Friday, January 21, 2022

ಜನುಮದಿನದ ಶುಭಾಶಯಗಳು ಪಾಪಾ... !!!!

ಶ್ರೀ : 
"ನಿನ್ನೆ ನಿನ್ನೆಗೆ ನಾಳೆ ನಾಳೆಗೆ 
ಇಂದು ನಮ್ಮದೇ ಚಿಂತೆ ಏತಕೆ" (ಸಿಂಗಪೂರ್ ನಲ್ಲಿ ರಾಜಾಕುಳ್ಳ)

ಶೀತಲ್ 
"ಬೆಳ್ಳಿ ಮೂಡಿತು ಕೋಳಿ ಕೂಗಿತು 
ಬಾನಾಗಿ ರಂಗು ಚೆಲ್ಲಿ ತೇರ ನೇರಿ ಸೂರ್ಯ ಬಂದ" (ಕವಿರತ್ನ ಕಾಳಿದಾಸ)

ಶ್ರೀ 
"ಪೂಜಿಸಲೆಂದೇ ಹೂಗಳ "ತಂದೆ"
ದರುಶನ ಕೋರಿ ನಾ ಬಂದೆ" (ಎರಡು ಕನಸು)

ಶೀತಲ್ 
"ನಿನ್ನೊಲುಮೆ ನನಗಿರಲಿ ತಂದೆ 
ಕೈ ಹಿಡಿದು ನೀ ನೆಡೆಸು ಮುಂದೆ" (ನಮ್ಮ ಮಕ್ಕಳು)

ಶ್ರೀ
"ನಗು ನಗುತಾ ನಲಿ ನಲಿ ಏನೇ ಆಗಲಿ" (ಬಂಗಾರದ ಮನುಷ್ಯ)

ಶೀತಲ್  
"ನಗಬೇಕು ನಗಿಸಬೇಕು ಅದೇ ನನ್ನ ಧರ್ಮ" (ನಕ್ಕರೆ ಅದೇ ಸ್ವರ್ಗ)

ಶ್ರೀ 
"ಹರಿ ನಾಮವೇ ಚಂದ ಅದ ನಂಬಿಕೊ ಕಂದ" (ಭಕ್ತ ಕುಂಬಾರ)

ಶೀತಲ್  
"ನಿಮ್ಮ ಕಂಗಳ ಬಿಸಿಯ ಹನಿಗಳು ನೂರು ಕತೆಯ ಹೇಳಿವೆ" (ಬಡವರ ಬಂಧು)

ಶ್ರೀ 
"ನಿನ್ನ ನುಡಿಯು ಜೇನ  ಹನಿಯು ಹೃದಯಕೆ" (ಬಡವರ ಬಂಧು)

ಸೀಮು  
"ಯಾದೊಂಕಿ ಬಾರಾತ್ ನಿಖಲಿ ಹೇ ಆಜ್ ದಿಲ್ ಕೆ ದ್ವಾರೆ" (ಯಾದೊಂಕಿ ಬಾರಾತ್)

ಐಶ್ವರ್ಯ
"ಮಧುಬನ್ ಖುಷ್ಭೂ ದೇತಾ ಹೇ 
ಜೀನಾ ಉಸ್ಕಾ ಜೀನಾ ಹೇ" (ಸಾಜನ್ ಬಿನಾ ಸುಹಾಗನ್)

ಸೀಮು  
ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | 
ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ (ಕಪ್ಪು ಬಿಳುಪು)

ಸವಿತಾ 
"ನಮ್ಮ ಸಂಸಾರ ಆನಂದ ಸಾಗರ" (ನಮ್ಮ ಸಂಸಾರ)

****** 

ಜೀವನ ಎಂದರೆ ಚಿತ್ರಗಳ ಗೀತೆಯೇ ಹೌದು.. ಒಂದು ಗೀತೆ ಬದುಕಿನ ಹುಮ್ಮಸ್ಸನ್ನು ಹೆಚ್ಚಿಸುತ್ತದೆ ಎಂದು ಬಲವಾಗಿ ನಂಬಿರುವ ನನಗೆ.... ನನ್ನ ಬದುಕಲ್ಲಿ ಅರಳಿದ ಹೂಗಳು ಕೂಡ ಚಿತ್ರಗಳ ಗೀತೆಗೆ ಮಾರು ಹೋದವರೇ.. ಅವರ ಮನದಾಳದ ಮಾತುಗಳು ಹಾಡಾಗಿ ಬಂದು ನಿಂತು ಈ ಲೇಖನ ಮಾಲೆಯಾಗಿ ಮಾಡಿದೆ.. 

ನನ್ನ ಅದ್ಭುತ ಗೆಳತೀ ಶೀತಲ್ ಹುಟ್ಟಿದ ದಿನ.. ಟೀನ್ ಏಜ್ ಅನ್ನುವ ಸುಂದರ ಯುಗವನ್ನು ದಾಟಿ ಬದುಕಿನ ಯಶಸ್ಸಿನ ಪಯಣದತ್ತ ಮೆಲ್ಲನೆ ಹೆಜ್ಜೆ ಇಟ್ಟಿರುವ ನಿನಗೆ ಜನುಮದಿನದ ಶುಭಾಶಯಗಳನ್ನು ಕೋರಬೇಕು ಎಂದಾಗ ಚಿತ್ರಗಳ ಹಾಡಿನ ಗುಚ್ಛವೇ ಮುನ್ನುಗ್ಗಿ ಬಂತು.. ಅದರ ಪ್ರತಿಫಲ ಈ ಲೇಖನ.. 

ಜನುಮದಿನದ ಶುಭಾಶಯಗಳು ಪಾಪಾ... !!!!