Sunday, August 23, 2020

ಸವಿತಾರ್ಥಕತೆ ಒಂದು ಬದುಕು

ಸುಮಾರು ಮೂವತ್ತು ವರ್ಷಗಳ ಹಿಂದೆ.. ದೂರದರ್ಶನದಲ್ಲಿ ಅಮಿತಾಭ್ ಅವರ ತ್ರಿಶೂಲ್ ಸಿನಿಮಾ ನೋಡುತಿದ್ದೆ.. ಅಮ್ಮನ ಆಸೆ ನೆರವೇರಿಸೋಕೆ.. ಸಂಜೀವ್ ಕುಮಾರ್ ಬಳಿ ಒಂದು ನಿವೇಶನ ಖರೀದಿ ಮಾಡಲು ಬರುತ್ತಾರೆ.. ಚಟಪಟ ಮಾತುಗಳು ಆಗುತ್ತವೆ.. ಸಂಜೀವ್ ಕುಮಾರ್ ಅವರ ಒಂದು ಮಾತಿಗೆ ಸಿಡಿದು ಅಮಿತಾಭ್ ಹೇಳುವ ಮಾತು.. 

"ಮೇ ಪಾಂಚ್ ಲಾಖ್ ಕ ಸೌಧಾ ಕರ್ನೆ ಆಯಾ ಹೂ.. ಮಗರ್ ಜೆಬ್ ಮೇ ಪಾಂಚ್ ಬೂಟಿ ಕವಡಿಯ ಭೀ ನಹಿ ಹೇ.. !"




ತುಂಬಾ ಪವರ್ ಫುಲ್ ಅನ್ನಿಸ್ತು ಈ ಸಂಭಾಷಣೆ.. ಮೈ ಎಲ್ಲಾ ಜುಮ್ ಅನ್ಸಿತ್ತು .. ಅಂದಿನಿಂದ ಇವತ್ತಿನ ತನಕ ಲೆಕ್ಕವಿಲ್ಲದಷ್ಟು ಬಾರಿ ಈ ಸಿನಿಮಾ ಇದೆ ಸಂಭಾಷಣೆಗಾಗಿ ನೋಡಿದ್ದೀನಿ.. ಅಬ್ಬಬ್ಬಾ ಅನ್ನಿಸುತ್ತೆ.. 

ನನ್ನ ಮನೆ ಮಾಡುವ ಬಯಕೆ ಕೂಡ ಇದೆ ಚಿತ್ರದ ಸಂಭಾಷಣೆಯಂತೆ ನೆಡೆಯಿತು.. ಅಕ್ಕ ತಾನು ಓಡಾಡುವ ಹಾದಿಯಲ್ಲಿ ಕಂಡ ಒಂದು ಜಾಹಿರಾತನ್ನು ನೋಡಿ.. ನನ್ನ ಬಲವಂತ ಮಾಡಿ ಮನೆಯನ್ನು ತೋರಿಸಿದಳು.. ಅಲ್ಲಿದ್ದ ನಿರ್ವಾಹಕಿ ದಿವ್ಯಾ ಮೇಡಂ ಮತ್ತು ಶ್ರೀ ಸಬರೀಶ್ ಕೂಡ ನನಗೆ ಅತ್ಯುತ್ತಮ ಸಹಕಾರ ನೀಡಿ ಮನೆಯನ್ನು ನನದಾಗಿಸಿಕೊಳ್ಳಲು ಸಹಾಯಮಾಡಿದರು... 



ಶ್ರೀ ರಾಮ ಲಂಕೆಗೆ ಸೇತುವೆ ಕಟ್ಟುವಾಗ ವಾನರ ಸೇನೆಯಲ್ಲದೆ.. ಅದೆಷ್ಟೋ ಕಾಣದ ಕೈಗಳು ಸಹಾಯ ಮಾಡಿದ ಹಾಗೆ ನನ್ನ ಭುಜಕ್ಕೆ ಭುಜ ಕೊಟ್ಟು ಸವಿತಾಳ ಕನಸನ್ನು ನನಸು ಮಾಡಿದ ಕೀರ್ತಿ ಅವರಿಗೆಲ್ಲಾ ಸಲ್ಲುತ್ತದೆ.. 





ಯಾವ ಫ್ಲೋರ್ ಅಂದಾಗ.. ನನ್ನ ಅದೃಷ್ಟ ಸಂಖ್ಯೆ ಎಂಟಕ್ಕೆ ಬಂದು ನಿಂತೇ.. ಪೂರ್ವ ದಿಕ್ಕಿನ ಬಾಗಿಲು ಒಳಿತು ಅಂತ ನನ್ನ ಮಾನಸಿಕ ಗುರು ಶ್ರೀ ನಾಗಭೂಷಣ ಹೇಳಿದರು.. 

ಅಂದುಕೊಂಡದ್ದಕ್ಕಿಂತ ಸರಳವಾಗಿ, ಸುಸೂತ್ರವಾಗಿ ಮನೆಯ ರಿಜಿಸ್ಟ್ರೇಷನ್ ಆಯಿತು.. ಹಾಗೂ ಹೀಗೂ ನನ್ನ ಮಗ ಎಂಟಕ್ಕೆ ದಂಟು ಅಂದ ಅನ್ನೋ ರೀತಿಯಲ್ಲಿ ಬೆಂಗಳೂರಿನ ಈ ಮಹಾನಗರಿಯಲ್ಲಿ ನಮ್ಮ ಅಪ್ಪನ ಸಾಹಸಿ ಬದುಕಿಗೆ ಸಾಕ್ಷಿಯಾಗಿ ಇನ್ನೊಂದು ಸದನ ನೆಲೆ ನಿಂತಿತು.. 

ನನ್ನ ಅಕ್ಕನ ಮನೆಯ ಗೃಹ ಪ್ರವೇಶವಾದಾಗ.. ಪೂಜೆ ಮಾಡಿಸಿದ ಗುರುಗಳು ಕೇಳಿದರು.. ಶ್ರೀಕಾಂತ್ ನಿಮ್ಮ ಮನೆ ಯಾವಾಗ ಅಂತ.. ಅರಿವಿಲ್ಲದೆ ಹೇಳಿದ್ದೆ.. ಗುರುಗಳೇ ಸಧ್ಯದಲ್ಲಿಯೇ.. ಆದರೆ ಮನೆಯ ಹೆಸರು "ಅನುಗ್ರಹ ಸದನ - ೨" ಅಂತಾನೆ ಇಡೋದು ಅಂದಿದ್ದೆ.. ಸವಿತಾ ಮೆಲ್ಲನೆ ತಲೆ ಮೇಲೆ ಕುಟ್ಟಿದ್ದಳು.. 

ಯಾಕೆ ಶ್ರೀಕಾಂತ್ ಆ ಹೆಸರು ಅಂತ ಗುರುಗಳು ಕೇಳಿದಾಗ 

ನಮ್ಮ ವಿಜಯನಗರದ ಬಾಡಿಗೆ ಮನೆಯ ಹೆಸರು "ಅನುಗ್ರಹ ಸದನ" ಹದಿನಾಲ್ಕು ವರ್ಷ ಆ ಹೆಸರು ಉಪಯೋಗಿಸಿ ರೂಡಿಯಾಗಿ ಅಭಿಮಾನ ಉಕ್ಕಿತ್ತು.. ಅಕ್ಕನ ಮನೆಗೆ ಹೆಸರಿಡಬೇಕು ಎಂದು ಕೇಳಿದಾಗ ಅರಿವಿಲ್ಲದೆ ಬಂದ ಹೆಸರು.. "ಅನುಗ್ರಹ ಸದನ" ಹಾಗಾಗಿ ಆ ಹೆಸರಿನ ಮೇಲಿನ ಲವ್.. ಮುಗಿಯಬಾರದು ಎಂದು.. ಇದಕ್ಕೆ ಅನುಗ್ರಹ ಸದನ - ೨ ಎಂದು ಹೆಸರಿಡಬೇಕು ಎಂದು ನಿರ್ಧರಿಸಿದ್ದೆವು.. ಕೂಸು ಹುಟ್ಟೋಕೆ ಮುಂಚೆನೇ ಕುಲಾವಿ ಅಂತಾರಲ್ಲ ಹಾಗೆ ಇದು ಕೂಡ ಎಂದಿದ್ದೆ.. 

ಗುರುಗಳು ನಗುತ್ತಾ.. ನಿಮ್ಮ ಆಸೆ ಖಂಡಿತ ಈಡೇರುತ್ತೆ.. ಶುಭವಾಗಲಿ ಎಂದು ಹಾರೈಸಿದ್ದರು.. 

ಆದರೆ ಸವಿತಾಳ ಕನಸಾದ ಈ ಗೃಹ.. ನನಸಾಗುವ ವೇಳೆಗೆ ಅವಳು ಹಿರಿಯರನ್ನು ಸೇರಲು ನನ್ನನ್ನು ಬದುಕಿಸಿ ಹೊರಟೆ ಬಿಟ್ಟಿದ್ದಳು.. ಹಾಗಾಗಿ ಮನೆಯ ಹೆಸರಾಯಿತು 

ಸವಿತಾರ್ಥಕತೆ 
(ಅನುಗ್ರಹ ಸದನ - ೨)


ಶ್ರೀ ಮನೆಯೇನೋ ಆಯಿತು.. ಅದಕ್ಕೆ ಚಂದದ ಹೆಸರು ಇಟ್ಟಿರಿ.. ಈ ಮನೆಯೊಳಗೇ ಸದಾ ಶಾಂತಿ ನೆಮ್ಮದಿ ನೆಲಸಿರಲಿ ಎಂದು ಆಶೀರ್ವದಿಸುತ್ತೇನೆ.. ಆದರೆ ಮನೆಗೆ ದೀಪ ಬೆಳಗುವ ಒಂದು ಜೊತೆ ಬೇಕು ಶ್ರೀ.. ಮನಸ್ಸು ಮಾಡಿ ಎಂದಳು ಸವಿತಾ.. 

ತುಂಬಾ ಯೋಚನೆ ಮಾಡಿ.. 

ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ  
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು

ಬೇಡ ಅಂತ ಶುರುವಾಗಿ ಕಡೆಗೆ ಬಂದು ನಿಂತದ್ದು ಬೇಕು ಅಂತ.. 

ಮನೆಯವರೆಲ್ಲರ ಪ್ರೋತ್ಸಾಹ.. ಗೆಳೆಯ ಗೆಳತಿಯರ ಒತ್ತಾಯ.. ಎಲ್ಲವೂ ಸಾಲಾಗಿ ನಿಂತು ಜೊತೆಗೆ ನನ್ನ ಮುದ್ದಿನ ಗೆಳತೀ ಶೀತಲ್ ತನ್ನ ಒಪ್ಪಿಗೆಯ ಮುದ್ರೆಯನ್ನೊತ್ತಿದಾಗ ನೆಡೆದು ಬಂದವಳೇ ಸೀಮಾ.. ಎಲ್ಲಾ ಸೀಮೆಯನ್ನು ದಾಟಿ....ಮಗಳು ಐಶ್ವರ್ಯ ಜೊತೆ ನನ್ನ ಬದುಕಿಗೆ ಹೆಜ್ಜೆ ಇಟ್ಟಳು.. 



ಶ್ರೀವಿತಲ್ ಜೊತೆ ಸೀಮೈಶ್ವರ್ಯ ಸೇರಿಕೊಂಡು "ಸವಿತಾರ್ಥಕತೆ "ಯನ್ನು ಬೆಳಗುವ ಕಾಯಕ ಶುರುವಾಗಿದೆ.. ಸವಿತಾ ಸ್ವರ್ಗದಿಂದ ಈ ತುಂಬು ಸಂಸಾರವನ್ನು ಹರಸುತ್ತಾ ಸದಾ ನಮ್ಮ ಮನದಲ್ಲಿರುತ್ತಾಳೆ.. 

ಮಕ್ಕಳಿಬ್ಬರ ಬದುಕನ್ನು ಕಟ್ಟಿಕೊಟ್ಟು.. ಅವರ ಕನಸನ್ನು ನನಸು ಮಾಡುವುದು ನಮ್ಮ ಮುಂದಿನ ಕಾಯಕ.. 



ಏಶಿಯನ್ ಪೇಂಟ್ಸ್ ಜಾಹಿರಾತಿನಂತೆ.. ಹೊಸ ಮನೆ...  ಹೊಸ ಮಡದಿ...  ಹೊಸ ಸಂಸಾರ ಎಲ್ಲವೂ ಸುಸೂತ್ರವಾಗಿ ಸಾಗಲೆಂದು ಆ  ಭಗವಂತನನ್ನು ಪ್ರಾರ್ಥಿಸುತ್ತಾ.. ನಿಮ್ಮೆಲ್ಲರ ಶುಭ ಹಾರೈಕೆ ಸದಾ ಇರಲಿ ಎಂದು ಪ್ರಾರ್ಥಿಸುವೆ.. !!!

73 comments:

  1. ಹಾರ್ದಿಕ ಶುಭಹಾರೈಕೆಗಳು.
    ಸದಾ ಒಳ್ಳೆಯ ಆರೋಗ್ಯ, ಶಾಂತಿ ಮತ್ತು ‌ನೆಮ್ಮದಿಯಿಂದ ಕೂಡಿರುವ ಸುದೀರ್ಘವಾದ ಬಾಳು ನಿಮ್ಮದಾಗುವಂತೆ ಆ ಭಗವಂತ ಸದಾ ಹರಸುತ್ತಿರಲಿ. ��

    ReplyDelete
    Replies
    1. ಧನ್ಯವಾದಗಳು ಅಸು ಹೆಗ್ಡೆ ಸರ್.. 
      ಸುಂದರ ಮಾತುಗಳು.. 

      Delete
  2. ಹಾರ್ದಿಕ ಶುಭಹಾರೈಕೆಗಳು.
    ಸದಾ ಒಳ್ಳೆಯ ಆರೋಗ್ಯ ಮತ್ತು ‌ನೆಮ್ಮದಿಯಿಂದ ಕೂಡಿರು ಬಾಳು ನಿಮ್ಮದಾಗುವಂತೆ ಆ ಭಗವಂತ ಸದಾ ಹರಸುತ್ತಿರಲಿ. 🙏

    ReplyDelete
    Replies
    1. ಧನ್ಯವಾದಗಳು ಅಸು ಹೆಗ್ಡೆ ಸರ್.. 
      ಸುಂದರ ಮಾತುಗಳು.. 

      Delete
  3. ಸಾರ್ಥಕತೆ ನಿಮ್ಮ ಕೈಗೂಡಿದೆ. ಕನಸು ನನಸಾಗಿದೆ. ಭವಿಷ್ಯವೆಲ್ಲ ಸುಖ,ಸಂತೋಷದಿಂದ ಕೂಡಿರಲಿ.

    ReplyDelete
    Replies
    1. ಗುರುಗಳೇ.. ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು 

      Delete
  4. ಭರ್ಜರಿ ಶುಭಾಶಯಗಳು ಶುಭವಾಗಲಿ ಅಣ್ಣಾ❤❤

    ReplyDelete
  5. ಸಾರ್ ನಿಮ್ಮ ಬದುಕು ಏಶಿಯನ್ ಪೇಂಟ್ಸ್ ತರಾನೆ ರಂಗು ರಂಗಾಗಿರಲಿ, Ancient ಪೇಂಟ್ಸ್ ತರಾಹಾ ಸ್ಥಿರವಾಗಿರಲಿ....ನೀವು ನಾಲ್ಕು ಜನ ಎಸ್(Srikanth,Savitha,Seema,Shethal) ಸೇರಿ ಐಶ್ವರ್ಯರೊಡನೆ.
    Suಖ,Saoಪತ್ತು,Saoತೋಷದೊಡನೆ, Sarತಕತೆಯ ಜೀವನವನ್ನು ಸವಿತಾರ್ಥಕತೆಯಲ್ಲಿ ಸವಿಯಿರಿ

    ReplyDelete
  6. Super anna ದೇವರು ಒಳ್ಳೇದು ಮಾಡ್ಲಿ

    ReplyDelete
  7. Speechless is the best way to discribe your blog Sir.Positive thinking and Your hard work, has been rewarded.may your new life at new home with your family be peaceful and full of positive vibes.very happy for your daughter too Sir.

    ReplyDelete
  8. Super writeup Anna Again congratulations and wish you only happiness, joy and prosperity through out on your new journey

    ReplyDelete
  9. My hearty congrats sri...may your life be filled with love, prosperity, health and wealth... All the very best....

    ReplyDelete
  10. Inspiring srikanth..... I can understand the emotions..... May God bless you with lots of happiness and abundance of emotional strength

    ReplyDelete
  11. ��������
    After read this blog Speechless Sri still thinking what to comment


    How this Sri heyge edella saadya nenage Abba odutha edre mai jum annesuthade jeevanavemba saagaradalli yenella aaguthe haagu adu heyge baraha roopadalli hora hommuthade abbabbaaa Sri really hats off to ur write up bcas samsaaradalli estella nadeyathe adralli kaylavondu nenapalli eruthe kaylavu haage marethu hoguthe aadre neenu haagella prathiondu gataneyannu nenapalli ettu adakke ondu thiruvu sekkaga adakke ondu roopa kottu adanne ondu keru chitradanthe baraha baredu namage thaluoesuva nenna ಜ್ಞಾನಕ್ಕೆ sharanu sharanu

    ReplyDelete
    Replies
    1. What to say for your lovely comment..superb..Thank you so much PBS

      Delete
  12. Excellent narrative,Sri! Congratulations! Good things happen to good people! This is another evidence for that!

    ReplyDelete
  13. ತುಂಬಾ ಸೊಗಸಾಗಿದೆ ಶೀರ್ಷಿಕೆ, ಛಾಯಾಚಿತ್ರ, ನಿರೂಪಣೆ 100ಕ್ಕೆ100ಅಂಕಗಳು ಶ್ರೀ

    ReplyDelete
  14. Though we thought 2020 is a total washout, good relief with these ... wish you many more successful years Sriki

    ReplyDelete
  15. ಅಭಿನಂದನೆಗಳು...
    ಸಂತಸ ನಮ್ಮೆಲ್ಲರಿಗೂ...
    ಶ್ರೀವಿತಲ್ ಜೊತೆ ಸೀಮೈಶ್ವರ್ಯ ಸೇರಿಕೊಂಡು

    *"ಸವಿತಾರ್ಥಕತೆ "*

    ಯನ್ನು ಬೆಳಗುವ ಕಾಯಕಕ್ಕೆ ಶುಭವಾಗಲಿ...

    ReplyDelete
    Replies
    1. ಧನ್ಯವಾದಗಳು ಮಹೇಶ್ ಸರ್ 

      Delete
  16. Sooper kano ನಿನ್ನ ಆಸೆ ಈಡೇರಲಿ ಎಂದು ನಾನು ಆಶಿಸುತ್ತೇನೆ

    ReplyDelete
  17. Truly very nice my love

    ReplyDelete
  18. Baravanige Lekana Bahala Chennagide Shreekanth Nimagella Bhagavantha Olledu Madali

    ReplyDelete
  19. ನಮ್ಮಂಥ ಮಧ್ಯಮವರ್ಗವು ಕಾಣುವ ಹಲವು ಕನಸುಗಳಲ್ಲಿ 'ಸ್ವಂತ ಮನೆ'ಯೆನ್ನುವುದು ಮೊದಲಿನದು. ಹಾಗೆ ಕಂಡ‌ ಕನಸು ನನಸಾಗುವುದು ಎಂದರೆ ಬದುಕು ಏರುದಾರಿಯಲ್ಲಿ ಸಾಗುತ್ತಿದೆ ಎಂದು ಮೂಡುವ ವಿಶ್ವಾಸದ ಒಂದು ಘನ ರೂಪವೇ ಆಗಿರುತ್ತದೆ. Abstract finds a meaning only with a form. And you are in the endeavour of making such concrete form of your abstracts. And you have already achieved one!!! Hearty felt congratulations. I wish you all the best and success for all of your upcoming milestones.

    ReplyDelete
  20. All the best
    for your future dreams

    ReplyDelete
  21. My Hartley congrats Anna.... Be happy always

    ReplyDelete
  22. Tumba sogasaagi nimma manassinalada matannu lekhanada moolaka nammellara munde ittiddira, aa bhagavanta nimma tumbu samsarakke aayassu, aarogya ella kottu kaapadali Shrikantanna ��

    ReplyDelete
  23. ಲೇಖನ ಬಹಳ ಸಾಂದರ್ಭಿಕವಾಗಿದೆ ,ಜೀವನ ನಿಂತ ನೀರಲ್ಲ ಬದುಕು ನಿರಂತರವಾಗಿ ಸಾಗುತ್ತಿರಬೇಕು, ತುಳಿದ ಹಾದಿ ಮರೆಯದೇ ಮುಂದೆ ಬರುವ ಸವಾಲಿಗೆ ಎದೆಯೊಡ್ಡುವ ದೈರ್ಯ ಮತ್ತು ಸ್ತೈರ್ಯ ಇರಲಿ ಶುಭವಾಗಲಿ ಶ್ರೀ,

    ReplyDelete
  24. All the very best for your bright future ಶ್ರೀಕಾಂತ್ ಅಣ್ಣ..

    ReplyDelete
  25. ಉತ್ತಮ ಬರಹ

    ReplyDelete
  26. ಅನುಗ್ರಹ ಸದನದಲ್ಲಿ ದೇವರ ಅನುಗ್ರಹ ಸದಾಕಾಲ ಇದ್ದು ನಿಮ್ಮೆಲ್ಲರ ಬದುಕು ಸದಾ ಸುಖ,ಶಾಂತಿ ಹಾಗೂ ಸಾರ್ಥಕತೆಯಿಂದ ಕೂಡಿರಲಿ ಎನ್ನುವದೇ ಈ ತಂಗಿಯ ಹಾರೈಕೆಗಳು ಅಣ್ಣಾ

    ReplyDelete
  27. ಎದುರು ಬಂದಿರುವ ಅಂದದ ಬದುಕನ್ನು ಚಂದವಾಗಿಸಿ ಸಾರ್ಥಕಗೊಳಿಸಿ.ಸಂತಸದಿಂದ ಶುಭ ಹಾರೈಕೆಗಳು ನಿಮಗೆಲ್ಲಾ

    ಸಹನ ಅಮ್ಮ

    ReplyDelete
  28. ಇಷ್ಟು ಚಿಕ್ಕದಾಗಿ ಆಟೋಬಯೋಗ್ರಫಿ ಬರೆಯಬಹುದು ಅಂತ ಶ್ರೀ ಶ್ರೀಕಾರ ಹಾಕಿದಂತಿದೆ. ಜೀವನ ಅಂದ್ರೆ ಏನು? ಶ್ರೀ ಕಾಂತ ರ ಜೊತೆ ಸಂ ಸಾರವನ್ನು ಅನುಭವಿಸುವ ಅನುಗ್ರಹದ ಎರಡನೇ ಇನ್ನಿಂಗ್ಸ್...
    ಶುಭವಾಗಲಿ ಶ್ರೀ....ನಿನ್ನ ಸಂಭ್ರಮ ನಮ್ಮದು..

    ReplyDelete
    Replies
    1. ನಿಮ್ಮ ಸೂಪರ್ ಆಶೀರ್ವಾದಗಳು ಚಿಕ್ಕಪ್ಪ 
      ಧನ್ಯವಾದಗಳು

      Delete
  29. Nice article

    We are happy that the way you gave a turn to your life

    ReplyDelete
  30. Words kammi agtide... Not able to express properly..... I am very happy for you.. and hearty congratulations... And as usual blog is fantastic... I am in love with ur way of writing (typing :-)).... The way you carry the scene... Reader could see the frame to frame picture of movie(story)... One cannot get bored inbetween... So beautifully written

    ReplyDelete
    Replies
    1. Nice comment Putty..thank you so much... extended comment super

      Delete
  31. Nice words. Hearty congratulations brother. All the best .

    ReplyDelete