Sunday, February 12, 2023

ಒಂದು ಸುಂದರ ಮುಂಜಾವು..

ಸರ್ ... 

ಏನ್ರಿ 

ನಾವು ಇಲ್ಲಿಂದ ಬಂದಿದ್ದೀವಿ.. ನಮ್ಮ ಕಾರ್ಯಕ್ರಮ ಇದು.. ನಮಗೆ ಇದು ಬೇಕು.. 

ಫೋಲಿಸ್ ಠಾಣೆಯಲ್ಲಿ ನೆಡೆದ ಚುಟುಕು ಮಾತುಗಳು.. ಬೇಕಾದ ಅನುಮತಿ ಸಿಕ್ಕಿತು.. ಪೋಲಿಸಿನವರು ನಿಮಗೆ ಬೇಕಾದ ವ್ಯವಸ್ಥೆ ಮಾಡಿಕೊಡುತ್ತೇವೆ.. ಹುಷಾರಾಗಿ, ಕ್ಷೇಮವಾಗಿ ಕಾರ್ಯಕ್ರಮ ನೆಡೆಯಲಿ ಶುಭವಾಗಲಿ  ನಿಮ್ಮನ್ನು ಯಾವುದೋ ಒಂದು ಶಕ್ತಿ ಕಾಪಾಡುತ್ತದೆ.. ಹೋಗಿ ಬನ್ನಿ ಶುಭವಾಗಲಿ ಎಂದು ಹಾರೈಸಿ ಕಳಿಸಿದರು.. 

ಬೆಳಿಗ್ಗೆ ಆಗಲೇ ಏಳೂವರೆ ಘಂಟೆ ದಾಟಿತ್ತು.. ಉತ್ಸಾಹದಿಂದ ಅನೇಕಾನೇಕಾ ಸೇವಾಧಾರಿಗಳು ಕೇಂದ್ರಕ್ಕೆ ಬಂದು ಸೇರಿದ್ದರು.. ಒಬ್ಬೊಬ್ಬರು ತಮಗೆ ತೋಚಿದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು.. ಎಲ್ಲರ ಗುರಿಯೊಂದೇ ಈ ಕಾರ್ಯಕ್ರಮ ಚೆನ್ನಾಗಿ ನೆಡೆಯಬೇಕು.. 

ಕೇಂದ್ರದ ಗುರುವಾಣಿ ಅಕ್ಕನವರು ಎಲ್ಲರಿಗೂ ತಿಂಡಿ ಕೊಟ್ಟ ಮೇಲೆ.. ಇಂದಿನ ಕಾರ್ಯಕ್ರಮದ ರೂಪುರೇಷೆಗಳನ್ನು ನಿಯಮಗಳನ್ನು ಹೇಳಿದರು.. ಕನ್ನಡ ಇಂಗ್ಲಿಷ್ ಹಿಂದಿ ಮೂರು ಭಾಷೆಯಲ್ಲಿ ಹೇಳಿದರು.. 

ಎಲ್ಲರೂ ತಲೆಯಾಡಿಸಿ.. ಒಪ್ಪಿಗೆ ಕೊಟ್ಟ ಮೇಲೆ ಶುರುವಾಯಿತು. 

ನಾ ಸದ್ದಿಲ್ಲದೇ ಒಂದು ಕೋಣೆಗೆ ಹೋಗಿ ಬಂದೆ.. ಯಾವುದೇ ತೊಂದರೆ ತಾಪತ್ರಯವಿಲ್ಲದೆ ಕಾರ್ಯಕ್ರಮ ನೆಡೆಯಲಿ ಎಂದು ಮನಸಾರೆ ಕೇಳಿದೆ.. ಅದೇ ಪ್ರಾರ್ಥನೆ ಬಂದವರೆಲ್ಲರದ್ದು ಆಗಿತ್ತು.. 

ರಸ್ತೆಗೆ ಬಂದು. .. ಒಂದಷ್ಟು ಫೋಟೋ ತೆಗೆದು.. ಆಗಸದ ಕಡೆ ನೋಡುತ್ತಾ ನಿಂತೇ.. 

"ಶ್ರೀ ಇವತ್ತು ಒಂದು ಜಾದೂ ತೋರಿಸುತ್ತೇನೆ.. ಆದರೆ ನಿನಗೆ ನಾ ಹೇಳುವುದಿಲ್ಲ... ಅದು ನಿನಗೆ ಅನುಭವಕ್ಕೆ ಬರುತ್ತದೆ.. ಓಕೆ ನಾ.. "

ನಾ ಆಗಸಕ್ಕೆ ಹೆಬ್ಬೆರಳು ತೋರಿ ನನ್ನ ಸಮ್ಮತಿ ಕೊಟ್ಟಿದ್ದೆ.. 

ಎಲ್ಲರೂ ಉತ್ಸಾಹದಿಂದ ಶಾಂತಿಯಾತ್ರೆಯಲ್ಲಿ ಪಾಲ್ಗೊಂಡರು.. ವಾಹನ ದಟ್ಟಣೆ ನಿವಾರಿಸುವವರು ಒಬ್ಬರು.. ನೆಡೆಯುತ್ತಾ ಬರುತ್ತಿದ್ದವರಿಗೆ ನೀರು, ಪಾನೀಯ.. ಕೊಡುವವರು ಒಬ್ಬರು.. ಸುಸ್ತಾಗಿದೆಯೇ ಸರಿ ಕಾರು ಹತ್ತಿ ಅಂತ.. . ಕಾರನ್ನು ನಿಲ್ಲಿಸಿ ಅದರೊಳಗೆ ಸುಸ್ತಾದವರನ್ನು ಕೂರಿಸಿ.. ನೀರು ಪಾನಕ ಕೊಟ್ಟು ಸುಧಾರಿಸುವವರು ಒಬ್ಬರು.. ಹೀಗೆ ತಮಗೆ ತೋಚಿದ ರೀತಿಯಲ್ಲಿ ಒಬ್ಬರಿಗೆ ಒಬ್ಬರು ಸಹಾಯಕವಾಗುತ್ತಿದ್ದರು.. 

ನನ್ನ ಪಾಡಿಗೆ ನನ್ನಿಷ್ಟದ ಕೆಲಸ ಫೋಟೋಗಳನ್ನು ತೆಗೆಯುತ್ತಾ ಹೆಜ್ಜೆ ಹಾಕುತ್ತಿದ್ದೆ.. ಮತ್ತೆ ನನ್ನ ಗಮನಕ್ಕೆ ಬರುತ್ತಿದ್ದ ಒಂದು ವಿದ್ಯಮಾನವನ್ನು ಗಮನಿಸುತ್ತಿದ್ದೆ.. 

"ಶ್ರೀ  ಮಹಾಭಾರತದಲ್ಲಿ ಯುದ್ಧ ಮುಗಿದ ಮೇಲೆ.... ಅರ್ಜುನ ಮತ್ತು ಭೀಮನಿಗೆ ಮಾತುಕತೆ ಆರಂಭವಾಯಿತು.. ಯುದ್ಧ ಗೆದ್ದಿದ್ದು ನನ್ನಿಂದ ನನ್ನಿಂದ ಅಂತ.. ಆಗ ಶ್ರೀ ಕೃಷ್ಣ ನಸುನಗುತ್ತಾ .. ಈ ಯುದ್ಧವನ್ನು ಪೂರ್ಣ ನೋಡಿದ ಒಬ್ಬ ಇದ್ದಾನೆ ಅವನನ್ನು ಕೇಳೋಣ.. ಅಂತ ಬರ್ಬರೀಕ ಅಂತ .. ಅವನನ್ನು ಕೇಳೋಣ ಅಂತ.. .. .. ಭೀಮಾರ್ಜುನ, ಕೃಷ್ಣನ ಜೊತೆ ಒಂದು ಬೆಟ್ಟದ ಬುಡಕ್ಕೆ ಬರುತ್ತಾರೆ.. ಬೆಟ್ಟದ ತುದಿಯಲ್ಲಿ ಒಂದು ತಲೆ ಬುರುಡೆ ಇರುತ್ತೆ.. ಅದೇ ಬರ್ಬರೀಕ.. ಅವನನ್ನು ಕೇಳಿದಾಗ.. ಬರ್ಬರೀಕ ಹೇಳುತ್ತಾನೆ.. ನನಗೆ ಶ್ರೀಕೃಷ್ಣನ ಚಕ್ರ ಬಿಟ್ಟು ಬೇರೆ ಏನೂ ಕಾಣಲಿಲ್ಲ.. ಆ ಚಕ್ರ ಒಂದೇ ಯುದ್ಧ ಮಾಡಿ ಗೆದಿದ್ದು.. "

ಅಶರೀರವಾನಿಗೆ ನಮಸ್ಕರಿಸುತ್ತಾ "ಹಾ ಸರಿಯಾಗಿದೆ.. ಯುಗಯುಗದಲ್ಲಿಯೂ ಒಂದು ಕಾಣದ ಅದೃಶ್ಯ ಶಕ್ತಿ ಇದ್ದೆ ಇರುತ್ತದೆ.. ಅದನ್ನು ಕೃಷ್ಣ ಎಂದು ಹೇಳಿ.. ಶಿವ ಎಂದು ಹೇಳಿ.. ಶಂಕರ ಎಂದು ಹೇಳಿ.. ಇಲ್ಲವೇ ಬ್ರಹ್ಮ ಎಂದು ಹೇಳಿ.. ಯಾವುದೋ ಕಾಣದ ಕೈ ನಮಗೆ ಅಭಯ ನೀಡುತ್ತದೆ. . ಜೊತೆಯಲ್ಲಿ ನಾವು ಬೀಳದಂತೆ ತಡೆಯುತ್ತದೇ" 

"ಹೌದು ಶ್ರೀ... ನೀ ಹೇಳೋದು ನಿಜ..ನೋಡು ನಿಮ್ಮ ಕಾರ್ಯಕ್ರಮಕ್ಕೆ ನಾ ಬರೋಣ ಅಂತಿದ್ದೆ.. ಆದರೆ ಹತ್ತಾರು ಸೆಂಟರುಗಳು.. ಹತ್ತಾರು ಸೇವಾಧಾರಿಗಳು, ಅಕ್ಕಂದಿರು, ಅಣ್ಣಂದಿರು.. ಎಲ್ಲರನ್ನೂ ಸಲಹಬೇಕು.. ಅದಕ್ಕೆ.. ಒಂದು ಕೆಲಸ ಮಾಡ್ತೀನಿ.. ಅದೇನು ಅಂತ ನಿನಗೆ ಈ ಕಾರ್ಯಕ್ರಮ ಮುಗಿದ ಮೇಲೆ ಹೇಳ್ತೀನಿ.. "

ಅಶರೀರವಾಣಿ ಅದೃಶ್ಯವಾಯಿತು.. 

ಶಾಂತಿ ಯಾತ್ರೆ.. ಶೋಭಾ ಯಾತ್ರೆ ಸುಸೂತ್ರವಾಗಿ ನೆಡೆಯಿತು... 











ಕಾರ್ಯಕ್ರಮಕ್ಕೆ ಬಂದವರಿಗೆ ಭರ್ಜರಿ ಭೋಜನ ಕೊಟ್ಟು.. ಹರಸಿ ಹಾರೈಸಿ... ಕೇಂದ್ರದ ಕೇಂದ್ರ ಬಿಂದು ಅಕ್ಕನವರು ಎಲ್ಲರನ್ನೂ ಉದ್ದೇಶಿಸಿ ಮಾತನಾಡಿ.. ಎಲ್ಲರಿಗೂ ಅಭಿನಂದನೆ ಹೇಳಿ... ಬೀಳ್ಕೊಟ್ಟರು... 

ಹೊರಗೆ ಬಂದಾಗ. ಮತ್ತೆ ಅಶರೀರವಾಣಿ "ಶ್ರೀ..  ನಾ ಬರಬೇಕಿತ್ತು.. ಆದರೆ ನನಗೆ ಬರೋಕೆ ಆಗಲಿಲ್ಲ. ಆದರೆ ನಿಮ್ಮ ಇಡೀ ಕಾರ್ಯಕ್ರಮದ ನೇತೃತ್ವ ವಹಿಸಿದ್ದು... ಒ.. ನಿಮಗೆ ತೊಂದರೆಯಾಗಬಾರದು ಅಂತ ನಿಮ್ಮ ಜೊತೆಯಲ್ಲಿ ಹೆಜ್ಜೆ ಹಾಕಿ.... ನೀವೆಲ್ಲರೂ ಕೇಂದ್ರವನ್ನು ಸೇರಿದ ತಕ್ಷಣ ಅದು ಮರೆಯಾಯಿತು... ಅದೇ ಇಡೀ ಕಾರ್ಯಕ್ರಮದ ರಕ್ಷಕ ಶಕ್ತಿ..  ಏನನ್ನೂ ಬಯಸದೆ.. ಏನನ್ನೂ ಬೇಡದೆ ಜೊತೆಯಾಗಿ ಬಂತು.. ರಕ್ಷಣೆಗೆ ನಿಂತಿತು .. ತನ್ನ ಕಾರ್ಯ ಮುಗಿದ ಮೇಲೆ ಕಾಣದಂತೆ ಮಾಯವಾಯಿತು.. " ಇದನ್ನೇ ಅಲ್ಲವೇ ಹೇಳುವುದು ಕಾಣದ  ಶಕ್ತಿ ಎಂದು.. 



ಎಷ್ಟು ನಿಜವಲ್ಲವೇ.. ಇಡೀ ಕಾರ್ಯಕ್ರಮವನ್ನು ನೋಡಿದಾಗ ನನಗೆ ಅರಿವಾಗಿದ್ದು.. ಕಾಣದ ಶಕ್ತಿ ತನ್ನ ಜಾದೂವನ್ನು ಒಂದು ಜೀವಿಯಲ್ಲಿ ತುಂಬಿ ಅದು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ.. ದಾರಿಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದುಅಲ್ಲದೆ  ಎದುರಾಳಿಯಾಗಿ ಯಾವುದೆ ಅದಾ ಸೋದರ ಸಂಬಂಧಿ ಗಲಾಟೆ ಮಾಡಿದರೆ ಬಾಯಿ ಮುಚ್ಚಿಕೊಂಡು ಕೂತಿರುವಂತೆ ಮಾಡುವಲ್ಲಿ ಯಶಸ್ವಿಯಾದರು.. 

ಹೌದು.. ಒಂದು ಚಿಕ್ಕ ಚೊಕ್ಕ ಕಾರ್ಯಕ್ರಮ ಯಶಸ್ವಿಯಾಗಿದ್ದು ಸರಳ ನಾಯಕತ್ವದಿಂದ.. ಮತ್ತು ಗೆದ್ದೇ ಗೆಲ್ಲುತ್ತೇನೆ ಎಂಬ ಛಲದಿಂದ... !!!

ಭಾನುವಾರವನ್ನು ಸುಂದರವಾಗಿ ಕಳೆದ ಖುಷಿ ನನ್ನದು... !

"ಶ್ರೀ ನಿನಗನ್ನಿಸಿದ ಒಂದೆರಡು ಮಾತುಗಳು ಶೈಲಿಯಲ್ಲಿ ಹೇಳು"

"ಆಗಲೇ ಚಿತ್ರಗಳ ಜೊತೆಯಲ್ಲಿ ಹೇಳುವೇ ... 

೧. ಮೊದಲ ಚಿತ್ರ : "ನಮ್ಮನ್ನು ಸದಾ ಭಗವಂತ ಕೈ ಹಿಡಿದು ನೆಡೆಸುತ್ತಾನೆ"



೨. ಎರಡನೇ ಚಿತ್ರ : ಭಗವಂತನ ಕೃಪಾಕಟಾಕ್ಷದ ಬೆಳಕು ನಮ್ಮ ಮೇಲೆ ಬೀಳಲೇ ಬೇಕು .. ಬಿದ್ದೆ ಬೀಳುತ್ತದೆ 



೩. ಮೂರನೇ ಹಾಗೂ ನಾಲ್ಕನೇ ಚಿತ್ರ :  ನಮ್ಮ ಚೌಕಟ್ಟಿನೊಳಗೆ ಇದ್ದಾಗ ಚಂದ್ರೋದಯ ಖಂಡಿತ..  ಅಂದರೆ  ಗುರುಹಿರಿಯರ ಮಾರ್ಗದರ್ಶನ .... ಹಾಗೆಯೇ ಚಂದ್ರ ಮನಸ್ಸಿನ ಬಿಂಬ ಅದೇ ನಮ್ಮ ಯಶಸ್ಸಿಗೆ ಮೂಲ ಕಾರಣ 





೫. ಐದನೇ ಚಿತ್ರ : ಯಶಸ್ಸೇ ಬರಲಿ.. ಗೆಲುವು ಕಷ್ಟವಾಗಿರಲಿ.. ಏನೇ  ಆಗಲಿ ಮನಸ್ಸಿಗೆ ಸದ್ದು ಮಾಡದಂತೆ ನೋಡಿಕೋ.. ಅದು ಸಾಧ್ಯವಾಗೋದು ಸತ್ ಸಂಗದಿಂದ ಮಾತ್ರ 




೬. ಆರನೇ ಚಿತ್ರ :  ಗುರುಹಿರಿಯರು ಹಾಕಿಕೊಟ್ಟ ಮಾರ್ಗವೇ  ರಾಜಮಾರ್ಗ... ಅದು ಸಿಗುವುದು ರಾಜಯೋಗದ ಬಲದಿಂದ 



೭. ಏಳನೇ ಚಿತ್ರ : ನಾವು ಅಂದುಕೊಂಡದ್ದಕ್ಕಿಂತ ಆ  ಮಹಾಮಹಿಮನ ಪ್ಲಾನ್ ಸದಾ ಬೇರೆಯದೇ ಆಗಿರುತ್ತೆ .. ಅದು ನಾವು ಅಂದುಕೊಂಡದ್ದಕ್ಕಿಂತ ಶೀಘ್ರವಾಗಿ ಹತ್ತಿರದಲ್ಲಿ ಕಾಣುತ್ತದೆ.. 



.  

೮. ಎಂಟನೇ ಚಿತ್ರ : ನಾವು ಪ್ರಾರ್ಥನೆ ಮಾಡುತ್ತೇವೆ.. ಆ ಭಗವಂತ ನಮ್ಮ ರಕ್ಷಣೆಗೆ ಹೇಗೆ ಯಾರನ್ನು ಕಳಿಸುತ್ತಾನೋ ನಮಗೆ ಅರಿವಿಗೆ ಬರುವುದಿಲ್ಲ..  ಆದರೆ ಕಳಿಸಿದ ಸಹಾಯದ ಬಗ್ಗೆ ವರ್ಣಿಸೋಕೆ ಮಾತೆ ಬರೋಲ್ಲ 


7 comments:

  1. ಚಂದ ಉಂಟು ಶ್ರೀ

    ReplyDelete
  2. Super photography, Explanations is very good. Thank you for your wonderful cooperation srikanthji .baba bless you in all respect. Thank you for sharing.👍😊🙏💐

    ReplyDelete