21 ಹತ್ತಿರ ಬರ್ತಾಇದೆ ..
೨೧ ಶ್ರೀ ಇವತ್ತು..
ನನ್ನ ಟೀ ಸಾಮಾನ್ಯ ಒಂದು ವಾರದ ಮುಂಚೆ ಈ ರೀತಿಯ ಎಚ್ಚರಿಕೆ ಕೊಡುವುದು ಸಾಮಾನ್ಯವಾಗಿತ್ತು..
ಸದಾ ಕಾಲದಲ್ಲಿಯೂ ಎಲ್ಲರನ್ನು ಕಾಡುವ ಸಮಸ್ಯೆ ನನಗೂ ಮಾಮೂಲು..
"ಹೂ ಟೀ ಏನಾದರೂ ಮಾಡೋಣ .. "
"ಏನ್ ಮಾಡ್ತೀರೋ.. ನಿಮ್ ತಲೆ.. "
ಇಬ್ಬರೂ ನಗುತ್ತಿದ್ದೆವು..
ಇದ್ದ ಸಮಸ್ಯೆಗಳ ಮಧ್ಯೆ ಏನಾದರೂ ತೂಗಿಸಿಕೊಂಡು.. ಹೇಗೋ ಅನುಸರಿಸಿಕೊಂಡು ಬೇಕಿದ್ದನ್ನು ತರುವುದು ಅಭ್ಯಾಸವಾಗಿತ್ತು..
ಮೊನ್ನೆ ಇದೆ ರೀತಿಯ ದೃಶ್ಯ ಮತ್ತೆ ಪುನಾರಾವರ್ತನೆ..
ಹೋಗಿದ್ದಾಯ್ತು.. ತಗೆದುಕೊಂಡಿದ್ದಾಯ್ತು. .. ಅಲ್ಲಿಂದ ಸುಮಾರು ಹತ್ತು ಕಿಮೀಗಳು ಕಿವಿಯಲ್ಲಿ
"ಈ ಮೌನವ ತಾಳೆನೋ.. ಮಾತಾಡೇ ದಾರಿಯ ಕಾಣೆನು.. " ಹಾಡು ಗುನುಗುನುಸುತ್ತಿತ್ತು..
ಹತ್ತು ಕಿಮೀಗಳು ನನ್ನ ಕಣ್ಣಲ್ಲಿ "ಇಳಿದು ಬಾ ತಾಯಿ ಇಳಿದು ಬಾ" ಹಾಡು..
ಹಿಂದೆ ಮೌನದ ಮೆರವಣಿಗೆ.. .ಮುಖ ಊದಿಕೊಂಡಿತ್ತು
ಮನೆಗೆ ಬಂದ ಮೇಲೆ.. "ಯಾಕೆ ಮಾತಿಲ್ಲದೆ ಬಂದೆ.. "
"ಜಾಸ್ತಿ ಆಯಿತು.. ನಿಮಗೆ ತೊಂದರೆ ಆಯಿತು.. "
"ಅಯ್ಯೋ ಅದಕ್ಕೆಲ್ಲಾ ಯೋಚಿಸಬಾರದು.. ಕುಶಿಯಾಗಿರಬೇಕು.. "
ಮತ್ತೆ ಸದ್ದಿಲ್ಲ..
ನನಗೆ ಅದು ಬೇಕು.. ಇದು ಬೇಕು.. ಅಂತ ಕೋಪ ಮಾಡಿಕೊಂಡು ಗಲಾಟೆ ಮಾಡುವ ಮಕ್ಕಳ ಮಧ್ಯೆ "ನಿಮಗೆ ತೊಂದರೆಯಾಯಿತು.. ಸಾರಿ ಎನ್ನುವ" ಈ ರೀತಿಯ ವರಪ್ರಸಾದವೂ ಇರುತ್ತದೆಯೇ ಎಂದು ... ಆಗಸ ನೋಡಿದೆ .. ತಾರೆಯಾಗಿದ್ದ ಟೀ.. "ವರಪ್ರಸಾದ ಶ್ರೀ .. ತಪಸ್ಸು ಮಾಡಿದರೂ ಈ ರೀತಿಯ ಹೊಂದಾಣಿಕೆ ಇರುವ ಕುಡಿ ಸಿಗುತ್ತಿರಲಿಲ್ಲ.. " ತನ್ನ ಎಂದಿನ ಕಂಜೂಸು ನಗೆ ಕೊಟ್ಟ ಅನುಭವ..
"ಸವಿ ನೆನಪುಗಳು ಬೇಕು ಸವಿಯಲಿ ಬದುಕು" ಆ ನೆನಪುಗಳ ಬತ್ತದ ಮಾಲೆ ಇರಲೇ ಬೇಕು ಬರಲೇ ಬೇಕು..
ನನ್ನ ಗೆಳತಿಯ ಜನುಮದಿನವಿಂದು.. ಕಾಲ ಗರ್ಭದಲ್ಲಿ ಅಡಗಿದ್ದ ಒಂದು ಸಣ್ಣ ಕಲ್ಲು ಹೊರಗೆ ಬಂತು ..