Friday, August 4, 2017

ಪ್ರಥಮಂ ವಕ್ರತುಂಡಂಚ ......................ಮೊದಲನೇ ಭಾಗ


ಒಂದು ನಾಣ್ಯ ಹಿಡಿದು ಚಿಮ್ಮಿದಾಗ.. ರಾಜ, ರಾಣಿ ಯಾವುದು ಬೇಕಾದರೂ ಬೀಳಬಹುದು.. ನಮ್ಮ ನಮ್ಮ ಭಾಗ್ಯದ ಗೆರೆ ಹೇಗಿರುತ್ತೋ ಹಾಗೆ ಸಾಗುತ್ತದೆ..

ಒಂದು ಶುಭ ಶುಕ್ರವಾರ.. ಆಫೀಸ್ ಕೆಲಸದಲ್ಲಿ ಮುಳುಗಿ ಹೋಗಿದ್ದೆ... ಊಟವಾಗಿತ್ತು.. ತಲೆ ಕೆರೆದುಕೊಳ್ಳಲು ಪುರುಸೊತ್ತು ಇಲ್ಲ ಅಂದರೆ ತಪ್ಪಾಗುತ್ತದೆ.. ಆದರೆ.. ಆ ಕಡೆ ಗಮನ ಹರಿದಿರಲಿಲ್ಲ.. ಸುಮ್ಮನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ.. ಒಂದು ಸಂದೇಶ ಬಂದಿತ್ತು ಮೊಬೈಲಿಗೆ.. 

"ಕಡಿಮೆ ಅವಧಿಯಲ್ಲಿ ಹೊರದೇಶಕ್ಕೆ ಹೋಗಬೇಕಾಗತ್ತೆ.. ಹೋಗ್ತೀಯ".. ನಾ ಯಾವಾಗಲೂ ಎರಡನೇ ಯೋಚನೆ ಅನ್ನೋದೇ ಇಲ್ಲ.. "ಓಕೆ ಹೋಗಿ ಬರುವೆ ಅಂದೇ"

ಅಲ್ಲಿಂದ ಶುರುವಾಯಿತು.. ರೋಲರ್ ಕೋಸ್ಟರ್ ರೈಡ್... 

ಕೆಲವೊಮ್ಮೆ.. ಒಂದು ಕಾರ್ಯ ಆಗಲೇ ಬೇಕು ಎಂದರೆ.. ಎಲ್ಲಾ ಸಲಕರಣೆಗಳು, ಅದಕ್ಕೆ ಪೂರಕವಾದ ಸಿದ್ಧತೆಗಳು ಅರಿವಿಲ್ಲದೆ ತನ್ನ ಜಾಗದಲ್ಲಿ ನಿಲ್ಲುತ್ತಾ ಸಹಕರಿಸುತ್ತದೆ.. 

ಆ ವಾರ ಕೂಡ ಹಾಗೆ ಆಯಿತು.. 

ಬೇಕಾಗಿದ್ದ ಪರವಾನಿಗೆ ಸಿಕ್ಕಿತು.. ಹೊರಡಲು ಬೇಕಾದ ಸಿದ್ಧತೆಗಳು ಮಾತ್ರ ಕಡೆ ಹೊತ್ತಿನ ತನಕ ಕಾಯಲೇ ಬೇಕಾಯಿತು.. 

ಆಫೀಸಿನ ಮಾಮೂಲಿ  ಕೆಲಸಗಳು, ಜರ್ಮನಿಯಲ್ಲಿ ಹೇಳಬೇಕಾದ ವಿಷಯಗಳ ಸಿದ್ಧತೆ, ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳು, ಜೊತೆಯಲ್ಲಿ ನಾ ಮಾನಸಿಕವಾಗಿ ಸಿದ್ಧತೆಯಾಗಬೇಕಿತ್ತು.. ಆದರೆ ಎಲ್ಲವೂ ಚುಕ್ಕಿಗಳ ತರಹ ತಮ್ಮ ಪಾಡಿಗೆ ತಾವು ನಿಂತಿದ್ದವು... ಅವನ್ನೆಲ್ಲಾ ಒಂದುಗೂಡಿಸುವ ಕೆಲಸ ನಾ ಮಾಡಬೇಕಿತ್ತು.. ಆದರೆ ಅದಕ್ಕೆ ಬೇಕಾಗಿದ್ದ ಸಮಯ.. ನನ್ನ ಬಲಗೈನಲ್ಲಿದ್ದ ಗಡಿಯಾರವನ್ನು ಮೀರಿ ಸಾಗುತ್ತಿತ್ತು... 

ಮಡದಿ, ಮಗಳು ನನಗೆ ನೆನಪಿಸುತ್ತಲೇ ಇದ್ದರು.. ಬೇಕಾದ ಸಿದ್ಧತೆ ಮಾಡಿಕೊಳ್ಳಿ.. ಎಷ್ಟು ಹೊತ್ತಿಗೆ ಹೊರಡಬೇಕು.. ಏನೇನೂ ತರಬೇಕು.. ತಲೆ ಗೂಡಾಗಿತ್ತು ..  ಇಬ್ಬರನ್ನು ಕರೆದುಕೊಂಡು ಒಂದಷ್ಟು ಅಂಗಡಿಗಳಿಗೆ ತಿರುಗಿದೆ.. ಬೇಕಾದ ವಸ್ತುಗಳು ಎಲ್ಲಾ ಬಂದವು.. 

ಎಲ್ಲಾ ಬಂದವು.. ಊಹುಂ.. ಇನ್ನೂ ಇತ್ತು.. ಆದರೆ ಅವೆಲ್ಲಾ ಕೊನೇ ಕ್ಷಣದ ಸಿದ್ಧತೆಗಳು.. ನಾ ಮಾನಸಿಕವಾಗಿ ಸಿದ್ಧತೆ ನೆಡೆಸಿದ್ದೆ.. .. 

ಅಂದು ಬೆಳಗಿನಿಂದ ಎಡಬಿಡದೆ ಓಡಾಟ.. ಒಂದು ಸಾಮಾಜಿಕ ತಾಣದ ಕಾರ್ಯಕ್ರಮಕ್ಕೆ ಫೋಟೋ ತೆಗೆಯಬೇಕಿತ್ತು.. ಅದು ಮುಗಿಸುವ ಹೊತ್ತಿಗೆ ನನ್ನ ಶಾಲಾದಿನಗಳ ಗೆಳತೀ ಕಂ ಸಹೋದರಿ ದೇವತೆಯ ಹಾಗೆ ಬಂದು... ನೀನು ಏನೂ ತಿಂದಿಲ್ಲ .. ನಿನಗಾಗಿ ನಿನ್ನ ಇಷ್ಟವಾದ ಅಕ್ಕಿ ರೊಟ್ಟಿ ತಂದಿದ್ದೀನಿ.. ಪ್ಲೀಸ್ ಬೇಡ ಅನ್ನಬೇಡ.. ಎಂದಾಗ ಕಣ್ಣಲ್ಲಿ ಆನಂದ ಭಾಷ್ಪ.. ನಿಜ ಹೇಳಬೇಕೆಂದರೆ.. ಆ ಅಕ್ಕಿ ರೊಟ್ಟಿ ಇಡೀ ದಿನ ನನ್ನ ಹೊಟ್ಟೆಯನ್ನು ಕಾಪಾಡಿತ್ತು.. ಮತ್ತೆ ನಾ ತಿಂದದ್ದು ರಾತ್ರಿ ೧೧ಕ್ಕೆ.. ಏರ್ಪೋರ್ಟ್ ಗೆ ಹೋಗಲು ಕಾರು ಬಂದಿತ್ತು.. ಆ ಗಡಿಬಿಡಿಯಲ್ಲಿ ನನ್ನ ಮಡದಿ ಮಗಳು ಬಲವಂತಮಾಡಿ ಊಟ ಮಾಡಿಸಿದರು.. ನೀವು ಬೇಗ ಊಟ ಮಾಡಿ ಹೊರಡಿ.. ನಾವು ಆಮೇಲೆ ಮಾಡುತ್ತೇವೆ.. ವಿಮಾನ ಹತ್ತಿದ ಮೇಲೆ ಎಷ್ಟು ಹೊತ್ತಾದರೂ ಸರಿ ಫೋನ್ ಮಾಡಿ ಎಂದರು.. 

ಇದರ ಮಧ್ಯೆ ಮತ್ತೆ ನನ್ನ ಶಾಲಾದಿನಗಳ ಸೋದರಿ.. MTR ಸಿದ್ಧ ತಿನಿಸುಗಳ ಪೊಟ್ಟಣಗಳನ್ನು ತಂದು ಕೊಟ್ಟಳು.. ಆ ದಿನ ನನ್ನ ಹೊಟ್ಟೆಯನ್ನು ಕಾದಿದ್ದು ಅವಳು ಕೊಟ್ಟ ಅಕ್ಕಿ ರೊಟ್ಟಿ.. ಹಾಗೆಯೇ ಜರ್ಮನಿಗೆ ಹೋದಾಗ ಒಂದು ವಾರ ಮತ್ತೆ ನನ್ನ ಹೊಟ್ಟೆಯನ್ನು ಕಾಪಾಡಿದ್ದು ಅವಳು ತಂದುಕೊಟ್ಟಿದ್ದ MTR ಪೊಟ್ಟಣಗಳು :-)

ಮಡದಿ ಸವಿತಾ ಮನದೊಳಗೆ ಖುಷಿ.. ಆದರೆ ತೋರಿಸಿಕೊಳ್ಳುತ್ತಿರಲಿಲ್ಲ.. ಖುಷಿ ವಿಷಯ ಎಂದರೆ.. ನಾ ಮೊದಲ ಬಾರಿಗೆ ಹೊರ ದೇಶಕ್ಕೆ ಹೋಗುತ್ತಿರುವುದು.. ಮಗಳಿಗೆ ನನ್ನ ಬಿಟ್ಟು ಒಂದು ವಾರ ಇರಬೇಕಲ್ಲ ಎನ್ನುವ ಆತಂಕ... 

ಅಮ್ಮ ಖುಷಿ ಪಟ್ಟರು, ಕಣ್ಣಲ್ಲಿ ಆನಂದಭಾಷ್ಪ.. ಅವರ ಹೋರಾಟದ ಜೀವನಕ್ಕೆ ಆ ದೇವರು ಕೊಟ್ಟ ವರ ಅನ್ನಿಸಿತು.. ಅಮ್ಮನ ಆ ಆನಂದಭಾಷ್ಪದ ಮುಂದೆ ಜಗತ್ತಿನ ಇತರ ವಿಷಯಗಳು, ವಸ್ತುಗಳು ತೃಣ ಸಮಾನ.. ಅಮ್ಮ ಹೇಳಿದ ಮಾತುಗಳು "ನನ್ನ ಮಕ್ಕಳು ಮುಂದೆ ಬಂದಿದ್ದೀರಾ.. ಇನ್ನಷ್ಟು ಬೆಳೆಯಬೇಕು ಕಣೋ.. ನಿನ್ನ ಅಪ್ಪ ಖುಷಿ ಪಡ್ತಾ ಇದ್ದಾರೆ" ಅಂದಾಗ ಕಣ್ಣುಗಳು ಜೋಗದ ಜಲಪಾತ.. ಆದರೆ ತಡೆದುಕೊಂಡೆ.. !!!

ಅಕ್ಕ ಆನಂದದಿಂದ ಹರಸಿದಳು, ಅಣ್ಣ ಅತ್ತಿಗೆ ಖುಷಿಯಾಗಿ ಹಾರೈಸಿದರು... ತಮ್ಮ ತನ್ನ ಮಾಮೂಲಿ ಧ್ವನಿಯಲ್ಲಿ ಆರಾಮಾಗಿ ಹೋಗಿ ಬಾ ಎಂದದ್ದು ಅಷ್ಟೇ ಅಲ್ಲದೆ, ನನ್ನ ಪರ್ಸಿನ ತೂಕ ಹೆಚ್ಚಿಸಿದ.. 

ಸರಿ.. ಆದಷ್ಟು ಹೊಟ್ಟೆಯೊಳಗಿನ ಚಿಟ್ಟೆಯನ್ನು ಹೊರಗೆ ಬಿಡಬಾರದೆಂದು.. ಮನಸ್ಸನ್ನು ಧೃಡ ಮಾಡಿಕೊಂಡಿದ್ದೆ.. ಮನಸ್ಸು ಮಂಜಿನ ಹಾಗೆ ತಣ್ಣಗೆ ಇತ್ತು.. 

ಮಗಳಿಗೆ ಮಡದಿಗೆ ಒಂದು ಅಪ್ಪುಗೆ ಕೊಟ್ಟು.. ಹೊರಟೆ.. ಇಬ್ಬರೂ ಹೇಳಿದ್ದು ಒಂದೇ ಮಾತು.. ಹುಷಾರಾಗಿ ಹೋಗಿ ಬನ್ನಿ.. ಅಲ್ಲಿ ಅದು ತನ್ನಿ ಇದು ತನ್ನಿ ಎನ್ನುವ ಬೇಡಿಕೆ ಇರಲಿಲ್ಲ.. 

ಇಬ್ಬರೂ ಒಂದು ಸುಂದರ ನಗೆ ಕೊಟ್ಟು ನನ್ನ ಬೀಳ್ಕೊಟ್ಟರು.. 

ವಾಹನ ಚಾಲಕ ನನಗೆ ತುಸು ಪರಿಚಯದವರಾಗಿದ್ದರು.. ಅದು ಗೊತ್ತಾಗಿದ್ದು.. ಕಾರಿನಲ್ಲಿ ಕೂತಮೇಲೆಯೇ.. ಮುಂದಿನ ೪೫ ನಿಮಿಷಗಳು ಮಾತುಕತೆಯಲ್ಲಿ ಕಳೆಯಿತು... ಏರ್ಪೋರ್ಟ್ ಹತ್ತಿರ ಬಂದಾಗ.. ವಾಹನ ಚಾಲಕ ನನಗೆ ಶುಭ ಕೋರಿ ನಿರ್ಗಮಿಸಿದರು.. 

ಏನು ಹೇಳಲಿ.. ಮನಸ್ಸು ಹಕ್ಕಿಯ ಹಾಗೆ ಹಾರುತ್ತಿತ್ತು.. ಮನೆಗೆ ಕರೆ ಮಾಡಿ ಹೇಳಿದೆ.. ತಲುಪಿದ್ದೇನೆ.. ಚೆಕ್ ಇನ್ ಆಗ್ತಾ ಇದೆ.. ಇನ್ನೊಂದು ಅರ್ಧಘಂಟೆ ವಿಮಾನದ ನನ್ನ ಸೀಟಿನಲ್ಲಿ ಕೂತಿರುತ್ತೇನೆ.. 

ಸವಿತಾ ಖುಷಿಯಿಂದ ನಕ್ಕಳು.. ಮಗಳು ಖುಷಿ ಪಟ್ಟಳು.. ಅಪ್ಪ ವಿಮಾನ ಹೊರಡುವ ಮೊದಲು ಕರೆಮಾಡಿ ಎಂದಳು.. 

ಇತ್ತ ಕಡೆ ನನ್ನ ತಮ್ಮ ಬೆಳಗಿನ ಜಾವ ಮೂರು ಮುಕ್ಕಾಲು ತನಕ ಕಾಯುತ್ತಾ ಕೂತಿದ್ದ.. ನೀ ವಿಮಾನದೊಳಗೆ ಹೋದಾಗ ಕರೆಮಾಡು, ಆಮೇಲೆ ನಾ ಮಲಗುತ್ತೇನೆ.. ಅವನು ನಾಲ್ಕೈದು ಬಾರಿ ಹೊರದೇಶಕ್ಕೆಹೋಗಿಬಂದಿದ್ದ .. ಅವನು ಕೊಟ್ಟ ಸಲಹೆಗಳು, ಸೂಚನೆಗಳು ನನ್ನ ಸಹಾಯಕ್ಕೆ ಬಂದಿದ್ದವು.... ಅನಾಯಾಸವಾಗಿ ಯಾವುದೇ ಆತಂಕ, ಕಳವಳವಿಲ್ಲದೆ ವಿಮಾನದೊಳಗೆ ಕೂತೆ.. 

ಸುಂದರವಾದ ಬಣ್ಣ ಬಣ್ಣದ ಆಸನಗಳು, ಪ್ರತಿ ಸೀಟಿನಲ್ಲೂ ಟಿವಿ, ನಮಗೆ ಬೇಕಾದ ಸಿನಿಮಾಗಳನ್ನು ನೋಡುವ ಅವಕಾಶ, ಆಗಾಗ ಬಂದು ಊಟ ತಿಂಡಿ ಕಾಫಿ ಪಾನೀಯಗಳನ್ನು ಕೊಡುವ ನಗುಮೊಗದ ಗಗನಸಖಿಯರು... !!!

ಪ್ರಥಮಂ ವಕ್ರತುಂಡಂಚ... ಅದ್ಭುತ ಅನುಭವಕ್ಕೆ ಮುನ್ನುಡಿಯಾಗಿ ವಿಮಾನ ಜರ್ ಅಂತ ಶುರುವಾಯಿತು.. !!!

35 comments:

 1. ಈಗಿರುವ ಮನಸ್ಥಿತಿಯಲ್ಲೂ ಮನಸ್ಸನ್ನು ಆ ಸುಮಧುರ ಘಳಿಗೆಗೆ ಕೊಂಡೊಯ್ದು, ಆ ಘಳಿಗೆಯ ಆಹ್ಲಾದತೆಯ ತಂಗಾಳಿಯನ್ನು ಓದುಗರಿಗೆ ತಲುಪಿಸುವ ಕಲೆ ಶ್ರೀಗೆ ಮಾತ್ರ ಸಾಧ್ಯ!

  ಹ್ಯಾಟ್ಸಪ್ ಶ್ರೀ... ಸುಂದರ ಬರವಣಿಗೆ! ಈ ಸುಂದರ ಘಳಿಗೆಗಳ ನೆನಪು, ಜೀವನಕ್ಕೊಂದು ಹುರುಪು! ಮನಸ್ಸಿಗೊಂದು ಚೇತನ! ನಮ್ಮೀ ಜೀವನದ ಓಟದ ಹಾದಿಯಲ್ಲೊಂದು ಮೈಲುಗಲ್ಲು!

  ReplyDelete
  Replies
  1. ನಿಮ್ಮಂತಹ ಗೆಳೆಯರು ಇರುವಾಗ..ಮನಸ್ಸು ಧೃಡತೆಯಿಂದ ಇರುತ್ತೆ..

   ಸದಾ ಕೊರಗುವ ಬದಲು
   ಅದನ್ನು ಕರಗಿಸಬೇಕು ಆ ಪ್ರಯತ್ನ ನನ್ನದು..

   ಧನ್ಯವಾದಗಳು ಗೆಳೆಯ

   Delete
 2. Waiting for next episode Maga ����

  ReplyDelete
 3. Super, take us to Germany as well, eagerly waiting...

  ReplyDelete
  Replies
  1. Haha....keep your passport visa ready will go....thank you guru

   Delete
 4. ನಿಮ್ಮ ಜರ್ಮನಿಯ stay ಆನಂದಕರವಾಗಿರಲಿ.

  ReplyDelete
 5. ಮೊದಲು ನಿಮ್ಮ ಆತ್ಮ ಸ್ಥೈರ್ಯಕ್ಕೆ ನನ್ನ ಸಲಾಂ , ಜೆರ್ಮನಿ ಪಯಣ ಆರಂಭಗೊಂಡಿದೆ, ಪೂರ್ವ ಸಿದ್ದತೆಯ ನೆನಪುಗಳ ಮೆಲುಕು ಒಳ್ಳೆಯ ಅಡಿಪಾಯವಾಗಿ ಮೂಡಿಬಂದಿದೆ. ನೀವು ಬರೆಯುತ್ತಾ ಹೋಗಿ ನಿಮ್ಮೊಂದಿಗೆ ಪಯಣಕ್ಕೆ ನಾನು ಸಿದ್ದ.

  ReplyDelete
  Replies
  1. ಧನ್ಯವಾದಗಳು ಬಾಲೂ ಸರ್.. ಪಯಣ ಆರಂಭವಾಗಿದೆ.. ಮುಂದಿನ ಸರಣಿ ಶುರುವಾಗುತ್ತೆ

   Delete
 6. Mind blowing lines, damn good language use and amazing work, Hope you continue this marvelous work.... Damn good!!!!

  ReplyDelete
 7. ನಿರ್ವಿಘ್ನಂ ಕುರುಮೇ ದೇವ
  ಸರ್ವ ಕಾರ್ಯೇಶು ಸರ್ವದಾ...

  ರಾಜೀವ್, ಗೀತಾ ಕಥೆ ಮುಂದೆ ಏನಾಗುತ್ತದೆ ಶ್ರೀ ಅಣ್ಣ ಪ್ಲೀಸ್ ಹೇಳಿ ಅಂತಾ ನನ್ನ ಮನಸ್ಸು ಹೇಳುತ್ತಾ ಇತ್ತು.. ಆದರೆ ಈ ಸ್ಥಿತಿ ಯಲ್ಲಿ ಹೇಗೆ ಕೇಳೋದು.. ಕೇಳಿದ್ರೆ ಸರಿನಾ, ತಪ್ಪಾ ಅಂತ ಗೊಂದಲ.. ನನ್ನ ಮನಸ್ಸಿಗೆ ಬಯ್ದು ಸುಮ್ಮನಿರಿಸಿದ್ದೆ.. ಈಗ ಧೈರ್ಯ ಬಂತು .. ಕೇಳು ಅಂದಿದೆ :)

  ನಿಮ್ಮ ಯಶಸ್ಸಿನ ಇನ್ನೊಂದು ಮೆಟ್ಟಿಲು ಈ ಪ್ರಯಾಣ.. ಅಮ್ಮನ ಆನಂದಬಾಷ್ಪಕ್ಕೆ ಎಲ್ಲವೂ ತ್ರಣ ಸಮಾನ ಅಂದಿದ್ದು ಎಷ್ಟು ದೊಡ್ಡ ಮಾತು ಶ್ರೀ ಅಣ್ಣ.. ಅವಕಾಶಗಳಿಗೆ ಮರು ಮಾತಿಲ್ಲದೆ ಸದಾ ಮುಂದೆ ಹೆಜ್ಜೆ ಇಡುವ ನಿಮ್ಮ ಗುಣವೇ ನಿಮ್ಮ ಯಶಸ್ಸಿನ ಗುಟ್ಟು..
  ಹನಿ ಹನಿ ಸೇರಿ ಸಾಗರವಾಗಿ... ಸಾಗರದಾಚೆಯ ಅನುಭವ ಓದಲು ತವಕ..

  ReplyDelete
  Replies
  1. ರಾಜೀವನ ಕಥೆ ಮುಂದುವರೆಯುತ್ತೆ.. ಅದರ ನಡುವೆ ಒಂದು ಪುಟ್ಟ ಬ್ರೇಕ್...

   ಧನ್ಯವಾದಗಳು MS .. ಸುಂದರ ಪ್ರತಿಕ್ರಿಯೆ ನಿನ್ನದು

   Delete
 8. ನಿನ್ನ ವಿದೇಶ ಪ್ರಯಾಣದ ಸುಂದರ ಸಮಧರ ಅನುಭವವನ್ನು ಕಣ್ಣಿಗೆ ಕಾಣುವಂತೆ ನಿನ್ನ ಬರೆವಣಿಗೆಯಲ್ಲಿ ಚಿತ್ರಸಿರುವೆ. ನಿನಗೆ ನನ್ನ ಕಡೆಯಿಂದ ವಂದನೆಗಳು ಗೆಳೆಯ.��������ನೀನು ಬರೆಯುವುದರಿಂದ ನಿನ್ನ ಮನಸ್ಸಿಗೆ ಮಾತ್ರ ಸಮಾಧಾನ ತರದೆ, ನಮಗೂ ನೀನು ಬರೆದಿರುವುದನ್ನು ಓದವ ತವಕ ಹುರುಪು ಬಂದಿದೆ. ಮುಂದಿನ ಭಾಗ ಯಾವಾಗ....

  ReplyDelete
  Replies
  1. ಒಳಗಿನ ಆತ್ಮದ ಒಡೆಯ ಹೇಳಿದಂತೆ ಬರೆಯುತ್ತಾ ಹೋಗುತ್ತೇನೆ.. ಎಲ್ಲಾ ಯಶಸ್ಸಿನ ಕ್ರೆಡಿಟ್ ಅವರಿಗೆ.. ಖಂಡಿತ ಮುಂದಿನ ಭಾಗ ಬರುತ್ತೆ ಸಧ್ಯದಲ್ಲಿಯೇ .. thank you friend

   Delete
 9. Sri tumba chennagide nanage helalu pada galu sigutilla hats off sri

  ReplyDelete
 10. ಈ ಬರಹವನ್ನು ಓದಲು ಬಹಳ ದಿನಗಳಿಂದ ಕಾಯುತ್ತಿದ್ದೆ. ಆದರೀಗ ಕಣ್ಣೀರಿನ ಜೊತೆ ಓದುತ್ತಿದ್ದೇನೆ.

  ReplyDelete
  Replies
  1. ಬಾಳಿನ ಬುತ್ತಿಯಲ್ಲಿ ಸಿಕ್ಕ ಉಪಹಾರವೇ ಜೀವನ .. .. ಮುಂದಿನ ಭಾಗ ಸಧ್ಯದಲ್ಲಿಯೇ ಅತ್ತಿಗೆ ಧನ್ಯವಾದಗಳು

   Delete
 11. Very Nice narration.......keep on writing dear..let me see Germany also.

  ReplyDelete
  Replies
  1. Thank you Chikkappa...i will take you there in the next episode :-)

   Delete
 12. Yes Sri... As you have said,its the beginning of the roller-coaster ride... We would be their as spectators sometimes as co-passengers, sometimes as friends, sometimes as readers...but we truly, sincerely,will eagerly waiting to be there whenever you need our ears, eyes, shoulders, mind or time.. In this journey of roller-coaster of our life.. God is the driver who is taking us on the journey of our life.. sometimes the journey as cool and pleasant that we start taking everything and everybody for granted.. We will never realize that all the co-passengers have different tickets and destinations which are unknown, we never know the turbulence, twists and turns...yes but still we need to wait for our destination,let's make this journey meaningful and helpful for the people around us, let's console each other, let's cheer up each other, let's motivate each other, let's light the lamp of hope.. It's up to us to choose how we complete our remaining journey... In this journey, your writings will make us feel as if there is a compassionate person, you break the silence of our minds, we try to come out of this mechanical life... we start feeling, yes we need to live like the flowers, trees, animals, nature... not like machines....
  Oops... We are awaiting and wishing you and Sheetal a speedy recovery..

  ReplyDelete
  Replies
  1. Thank you Brahma ... the lord what he stored us..we have to take it..nice message...

   Delete
 13. ಅವತ್ತು ಅಣ್ಣನ ಕಡೆಯಿಂದ ವಿದೇಶ ಪ್ರವಾಸದ ಮೆಸೇಜ್ ಬಂದಾಗಲೇ ಮನಸಲ್ಲೆಲ್ಲೋ ಅಂದುಕೊಂಡಿದ್ದೆ ಪ್ರವಾಸಕಥನ ಅಣ್ಣನ ಬಾಯಿಂದ ಕೇಳುವ ಬದಲು ಬರವಣಿಗೆಯಲ್ಲೇ ಓದಬೇಕು ಎಂದು.
  ಅಂತೂ ಶ್ರೀ ಕಾರವಾಗಿದೆ... ನನ್ನ ಆಸೆಯ ಸಾಕಾರ ಕೂಡಾ...
  ಅದೊಂದು ಆತ್ಮಸ್ಥೈರ್ಯಕ್ಕೆ... ಓಡುವ ಕಾಲಕ್ಕೆ ನನ್ನದೊಂದು ಸಲಾಂ..

  ReplyDelete
  Replies
  1. ಧನ್ಯವಾದಗಳು ಎಸ್ ಪಿ.. ಪಯಣ ಮುಂದುವರಿಯಲೇ ಬೇಕು.. ಸುಂದರ ಪ್ರತಿಕ್ರಿಯೆ

   Delete
 14. Idannana odidino atwa movie scene nodidno anta gottagalilla... astu mana muttotara saralawagi aste effective agidae bhava ...tumba ista aitu ��������������������

  Mundina journey continue agatte ankotini...kaita irtivi bhava ��

  ReplyDelete
  Replies
  1. Movie and life i dont think much difference (old movies)...life goes on..next part soon maate

   Delete
 15. ಸುಂದರವಾಗಿ ಬರೆದಿದ್ದೀರಿ... ಬರವಣಿಗೆ ಹೀಗೇ ಮುಂದುವರೆಯಲಿ, ನಿಮ್ಮ ಕುಟುಂಬಕ್ಕಾದ ಅಕಸ್ಮಿಕ ಆಘಾತದಿಂದ ಬೇಜಾರಾಯಿತು...

  ReplyDelete
  Replies
  1. ಬಾಳ ಪಯಣದಲ್ಲಿ ಸಿಕ್ಕ ನಿಲ್ದಾಣದಲ್ಲಿ ಇಳಿಯಲೇ ಬೇಕು.. ಧನ್ಯವಾದಗಳು ಸರ್

   Delete
 16. very interesting introduction....reading next part...excellent geleya

  ReplyDelete