Monday, April 27, 2026

"ಮಾವಿನ ಹಣ್ಣು ಬೇಕಾ.. "

ವಾರದ ಅಂತ್ಯ.. 

ಒಂದಷ್ಟು ರೀಲುಗಳು, ಯು ಟ್ಯೂಬ್ ಕ್ಲಿಪ್ಪುಗಳು ಅಂತ ಕೂತಿದ್ದ ..

ಕನ್ನಡದ ಚಿತ್ರರಂಗದಲ್ಲಿ ಪ್ರಾಯಶಃ ಮೊದಲ ಬಾರಿಗೆ ಟಾಕೀಸಿನ ಮುಂದೆ "ಹೆದರಿಕೆಯುಳ್ಳವರು, ಗರ್ಭಿಣಿ ಸ್ತ್ರೀಯರು ಈ ಚಿತ್ರ ನೋಡಬೇಡಿ ಅಂತ ಫಲಕ ಹಾಕಿಸಿಕೊಂಡ ಚಿತ್ರ ನಾ ನಿನ್ನ ಬಿಡಲಾರೆ

ಅದರಲ್ಲಿಯೂ ಸ್ಮಶಾನದಲ್ಲಿ ಅನಂತ್ ನಾಗ್ ತಿರುಗಿ ನೋಡುವ ದೃಶ್ಯ ಎಂಥಹ ಗಟ್ಟಿ ಎದೆಯರ ಗುಂಡಿಗೆಯನ್ನು ಒಮ್ಮೆ ಝಲ್ ಎನಿಸಿದ್ದು ಸುಳ್ಳಲ್ಲ.. 

 ಅವನಿಗೂ ಅನುಭವವಾಗಿತ್ತು.. ಬಾಲಕನಾಗಿದ್ದಾಗ ಆ ಚಿತ್ರವನ್ನು ನೋಡಿದ್ದು ಹಸಿ ಹಸಿ ನೆನಪು.. 

ಹೀಗೆ ರೀಲ್ಸು , ಕ್ಲಿಪ್ಪು ಅಂತ ನೋಡುತ್ತಿದ್ದವ.. ಹಾಗೆ ನಾ ನಿನ್ನ ಬಿಡಲಾರೆ ಚಿತ್ರವನ್ನು ಮತ್ತೊಮ್ಮೆ ನೋಡಿಯೇ ಬಿಟ್ಟ.. 

ಹೊರಗೆಲ್ಲ ಹುಣ್ಣಿಮೆಯ ಹತ್ತಿರದ ಬೆಳದಿಂಗಳು.. ಬೇಸಿಗೆ ಕಾಲದ ರಾತ್ರಿಯಾದರೂ ಬೆಳದಿಂಗಳ ತಂಪಿನ ಬೆಳಕಿನ ಜೊತೆ ತಣ್ಣನೆಯ ಗಾಳಿಯೂ ಬೀಸುತಿತ್ತು.. ತೆರೆದ ಕಿಟಕಿಯಿಂದ ಗಾಳಿ ತೇಲಿ ಬರುತಿತ್ತು.. ಮನಸ್ಸಿಗೆ ಉಲ್ಲಾಸ ತುಂಬಿತ್ತು.. 

ಸಿನೆಮಾ ಓಡುತ್ತಿತ್ತು.. 

ಮದುವೆಯ ಮುಂಚೆ ವಿವಾಹ ಪತ್ರಿಕೆಯ ಮೇಲೆ ಇಂಕು ಚೆಲ್ಲಿಯಾಗಿತ್ತು.. 
ಪತ್ರಿಕೆಗಳೆಲ್ಲ ಗಾಳಿಯಲ್ಲಿ ಹಾರಾಡಿಯಾಗಿತ್ತು.. 
ಮದುವೆಯ ದಿಬ್ಬಣ ಬರುವಾಗ ಕಟ್ಟಿದ ಕೋಣ ಹಗ್ಗ ಬಿಚ್ಚಿಕೊಂಡು ಅನಂತ್ ನಾಗ್ ಅವರ ಕಾರಿನತ್ತ ನುಗ್ಗಿದ್ದ ದೃಶ್ಯವಾಗಿತ್ತು.. 
ಪ್ರಥಮ ರಾತ್ರಿಯಲ್ಲಿ ಅನಂತ್ ನಾಗ್ ತಲೆ ನೋವು ಅಂತ ಕಿರುಚಿ ಕೆಳಗೆ ಬಿದ್ದಾಗಿತ್ತು.. 
ಆಸ್ಪತ್ರೆಯಲ್ಲಿ ಡಾಕ್ಟ್ರರು ಏನೂ ತೊಂದರೆ ಇಲ್ಲ ಎಂದು ತಪಾಸಣೆ ಮಾಹಿತಿಯನ್ನು ನೋಡಿ ಹೇಳಿದ್ದರೂ ಕೂಡ..
ಒಂದೆರಡು ದಿನ ಆಸ್ಪತ್ರೆಯಲ್ಲಿ ಇರಲಿ ಎಂದು ಹೇಳಿದ್ದ ದೃಶ್ಯವಾಗಿತ್ತು.. 
ಮಧ್ಯರಾತ್ರಿಯಲ್ಲಿ ಅನಂತ್ ನಾಗ್ ಸೀದಾ ಎದ್ದು ಮಸಣದ ಕಡೆಗೆ ಹೋಗಿದ್ದು.. 
ಲಕ್ಷ್ಮಿ ಅವರನ್ನು ಹಿಂಬಾಲಿಸಿದ್ದು.. 
ಲಕ್ಷ್ಮಿ ಅವರನ್ನು ಅಶ್ವಥ್ ಮತ್ತು ಬಾಲಣ್ಣ ಹಿಂಬಾಲಿಸಿದ್ದು . 
ನಂತರ  ಅನಂತ್ ನಾಗ್ ತಿರುಗಿ ನೋಡಿದ ದೃಶ್ಯ ... 
ಅವರ ಮೈಮೇಲೆ ಬಂದ ದೆವ್ವದ ಮಾತುಗಳು.. 

ಎದೆ ಝಲ್ ಎನಿಸುವ ದೃಶ್ಯಗಳು ಹೇರಳವಾಗಿದ್ದವು.. 

ಅದರಲ್ಲೂ ಅನಂತ್ ಮೇಲೆ ದೆವ್ವ ಬರುವ ದೃಶ್ಯಗಳೂ ಅದಕ್ಕೆ ನೀಡಿರುವ ಹಿನ್ನೆಲೆ ಸಂಗೀತ..ದೆವ್ವ ಬಿಡಿಸುವವನ ಜೊತೆ ಮಾತುಗಳು .. ಹೆದರಿಕೆಯನ್ನು ಹೆಚ್ಚು ಮಾಡುತ್ತಲೇ ಇತ್ತು.. ಅದೇ ಗುಂಗಿನಲ್ಲಿ ಯಾವಾಗಲೂ ನಿದ್ರಾದೇವಿ ಆವರಿಸಿದ್ದಳು.. 

ಟಿವಿ ತನ್ನ ತಾನೇ ಆಫ್ ಆಗಿತ್ತು.. ಟಿವಿಗೆ ಟೈಮರ್ ಇಟ್ಟಿದ್ದರಿಂದ ತೊಂದರೆ ಇರಲಿಲ್ಲ.. 

ಮನೆಯ ದೀಪಗಳೆಲ್ಲ ಆರಿತ್ತು.. 

ಬಾಯಾರಿಕೆ ಎಂದು ಪಕ್ಕದಲ್ಲಿ ನೋಡಿದರೆ ನೀರಿನ ಬಾಟಲ್ ಖಾಲಿ..

ಸರಿ ಅಡಿಗೆ ಮನೆಗೆ ಹೋಗಿ ನೀರು ಕುಡಿಯೋಣ ಅಂತ ದೀಪ ಹಾಕೋಕೆ ಹೋಗದೆ  .. ಹಾಗೆ ಅಡಿಗೆ ಮನೆಗೆ ಹೋದ ..

ಹೊರಗೆ ಬೆಳದಿಂಗಳು .. ಆದರೆ ಕಿಟಕಿಗಳಿಗೆ ದಪ್ಪನೆ ಪರದೆ ಹಾಕಿದ್ದರಿಂದ ಕತ್ತಲು.. 

ನೀರು ಕುಡಿದು.. ಯಾಕೋ ಬಾಗಿಲಿನ ಕಡೆ ನೋಡಿದರೆ.. ಅಂಗಳದ ದೀಪ ಉರಿಯುತ್ತಿದೆ ಎನ್ನುವ ಅನುಭವ.. 

ದೀಪದ ಸ್ವಿಚ್ ಮೇಲೆ ಕೈಯಾಡಿಸಿದರೆ.. ಆಫ್ ಆಗಿದ್ದರ ಸಂಕೇತ ತೋರಿಸುತ್ತಿತ್ತು.. ದೀಪ ಹಾಕದೆ ಹಾಗೆ ನೋಡಿದ್ದ .. 

"ಹೀ ಹೀ ಹೀ " ನಗುವಿನ ಸದ್ದು.. 

ಕ್ಷಣದಲ್ಲಿಯೇ ಮೈಪೂರ್ತಿ ಬೆವರು.. .. ರೋಮ ರೋಮಗಳು ಸೆಟೆದು ನಿಂತ ಅನುಭವ.. 

"ಮಾವಿನ ಹಣ್ಣು ಬೇಕಾ.. " 


ಪೂರ್ಣ ಹೆದರಿಕೆ.. 

ನಾ ನಿನ್ನ ಬಿಡಲಾರೆ ಚಿತ್ರದ ಪೂರ್ತಿ ಭಯಾನಕ ದೃಶ್ಯಗಳು ಕಣ್ಣ ಮುಂದೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಕೊಟ್ಟು ಹೋದವು.. 

ನೀರು ಕುಡಿದಿದ್ದರೂ ನಾಲಿಗೆ ಪೂರ್ಣ ಒಣಗಿದ ವಾಟೆಗರಿಯಾಗಿತ್ತು.. 

ಭಯದಿಂದಲೇ ಹೋಗಿ ಹಾಲಿನ ದೀಪ ಹಾಕಿದರೆ.. ತನ್ನ ಮಡದಿ ಮಾವಿನ ಹಣ್ಣನ್ನು ತಿನ್ನುತಿದ್ದಾಳೆ.. 

ಉಫ್ ಉಫ್... 

ಜೋರಾದ ನಗು.. ಅವಳದು 

ಮೈಯೆಲ್ಲಾ ಒದ್ದೆಅವನದ್ದು  !

8 comments:

  1. ಅಷ್ಟು ರಾತ್ರಿಯಲ್ಲಿ ಮಡದಿ ಯಾಕೆ ಅದು ದೀಪ ಆರಿಸಿ ಮಾವಿನ ಹಣ್ಣು ತಿನ್ನುತ್ತಿದ್ದರು ??? 🤔🤔 ಸದ್ಯ ಅವನ ಎದೆ ಗುಂಡು ಕಲ್ಲಿನ ಹಾಗಿತ್ತು ಹಾಗಾಗಿ ಬೇರೇನು ಆಗದೆ ಬರೀ ಮೈಯಲ್ಲಾ ಒದ್ದೆ ಆಯಿತು ಅಷ್ಟೇ... ಬದುಕಿತು ಬಡ ಜೀವ.... ಉತ್ತಮ ಬರಹ ... ಸುಂದರವಾದ ಕಲ್ಲನೆ ..

    ReplyDelete
    Replies
    1. Haha.. yes really it happened.yastarday night.
      I was hungry after 12.30..there was nothing left in kitchen so thought to eat mango..haha..

      Delete
    2. Thank you Sudha for the reading and commenting it

      Delete
    3. :-) you are the inspiration for this writeup

      Delete
  2. ಅಷ್ಟು ರಾತ್ರಿಯಲ್ಲಿ ಮಡದಿ ಯಾಕೆ ಅದು ದೀಪ ಆರಿಸಿ ಮಾವಿನ ಹಣ್ಣು ತಿನ್ನುತ್ತಿದ್ದರು ??? 🤔🤔 ಸದ್ಯ ಅವನ ಎದೆ ಗುಂಡು ಕಲ್ಲಿನ ಹಾಗಿತ್ತು ಹಾಗಾಗಿ ಬೇರೇನು ಆಗದೆ ಬರೀ ಮೈಯಲ್ಲಾ ಒದ್ದೆ ಆಯಿತು ಅಷ್ಟೇ... ಬದುಕಿತು ಬಡ ಜೀವ.... ಉತ್ತಮ ಬರಹ ... ಸುಂದರವಾದ ಕಲ್ಪನೆ..

    ReplyDelete
  3. Very nice narrated honey ..very sorry ..haha

    ReplyDelete