Sunday, December 26, 2021

ಮನೋ ನಿರ್ಧಾರ - ಅಪ್ಪನ ಸ್ಥಾನದಲ್ಲಿ ನಿಂತಿರುವ ಅಣ್ಣ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು

 ಮನೋ ನಿರ್ಧಾರಕ್ಕೆ, ಧೃಡತೆಗೆ ದೈವ ಸಹಾಯ ಹೇಗಿರುತ್ತದೆ ಎನ್ನುವುದಕ್ಕೆ ಈ ಕೆಳಕಂಡ ಘಟನೆ ಸಾಕ್ಷಿ 

ಮತ್ತೊಮ್ಮೆ ಕೆಲವು ದಶಕಗಳ ಹಿಂದಕ್ಕೆ ನಿಮ್ಮನ್ನೆಲ್ಲ ಕರೆದೊಯ್ಯುತ್ತಿದ್ದೇನೆ. ನನ್ನ ಕುಟುಂಬದಲ್ಲಿ ನಡೆದ ಘಟನೆಗಳೇ ಹಾಗೆ.. 

ಸುಮಾರು ೧೯೭೬-೭೭... ಮೊದಲ ಮಗನಿಗೆ ಹನ್ನೊಂದು ವರ್ಷ ತುಂಬಿದ ಸಂಭ್ರಮ.. ಹನ್ನೊಂದಕ್ಕೆ ಮುಂಜಿ ಅಂದರೆ ಉಪನಯನ ಮಾಡಬೇಕು ಎನ್ನುವುದು ನಮ್ಮ ಅಪ್ಪನ ಆಸೆ. ಪರಿಚಯದವರು ಕೊಟ್ಟ ಮಾಹಿತಿ ಪ್ರಕಾರ, ಸಾಮೂಹಿಕ ಉಪನಯನ ನಡೆಯುತ್ತಿದೆ ಎಂದು ಗೊತ್ತಾಯಿತು. 

ಯೋಚನೆಯೇ ಇಲ್ಲ.. ತಕ್ಷಣ ಯೋಚನೆ ಮಾಡದೆ ಪರಿವಾರ ಸಮೇತ ಹೊರಟಿದ್ದು ದಾವಣಗೆರೆ ಚನ್ನಗಿರಿಯ ಬಳಿಯ ಬಸವಾಪಟ್ಟಣಕ್ಕೆ. 

ಆ ಸಮಯದಲ್ಲಿ ಅದ್ಭುತ ಎನ್ನಿಸುವಂಥ ಯಾಗ ನಡೆಯುತ್ತಿತ್ತು.  ಬಂದ ಭಕ್ತಾದಿಗಳಿಗೆ ಊಟ ಉಪಚಾರ ವ್ಯವಸ್ಥೆ ಬಗ್ಗೆ ನನ್ನ ಅಪ್ಪ ಅಮ್ಮ ಹೇಳಿದ್ದು ಇನ್ನೂ ಕಿವಿಯಲ್ಲಿ ಗುಯ್ ಅನ್ನುತ್ತಿದೆ. ಆಪಾಟಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ ಅನ್ನ, ಸಾರು,ಹುಳಿ, ಮಜ್ಜಿಗೆ ಇರುತ್ತಿದ್ದವು ಎಂದು. 

ಮಹಾ ಯಜ್ಞಕ್ಕೆ ತಯಾರಾದ ಶಿಬಿರಗಳು - ಕೃಪೆ ಗೂಗಲೇಶ್ವರ 


ಅಡಿಗೆ ತಯಾರು  ಮಾಡಿದ ಸಾಹಸಿ ಬಾಣಸಿಗರು
 - ಕೃಪೆ ಗೂಗಲೇಶ್ವರ 


ಅಡಿಗೆ ತಯಾರು  ಮಾಡಿದ ಸಾಹಸಿ ಬಾಣಸಿಗರು
 - ಕೃಪೆ ಗೂಗಲೇಶ್ವರ 



 ಸಾಹಸಿ ಬಾಣಸಿಗರ ಪರಿಶ್ರಮ ಅನ್ನದ ಪರ್ವತ 
 - ಕೃಪೆ ಗೂಗಲೇಶ್ವರ 

ಇರಲಿ, ವಿಷಯ ಏನಂದರೆ, ಉಪನಯನ ಕಾರ್ಯಕ್ರಮ ಶುರುವಾಗಬೇಕಿತ್ತು.. ಉಪಯನಯನದ ಹುಡುಗ ಅರ್ಥಾತ್ ನನ್ನ ಅಣ್ಣ ವಿಜಯನಿಗೆ ಜ್ವರ ಅಂದರೆ ಜ್ವರ. ಸುಡುವ ಕಾವಲಿಯಾಗಿತ್ತು ಮೈ. ಅಪ್ಪ ಅಮ್ಮ ಒಂದು ಮರದ ಕೆಳಗೆ, ಈ ಮಗುವನ್ನು ತೊಡೆಯ ಮೇಲೆ ಹಾಕಿಕೊಂಡು, ಕೂತಿದ್ದ ಸ್ಥಿತಿ ನೋಡಿ, ಅಲ್ಲಿ ಓಡಾಡುವ ಜನರೆಲ್ಲಾ, ಮತ್ತು ಜೊತೆಯಲ್ಲಿದ್ದ ಬಂಧುಗಳು, ಅಯ್ಯೋ ಈ ಮಗುವಿಗೆ ಈ ಯಾಕೆ ಉಪಯನಯನ, ಮೊದಲು ಜ್ವರ ಬಿಡಲಿ ಎಂದು ಹೇಳಿದರು ಅಪ್ಪನದು ಒಂದೇ ಮಾತು. 

"ಗಾಯಿತ್ರಿ ಉಪದೇಶ ಮಾಡಿಸಲು ಕರೆದುಕೊಂಡು ಬಂದಿದ್ದೀನಿ. ಆ ದೇವಿ ಮತ್ತು ಇಲ್ಲಿನ ಗುರುಗಳು ಅವನನ್ನು ಉಳಿಸಿಕೊಳ್ಳುತ್ತಾರೆ.. ಆ ನಂಬಿಕೆ ನನದು ಇಷ್ಟರ ಮೇಲೆ ಆ ದೇವರ ಇಚ್ಛೆ. ... "  

ಇವತ್ತಿಗೂ ಅಣ್ಣ ಹೇಳುತ್ತಾನೆ, "ಅಂದು ಇಡಿ ಉಪಯನಯನ ಕಾರ್ಯಕ್ರಮದಲ್ಲಿ ಅವನಿಗೆ ನೆನಪಲ್ಲಿ ಉಳಿದದ್ದು ತನ್ನ ತಂದೆಯಿಂದ ಉಪದೇಶಿಸಿದ ಗಾಯಿತ್ರಿ ಮಂತ್ರ ಮಾತ್ರ.. ಇನ್ನೇನೂ ನೆನಪಿಲ್ಲ" 

ವಟುವಿಗೆ ಈ ಉಪನಯನ ಎರಡನೇ ಜನ್ಮ ಇದ್ದಂತೆ ಅಂದರೆ ಇನ್ನೊಂದು ಕಣ್ಣು ಬಂದಂತೆ. ಆಧ್ಯಾತ್ಮ ಪ್ರಪಂಚಕ್ಕೆ ಕಾಲಿಡಲು ಬೇಕಾದ ಇನ್ನೊಂದು ನಯನ ಉಡುಗೆಯಾಗಿ ಸಿಗುವ ಕ್ಷಣವೇ ಈ ಉಪನಯನ.

ಆ ಜಾಗವನ್ನು ನೋಡಬೇಕು, ಅಲ್ಲಿ  ಓಡಾಡಬೇಕು ಎನ್ನುವ ಹಂಬಲವಿದೆ  .. ಖಂಡಿತ ಆ ಹಂಬಲದ ಗುರಿಯನ್ನು ತಲುಪುತ್ತೇನೆ .. ಆದರೆ ಮನುಷ್ಯನಿಗೆ  ಆತುರ ಅಲ್ಲವೇ .. ಅಂತರ್ಜಾಲ ತಾಣವನ್ನು ಪಾತಾಳ ಗರಡಿ ಹಾಕಿ ಶೋಧಿಸುತ್ತಿದ್ದೆ.. ಆಗ ಸಿಕ್ಕಿದ ಅನರ್ಘ್ಯ ಚಿತ್ರಗಳು ಇವು ,. ಮನಸ್ಸಿಗೆ ಖುಷಿಯಾಯಿತು.. ಕೆಲವು ಚಿತ್ರಗಳು ಆ ಸ್ಥಳದ, ಆ ಸಮಯದ್ದು ಅಲ್ಲದೆ ಇರಬಹುದು.. ಆ ಗೂಗಲೇಶ್ವರನ ಮಡಿಲಲ್ಲಿ ಹೆಕ್ಕುವಾಗ ಅನರ್ಘ್ಯ ಮುತ್ತುಗಳ ಜೊತೆಯಲ್ಲಿ ವೈಡೂರ್ಯಗಳು ಸೇರಿಬಿಡುತ್ತದೆ.. 







ಕೃಪೆ ಗೂಗಲೇಶ್ವರ 

ಕೃಪೆ ಗೂಗಲೇಶ್ವರ 

 ನಾವು ಸಿದ್ಧ - ಕೃಪೆ ಗೂಗಲೇಶ್ವರ 

ಮಹಾಭಕ್ತರ ಕಡಲು - ಕೃಪೆ ಗೂಗಲೇಶ್ವರ 

ಅಣ್ಣಾವ್ರು ಇಲ್ಲ ಅಂದರೆ ನನ್ನ ಲೇಖನ
ಪೂರ್ಣ ಅನಿಸೋಲ್ಲ - ಕೃಪೆ ಗೂಗಲೇಶ್ವರ 


ವೆಬ್ಸೈಟ್ - ಕೃಪೆ ಗೂಗಲೇಶ್ವರ 


ಇಂದು ಆ ಮಗು ಇನ್ನೊಂದು ವರ್ಷಕ್ಕೆ ಕಾಲಿಟ್ಟು ಸಂಭ್ರಮಿಸುತ್ತಿದೆ.   

ನಮ್ಮೆಲ್ಲರ ಹಾರೈಕೆ ವಿಜಯನಿಗೆ.. 

ಅಪ್ಪನ ಸ್ಥಾನದಲ್ಲಿ ನಿಂತಿರುವ ಅಣ್ಣ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು

ಅಪ್ಪನ ಛಲ, ತಾಳ್ಮೆ ಎರಡನ್ನು ವರವಾಗಿ ಪಡೆದಿದಿರುವ ನಿನಗೆ ಜೀವನದ ಪಥ ಯಶಸ್ವಿ ಹೂವಿನ ಪಥವಾಗಲಿ. 

ಹುಟ್ಟು ಹಬ್ಬದ ಶುಭಾಶಯಗಳು...!

1 comment:

  1. ನೆನಪಿನ ಫೋಟೋಸ್ ಮತ್ತು ಸ್ಥಳ👌👌🙏🙏🌹🌹

    ReplyDelete