Thursday, October 30, 2025

ವಿವಾಆ... .. Beautiful moments Spent!!!

 ಶ್ರೀ ನಾನು ಬರೋಕೆ ಆಗೋಲ್ಲ.. ಫೋಟೋಗಳನ್ನು ಕಳಿಸಿ  ಈ ಅದ್ಭುತ ಕ್ಷಣಗಳನ್ನು ಮಿಸ್ ಖಂಡಿತ ಮಿಸ್ ಮಾಡ್ಕೋತಾ ಇದ್ದೀನಿ ಅಂತ ನನ್ನ ಮುದ್ದು ತಂಗಿ ಪಾಪೆ ಕಳಿಸಿದ ವಾಟ್ಸಾಪ್ ಸಂದೇಶ ಬಂದಾಗ..ಅರೆ ಹೌದಲ್ವಾ ಇವತ್ತು ಹೋಗಬೇಕು ಅಂತ ನೆನಪಾಯಿತು.. 

ಪಾಪ ಧನ್ಯವಾದಗಳು ನಿಮಗೆ 

ಹೌದು ಜೀವನದ ಜಂಜಾಟಗಳಲ್ಲಿ ಅನೇಕ ಸಮಯ ಸುಂದರ ಕ್ಷಣಗಳ, ಸುಂದರ ಕಾರ್ಯಕ್ರಮಗಳ ದಿನಾಂಕವನ್ನೇ ಮರೆತು ಬಿಟ್ಟಿರುತ್ತೇವೆ.. 

ಒಂದು ವೇಳೆ ಇವತ್ತು ಬೆಳಿಗಿನ ಸಂದೇಶ ನೋಡದೆ ಇದ್ದಿದ್ದರೆ.. ಅವರಿಗೂ ಮರೆತು ಹೋಗಿದ್ದರೇ ... ಈ ರೇ ರೇ ಪ್ರಪಂಚ ತಂದು ಒಡ್ಡುವ ಕ್ಷಣಗಳ ಸೊಗಸೇ ಸೊಗಸೇ.. 

ಹೌದು ಇಪ್ಪತ್ತಾರು ವರ್ಷಗಳ ಹಿಂದೆ ಒಂದೇ ದಿನದ ವ್ಯತ್ಯಾಸದಲ್ಲಿ ಒಂದು ಕಂಪನಿ.. ಅದನ್ನು ಕಂಪನಿ ಅನ್ನೋದಕ್ಕಿಂತ ನಾವು ಬೆಳೆದ, ನಮ್ಮನ್ನು ಬೆಳೆಸಿದ ಶಾಲೆ ಎನ್ನಬಹುದು.. ಹೌದು ಬೋಥೋರ್ಪ್ ಥೆರ್ಮೋಮೆಟ್ರಿಕ್ಸ್, ನಂತರ ಜಿ ಇ ಥೆರ್ಮೋಮೆಟ್ರಿಕ್ಸ್ ಆಗಿ ಅನೇಕ ಸುಂದರ ಅನಗಳ  ಏಳಿಗೆಗೆ ಕಾರಣವಾದಕಂಪೆನಿಯದು . ನನ್ನ ವೃತ್ತಿ ಬದುಕಿನ ಅದ್ಭುತ ಕ್ಷಣಗಳನ್ನು ಕಳೆದ, ಪಾಠಗಳನ್ನು ಕಲಿತ ಶಾಲೆಯದು.. 


ಇರಲಿ ವಿಷಯಕ್ಕೆ ಬರೋಣ ಅಲ್ಲವೇ.. ವಾಸುಕಿ ಎಂಬ ಚಿರ ಯುವಕ ಪರಿಚಯವಾದ ಕಂಪೆನಿಯದು.. ನಮಸ್ಕಾರ ವಾಸುಕಿ ಅಂತ ಶುಭಾಶಯ ಕೋರಿದಾಗೆಲ್ಲ.. ಸಾರೀ ಯಾರ್ ಐ ಮಿಸ್ಸೇಡ್ ಯುವರ್ ನೇಮ್ ಅಂತ ಹೇಳಿ.. ಮತ್ತೆ ಹೊಸದಾಗಿ ಪರಿಚಯ ಮಾಡಿಕೊಂಡು ಶುರುಮಾಡಿದ ವೃತ್ತಿಬದುಕಿನಲ್ಲಿ ಅದೇಗೋ ಸುಮಧುರ ಮನಗಳನ್ನು ಒಂದು ಮಾಡುವ ಕ್ಷಣಗಳಿಂದ ದಿನ ನಿತ್ಯ ಒಂದೇ ಒಂದೇ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರಿಂದ, ಇನ್ನಷ್ಟು ಹತ್ತಿರವಾದೆವು.. 

ಆಚಾರ ವಿಚಾರಗಳು ಊಟೋಪಚಾರ ಮಾತು ಕತೆ ಎಲ್ಲವೂ ಹೊಂದಾಣಿಕೆ ಆಗಿದ್ದರಿಂದ ಅವರ ಮನೆಗೆ ಹೋಗೋದು, ಅವರು ಅವಕಾಶವಿದ್ದಾಗ ನಮ್ಮ ಮನೆಗೆ ಬರೋದು ನೆಡೆಯುತಿತ್ತು.. 

ನನ್ನ ಮಗಳನ್ನು ಕಂಡು ಅರೆ ಪುಟ್ಟಿ ನಿನ್ನ ಕೆನ್ನೆಯನ್ನು ನನಗೆ ಕೊಡುತ್ತೀಯ ಅಂತ ಕೆನ್ನೆಯನ್ನುಹಿಂಡಿ ಮುದ್ದು ಮಾಡುವ ವಾಸುಕಿ, ಅವರ ಮನದನ್ನೆ ವಿಜಯಲಕ್ಷ್ಮಿ ನಮಗೆ ಕೊಡುತ್ತಿದ್ದ ಆತಿಥ್ಯ ಅದ್ಭುತ. ಅವರ ಮಗಳು ಅಖಿಲ ಅರೆ ಪುಟ್ಟಿ ಬಾ ಅಂತ ಎತ್ತಿಕೊಂಡು ನನ್ನ ಮಗಳನ್ನು ಮುದ್ದು ಮಾಡುತ್ತಿದ್ದರು.. 

ಇಂದು ಅದೇ ಅಖಿಲ ಮದುವಣಗಿತ್ತಿಯಾಗಿ ನಿಂತಿದ್ದು ನಮ್ಮನ್ನು ಆತ್ಮೀಯವಾಗಿ ಮಾತಾಡಿಸಿದ್ದು.. ನೆನಪಿದೆಯಾ ಅಂದಾಗ "ಹೌ ಕ್ಯಾನ್ ಐ ಫರ್ಗೆಟ್" ಅಂತ ನಕ್ಕು ತಮ್ಮ ಮನದರಸನನ್ನು ಪರಿಚಯ ಮಾಡಿಕೊಟ್ಟಾಗ ಇದೆ ಅಲ್ಲವೇ ಬೆಳೆದ ಸಂಸ್ಕಾರ ಅನಿಸಿತು.. 

ಚಿರಯುವಕ ವಾಸುಕಿ ಸೂಟು ಬೂಟಿನಲ್ಲಿ ಕಂಗೊಳಿಸುತ್ತಿದ್ದರು.. ನಮಗೆ ವಯಸ್ಸಾಗಿದೆ ಈತನಿಗೆ ವಯಸ್ಸೇ ಆಗೋದಿಲ್ಲವೇ ಅಂತ ಹೊಟ್ಟೆ ಕಿಚ್ಚಾಗುವಷ್ಟು ಯೌವನದಿಂದಹುರುಪಿನಿಂದ ಓಡಾಡುತ್ತಿದ್ದರು.. ನನ್ನನ್ನು ನೋಡಿ ತುಂಬಾ ಸಂತೋಷವಾಯಿತು ಎಂದಾಗ ಅದೇ ಆತ್ಮೀಯತೆ ಅದೇ ಪ್ರೀತಿ 

ಈ ಸಮಾರಂಭ ಒಂದು ರೀತಿಯ ಮಧುರ ಸಂಗಮ.. ಅನೇಕ ಅನೇಕ ಸುಮಧುರ ಮನಗಳು ಜೊತೆ ಜೊತೆಯಾಗಿ ಕೆಲಸ ಮಾಡಿದ್ದು ಅನೇಕಾನೇಕ ಸವಾಲಿನ ಕ್ಷಣಗಳನ್ನು ಜೊತೆಯಾಗಿ ನಿಂತು ಕಂಪನಿಯನ್ನು ಗೆಲ್ಲಿಸಿ ನಾವು ಗೆದ್ದಿದ್ದು ನೆನಪಾಯಿತು.. 

ಈಶ್ವರ್ ಸರ್, ಹೆಗಡೆ ಪರಿವಾರ, ಶಿವಣ್ಣ ಮಹೇಂದ್ರ ಫಕಿರೇಶ್ , ಭಾರತಿ ಮೇಡಂ, ಮಾರಪ್ಪ, ಹೆಸರು ನೆನಪಿದ್ದರೂ ಮುಖಗಳು ಹೊಂದಿಕೆಯಾಗದೆ ಮುಖ ಪರಿಚಯದಿಂದ ಹುಡುಗರೇ ಬಂದು ಮಾತಾಡಿಸಿದ್ದು ಖುಷಿಯಾಯಿತು.. 

ಶೃಂಗೇರಿ.. ಜಗದ್ಗುರುಗಳು.. ಶಾರದೆ.. ಹೀಗೆ ಶೃಂಗೇರಿ ಈ ಕುಟುಂಬಕ್ಕೆ ಬಲು ಆತ್ಮೀಯ ಹಾಗೂ ಹತ್ತಿರ.. ಈ ಸಮಾರಂಭಕ್ಕೆ ಆಯ್ದುಕೊಂಡ ಸಭಾಂಗಣದ ಹೆಸರು ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪ.. ಇದು ಸಾಕಲ್ಲವೇ ಎಲ್ಲವೂ ಸುಸೂತ್ರವಾಗಿ ಮೂಡಿಬರೋಕೆ.. !



ವಿವಾಆ ... ಏನಿದು ಕಾಗುಣಿತ ತಪಾಯಿತು ಅಂತೀರಾ.. ಇಲ್ಲ ಇದು ಅದ್ಭುತ ಮನಸ್ಸುಗಳ ಪರಿವಾರದ ಅಕ್ಷರಗಳು .. 

ಪ್ರೀತಿಯ ಮಮತೆಯಿಂದ ಹಾವಿನ ಹಾಗೆ ಬಂಧನ ಬೆಸೆಯುವ "ವಾಸುಕಿ"

ಮನೆಯನ್ನು ಮನಸ್ಸನ್ನು ಯಶಸ್ಸಿನ ಹಾದಿಗೆ ನೆಡೆಸುತ್ತ ಇರುವ "ವಿಜಯಲಕ್ಷ್ಮಿ"

ನಾನು ಅಖೇಲ ಅಲ್ಲ .. ಆದರೆ ನಾನಿಲ್ಲದೇ ಯಾವುದೂ ಸಂಪೂರ್ಣ ಅಲ್ಲ ಅನ್ನುವ "ಅಖಿಲ"

ಈ ಸಾಗರ ಮಧುರ ಸಂಗಮದಲ್ಲಿ ನಮ್ಮನ್ನೂ ಮೀಯುವಂತೆ ಮಾಡಿದ                                                                                ಹೊರಂಟೋರು ರಾಮಸ್ವಾಮಿ ವಾಸುಕಿ                                                                                                       ಕುಟುಂಬಕ್ಕೆ ಕೋಟಿ ಕೋಟಿ ಶುಭಾಶಯಗಳು.. ಧನ್ಯವಾದಗಳು.. 

ಮದುವೆ ಅಂದರೆ ಇಷ್ಟೇನಾ.. ಅಂದರೆ ಇಲ್ಲ ಇಲ್ಲ.. ಊಟೋಪಚಾರ ಶಿಷ್ಟಾಚಾರ ಇಲ್ಲಿ ಮನೆ ಮಾಡಿತ್ತು.. ಪಾನಿ ಪುರಿ ಮಸಾಲೆ ಪುರಿಗಳು ಹೊಟ್ಟೆ ಹಸಿವನ್ನು ಹೆಚ್ಚಿಸಿದರೆ.. ಮುಂದೆ ತಿಂಡಿ ತಿನಿಸುಗಳ ಸರಮಾಲೆಯೇ ಇತ್ತು.. ಪ್ರತಿಯೊಂದು ಅಚ್ಚುಕಟ್ಟು.. ಪ್ರತಿಯೊಂದು ಶುಚಿ ರುಚಿ.. ಜೊತೆಗೆ ಬಂದವರನ್ನು ಊಟ ಮಾಡಿ.. ಕುಂಕುಮ ಇಟ್ಟುಕೊಂಡು ಹೋಗಿ.. ತಾಂಬೂಲ ಅಂತ ಬೆನ್ನು ಬೆನ್ನಿಗೆ ತಾಗುತ್ತಾ ಗಮನಿಸುವ ಮೇಲ್ವಿಚಾರಕರ ತಂಡ.. ಆಹಾ ಒಂದು ಸಮಾರಂಭವನ್ನು ತನ್ನಂತೆ ಅಚ್ಚುಕಟ್ಟಾಗಿ ಏರ್ಪಾಡು ಮಾಡಿದ್ದ ವಾಸುಕಿ.. ನಿಜಕ್ಕೂ ಚಿರಯುವಕನೆ ಹೌದು.. 

ಇಲ್ಲಿ ಗಮನಿಸಬೇಕಾದ್ದು.. ಈ ಸಮಾರಂಭಕ್ಕೆ ಮುನ್ನ ಕೈಯನ್ನು ಪೆಟ್ಟು ಮಾಡಿಕೊಂಡಿದ್ದರೂ ಉತ್ಸಾಹದ ಚಿಲುಮೆಯಾಗಿ ಮದುವೆ ಮನೆಯಲ್ಲಿ ಎಲ್ಲರನ್ನೂ ಮಾತಾಡಿಸುತ್ತಾ ಓಡಾಡುತ್ತಿದ್ದ ವಿಜಯಲಕ್ಷ್ಮಿ ಅವರಿಗೆ ಧನ್ಯವಾದಗಳು.. 

ನನಗೆ ವೈಯುಕ್ತಿಕವಾಗಿ ಇಷ್ಟವಾಗಿತ್ತು ಕಾರಣ ಅನೇಕ ಹುಡುಗರ ಭೇಟಿ.. ಅಂದು ಹುಡುಗರಾಗಿದ್ದವರು.. ಇಂದು ಬೆಳೆದು. ಸಂಸಾರಸ್ಥರಾಗಿ ಜವಾಬ್ಧಾರಿಯುತರಾಗಿ ಮಕ್ಕಳೊಂದಿಗೆ ಬಂದು ಖುಷಿ ಪಟ್ಟು ಮಾತಾಡಿಸಿದ್ದು.. ಖುಷಿಯಾಯಿತು.. ಹದಿನೇಳು ವರ್ಷಗಳು ಕಳೆದೆ ಇಲ್ಲವೇನೋ ಈಗಲೋ ನಾನು ಅಲ್ಲಿಯೇ ಇದ್ದೇನೆ ಎನ್ನುವಂತೆ ಭಾವಿಸಲು ಸಹಕರಿಸಿದ್ದು ವಾಸುಕಿ ಕುಟುಂಬ ಮತ್ತು ಅವರ ಸಹೋದ್ಯೋಗಿಗಳು.. 

ಇಷ್ಟೇನಾ ಅಂದರೆ   ಇಲ್ಲಾರೀರೀಈಈಈ .. ಇನ್ನೂ ಇದೆ.. 

ಈ ರೀತಿಯ ಸಮಾರಂಭಕ್ಕೆ ಇನ್ನಷ್ಟು ಮೆರುಗು ನೀಡುವುದು ಸ್ವಾಗತಕಾರಿಣಿಗಳು.. ಪಾನೀಯ, ಕುಂಕುಮ, ಹೂವು, ಆತ್ಮೀಯವಾದ ಮುಗುಳುನಗೆ.. ಅರೆ ಇದೆ ಅಲ್ಲವೇ ಹೃದಯದಲ್ಲಿ ಕೂರುವುದು.. 

ಆರತಕ್ಷತೆಯ ಅಚ್ಚುಕಟ್ಟುತನ.. ಪ್ರತಿಯೊಬ್ಬರನ್ನು ಆತ್ಮೀಯವಾಗಿ ಮಾತಾಡಿಸುತ್ತಾ ವಧು ವರರಿಗೆ ಪರಿಚಯ ಮಾಡಿಕೊಡುತ್ತಾ ಫೋಟೋ ಆದ ಮೇಲೆ ಊಟಕ್ಕೆ ಕಳಿಸುವ ವ್ಯವಸ್ಥೆ.. ಇದಕ್ಕೆ ಕಳಶವಿಟ್ಟಂತೆ ಅಬ್ಬರವಿಲ್ಲದ ಸಂಗೀತ ಮೇಳ.. ಇಂಪಾದ ಮಧುರವಾದ ಹಾಡುಗಳ ತುಣುಕುಗಳನ್ನು ವಾದ್ಯದಲ್ಲಿ ನುಡಿಸುತ್ತ ಬಂದವರ ಕಿವಿಗೆ ಇಂಪನ್ನು ಉಂಟು ಮಾಡುತ್ತಿದರು..ಅಬ್ಬರದ ಸಂಗೀತ, ನೃತ್ಯ ಯಾವುದೂ ಇಲ್ಲದೆ ಕರ್ಣಾನಂದಕರ ವಾತಾವರಣ ಸೃಷ್ಟಿ ಮಾಡೋದು ಸಂಗೀತ ವಾಹಿನಿಯಲ್ಲಿ ಮೀಯುತ್ತಿರುವ ವಾಸುಕಿ ಕುಟುಂಬಕ್ಕೆ ಹತ್ತಿಯನ್ನು ಎತ್ತಿದಷ್ಟೇ ಹಗುರ ಕಾರಣ ವಿಜಯಲಕ್ಷಿ ಸಂಗೀತ ಶಾರದೆ.. ಅಖಿಲ ಸಂಗೀತ ಸರಸ್ವತಿ.. ಇವರಿಬ್ಬರನ್ನೂ ಸಲಹುತ್ತಿರುವ ವಾಸುಕಿ .. ಈ ಸುಂದರ ಕ್ಷಣಗಳ ಸೃಷ್ಟಿಕರ್ತ ಅರ್ಥಾತ್ ಬ್ರಹ್ಮ.!!!. 

ಸಭಾಂಗಣದಿಂದ ಹೊರಗೆ ಬಂದಾಗ ಮನಸ್ಸು ಹಕ್ಕಿಯಷ್ಟೇ ಹಗುರಾಗಿತ್ತು.. !!!

ಕೆಲವು ಚಿತ್ರಗಳು ನಿಮಗಾಗಿ!














  

No comments:

Post a Comment