ಏನೋ ಮಗು..ಹೇಗಿದ್ದೀಯೋ...ನಿಮಗೆಲ್ಲಾ ಕೊಬ್ಬು..ನಮ್ಮೂರಿಗೆ ಬನ್ರೋ...ಆರಾಮಾಗಿ ಇದ್ದು ಹೋಗೋರಂತೆ...
ಹಿಂಗ್ ಬರ್ತೀರಾ..ಹಂಗೆ ಹೋಗ್ತೀರಾ...ಯಾವಾಗಲೂ ಕುದುರೆ ಮೇಲೆ ಇರ್ತೀರಾ ಅಂತ ಸದಾ ನಗು ನಗುತ್ತಾ ಮಾತಾಡಿಸುವ ನಮ್ಮ ನೆಚ್ಚಿನ ಗೋಪಾಲ ಮಾವ ಈಗ ಇಲ್ಲ ಅಂದರೆ ನಂಬುವುದು ಕಷ್ಟ..
ಅವರ ಮಾತುಗಳು ಅವರ ಮುಗ್ಧ ನಗು...ಅವರ ಅಭಿಮಾನ ಪೂರಿತ ಮಾತುಗಳು ಎಂದಿಗೂ ನಮ್ಮ ಮನದಲ್ಲಿ ಸದಾ ಹಸಿರು!
ಮಂಜಣ್ಣ ಬಾವ ಅಂದರೆ ಹೃದಯ ತುಂಬಿ ಬರುತ್ತಿತ್ತು...ವಿಶಾಲು ಅಂದರೆ ಅವರಿಗೆ ಉತ್ಸಾಹ ತುಂಬಿ ಬರುತ್ತಿತ್ತು.....
ಕಿತ್ತಾನೆಗೆ ಮೊದಲ ಬಾರಿಗೆ ನನ್ನ ಕಾರಿನಲ್ಲಿ ಹೋದಾಗ.. ಮಗೂ ಬಹಳ ಖುಷಿ ಆಯ್ತು ಕಣೋ..ನಿಮ್ಮಮ್ಮ ಕಷ್ಟ ಪಟ್ಟಿದ್ದಕ್ಕೆ ನೀವೆಲ್ಲಾ ಹೀಗೆ ಮುಂದುವರೆದಿರೋದು ನೋಡಿದಾಗ ಖುಷಿ ಕಣೋ..ಬನ್ರೋ ತೋಟಕ್ಕೆ ಹೋಗೋಣ ಅಂತ ತೋಟದಲ್ಲೆಲ್ಲಾ ಓಡಾಡಿಸಿ ಎಳನೀರು ಕೊಟ್ಟು...ಕಾಯಿ ತಿನ್ನು ಮಗೂ ..ಇದೇನು ಪಿತ್ತ ಹತ್ತಿಸೋಲ್ಲ...ಎಂದು ಹೇಳುವ ಮಾತುಗಳು ಇನ್ನೂ ಹಸಿರು...
ಅವರ ತಂಗಿ ಕುಮಾರಿ ಚಿಕ್ಕಮ್ಮ ಅವರ ಮನೆ ಗೃಹ ಪ್ರವೇಶದಲ್ಲಿ ..ರಾತ್ರಿ ಚಳಿಯಲ್ಲಿ ..ಬಿಸಿ ಬಿಸಿ ಸಾರನ್ನು ನಾನು ಮತ್ತು ನನ್ನ ಚಿಕ್ಕಮ್ಮನ ಮಗ ಸತೀಶ ಗಟ ಗಡ ಕುಡಿತಾ ಇದ್ದದ್ದನ್ನು ನೋಡಿ..ಲೋ ಮಕ್ಕಳಾ...ಊಟಾನೂ ಮಾಡ್ರೋ..ಬರೀ ಸಾರು ಕುಡೀತೀರಲ್ಲ ಅಂತ ನಗುತ್ತಲೇ ಇನ್ನೋದು ಲೋಟ ಸಾರು ಕೊಡುತ್ತಿದ್ದ ಗೋಪಾಲ ಮಾವ..ಇಂದು ತಮ್ಮ ತಲೆಮಾರಿನ ಹಿರಿಯರನ್ನು ಭೇಟಿ ಮಾಡಲು ಸತ್ಯಲೋಕದ ಕಡೆಗೆ ಹೊರಟೆ ಬಿಟ್ಟರು...
ಗೋಪಾಲ ಮಾವ ಅವರ ನೆಚ್ಚಿನ ಸಾರಥಿಯ ಜೊತೆಯಲ್ಲಿ |
ಗೋಪಾಲ ಮಾವ ನಿಮ್ಮ ನಗು ..ನಿಮ್ಮ ಮಾತುಗಳು ..ನಿಮ್ಮ ಆಶೀರ್ವಾದ ಸದಾ ಹಸಿರಾಗಿರುತ್ತೆ..ನಿಮ್ಮಂತಹ ಒಬ್ಬ ಸುಮಧುರ ಮನಸಿನ ಸರದಾರರನ್ನು ಪಡೆದ ಕಿತ್ತಾನೆಯ ಶ್ರೀ ಬೊಬ್ಬೆ ರಾಮಯ್ಯನವರ ಕುಟುಂಬ ಇಂದು ನಿಮಗೆ ಅಂತಿಮ ನಮನ ಈ ಅಕ್ಷರಗಳ ಮೂಲಕ ನಮಿಸುತ್ತದೆ..!
ಇಂತಹ ಸಹೃದಯದ ಸಂಬಂಧಿಯನ್ನು ಪಡೆದವರೇ ಪುಣ್ಯವಂತರು. ಇವರ ಬಗೆಗಿನ ನಿಮ್ಮ ಲೇಖನ ನನ್ನ ಹೃದಯವನ್ನು ತಂಪುಗೊಳಿಸಿತು. ಧನ್ಯವಾದಗಳು.
ReplyDelete