ಒಲವಿನ ಉಡುಗೊರೆ ಕೊಡಲೇನು?
ಬೇಡ ಶ್ರೀ... ಅಂಗಡಿಗೆ ಹೋಗಿ ಕೊತ್ತಂಬರಿ ತನ್ನಿ!!!
ಹೊಸ ಬಾಳಿಗೆ ನೀ ಜೊತೆಯಾದೆ.. ಹೊಸ ಆನಂದ ನೀನಿಂದು ತಂದೆ
ಶ್ರೀ ಮಗು ಸ್ಕೂಲ್ ಗೆ ಹೋಗೋಕೆ ಸಾಕ್ಸ್ ತಂದ್ರಾ
ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಶ್ರೀ ನಾನು ಜೊತೆಯಲ್ಲಿ ಬರ್ತೀನಿ.. ನೀವು ಆಫೀಸ್ ಗೆ ಹೋಗುವ ದಾರಿಯಲ್ಲಿಯೇ ಇರೋದು ನನ್ನ ಬಿಟ್ಟು ಹೋಗಿ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಶ್ರೀ.. ಇಲ್ಲ ನನಗೆ ಬೇರೆ ಕೆಲಸ ಇದೆ..
ಒಂದು ಮಾತು ಒಂದು ಮಾತು ನಾನು ಹೇಳಲೇ
ಶ್ರೀ ನನಗೆ ಪುರುಸೊತ್ತು ಇಲ್ಲ.. ಆಮೇಲೆ ಫೋನ್ ಮಾಡಿ
ಹೊಟ್ಟೆ ಹಸಿತಾ ಐತೆ ರಾಗಿ ಮುದ್ದೆ ತಿನ್ನೋ ಹೊತ್ತು
ಶ್ರೀ.. ಅಡಿಗೆ ಮನೆಯಲ್ಲಿ ಅನ್ನ ಸಾರು ಇದೆ.. ಊಟ ಮಾಡಿ
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಮಹಾರಾಣಿಯ ಹಾಗೆ
ಶ್ರೀ.. ಮುದ್ದು ಬಂಗಾರ ನೀವು.. ಎಷ್ಟು ಒಳ್ಳೆಯವರು.. ಲವ್ ಯು ಸೊ ಮುಚ್
ಹ ಹ ಹ ಹ ಪುಟ ಗಟ್ಟಲೆ, ಪುಸ್ತಕಗಟ್ಟಲೆ, ಕಪಾಟಿನಲ್ಲಿ ಯಾವುದೇ ಪುಸ್ತಕ ತೆಗೆದರು.. ಒಂದೇ ಮನಸ್ಥಿತಿ, ಒಂದೇ ನಗು, ಒಂದೇ ಅನುಸರಿಸುವ ಗುಣ.. ಹೀಗೆ ವ್ಯಾಖ್ಯಾನ ಅನೇಕ, ಸಾವಿರಾರು ಪದಗಳಲ್ಲಿ ಹರಿದಾಡಿಬಿಟ್ಟಿರುತ್ತದೆ..
ಆದರೆ ನನಗೆ ಅನ್ನಿಸುವ ಮಾತು.. ಎರಡು ವಿರುದ್ಧ ಮನಗಳು ಜೊತೆಯಲ್ಲಿ ಹೆಜ್ಜೆ ಹಾಕಿದಾಗ ಬದುಕು ಸುಂದರ.. ಯಾಕೆ ಅಂದರೆ ಉತ್ತರ ಮತ್ತು ದಕ್ಷಿಣ ಧ್ರುವಗಳು ಅಲ್ಲವೇ ಅಯಸ್ಕಾಂತದಲ್ಲಿ ಆಕರ್ಷಣೆ ಹೊಂದುವುದು.
ಹೀಗೆ ತಾಳ ಮೇಳವೇ ಇಲ್ಲದ ಮೇಲಿನ ಹಾಡಿನ ಸಂಭಾಷಣೆಯ ತರಹ ನನ್ನ ಬಾಳಿನಲ್ಲಿ ಬಂದು ಶೀತಲವಾದ ಗಾಳಿಯನ್ನು ಬೀಸುತ್ತಲೇ ಮನೆಗೆ ಮನಕ್ಕೆ ಬೆಚ್ಚನೆಯ ಹಿತವಾದ ಶಾಖವನ್ನು ತಂದ ನನ್ನ ಮಡದಿ ಸವಿತಾಳಿಗೆ ಇಂದು ಜನುಮದಿನ..
ನಾವಿಬ್ಬರು ಬಾಳಿನ ಪಥದಲ್ಲಿ ಹೆಜ್ಜೆ ಹಾಕುತ್ತಿರುವ ಪಯಣಿಗರು.. ಇಬ್ಬರ ಗುರಿಯು ಒಂದೇ.. ಆದರೆ ಅದನ್ನು ನೋಡುವ ರೀತಿ ಮೇಲಿನ ಸಂಭಾಷಣೆಗಳಂತೆ.. ಎರಡು ವಿಭಿನ್ನ ಆದರೆ ಮನೆಯೊಳಗೆ ಇರುವ ಶಾಖ ಬೆಚ್ಚಗೆ ಇದುವಂತಹ ಪ್ರೀತಿ ಮಮತೆ ವಿಶ್ವಾಸ.. ಇಂಗ್ಲಿಷ್ ನಲ್ಲಿ LOVEEEEEEEEEEEEEEEEEEEEEEEEEEEEEEEEEEEEEEEEEEEEEEE
ಬಣ್ಣ ವರ್ಣ ಎಲ್ಲಾ ಮನದಲ್ಲಿ .... ಹಾಗೆ ಒಂದು ಸುಂದರ ಚಿತ್ರ |
ಹ್ಯಾಪಿ ಬರ್ತ್ಡೇ ಸವಿತಾಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆ!!!!