್ಟೆ! ಯಾಕೇಂದ್ರಾ?
ನನ್ನ ಮುಖಕ್ಕೆ ಬರೀ ಕನ್ನಡಿ ಹಿಡಿದ್ರೆ ಬೆಚ್ಚಿ ಬೀಳ್ತೀನಿ...
ಅಂಥಾದ್ರಲ್ಲಿ ಭೂತಗನ್ನಡಿ ಹಿಡಿಬಿಟ್ರೆ ಕೇಳ್ಬೇಕೆ...!
ಮಿಂಚೋಲೆ ನೋಡ್ತಿದ್ದ ಹಾಗೆ ಚೇರ್‌ನಿಂದ ಕುಸಿದು ಹಿಂದೆಬಿದ್ದೆ
ಸ್ವಲ್ಪ ಸಾವರಿಸಿಕೊಂಡು ನಿಧಾನವಾಗಿ ನೋಡಿದೆ,
ಎಲ್ಲೋ ನೋಡಿದ ಹಾಗೆ, ಕೇಳಿದ ಹಾಗಿದೆ ಅಂತ ಮತ್ತೊಮ್ಮೆ
ಮಿಂಚೋಲೆಯನ್ನೇ ದಿಟ್ಟಿಸಿ ನೋಡಿದೆ. ನನ್ನ ಮುಖವೇ ಕಾಣ್ತಿದೆ!
ಅರೇ ನಾನೇ, ರ..ಜ..ನೀ..ಶ.. ಆಶ್ಚರ್ಯ ಸಂತೋಷ ಎರಡೂ ಆಯ್ತು.
ಅವಯವಗಳಲ್ಲಿ ಸತಿ-ಸುತರನ್ನು ಕಂಡು ಮತ್ತೂ ಸಂತೋಷವಾಯ್ತು.
ಏನಾದ್ರೂ ಇರಲಿ... ಹೊಸ ಧಾಟಿಯಲ್ಲಿ ಶುಭಾಶಯಗಳನ್ನು
ಕಳಿಸುವ ಪರಿ ಬಹಳ ಅಪ್ಯಾಯವಾಗುತ್ತೆ. ದಿನವೂ ಹುಟ್ಟುಹಬ್ಬವೋ,
ವಿವಾಹಮಹೋತ್ಸವವೋ ಮಾಡಿಕೊಳ್ಳಬಾರ‍್ದೇಕೆ ಅಂತನ್ಸುತ್ತೆ?
ಅಂಥದೊಂದು ಆಲೋಚನೆಯ ಹಿಂದೆಯೇ
‘ಜೀವನಾಂದ್ರೆ ಉತ್ಸವವೇ ಅಲ್ಲವೇ!’ ಎಂಬ
ನವಿರಾದ ಭಾವವೊಂದು ತೇಲಿ ಬಂದು
ಎಲ್ಲ ಒತ್ತಡಗಳನ್ನು ಕರಗಿಸಿ ಜೀವನ ಯಾನವನ್ನು ಹಗುರಾಗಿಸಿಬಿಡುತ್ತದೆ.
ಶುಭಾಶಯಗಳನ್ನು ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು.
ಇಂತಿ
ರೂ...ಭ..ರ