ಹೀಗೆ ಸಾಗಿತ್ತು. ಇಬ್ಬರ ಬಾಳಿನ ಬಂಡಿಯ ಹಿಂದಿನ ಚಕ್ರದ ಮಾತುಗಳು..
ಹೊಟ್ಟೆ ಹಸಿದಿತ್ತು.. ಹತ್ತಿರದಲ್ಲಿಯೇ ಇದ್ದ ಒಂದು ಈಟಿಂಗ್ ಪಾಯಿಂಟಿನಲ್ಲಿ ಮಸಾಲೆ ದೋಸೆ.. ಮತ್ತು ಸೆಟ್ ದೋಸೆ ತಿಂದು.. ಕಾಫಿ ಕುಡಿದು.. ಇಬ್ಬರೂ ಕೈ ಕುಲುಕಿ ಹೊರಟಾಗ ರಾತ್ರಿ ಒಂಭತ್ತಾಗಿತ್ತು..
ಮೂರು ಘಂಟೆಗಳ ಮಾತುಕತೆ ಇಬ್ಬರ ಮನದಲ್ಲಿಯೂ ಹಕ್ಕಿಯನ್ನು ಹಾರಿಸುತ್ತಿತ್ತು.... ಮುಂದೇ .... :-)
"ಮನೆಗೆ ಸೇರಿದ ಕೂಡಲೇ ಮೆಸೇಜ್ ಮಾಡಿ ಉಮೇಶ್.. " ಕೋಗಿಲೆಯ ದನಿ ವಾಟ್ಸಾಪಿನಲ್ಲಿ ವಾಯ್ಸ್ ಮೆಸೇಜ್ ಉಲಿಯಿತು.. "ಖಂಡಿತ ಸಿರಿ".. ಮೆಸೇಜ್ ಮಾಡಿದ ಉಮೇಶ್..
ಸರಿ ಸುಮಾರು ೧೧.೩೦ರ ರಾತ್ರಿ ಮನೆಗೆ ತಲುಪಿ.. "ಮನೆಗೆ ಬಂದೆ" ಎನ್ನುವ ಸಂದೇಶ ಕಳಿಸಿದ..ಆ ಕಡೆಯಿಂದ "ಹುಷಾರು buddy" ಎನ್ನುವ ಭಾವದ ಸಂದೇಶ ಬಂದಿತ್ತು..
ಅದೇ ಗುಂಗಿನಲ್ಲಿ ಇಬ್ಬರೂ ಶುಭರಾತ್ರಿ ಹೇಳಿ ಬೆಳಿಗ್ಗೆ ಎದ್ದು ಮಾತಾಡುವ ಎನ್ನುವ ಒಪ್ಪಂದಕ್ಕೆ ಸಹಿ ಮಾಡಿ.. ನಿದ್ರಾದೇವಿಗೆ ಶರಣಾದರು..
ಅಂದಿನಿಂದ ಪ್ರತ್ರಿದಿನವೂ ಶುಭಾಷಯ.. ಊಟ ತಿಂಡಿ.. ಉಭಯ ಕುಶೋಲೋಪರಿ ಸಾಂಪ್ರತ ಮಾತುಗಳು.. ಕೆಲವೊಂದು ತೀರಾ ಆತ್ಮೀಯತೆಯಿಂದ ಕೂಡಿದ ಮಾತುಗಳು.. ಪ್ರೀತಿ ವಿಶ್ವಾಸ ತೋರುವ ಮಾತುಗಳು ಹೀಗೆ ಸಾಗಿತ್ತು..
ಹತ್ತಿರ ಹತ್ತಿರ ಒಂದು ತಿಂಗಳಾಗಿತ್ತು.. "ಸಿರಿ ಒಂದು ತಿಂಗಳಾಯಿತು ನಮ್ಮ ಮೊದಲ ಭೇಟಿಯಾಗಿ.. ಮತ್ತೊಮ್ಮೆ ಭೇಟಿಯಾಗುವ?" ಎಂಬ ಸಂದೇಶಕ್ಕೆ ಪಟಕ್ ಅಂತ ಆ ಕಡೆಯಿಂದ "ನಾನೂ ಅದನ್ನೇ ಯೋಚಿಸುತ್ತಿದ್ದೆ.. ಖಂಡಿತ ಭೇಟಿಯಾಗೋಣ.. " ಎಂದು ಹೇಳಿ.. .ದಿನ ಸಮಯ ನಿಗದಿ ಪಡಿಸಿಕೊಂಡರು..
ಹೇಳಿದ ವಿಳಾಸ ಎಡ ಬಲ ಗೊಂದಲವಾಗಿ ಒಂದಷ್ಟು ಸುತ್ತು ಹೊಡೆದ ಮೇಲೆ.. ಆ ಜಾಗಕ್ಕೆ ಬಂದಾಗ ಹೋಟೆಲಿನಲ್ಲಿ ಹಾಕಿದ್ದ ಹಾಡು ಕೇಳಿ ನಗುತ್ತಾ ತನ್ನ ರೇಷ್ಮೆಯಂತಹ ತಲೆಗೂದಲನ್ನು ಕೈಯಿಂದ ಸರಿ ಮಾಡಿಕೊಂಡು.. "ಸಿರಿ ನಮಗೋಸ್ಕರ ಈ ಹಾಡು ಬರುತ್ತಿದೆಯಾ" ಎಂದು ಹಿಂದಿನಿಂದ ಬಂದು ಹೇಳಿದಾಗ.. ಒಮ್ಮೆ ಗಾಬರಿಯಾಗಿ "ಎಲ್ರಿ ಹೋಗಿದ್ದ್ರಿ?".. "ಹಾ.. ಹಾಡಾ.. ಯಾವ ಹಾಡು" ಎಂದು ಗಮನವಿಟ್ಟು ಕೇಳಿದಾಗ..
ಅಣ್ಣಾವ್ರ ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದ
"If you come today...its too early..
If you come tomorrow..its too late
You pick the time..tick tick tick.. "
ಇಬ್ಬರೂ ಹೈ ಫೈ ಮಾಡಿ ನಕ್ಕರು..
ಮೆಲ್ಲನೆ ಕಾಫೀ ಹೀರುತ್ತಾ.. ಮೊದಲ ಭೇಟಿಯಲ್ಲಿ ನಿಲ್ಲಿಸಿದ್ದ ಮಾತುಗಳಿಂದ ಶುರುವಾದವು... ಹಾಗೆ ಮುಂದುವರಿದ ಭಾಗವಾಗಿತ್ತು.... ಕೊಂಚ ಇಬ್ಬರೂ ರಿಲ್ಯಾಕ್ಸ್ ಆಗಿದ್ದರಿಂದ.. ಇಬ್ಬರಿಗೂ ಗೊಂದಲವಿರಲಿಲ್ಲ... ಆರಾಮಾಗಿ ಮಾತಾಡತೊಡಗಿದರು.. ಮನೆ, ಆಫೀಸ್.. ಕಾರ್ಪೊರೇಟ್ ರಾಜಕೀಯ.. ಸಂಬಳ ಹೆಚ್ಚಳ... ರಾಜಕೀಯ.. ಮತದಾನ.. ಕ್ರೀಡೆ.. ಸಿನಿಮಾ.. ಹೀಗೆ ಆಗಸದಿಂದ ಬೀಳುವ ಎಲ್ಲದರ ಬಗ್ಗೆ ಮಾತು ಮುಂದುವರೆಯಿತು..
ಇಬ್ಬರೂ ಮನಸ್ಸಿಗೆ ಹತ್ತಿರವಾಗತೊಡಗಿದರು ..ಅಥವಾ ಇಬ್ಬರಿಗೂ ಆ ರೀತಿಯ ಒಂದು ಭಾವ ಹೊಕ್ಕಿತ್ತು ಮನಸ್ಸಿಗೆ..
ಎರಡನೇ ಭೇಟಿ ಹೆಚ್ಚು ಹೊತ್ತು ಆಗಲಿಲ್ಲ.. ಇಬ್ಬರಿಗೂ ಬೇರೆ ಕೆಲಸವಿದ್ದದರಿಂದ ತುಸು ಬೇಗನೆ ಭೇಟಿ ಮುಗಿಸಿ ಮನೆಗೆ ಹೊರಟರು.. ಮತ್ತೆ ಭೇಟಿಯಾಗುವ ವಿಶ್ವಾಸದಿಂದ..
ಒಂದೆರಡು ದಿನ ಆದ ಮೇಲೆ ಉಮೇಶನ ಸಂದೇಶ ನೋಡಿ ಸಿರಿಗೆ ನೆಗೆದಾಡುವಷ್ಟು ಖುಷಿಯಾಯಿತು..
ತಮ್ಮ ಎರಡು ಭೇಟಿಯ ಬಗ್ಗೆ ತನಗನ್ನಿಸಿದ ಕೆಲವು ಮಾತುಗಳಲ್ಲಿ ತನ್ನ ಹೃದಯವನ್ನು ಬಿಚ್ಚಿಟ್ಟಿದ್ದ..
*****
ಪ್ರೀತಿಯ ಸಿರಿ
ನನ್ನ ಒಂದಷ್ಟು ಮಾತುಗಳು
ಮೊದಲ ಭೇಟಿ:
ನೀವು ನನ್ನ ಹುಡುಕುತ್ತಾ ಕರೆ ಮಾಡಿದಾಗ.. ನಾ ಇದ್ದ ಜಾಗ ನಿಮಗೆ ಗೊತ್ತಾಯಿತು.. ಆದರೆ ನಾ ನಿಮ್ಮನ್ನು ಹುಡುಕುವ ಪ್ರಯತ್ನ ಮಾಡದೆ.. ನಿಮ್ಮ ಬರುವಿಕೆಗೆ ಎದುರುನೋಡುತ್ತಿದ್ದೆ..
ನೀವು ಹೇಳಿದ್ದು.. "ಒಬ್ಬರನ್ನು ಅವರಿಗೆ ಕಾಣದೆ ಗಮನಿಸುವುದು ಚೆನ್ನಾಗಿರುತ್ತದೆ.. " ಎಂದು ಹೇಳಿದಿರಿ.. ನನ್ನ ಹಿಂದಿನಿಂದ ಬಂದು.. ಪವ್ ಎಂದು ಸದ್ದು ಮಾಡಿದಿರಿ..
ಮೊದಲ ಭೇಟಿಗೆ ಐಸ್ ಬ್ರೇಕರ್ ಸೆಶನ್ ಅಂತಾರಲ್ಲ ಹಾಗೆ .. ಇಬ್ಬರ ಮಾತಿಗೆ ಪರ್ಫೆಕ್ಟ್ ವೇದಿಕೆ ಸಿದ್ಧವಾಗಿತ್ತು..
ನಿರರ್ಗಳ ಮಾತು.. ಹೃದಯ ಬಿಚ್ಚಿ ಆಡಿದ ಮಾತುಗಳು ಇಷ್ಟವಾಯಿತು..
ಎರಡನೇ ಭೇಟಿ..
ಕಾಯುತ್ತಾ ಕಾಯುತ್ತಾ ಒಂದು ಕಪ್ ಕಾಫಿ ಮುಗಿಸುವ ಹಂತಬಂದಿದ್ದರೂ ..ಕಾಯುವ ತಾಳ್ಮೆ ಇಷ್ಟವಾಯಿತು.. ಬಂದನಂತರ ಆಗಿದ್ದ ಗೊಂದಲದ ಬಗ್ಗೆ ತುಸು ಮಾತಾಡಿ.. ಇಬ್ಬರಿಗೂ ಬೇಜಾರು ತರದೇ ನೆಡೆದುಕೊಂಡ ನಮ್ಮಿಬ್ಬರ ರೀತಿ ಇಷ್ಟವಾಯಿತು..
ಮೊದಲ ಭೇಟಿಯ ಮುಂದುವರೆದ ಭಾಗದಂತಿದ್ದ ಈ ಮಾತುಕತೆ ತುಸು ಕಡಿಮೆ ಸಮಯವಾದರೂ ನೆನಪಲ್ಲಿ ಉಳಿಯುವಂತಾಯಿತು.. ಮತ್ತು ಮುಂದಿನ ಭೇಟಿಯ ಬಗ್ಗೆ ಕುತೂಹಲ ಮೂಡಿಸುವಂತಿದೆ..
ನಮ್ಮಿಬ್ಬರ ಬಗ್ಗೆ ಇಬ್ಬರಿಗೂ ಪೂರ್ಣ ತಿಳಿದಿಲ್ಲವಾದರೂ.. ಈಗ ಹೇಗಿದ್ದೀವಿ ಎನ್ನುವುದು ಮುಖ್ಯವಾಗುತ್ತದೆ.. ಮತ್ತೆ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡು ಪಿ ಎಚ್ ಡಿ ಮಾಡುವ ಅವಶ್ಯಕತೆ ಇಬ್ಬರಿಗೂ ಎಲ್ಲಾ ಎಂದುಕೊಳ್ಳುತ್ತೇನೆ..
ಮುಂದುವರೆಯಲಿ ಈ ಸ್ನೇಹದ ಪಯಣ.
*****
ಈ ಸಂದೇಶವನ್ನು ಓದಿ.. ಸಿರಿಗೆ ತಾಳಲಾರದಷ್ಟು ಸಂತೋಷ.. ಅದಕ್ಕೆ ಪ್ರತಿಕ್ರಿಯೆ ಕೊಡುತ್ತಾ
"ಎಷ್ಟು ಸುಂದರವಾಗಿ ಆ ನಮ್ಮ ಎರಡು ಭೇಟಿಯನ್ನು ಅಕ್ಷರಗಳಲ್ಲಿ ಸೆರೆ ಹಿಡಿದಿದ್ದೀರಾ.. ನನಗೆ ಒಬ್ಬ ಅದ್ಭುತ ಸ್ನೇಹಿತ ಸಿಕ್ಕ ಎನ್ನುವ ಸಂತೋಷ.. ಜೊತೆಯಲ್ಲಿ ನಿಮ್ಮೊಳಗೆ ಒಬ್ಬ ಸುಂದರ ಜೀವಿ ಇದ್ದಾನೆ ಎನ್ನುವ ಅಂಶ ನನಗೆ ಇಷ್ಟವಾಯಿತು.. "
ನೋಡಿ ಈ ಹಾಡು ನನಗೆ ತುಂಬಾ ಇಷ್ಟ.. "ಇಸ್ ಪ್ಯಾರುಕೋ ಮೇ ಕ್ಯಾ ನಾಮು ದೂ.. "
ಹಾಗೆ ಈ ಬಂಧಕ್ಕೆ ಹೆಸರಿಡೋದೆ ಬೇಡ.. ಹೀಗೆ ಸಾಗಲಿ ನಮ್ಮ ಪಯಣ ಉಮೇಶ್"
ಇಬ್ಬರೂ ಖುಷಿ ಪಟ್ಟರು.. ಹೀಗೆ ಹಲವಾರು ಭೇಟಿಗಳಾಯಿತು.. ಒಂದೆರಡು ಬಾರಿ ಊಟದ ಸಮಯಕ್ಕೆ ಭೇಟಿ ಮಾಡಿ.. ಇಬ್ಬರೂ ಹೊಟ್ಟೆ ತುಂಬಾ ಊಟ ಮಾಡಿ.. ಮಾತಾಡಿ ತಮ್ಮ ಹೃದಯದ ಮಾತುಗಳನ್ನು ಹೇಳಿಕೊಂಡಿದ್ದರು..
"ರೀ ಉಮೇಶ್.. ಮುಂದಿನ ವಾರ ಭೇಟಿ ಮಾಡೋಣ ಕಣ್ರೀ.. ಸ್ವಲ್ಪ ಶಾಪಿಂಗ್ ಇದೆ.. ಹಾಗೆ ಒಂದು ಮೂವಿಗೆ ಹೋಗಿ ಬರೋಣ.. ಏನಂತೀರಾ"
"ಅಪ್ಪಣೆ ಮೇಡಂ" ಉತ್ತರ ಬಂದಿತ್ತು ವಾಟ್ಸಾಪ್ಪಿನಲ್ಲಿ
ಮಳೆ ಧೋ ಎಂದು ಸುರಿಯುತ್ತಿತ್ತು.. ಆದರೆ ಇವರಿಬ್ಬರ ಹೃದಯದಲ್ಲಿ ಸಣ್ಣ ಝರಿಯಾಗಿದ್ದ ಪ್ರೀತಿ ಎತ್ತ ಕಡೆ ಹರಿಯುತ್ತದೆಯೋ ಇಬ್ಬರಿಗೂ ಗೊತ್ತಾಗದೆ ಮಳೆಯ ನೀರು ರಸ್ತೆಯಲ್ಲಿ ನಿಂತ ಹಾಗಿತ್ತು ... ಆದರೆ ಕೆಲವೊಮ್ಮೆ ಇವರಿಬ್ಬರ ಮಾತುಗಳಲ್ಲಿ ಹಲವಾರು ಬಾರಿ ಇಣುಕುತಿತ್ತು.. ಸಿಂಗಲ್ ಫ್ಯೂಸ್ ನಲ್ಲಿ ಬಲ್ಬ್ ಉರಿಯುವ ಹಾಗೆ..
ಶಾಪಿಂಗ್ ಮುಗಿಯಿತು.. ಸಂಜೆ ಬಿಸಿ ಬಿಸಿ ಪಾನಿ ಪುರಿ ಸೇವನೆ ಆಯಿತು... ದಾವಣಗೆರೆ ಬೆಣ್ಣೆ ದೋಸೆ ಆಯಿತು..
"ಸಿರಿ ಯಾಕೋ ಸಿನಿಮಾ ಬೇಡ ಅನ್ನಿಸುತ್ತಿದೆ ಕಣ್ರೀ.. ಆರಾಮಾಗಿ ಒಂದು ಕಡೆ ಕೂತು ಮಾತಾಡೋಣ ಅನ್ಸುತ್ತೆ.... "
"ಓಕೇ ಸಾಹೇಬ್ರೆ.. ನಿಮ್ಮ ಆಸೆಗೆ ನಾ ಯಾಕೆ ಬೇಡ ಅನ್ಲಿ.. ಬನ್ನಿ ಎಂ ಜಿ ರಸ್ತೆಯ ಮೆಟ್ರೋ ಸ್ಟೇಷನ್ ಕೆಳಗೆ ರಂಗೋಲಿ ಅಂಗಳ ಇದೆಯಲ್ಲ.. ಇವತ್ತು ಯಾವುದೇ exhibition ಇಲ್ಲ .. ಅಲ್ಲಿ ಕೂತು ಮಾತಾಡಬಹುದು.. ತಣ್ಣನೆ ಮಳೆ.. ತಣ್ಣನೆ ಗಾಳಿ.. ಜನಗಳ ಓಡಾಟ.. ಹೆಚ್ಚಿಲ್ಲದ ವಾಹನ ಸಾಂಧ್ರತೆ.. ನೆಡೆಯಿರಿ ಹೋಗೋಣ.. "
ಬ್ರಿಗೇಡ್ ರೋಡಿಂದ ಮೆಲ್ಲನೆ ಮಳೆಯಲ್ಲಿ ಛತ್ರಿ ಹಿಡಿದು ಒಬ್ಬರಿಗೊಬ್ಬರು ತಾಕುವ ಹಾಗೆ ಅಂಟಿಕೊಂಡು ನೆಡೆಯತೊಡಗಿದರು.. ಉಮೇಶನಿಗೆ ಸಂಕೋಚ.. ಅವನ ಅರ್ಧ ದೇಹ ಛತ್ರಿಯಿಂದ ಹೊರಗೆ ಇದ್ದು.. ಅರ್ಧ ಭಾಗ ಮಳೆಯಿಂದ ನೆನೆಯಲು ಶುರು ಮಾಡಿತ್ತು.. ಸಿರಿ ಗಮನಿಸಿದಳು.. ಒಂದೆರಡು ಬಾರಿ ಹೇಳಿದರು ಕೇಳದೆ ಇದ್ದಾಗ.. ತನ್ನ್ನ ಕೈಯನ್ನು ಅವನ ಭುಜದ ಮೇಲೆ ಹಾಕಿ.. "ಕಮಾನ್ buddy" ಎಂದು ಹೇಳಿ ತನ್ನತ್ತ ಎಳೆದುಕೊಂಡಳು..
ಮುಜುಗರ ಪಡುತ್ತಾ ಮೆಲ್ಲನೆ ಹೆಜ್ಜೆ ಹಾಕಿದ.
ರಂಗೋಲಿ ಅಂಗಳ ಬಂತು
ಆಗಲೇ ಒಂದೆರಡು ಜೋಡಿಗಳು ಅಲ್ಲಿ ಕೂತಿದ್ದವು.. ಪಿಸಿ ಪಿಸಿ ಮಾತಾಡುತ್ತಿದ್ದವು.. ಕಡಲೇಕಾಯಿ ಮಾರುವವ ತನ್ನ ಮೊಬೈಲಿನಲ್ಲಿ ಹಾಡು ನೂರು ಮೀಟರ್ ಕೇಳುವ ಹಾಗೆ ಜೋರಾಗಿ ಹಾಕಿಕೊಂಡಿದ್ದ.. "ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ.. ಆಡದೆ ಉಳಿದಿಹ ಮಾತು ನೂರಿದೆ" ಮುಗಿಯದ ಕಥೆ ಚಿತ್ರದ ಹಾಡು ಬರುತ್ತಿತ್ತು
"ಸಿರಿ ಒಂದು ಮಾತು ಹೇಳಬೇಕಿತ್ತು ನಿನಗೆ"
"ಹೇಳು ಉಮೇಶ್"
ವಚನ ಬದಲಾಗಿದ್ದು ಇಬ್ಬರಿಗೂ ಅರಿವಿಗೆ ಬರಲಿಲ್ಲ..
"ನಮ್ಮಿಬ್ಬರ ಪರಿಚಯವಾಗಿ ಆರು ತಿಂಗಳಾಯಿತು..ಜೀವನದಲ್ಲಿ ಮತ್ತೆ ವಸಂತವನ್ನು ಕಾಣಬೇಕೆಂಬ ಬಯಕೆ ನಮ್ಮಿಬ್ಬರನ್ನು ಹತ್ತಿರ ತಂದಿದೆ.. ಇನ್ನು ಮುಂದಕ್ಕೆ ಹೇಗೆ ಎನ್ನುವ ವಿಚಾರ ಬಂದಾಗ.. ನನಗೆ ಈ ಮಾತನ್ನು ಹೇಳಬೇಕೆನಿಸಿತು.. "
"ಹೂಂ"
"ಸಿರಿ ಐ ಲವ್ ಯು ಕಣೆ.. "
ಒಂದು ಕ್ಷಣ ಮಾತಿಲ್ಲದೆ ಸಿರಿ ಉಮೇಶನ ಮೊಗವನ್ನೇ ನೋಡುತ್ತಿದ್ದಳು.. !
"ಸಿರಿ ಐ ಲವ್ ಯು ಕಣೆ.. "ನನ್ನ ಜೊತೆ ಜೀವನದಲ್ಲಿ ಹೆಜ್ಜೆ ಹಾಕುತ್ತೀಯ.. ನಿನಗೆ ಇಷ್ಟ ಅನಿಸಿದರೆ.. ನಿನ್ನ ಒಪ್ಪಿಗೆ ಹೇಳು.. ಇದರಲ್ಲಿ ಬಲವಂತವಿಲ್ಲ.. ಆದರೆ ನಮ್ಮಿಬ್ಬರ ನಿರ್ಧಾರ ಏನೇ ಆಗಲಿ.. ನಮ್ಮ ಗೆಳೆತನ ಎಂದಿಗೂ ಕಳೆದುಕೊಳ್ಳಬಾರದು.. ಸ್ನೇಹಿತರಾಗಿ ಇರೋಣ.. ಇದು ನನ್ನ ಮನದ ಭಾವ.. ನಿನಗೆ ಏನು ಅನಿಸುತ್ತದೆ ಹೇಳು.. "
ಇಬ್ಬರ ಮಧ್ಯೆ ಮೌನ.. ತಲೆಯ ಮೇಲೆ ಮೆಟ್ರೋ ಟ್ರೈನ್ ಸದ್ದು ಮಾಡುತ್ತಾ ಓಡುತ್ತಿತ್ತು.. ವಾಹನಗಳ ದಟ್ಟಣೆ ಹೆಚ್ಚುತ್ತಿತ್ತು.. ಮಳೆ ನಿಂತ ಆಗಸ ಶುಭ್ರವಾಗಿತ್ತು.. ಹಾಗೆಯೇ ಉಮೇಶನ ಹೃದಯವೂ ಕೂಡ.. ಹೇಳಬೇಕಾದ್ದು ಹೇಳಿದ್ದರಿಂದ ಮನಸ್ಸು ಹಗುರಾಗಿ ಹತ್ತಿಯ ಹಾಗೆ ಹಿಂಜಿಕೊಂಡು ಆಗಸದ ಮೋಡಗಳ ತರಹ ಹಾರುತಿತ್ತು..
ಸುಮಾರು ಹದಿನೈದು ನಿಮಿಷ.. ಇಬ್ಬರ ಮಧ್ಯೆ ಮೌನ ಬಿಟ್ಟು ಬೇರೆ ಇಲ್ಲ..
ಕಡಲೆಕಾಯಿ ಹುಡುಗನ ಮೊಬೈಲು ಅಣ್ಣಾವ್ರ ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ "ಯಾವ ಕವಿಯೂ ಬರೆಯಲಾರ ಒಲವಿನಿಂದ ಕಣ್ಣೋಟದಿಂದ ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯಾ..ಯಾವ ಕವಿಯೂ ಬರೆಯಲಾರ" ಹಾಡು..
ಇಬ್ಬರ ಕಣ್ಣುಗಳು ಸಂಧಿಸಿದವು..
ಸಿರಿ ತಲೆ ಬಗ್ಗಿಸಿಕೊಂಡು ಮತ್ತೆ ಸ್ವಲ್ಪ ಹೊತ್ತು ಕೂತಳು..
"ಈ ಮೌನವ ತಾಳೆನು.. ಮಾತಾಡೇ ದಾರಿಯ ಕಾಣೆನು.. ಓ ರಾಜ" ಮಯೂರ ಚಿತ್ರದ ಹಾಡು ನೆನಪಿಗೆ ಬಂತು ಸಿರಿಗೆ..
ನಿಧಾನವಾಗಿ ತನ್ನ ವ್ಯಾನಿಟಿ ಬ್ಯಾಗಿಗೆ ಕೈ ಹಾಕಿ.. "ಉಮೇಶ್ ಹೀಗೆ ಮಾಡೋಣ.. ನಾಣ್ಯ ಚಿಮ್ಮುತ್ತೇನೆ .. ಹೆಡ್ಸ್ ಬಿದ್ದರೆ ಜೊತೆಯಾಗಿರೋಣ ... ಓಕೆ .. ಟೈಲ್ಸ್ ಬಿದ್ದರೆ ಫ್ರೆಂಡ್ಸ್ .. ಆಗಬಹುದಾ"
ಸುಮ್ಮನೆ ನಕ್ಕ
ನಾಣ್ಯ ಚಿಮ್ಮಿ ಕೈಯಲ್ಲಿ ಹಿಡಿದಳು.. "ಹೇಳಿ ಉಮೇಶ್"
ಅವಳ ಎರಡು ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು.. "ಅದು ಹಾಗೆ ಇರಲಿ.. ಸಿರಿ. .ತೆಗೆಯೋದೆ ಬೇಡ.. ನೀ ನನ್ನ ಜೊತೆಯಾಗು ಸಾಕು.. "
ಸಿರಿ ಸುಮ್ಮನೆ ಒಂದು ಮುಗುಳು ನಗೆ ಬೀರಿ.. ಅವನ ತಣ್ಣನೆ ಕೈಗಳ ಮೇಲೆ ತನ್ನ ಬಿಸಿ ಕೈಗಳನ್ನು ಇಟ್ಟು.. ಮೆಲ್ಲನೆ ಕಣ್ಣು ಹೊಡೆದು ತಲೆ ತೂಗಿದಳು..
ಗೋಲ್ಗಪ್ಪಾ ಮಾರುವವನ ಬಳಿಯಿದ್ದ ಒಬ್ಬ ಹುಡುಗನ ಮೊಬೈಲಿನಲ್ಲಿ "ಜೊತೆಯಾಗಿ ಹಿತವಾಗಿ ಸೇರಿ ನೆಡೆವ ಸೇರಿ ನುಡಿವ.. ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು.. ನಿನ್ನ ಬಿಡಲಾರೆ ನಾನೆಂದಿಗೂ" ರಥಸಪ್ತಮಿ ಚಿತ್ರದ ಹಾಡು ಇಬ್ಬರಿಗೂ ಕೇಳಿಸಿತು..
ಜೋರಾಗಿ ನಗುತ್ತಾ.. ಇಬ್ಬರು ಕೈಹಿಡಿದುಕೊಂಡು .. "ಇವತ್ತಿಂದ ಹೊಸ ಪಥದಲ್ಲಿ ನೆಡೆಯೋಣ.. "
ಇಬ್ಬರೂ ಕೈ ಕೈ ಹಿಡಿದು ಮೆಲ್ಲನೆ ಮೆಟ್ರೋ ಸ್ಟೇಷನ್ ಹತ್ತಿರ ನೆಡೆಯ ತೊಡಗಿದರು..
ಮೆಟ್ರೋ ಟ್ರೈನಿಗೆ ಟೋಕನ್ ತೆಗೆದುಕೊಳ್ಳುವಾಗ ಎಫ್ ಎಂ ನಲ್ಲಿ ಹಾಡು ಬರುತ್ತಿತ್ತು..
"ಹಸೆಮಣೆಯೂ ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳಾ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು"
ಇಬ್ಬರೂ ಮಂದಹಾಸ ಬೀರಿದರು..
ಸಿರಿ ತನ್ನ ಕೈಯಲ್ಲಿಯೇ ಇದ್ದ ನಾಣ್ಯವನ್ನು ಮತ್ತೊಮ್ಮೆ ನೋಡಿಕೊಂಡಳು.. ಎರಡು ಕಡೆ ಹೆಡ್ಸ್ ಇತ್ತು :-)
ಸರಿ ಸುಮಾರು ೧೧.೩೦ರ ರಾತ್ರಿ ಮನೆಗೆ ತಲುಪಿ.. "ಮನೆಗೆ ಬಂದೆ" ಎನ್ನುವ ಸಂದೇಶ ಕಳಿಸಿದ..ಆ ಕಡೆಯಿಂದ "ಹುಷಾರು buddy" ಎನ್ನುವ ಭಾವದ ಸಂದೇಶ ಬಂದಿತ್ತು..
ಅದೇ ಗುಂಗಿನಲ್ಲಿ ಇಬ್ಬರೂ ಶುಭರಾತ್ರಿ ಹೇಳಿ ಬೆಳಿಗ್ಗೆ ಎದ್ದು ಮಾತಾಡುವ ಎನ್ನುವ ಒಪ್ಪಂದಕ್ಕೆ ಸಹಿ ಮಾಡಿ.. ನಿದ್ರಾದೇವಿಗೆ ಶರಣಾದರು..
ಅಂದಿನಿಂದ ಪ್ರತ್ರಿದಿನವೂ ಶುಭಾಷಯ.. ಊಟ ತಿಂಡಿ.. ಉಭಯ ಕುಶೋಲೋಪರಿ ಸಾಂಪ್ರತ ಮಾತುಗಳು.. ಕೆಲವೊಂದು ತೀರಾ ಆತ್ಮೀಯತೆಯಿಂದ ಕೂಡಿದ ಮಾತುಗಳು.. ಪ್ರೀತಿ ವಿಶ್ವಾಸ ತೋರುವ ಮಾತುಗಳು ಹೀಗೆ ಸಾಗಿತ್ತು..
ಹತ್ತಿರ ಹತ್ತಿರ ಒಂದು ತಿಂಗಳಾಗಿತ್ತು.. "ಸಿರಿ ಒಂದು ತಿಂಗಳಾಯಿತು ನಮ್ಮ ಮೊದಲ ಭೇಟಿಯಾಗಿ.. ಮತ್ತೊಮ್ಮೆ ಭೇಟಿಯಾಗುವ?" ಎಂಬ ಸಂದೇಶಕ್ಕೆ ಪಟಕ್ ಅಂತ ಆ ಕಡೆಯಿಂದ "ನಾನೂ ಅದನ್ನೇ ಯೋಚಿಸುತ್ತಿದ್ದೆ.. ಖಂಡಿತ ಭೇಟಿಯಾಗೋಣ.. " ಎಂದು ಹೇಳಿ.. .ದಿನ ಸಮಯ ನಿಗದಿ ಪಡಿಸಿಕೊಂಡರು..
ಹೇಳಿದ ವಿಳಾಸ ಎಡ ಬಲ ಗೊಂದಲವಾಗಿ ಒಂದಷ್ಟು ಸುತ್ತು ಹೊಡೆದ ಮೇಲೆ.. ಆ ಜಾಗಕ್ಕೆ ಬಂದಾಗ ಹೋಟೆಲಿನಲ್ಲಿ ಹಾಕಿದ್ದ ಹಾಡು ಕೇಳಿ ನಗುತ್ತಾ ತನ್ನ ರೇಷ್ಮೆಯಂತಹ ತಲೆಗೂದಲನ್ನು ಕೈಯಿಂದ ಸರಿ ಮಾಡಿಕೊಂಡು.. "ಸಿರಿ ನಮಗೋಸ್ಕರ ಈ ಹಾಡು ಬರುತ್ತಿದೆಯಾ" ಎಂದು ಹಿಂದಿನಿಂದ ಬಂದು ಹೇಳಿದಾಗ.. ಒಮ್ಮೆ ಗಾಬರಿಯಾಗಿ "ಎಲ್ರಿ ಹೋಗಿದ್ದ್ರಿ?".. "ಹಾ.. ಹಾಡಾ.. ಯಾವ ಹಾಡು" ಎಂದು ಗಮನವಿಟ್ಟು ಕೇಳಿದಾಗ..
ಅಣ್ಣಾವ್ರ ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದ
"If you come today...its too early..
If you come tomorrow..its too late
You pick the time..tick tick tick.. "
ಇಬ್ಬರೂ ಹೈ ಫೈ ಮಾಡಿ ನಕ್ಕರು..
ಕೃಪೆ : ಗೂಗಲೇಶ್ವರ |
ಇಬ್ಬರೂ ಮನಸ್ಸಿಗೆ ಹತ್ತಿರವಾಗತೊಡಗಿದರು ..ಅಥವಾ ಇಬ್ಬರಿಗೂ ಆ ರೀತಿಯ ಒಂದು ಭಾವ ಹೊಕ್ಕಿತ್ತು ಮನಸ್ಸಿಗೆ..
ಎರಡನೇ ಭೇಟಿ ಹೆಚ್ಚು ಹೊತ್ತು ಆಗಲಿಲ್ಲ.. ಇಬ್ಬರಿಗೂ ಬೇರೆ ಕೆಲಸವಿದ್ದದರಿಂದ ತುಸು ಬೇಗನೆ ಭೇಟಿ ಮುಗಿಸಿ ಮನೆಗೆ ಹೊರಟರು.. ಮತ್ತೆ ಭೇಟಿಯಾಗುವ ವಿಶ್ವಾಸದಿಂದ..
ಒಂದೆರಡು ದಿನ ಆದ ಮೇಲೆ ಉಮೇಶನ ಸಂದೇಶ ನೋಡಿ ಸಿರಿಗೆ ನೆಗೆದಾಡುವಷ್ಟು ಖುಷಿಯಾಯಿತು..
ತಮ್ಮ ಎರಡು ಭೇಟಿಯ ಬಗ್ಗೆ ತನಗನ್ನಿಸಿದ ಕೆಲವು ಮಾತುಗಳಲ್ಲಿ ತನ್ನ ಹೃದಯವನ್ನು ಬಿಚ್ಚಿಟ್ಟಿದ್ದ..
*****
ಪ್ರೀತಿಯ ಸಿರಿ
ನನ್ನ ಒಂದಷ್ಟು ಮಾತುಗಳು
ಮೊದಲ ಭೇಟಿ:
ನೀವು ನನ್ನ ಹುಡುಕುತ್ತಾ ಕರೆ ಮಾಡಿದಾಗ.. ನಾ ಇದ್ದ ಜಾಗ ನಿಮಗೆ ಗೊತ್ತಾಯಿತು.. ಆದರೆ ನಾ ನಿಮ್ಮನ್ನು ಹುಡುಕುವ ಪ್ರಯತ್ನ ಮಾಡದೆ.. ನಿಮ್ಮ ಬರುವಿಕೆಗೆ ಎದುರುನೋಡುತ್ತಿದ್ದೆ..
ನೀವು ಹೇಳಿದ್ದು.. "ಒಬ್ಬರನ್ನು ಅವರಿಗೆ ಕಾಣದೆ ಗಮನಿಸುವುದು ಚೆನ್ನಾಗಿರುತ್ತದೆ.. " ಎಂದು ಹೇಳಿದಿರಿ.. ನನ್ನ ಹಿಂದಿನಿಂದ ಬಂದು.. ಪವ್ ಎಂದು ಸದ್ದು ಮಾಡಿದಿರಿ..
ಮೊದಲ ಭೇಟಿಗೆ ಐಸ್ ಬ್ರೇಕರ್ ಸೆಶನ್ ಅಂತಾರಲ್ಲ ಹಾಗೆ .. ಇಬ್ಬರ ಮಾತಿಗೆ ಪರ್ಫೆಕ್ಟ್ ವೇದಿಕೆ ಸಿದ್ಧವಾಗಿತ್ತು..
ನಿರರ್ಗಳ ಮಾತು.. ಹೃದಯ ಬಿಚ್ಚಿ ಆಡಿದ ಮಾತುಗಳು ಇಷ್ಟವಾಯಿತು..
ಎರಡನೇ ಭೇಟಿ..
ಕಾಯುತ್ತಾ ಕಾಯುತ್ತಾ ಒಂದು ಕಪ್ ಕಾಫಿ ಮುಗಿಸುವ ಹಂತಬಂದಿದ್ದರೂ ..ಕಾಯುವ ತಾಳ್ಮೆ ಇಷ್ಟವಾಯಿತು.. ಬಂದನಂತರ ಆಗಿದ್ದ ಗೊಂದಲದ ಬಗ್ಗೆ ತುಸು ಮಾತಾಡಿ.. ಇಬ್ಬರಿಗೂ ಬೇಜಾರು ತರದೇ ನೆಡೆದುಕೊಂಡ ನಮ್ಮಿಬ್ಬರ ರೀತಿ ಇಷ್ಟವಾಯಿತು..
ಮೊದಲ ಭೇಟಿಯ ಮುಂದುವರೆದ ಭಾಗದಂತಿದ್ದ ಈ ಮಾತುಕತೆ ತುಸು ಕಡಿಮೆ ಸಮಯವಾದರೂ ನೆನಪಲ್ಲಿ ಉಳಿಯುವಂತಾಯಿತು.. ಮತ್ತು ಮುಂದಿನ ಭೇಟಿಯ ಬಗ್ಗೆ ಕುತೂಹಲ ಮೂಡಿಸುವಂತಿದೆ..
ನಮ್ಮಿಬ್ಬರ ಬಗ್ಗೆ ಇಬ್ಬರಿಗೂ ಪೂರ್ಣ ತಿಳಿದಿಲ್ಲವಾದರೂ.. ಈಗ ಹೇಗಿದ್ದೀವಿ ಎನ್ನುವುದು ಮುಖ್ಯವಾಗುತ್ತದೆ.. ಮತ್ತೆ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡು ಪಿ ಎಚ್ ಡಿ ಮಾಡುವ ಅವಶ್ಯಕತೆ ಇಬ್ಬರಿಗೂ ಎಲ್ಲಾ ಎಂದುಕೊಳ್ಳುತ್ತೇನೆ..
ಮುಂದುವರೆಯಲಿ ಈ ಸ್ನೇಹದ ಪಯಣ.
*****
ಈ ಸಂದೇಶವನ್ನು ಓದಿ.. ಸಿರಿಗೆ ತಾಳಲಾರದಷ್ಟು ಸಂತೋಷ.. ಅದಕ್ಕೆ ಪ್ರತಿಕ್ರಿಯೆ ಕೊಡುತ್ತಾ
"ಎಷ್ಟು ಸುಂದರವಾಗಿ ಆ ನಮ್ಮ ಎರಡು ಭೇಟಿಯನ್ನು ಅಕ್ಷರಗಳಲ್ಲಿ ಸೆರೆ ಹಿಡಿದಿದ್ದೀರಾ.. ನನಗೆ ಒಬ್ಬ ಅದ್ಭುತ ಸ್ನೇಹಿತ ಸಿಕ್ಕ ಎನ್ನುವ ಸಂತೋಷ.. ಜೊತೆಯಲ್ಲಿ ನಿಮ್ಮೊಳಗೆ ಒಬ್ಬ ಸುಂದರ ಜೀವಿ ಇದ್ದಾನೆ ಎನ್ನುವ ಅಂಶ ನನಗೆ ಇಷ್ಟವಾಯಿತು.. "
ನೋಡಿ ಈ ಹಾಡು ನನಗೆ ತುಂಬಾ ಇಷ್ಟ.. "ಇಸ್ ಪ್ಯಾರುಕೋ ಮೇ ಕ್ಯಾ ನಾಮು ದೂ.. "
ಹಾಗೆ ಈ ಬಂಧಕ್ಕೆ ಹೆಸರಿಡೋದೆ ಬೇಡ.. ಹೀಗೆ ಸಾಗಲಿ ನಮ್ಮ ಪಯಣ ಉಮೇಶ್"
ಇಬ್ಬರೂ ಖುಷಿ ಪಟ್ಟರು.. ಹೀಗೆ ಹಲವಾರು ಭೇಟಿಗಳಾಯಿತು.. ಒಂದೆರಡು ಬಾರಿ ಊಟದ ಸಮಯಕ್ಕೆ ಭೇಟಿ ಮಾಡಿ.. ಇಬ್ಬರೂ ಹೊಟ್ಟೆ ತುಂಬಾ ಊಟ ಮಾಡಿ.. ಮಾತಾಡಿ ತಮ್ಮ ಹೃದಯದ ಮಾತುಗಳನ್ನು ಹೇಳಿಕೊಂಡಿದ್ದರು..
"ರೀ ಉಮೇಶ್.. ಮುಂದಿನ ವಾರ ಭೇಟಿ ಮಾಡೋಣ ಕಣ್ರೀ.. ಸ್ವಲ್ಪ ಶಾಪಿಂಗ್ ಇದೆ.. ಹಾಗೆ ಒಂದು ಮೂವಿಗೆ ಹೋಗಿ ಬರೋಣ.. ಏನಂತೀರಾ"
"ಅಪ್ಪಣೆ ಮೇಡಂ" ಉತ್ತರ ಬಂದಿತ್ತು ವಾಟ್ಸಾಪ್ಪಿನಲ್ಲಿ
ಮಳೆ ಧೋ ಎಂದು ಸುರಿಯುತ್ತಿತ್ತು.. ಆದರೆ ಇವರಿಬ್ಬರ ಹೃದಯದಲ್ಲಿ ಸಣ್ಣ ಝರಿಯಾಗಿದ್ದ ಪ್ರೀತಿ ಎತ್ತ ಕಡೆ ಹರಿಯುತ್ತದೆಯೋ ಇಬ್ಬರಿಗೂ ಗೊತ್ತಾಗದೆ ಮಳೆಯ ನೀರು ರಸ್ತೆಯಲ್ಲಿ ನಿಂತ ಹಾಗಿತ್ತು ... ಆದರೆ ಕೆಲವೊಮ್ಮೆ ಇವರಿಬ್ಬರ ಮಾತುಗಳಲ್ಲಿ ಹಲವಾರು ಬಾರಿ ಇಣುಕುತಿತ್ತು.. ಸಿಂಗಲ್ ಫ್ಯೂಸ್ ನಲ್ಲಿ ಬಲ್ಬ್ ಉರಿಯುವ ಹಾಗೆ..
ಕೃಪೆ : ಗೂಗಲೇಶ್ವರ |
"ಸಿರಿ ಯಾಕೋ ಸಿನಿಮಾ ಬೇಡ ಅನ್ನಿಸುತ್ತಿದೆ ಕಣ್ರೀ.. ಆರಾಮಾಗಿ ಒಂದು ಕಡೆ ಕೂತು ಮಾತಾಡೋಣ ಅನ್ಸುತ್ತೆ.... "
"ಓಕೇ ಸಾಹೇಬ್ರೆ.. ನಿಮ್ಮ ಆಸೆಗೆ ನಾ ಯಾಕೆ ಬೇಡ ಅನ್ಲಿ.. ಬನ್ನಿ ಎಂ ಜಿ ರಸ್ತೆಯ ಮೆಟ್ರೋ ಸ್ಟೇಷನ್ ಕೆಳಗೆ ರಂಗೋಲಿ ಅಂಗಳ ಇದೆಯಲ್ಲ.. ಇವತ್ತು ಯಾವುದೇ exhibition ಇಲ್ಲ .. ಅಲ್ಲಿ ಕೂತು ಮಾತಾಡಬಹುದು.. ತಣ್ಣನೆ ಮಳೆ.. ತಣ್ಣನೆ ಗಾಳಿ.. ಜನಗಳ ಓಡಾಟ.. ಹೆಚ್ಚಿಲ್ಲದ ವಾಹನ ಸಾಂಧ್ರತೆ.. ನೆಡೆಯಿರಿ ಹೋಗೋಣ.. "
ಬ್ರಿಗೇಡ್ ರೋಡಿಂದ ಮೆಲ್ಲನೆ ಮಳೆಯಲ್ಲಿ ಛತ್ರಿ ಹಿಡಿದು ಒಬ್ಬರಿಗೊಬ್ಬರು ತಾಕುವ ಹಾಗೆ ಅಂಟಿಕೊಂಡು ನೆಡೆಯತೊಡಗಿದರು.. ಉಮೇಶನಿಗೆ ಸಂಕೋಚ.. ಅವನ ಅರ್ಧ ದೇಹ ಛತ್ರಿಯಿಂದ ಹೊರಗೆ ಇದ್ದು.. ಅರ್ಧ ಭಾಗ ಮಳೆಯಿಂದ ನೆನೆಯಲು ಶುರು ಮಾಡಿತ್ತು.. ಸಿರಿ ಗಮನಿಸಿದಳು.. ಒಂದೆರಡು ಬಾರಿ ಹೇಳಿದರು ಕೇಳದೆ ಇದ್ದಾಗ.. ತನ್ನ್ನ ಕೈಯನ್ನು ಅವನ ಭುಜದ ಮೇಲೆ ಹಾಕಿ.. "ಕಮಾನ್ buddy" ಎಂದು ಹೇಳಿ ತನ್ನತ್ತ ಎಳೆದುಕೊಂಡಳು..
ಮುಜುಗರ ಪಡುತ್ತಾ ಮೆಲ್ಲನೆ ಹೆಜ್ಜೆ ಹಾಕಿದ.
ರಂಗೋಲಿ ಅಂಗಳ ಬಂತು
ಆಗಲೇ ಒಂದೆರಡು ಜೋಡಿಗಳು ಅಲ್ಲಿ ಕೂತಿದ್ದವು.. ಪಿಸಿ ಪಿಸಿ ಮಾತಾಡುತ್ತಿದ್ದವು.. ಕಡಲೇಕಾಯಿ ಮಾರುವವ ತನ್ನ ಮೊಬೈಲಿನಲ್ಲಿ ಹಾಡು ನೂರು ಮೀಟರ್ ಕೇಳುವ ಹಾಗೆ ಜೋರಾಗಿ ಹಾಕಿಕೊಂಡಿದ್ದ.. "ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ.. ಆಡದೆ ಉಳಿದಿಹ ಮಾತು ನೂರಿದೆ" ಮುಗಿಯದ ಕಥೆ ಚಿತ್ರದ ಹಾಡು ಬರುತ್ತಿತ್ತು
"ಸಿರಿ ಒಂದು ಮಾತು ಹೇಳಬೇಕಿತ್ತು ನಿನಗೆ"
"ಹೇಳು ಉಮೇಶ್"
ವಚನ ಬದಲಾಗಿದ್ದು ಇಬ್ಬರಿಗೂ ಅರಿವಿಗೆ ಬರಲಿಲ್ಲ..
"ನಮ್ಮಿಬ್ಬರ ಪರಿಚಯವಾಗಿ ಆರು ತಿಂಗಳಾಯಿತು..ಜೀವನದಲ್ಲಿ ಮತ್ತೆ ವಸಂತವನ್ನು ಕಾಣಬೇಕೆಂಬ ಬಯಕೆ ನಮ್ಮಿಬ್ಬರನ್ನು ಹತ್ತಿರ ತಂದಿದೆ.. ಇನ್ನು ಮುಂದಕ್ಕೆ ಹೇಗೆ ಎನ್ನುವ ವಿಚಾರ ಬಂದಾಗ.. ನನಗೆ ಈ ಮಾತನ್ನು ಹೇಳಬೇಕೆನಿಸಿತು.. "
"ಹೂಂ"
"ಸಿರಿ ಐ ಲವ್ ಯು ಕಣೆ.. "
ಒಂದು ಕ್ಷಣ ಮಾತಿಲ್ಲದೆ ಸಿರಿ ಉಮೇಶನ ಮೊಗವನ್ನೇ ನೋಡುತ್ತಿದ್ದಳು.. !
"ಸಿರಿ ಐ ಲವ್ ಯು ಕಣೆ.. "ನನ್ನ ಜೊತೆ ಜೀವನದಲ್ಲಿ ಹೆಜ್ಜೆ ಹಾಕುತ್ತೀಯ.. ನಿನಗೆ ಇಷ್ಟ ಅನಿಸಿದರೆ.. ನಿನ್ನ ಒಪ್ಪಿಗೆ ಹೇಳು.. ಇದರಲ್ಲಿ ಬಲವಂತವಿಲ್ಲ.. ಆದರೆ ನಮ್ಮಿಬ್ಬರ ನಿರ್ಧಾರ ಏನೇ ಆಗಲಿ.. ನಮ್ಮ ಗೆಳೆತನ ಎಂದಿಗೂ ಕಳೆದುಕೊಳ್ಳಬಾರದು.. ಸ್ನೇಹಿತರಾಗಿ ಇರೋಣ.. ಇದು ನನ್ನ ಮನದ ಭಾವ.. ನಿನಗೆ ಏನು ಅನಿಸುತ್ತದೆ ಹೇಳು.. "
ಇಬ್ಬರ ಮಧ್ಯೆ ಮೌನ.. ತಲೆಯ ಮೇಲೆ ಮೆಟ್ರೋ ಟ್ರೈನ್ ಸದ್ದು ಮಾಡುತ್ತಾ ಓಡುತ್ತಿತ್ತು.. ವಾಹನಗಳ ದಟ್ಟಣೆ ಹೆಚ್ಚುತ್ತಿತ್ತು.. ಮಳೆ ನಿಂತ ಆಗಸ ಶುಭ್ರವಾಗಿತ್ತು.. ಹಾಗೆಯೇ ಉಮೇಶನ ಹೃದಯವೂ ಕೂಡ.. ಹೇಳಬೇಕಾದ್ದು ಹೇಳಿದ್ದರಿಂದ ಮನಸ್ಸು ಹಗುರಾಗಿ ಹತ್ತಿಯ ಹಾಗೆ ಹಿಂಜಿಕೊಂಡು ಆಗಸದ ಮೋಡಗಳ ತರಹ ಹಾರುತಿತ್ತು..
ಸುಮಾರು ಹದಿನೈದು ನಿಮಿಷ.. ಇಬ್ಬರ ಮಧ್ಯೆ ಮೌನ ಬಿಟ್ಟು ಬೇರೆ ಇಲ್ಲ..
ಕಡಲೆಕಾಯಿ ಹುಡುಗನ ಮೊಬೈಲು ಅಣ್ಣಾವ್ರ ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ "ಯಾವ ಕವಿಯೂ ಬರೆಯಲಾರ ಒಲವಿನಿಂದ ಕಣ್ಣೋಟದಿಂದ ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯಾ..ಯಾವ ಕವಿಯೂ ಬರೆಯಲಾರ" ಹಾಡು..
ಇಬ್ಬರ ಕಣ್ಣುಗಳು ಸಂಧಿಸಿದವು..
ಸಿರಿ ತಲೆ ಬಗ್ಗಿಸಿಕೊಂಡು ಮತ್ತೆ ಸ್ವಲ್ಪ ಹೊತ್ತು ಕೂತಳು..
"ಈ ಮೌನವ ತಾಳೆನು.. ಮಾತಾಡೇ ದಾರಿಯ ಕಾಣೆನು.. ಓ ರಾಜ" ಮಯೂರ ಚಿತ್ರದ ಹಾಡು ನೆನಪಿಗೆ ಬಂತು ಸಿರಿಗೆ..
ನಿಧಾನವಾಗಿ ತನ್ನ ವ್ಯಾನಿಟಿ ಬ್ಯಾಗಿಗೆ ಕೈ ಹಾಕಿ.. "ಉಮೇಶ್ ಹೀಗೆ ಮಾಡೋಣ.. ನಾಣ್ಯ ಚಿಮ್ಮುತ್ತೇನೆ .. ಹೆಡ್ಸ್ ಬಿದ್ದರೆ ಜೊತೆಯಾಗಿರೋಣ ... ಓಕೆ .. ಟೈಲ್ಸ್ ಬಿದ್ದರೆ ಫ್ರೆಂಡ್ಸ್ .. ಆಗಬಹುದಾ"
ಸುಮ್ಮನೆ ನಕ್ಕ
ನಾಣ್ಯ ಚಿಮ್ಮಿ ಕೈಯಲ್ಲಿ ಹಿಡಿದಳು.. "ಹೇಳಿ ಉಮೇಶ್"
ಅವಳ ಎರಡು ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು.. "ಅದು ಹಾಗೆ ಇರಲಿ.. ಸಿರಿ. .ತೆಗೆಯೋದೆ ಬೇಡ.. ನೀ ನನ್ನ ಜೊತೆಯಾಗು ಸಾಕು.. "
ಸಿರಿ ಸುಮ್ಮನೆ ಒಂದು ಮುಗುಳು ನಗೆ ಬೀರಿ.. ಅವನ ತಣ್ಣನೆ ಕೈಗಳ ಮೇಲೆ ತನ್ನ ಬಿಸಿ ಕೈಗಳನ್ನು ಇಟ್ಟು.. ಮೆಲ್ಲನೆ ಕಣ್ಣು ಹೊಡೆದು ತಲೆ ತೂಗಿದಳು..
ಗೋಲ್ಗಪ್ಪಾ ಮಾರುವವನ ಬಳಿಯಿದ್ದ ಒಬ್ಬ ಹುಡುಗನ ಮೊಬೈಲಿನಲ್ಲಿ "ಜೊತೆಯಾಗಿ ಹಿತವಾಗಿ ಸೇರಿ ನೆಡೆವ ಸೇರಿ ನುಡಿವ.. ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು.. ನಿನ್ನ ಬಿಡಲಾರೆ ನಾನೆಂದಿಗೂ" ರಥಸಪ್ತಮಿ ಚಿತ್ರದ ಹಾಡು ಇಬ್ಬರಿಗೂ ಕೇಳಿಸಿತು..
ಜೋರಾಗಿ ನಗುತ್ತಾ.. ಇಬ್ಬರು ಕೈಹಿಡಿದುಕೊಂಡು .. "ಇವತ್ತಿಂದ ಹೊಸ ಪಥದಲ್ಲಿ ನೆಡೆಯೋಣ.. "
ಇಬ್ಬರೂ ಕೈ ಕೈ ಹಿಡಿದು ಮೆಲ್ಲನೆ ಮೆಟ್ರೋ ಸ್ಟೇಷನ್ ಹತ್ತಿರ ನೆಡೆಯ ತೊಡಗಿದರು..
ಮೆಟ್ರೋ ಟ್ರೈನಿಗೆ ಟೋಕನ್ ತೆಗೆದುಕೊಳ್ಳುವಾಗ ಎಫ್ ಎಂ ನಲ್ಲಿ ಹಾಡು ಬರುತ್ತಿತ್ತು..
"ಹಸೆಮಣೆಯೂ ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳಾ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು"
ಸಿರಿ ತನ್ನ ಕೈಯಲ್ಲಿಯೇ ಇದ್ದ ನಾಣ್ಯವನ್ನು ಮತ್ತೊಮ್ಮೆ ನೋಡಿಕೊಂಡಳು.. ಎರಡು ಕಡೆ ಹೆಡ್ಸ್ ಇತ್ತು :-)
ಕೃಪೆ : ಗೂಗಲೇಶ್ವರ |
Sri ivatthina malegoo neen barediha story super chennaagide
ReplyDeleteThank you Sharadhe :-)
DeleteWoow really matured story. Too good
ReplyDeleteThank you Roopashree
DeleteThank you Satisha
ReplyDeleteಕೊನೆಯನ್ನು ಓದಿ ಸಮಾಧಾನವೆನಿಸಿತು, ಸಂತೋಷವಾಯಿತು.
ReplyDelete
Deleteಧನ್ಯವಾದಗಳು ಗುರುಗಳೇ.. ನಿಮ್ಮ ಓದೇ ಮತ್ತು ಪ್ರತಿಕ್ರಿಯೆಯೇ ನನಗೆ ಆಶೀರ್ವಾದ