ಹೊಸ ಕ್ಯಾಲೆಂಡರ್ ವರ್ಷ ಆಗತಾನೆ ಶುರುವಾಗಿತ್ತು..ಜನವರಿ ತಿಂಗಳ ಚಳಿಗೆ ರಾತ್ರಿಯ ನಿದ್ದೆ ಇನ್ನು ಕರಗಿರಲಿಲ್ಲ...
ಹಿಂದಿನ ದಿನ ಮಾತಾಡಿದ್ದು ನೆನಪಲ್ಲಿ ಇತ್ತು...ಅಮ್ಮ "ಏಳಲ್ವೇನೋ..ಎಲ್ಲಿಗೋ ಹೋಗ್ಬೇಕು ಅಂತ ಹೇಳಿದ್ದೆ...ಎದ್ದೇಳು ಮಗು" ಎಂದು ಎಲ್ಲೋ ಯೋಜನಗಳಷ್ಟು ದೂರದಲ್ಲಿ ಹೇಳುತಿದ್ದುದು ಮಂದವಾಗಿ ಕಿವಿಗೆ ಬೀಳುತ್ತಿತ್ತು....
ಅರೆ ಇದೇನಿದು..ಹೊತ್ತಾಗಿ ಬಿಟ್ಟಿದೆ..ಎಂದು ತನ್ನನ್ನೇ ತಾನು ಬಯ್ದುಕೊಳ್ಳುತ್ತಾ...ಅಲ್ಲೇ ಇದ್ದ ಅಮ್ಮನಿಗೆ ಇರುವ ಹಲ್ಲುಗಳನ್ನು ಬೀರಿ...ಪ್ರಾತಃ ಕರ್ಮಗಳನ್ನು ಮುಗಿಸಿ ಬಂದಾಗ ಆಗಲೇ ೯.೩೦ ಆಗಿತ್ತು. ಇದ್ದುದರಲ್ಲಿ ಚೆನ್ನಾಗಿ ಕಾಣಿಸುತ್ತೇನೆ ಎನ್ನುವ ಉಡುಗೆ ತೊಡುಗೆಗಳನ್ನು ತೊಟ್ಟು..ಅಮ್ಮ ಕೊಟ್ಟ ಬಿಸಿ ಬಿಸಿ ದೋಸೆಯನ್ನು ತಿಂದು..ಹಾರಾಡುತಿದ್ದ ಮನಸ್ಸನ್ನು ತಹಬದಿಗೆ ತಂದುಕೊಂಡು ಅಮ್ಮನಿಗೆ ಹೇಳಿ ಹೊರ ಹೊರಟಿತು!
ಮನಸ್ಸಲ್ಲಿ ಏನೋ ಆನಂದ...ಕೆಲವೊಮ್ಮೆ ಒಂದು ನೂರು ಮೀಟರ್ ನೆಡೆಯುವುದಕ್ಕೂ ಸೋಮಾರಿಸುತಿದ್ದ ದೇಹ..ಇಂದು ಸುಮಾರು ಒಂದೆರಡು ಕಿ.ಮಿ. ಗಳನ್ನೂ ಓಡುತ್ತಲೇ ಬಂದು ಬಿಟ್ಟಿತ್ತು.
ಕಣ್ಣುಗಳು ಸಾವಿರಾರು ಮಂದಿಗಳಲ್ಲಿ ಯಾರನ್ನೋ ಹುಡುಕುತಿತ್ತು...ಸಣ್ಣಗೆ ಕಣ್ಣಲ್ಲಿ ಮಿಂಚುಗಳು ಹೊಳೆದವು. ಸ್ವಾಮೀ ವಿವೇಕಾನಂದರ ಶೈಲಿಯಲ್ಲಿ ನಿಂತವರನ್ನು ಕಂಡಾಗ..ದಂತ ಪಂಕ್ತಿಗಳು ತಾನಾಗೆ ತೆರೆದುಕೊಂಡವು..ಆ ಕಡೆಯೂ ಅದೇ ಪುನರಾವರ್ತನೆ...!
ನಾಲ್ಕು ಹುಬ್ಬುಗಳು ಮೇಲೆ ಏರಿದೆವು..ಕಣ್ಣುಗಳು ಸಮ್ಮತಿಸಿದವು...ಎಲ್ಲಿಗಾದರೂ ಸರಿ ಎನ್ನುವ ಮುಖಭಾವ...
ಸುಮಾರು ನಿಮಿಷಗಳು ಮೌನ ಮಾತಾಡಿದವು..ಎಲ್ಲಿಂದ ಮಾತು ಶುರು ಮಾಡುವುದು, ಹೇಗೆ ಶುರು ಮಾಡುವುದು ಎನ್ನುವ ಗೊಂದಲ ತುಂಬಿದ ಮೌನ...ಕಡೆಗೆ ಉಭಯ ಕುಶೋಲೋಪರಿ ಸಾಂಪ್ರತವಾಯಿತು. ಲೋಕದ ವಿಷಯಗಳೆಲ್ಲ ಮಾತಾದವು..ಬಸ್ಸಿಗೆ ಹತ್ತಿದಷ್ಟು ಇನ್ನಷ್ಟು ಜನರು ನಿಲ್ದಾಣದಲ್ಲಿ ಇರುವಂತೆ..ವಿಷಯಗಳು, ಮಾತುಗಳು ಮುಗಿಯುತ್ತಲೇ ಸೇರುತ್ತಲೇ ಇತ್ತು.. .ತಣ್ಣಗೆ ಹೊಟ್ಟೆ ಹಸಿಯುತ್ತಿತ್ತು...ಜನವರಿಯ ಛಳಿ ಮಿಶ್ರಿತ ಬಿಸಿ ಇನ್ನಷ್ಟು ನೀರಡಿಕೆಯನ್ನು ಹೆಚ್ಚಿಸಿತ್ತು..ಆದರೆ ಮನಸ್ಸಿಗೆ ಯಾವುದೂ ಬೇಡವಾಗಿತ್ತು...ಹಕ್ಕಿಯ ಹಾಗೆ ಹಾರಾಡುತ್ತಲೇ ಇತ್ತು...
ಗೋತ್ರ, ನಕ್ಷತ್ರ, ರಾಶಿ, ಹೆಸರು ಹೇಳಿ ಎಂದು ಅರ್ಚಕರು ಹೇಳಿದಾಗ ಪ್ರಪಂಚಕ್ಕೆ ಮತ್ತೆ ಬಂದದ್ದು...ತಡಬಡಾಯಿಸಿ ಅವರು ಕೇಳಿದಕ್ಕೆ ಉತ್ತರ ಕೊಟ್ಟ ಮೇಲೆ...ಮಂಗಳ ವಾದ್ಯ ಮೊಳಗಿತು...ತೀರ್ಥ ಪ್ರಸಾದವಾಯಿತು...ದೇವರಿಗೆ ನಮಸ್ಕರಿಸಿ..ಮತ್ತೆ ಹೊರಗಿನ ಕಟ್ಟೆಯ ಮೇಲೆ ಶುರುವಾಯಿತು ಮಾತುಗಳು....
ಪ್ರಪಂಚವನ್ನೇ ಮರೆತು ಮಾತಾಡುತಿದ್ದ ಆ ಮನಸ್ಸುಗಳಿಗೆ ಈ ಜಗತ್ತನ್ನೇ ಗೆದ್ದ ಸಂತೋಷ. ಮನದ ಕಡಲಲ್ಲಿ ಹೇಳಿಕೊಳ್ಳಲಾಗದಷ್ಟು ಅಲೆಗಳ ಆರ್ಭಟ..ಒಂದು ರೀತಿಯಲ್ಲಿ ರೆಕ್ಕೆಯಿಲ್ಲದಿದ್ದರೂ ಹಾರಬೇಕು ಎನ್ನುವ ಹಂಬಲ , ಹಾರಬಲ್ಲೆ ಎನ್ನುವ ಪ್ರಚಂಡ ವಿಶ್ವಾಸ..ಕೆಲ ಘಂಟೆಗಳು ಉರುಳಿದ್ದು ಗೊತ್ತಾಗಲೇ ಇಲ್ಲ...
"ಕಣಿ ಹೇಳ್ತೀವಮ್ಮ ಕಣಿ...ಸುಂದರ ಜೋಡಿಗಳಿಗೆ ಹಾಲಕ್ಕಿ ನುಡಿತೈತೆ" ಅಂತ ಗೊಗ್ಗರು ಧ್ವನಿ ಬಂದಾಗ ತಾರಮಂಡಲದಲ್ಲಿದ್ದ ಪಕ್ಷಿಗಳು ನಿಧಾನವಾಗಿ ಧರೆಗಿಳಿದವು..ಬೇಡ ಬೇಡವೆಂದರೂ ಹಿಂಸೆ ಮಾಡಿ...ಇಲ್ಲದ, ಇರದ, ಬೇಡವಾದ ಮಾತುಗಳನ್ನು ಹೇಳಿ...ದಕ್ಷಿಣೆ ತೆಗೆದುಕೊಂಡು ಜಾಗ ಖಾಲಿ ಮಾಡಿದವು ಕೊರವಂಜಿಗಳು...
ಆ ಕ್ಷಣಕ್ಕೆ ತಾವೇ ಶ್ರೀನಿವಾಸ ಪದ್ಮಾವತಿ ಜೋಡಿ ಎಂದು ಬೀಗಿದ ಮನಸ್ಸುಗಳು.... ಸರಿ ಹೊತ್ತಾಯಿತು ಎಂದು ಹೊಸ ವರ್ಷಕ್ಕೆ ಶುಭಾಶಯಗಳನ್ನು ಕೋರುತ್ತ...ಆ ವಾತಾವರಣದಲ್ಲೂ ಬಿಸಿಯಾದ ಮನಸ್ಸನ್ನು ತಣ್ಣಗೆ ಮಾಡಿಕೊಳ್ಳಲು ಐಸ್ ಕ್ರೀಂ ತಿಂದು...ಮತ್ತೆ ಸಿಗುವ ಭರವಸೆ ಮಾತುಕೊಡುತ್ತಾ..ತಮ್ಮ ತಮ್ಮ ಮನಗಳು ತುಂಬಿದ ಮನೆಗಳಿಗೆ ಹೊರಟವು...
ಹೊಸ ವರ್ಷಕ್ಕೆ ಕಾಲಿಟ್ಟ ಆ ದಿನವನ್ನು ಸಾರ್ಥಕವಾಗಿ ಕಳೆದ ನೆಮ್ಮದಿ ಸಂತಸ ಜೋಡಿಗೆ...ಬೆಟ್ಟವನ್ನೇ ಹೊತ್ತು ನಿಂತಿದ್ದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಆಶೀರ್ವಾದದ ಹಸ್ತ ತೋರುತ್ತಾ ಹರಸಿ ಕಳುಹಿಸಿದ...

ಬಸ್ ನಿಲ್ದಾಣಕ್ಕೆ ಬಂದರೆ ಗುಣ ನೋಡಿ ಹೆಣ್ಣು ಕೊಡು ಚಿತ್ರದ "ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ" ಹಾಡು ಬರುತಿತ್ತು...ಸುಮ್ಮನೆ ತನ್ನನ್ನೇ ನೋಡಿಕೊಂಡ ಮನಸು ಹೇಳಿತು...ಅರೆ ಬಾಳು ಹಸಿರಾಗುತ್ತಿದೆ...ತಾನು ತೊಟ್ಟ ಬಳೆಯು ಹಸಿರು...ಹುಡುಗ ತೊಟ್ಟ ಅಂಗಿಯೂ ಹಸಿರು....
ಹಸಿರಲ್ಲೇ ಉಸಿರು ಬೆರೆತಾಗ ಜಗವೆಲ್ಲ ಹಸಿರು ಅಲ್ಲವೇ...!
ಅಂದು ಭೇಟಿ ಮಾಡಿದ ಆ ಹುಡುಗಿ ಇಂದು ನನ್ನ ಮನೆ ಬೆಳಗಿ ಹನ್ನೊಂದು ವಸಂತಗಳು ಆಯಿತು...ಮುದ್ದಾದ ಪ್ರೇಮದ ಕಾಣಿಕೆ ಕೊಟ್ಟ ಆ ಹುಡುಗಿ ನನ್ನ ಮನದಗುಡಿಯ ದೇವಿಯಾಗಿದ್ದಾಳೆ..ಇಂದು ಅವಳ ಜನುಮ ದಿನ...ಕಾಣಿಕೆಯಾಗಿ ಸದಾ ಮೆಲುಕು ಹಾಕುವ ಲೇಖನ ಮಾಲೆ ಅವಳ ಕೊರಳಿಗೆ ಹುಟ್ಟು ಹಬ್ಬದ ಕಾಣಿಕೆ!
ಜನುಮ ದಿನದ ಶುಭಾಶಯಗಳು ಸವಿತಾ.....ನೀನು ಬಂದೆ...ಮಿನುಗುತಿದ್ದ ಬಾಳು ಇನ್ನಷ್ಟು ಬೆಳಗಿತು...ಹೀಗೆಯೇ ಇನ್ನಷ್ಟು ಮಿನುಗುತ್ತ...ಬೆಳಗುತ್ತಾ...ಹೊಳೆಯುತ್ತಾ ಇರಲಿ......!
"ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ...
ನಗುತ ನೀ ಕರೆದರೆ
ಮನದಿ ಸಂತೋಷ ಹಾಡಾದಂತೆ..!"
Huttu habbada shubhashayagalu Savithakka:)
ReplyDeleteಧನ್ಯವಾದಗಳು ಎಸ್.ಎಸ್ ....ಶುಭಾಶಯಗಳು ತಲುಪಿತು...
Deleteಪ್ರಿಯ " ಶ್ರೀ ಕಾಂತ್ "
ReplyDeleteನಮ್ಮ ಶುಭಾಶಯಗಳನ್ನು ತಿಳಿಸಿ ... "ಕಾಂತನ ಶ್ರೀ.."ಯವರಿಗೆ....
ನೂರಾರು ವರ್ಷ ಹೀಗೆಯೇ ನಗುತ್ತಾ ಇರಿ..
ತುಂಬಾ ಅನ್ಯೋನ್ಯ ಜೋಡಿ ನಿಮ್ಮದು..
"ನಗುತಾ..
ನಗುತಾ ಬಾಳೀ ನೀವು ಹೀಗೆ ನಗುತಾ ನಗುತಾ... !"
ಪುಟ್ಟಿಗೆ ಆಶೀರ್ವಾದಗಳು...
ಜೈ ಹೋ !!
ಪ್ರೀತಿಯಿಂದ
ಆಶಾ..
ಪ್ರಕಾಶಣ್ಣ..
ಸುಂದರ ದಾಂಪತ್ಯಕ್ಕೆ ಒಂದು ಮೈಲಿಗಲ್ಲು ಆಗಿರುವ ನಿಮ್ಮ ಆಶೀರ್ವಾದ, ಹಾರೈಕೆಗಳು ಇನ್ನಷ್ಟು ಬಾಳನ್ನು ಬೆಳಗಿಸುತ್ತೆ....ಧನ್ಯವಾದಗಳು ಆಶಾ ಅತ್ತಿಗೆ.ಪ್ರಕಾಶಣ್ಣ
Deletehappy happy Birhday attige... Love you a lot....
ReplyDeleteಧನ್ಯವಾದಗಳು ಎಸ್ ಪಿ ..ಸುಂದರ ಶುಭಾಶಯಗಳಿಗೆ ಸವಿತಾ ದಿಲ್ ಕುಶ್....
Deleteಶ್ರೀಮತಿ ಕಾಂತ ಅವರಿಗೆ ನಮ್ಮ ಕಡೆಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..... ನಿಮ್ಮಿಬ್ಬರ ಬಾಳು ಸದಾ ಹಚ್ಚ ಹಸುರಿನಂತೆ ಹಸನಾಗಿರಲಿ....
ReplyDeleteಗಿರಿ ಶಿಖರದಲ್ಲಿ ಕೂತು ಚಂದ್ರನನ್ನು ಧರಿಸಿರುವ ನಿಮ್ಮ ಹಾರೈಕೆಗಳು ಸದಾ ನಮ್ಮ ಮಾನಸ ಪಟಲದಲ್ಲಿ ಹಸಿರಾಗಿರುತ್ತದೆ..ಧನ್ಯವಾದಗಳು ಗಿರೀಶ್
DeleteHappy birth day Savitha!!!!
ReplyDeleteMaga, Narration super...innenu Kavipungava nagalu bahala sanihadalli iddiya..keep going!!!
ಕವಿ ಪುಂಗವನಾಗ್ತೀನೋ...ಇಲ್ಲ ಸಿಕ್ಕಿದನ್ನೇ ಪುಂಗ್ತೀನೋ ಗೊತ್ತಿಲ್ಲ.ನಿಮ್ಮ ಪ್ರತಿಕ್ರಿಯೆ ಖುಷಿ ಕೊಡುತ್ತಿದೆ...ಧನ್ಯವಾದಗಳು ಗುರು..
Deleteಅತ್ತಿಗೆಗೆ ನನ್ನ ಕಡೆಯಿಂದಲೂ ಶುಭಾಶಯಗಳು ಹೇಳಿ ಬಿಡಿ ಅಣ್ಣಯ್ಯ.....
ReplyDeleteಮನದೊಡೆಯನಿಂದ ಸತಿಗೆ ಇದಕ್ಕಿಂತ ಹೆಚ್ಚಿನ ಗಿಫ್ಟ್ ಬೇಕೇ?? ನಿಮ್ಮ ಬ್ಲಾಗ್ ನೋಡಿದ ಮೇಲೆ ನನ್ನೊಳಗೂ ನಿಮ್ಮದೇ ಸಂತೋಷ....
ಹ್ಯಾಪಿ ಬರ್ತ್ ಡೇ ಅತ್ತಿಗೆ...
ಎಷ್ಟು ಸುಂದರ ಹಾರೈಕೆ ಪಿ ಎಸ್ ..ತುಂಬಾ ಸಂತಸವಾಗುತ್ತಿದೆ. ಮನದಾಳದ ನಿನ್ನ ಮಾತು ಪದಗಳಾಗಿ ಹೊರ ಬಂದಿದೆ...ಧನ್ಯವಾದಗಳು
Deletewonderful writing... it was very interesting... ist bega mugdoitha ansthu... seriously.... it is one of ur best writings ... full mansinda bardirodu ansatthe... full feelings.. ekdam narration... awesome!!!.. pade pade odbeku ansthide... Very heartful wishes from my side to savitha awrge... Happy Birthday Savitha Awre... It will be one of ur best gifts from ur hubby :-)
ReplyDeleteVery Nice comment Maguve..I liked it very much. Thanks a lot for the lovely wishes.
Deleteನಮ್ದೂ ಒಂದು ಶುಭಾಷಯ...
ReplyDeleteಮುಂದೂ ಚೆನಾಗಿರ್ಲಿ ಎನ್ನೂದೇ ನಮ್ ಆಶಯ...
ಧನ್ಯವಾದಗಳು ಚಿನ್ಮಯ್...ಹಾರೈಕೆಯ ಹರಕೆ ಸಂತಸವನ್ನೀಯುತ್ತದೆ...
Deleteಈ ದಿನ ಜನುಮದಿನ ....ಶುಭಾಷಯ ನಿನಗೆ .....ಶುಭಾಷಯ....ಎಂದು ಹಾಡುತ ಸವಿತಳ ಸವಿಯುಂಡು, ಸವಿನೆನಪ ಕೆಣಕಿದ ಸಿರಿಕಾಂತನ ಸಿರಿವಲ್ಲಭೆಯ ಸಿರಿತನದ ಮಾತುಗಳ ಓದುವಾಗ ಸಿಕ್ಕಾಪಟ್ಟೆ ಸಂತೋಷವಾದ ಬಗೆ ಇದು.
ReplyDeleteಹಿರಿಯರ ಆಶೀರ್ವಾದ ಸದಾ ನಮ್ಮ ತಲೆಕಾಯುತ್ತದೆ.ಧನ್ಯವಾದಗಳು ಚಿಕ್ಕಪ್ಪ..
Deleteಶ್ರೀ, ಸವಿತಾಗೆ ನಮ್ಮ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸು. ನಿನ್ನ ಬರಹ ಅಮೋಘ.
ReplyDeleteಜೆ.ಎಂ.
ಧನ್ಯವಾದಗಳು ಗುರು...ನಿನ್ನ ಕುಟುಂಬದ ಹಾರೈಕೆ ತಲುಪಿತು...
Deleteಶುಭಾಶಯಗಳು,ನಿಮ್ಮ ಒಲವು ನಿತ್ಯ ನೂತನವಾಗಲಿ
ReplyDeleteನಿಮ್ಮ ಬರಹ ತುಂಬಾ ಮುದ್ದಾಗಿದೆ :)
ಧನ್ಯವಾದಗಳು ಸ್ವರ್ಣ ಮೇಡಂ...ಬರಹವನ್ನು ಓದಿ ಹರಸಿದ ನಿಮಗೂ ಶುಭವಾಗಲಿ...
DeleteDear Savitha
ReplyDeleteMany many happy returns of d day... Have a lovely year ahead ....
Srikanth bhava ,bardirodu super romantic agi ide ;-) !
Regards,
JASS
Asha Devi...Thank you so much..you liked it..we are happy!
Deletesavitha
ReplyDeletehuttidahabbada hardika shubashayagalu
with regards
veni
Thank you Akka..your blessings protects our family all the time
DeleteMany Many Happy Returns of the day Savitha
ReplyDeleteRegards
Regards,
K.M. Vijay
Elder brother blessings always springs up the enthusiasm..Thank you so much!
Deletenice blog....i guessed it in b/w but tumba chennagi barediddira!
ReplyDeleteSreedevi Sree
Thank you Chandini..you are always a good critic your appreciation means a lot!
Deletei read it. very very nice. liked it
ReplyDeletefeelings have come out very well...sooper!!
convey my wishes to savitha
Madhura Kashyap
Madhura putty..thank you very much. I liked your comments!
DeleteGreat sri……
ReplyDeleteFrom where do you get these words.
Wishing your wife a very happy birthday
Thank you Roopa..words comes just like that :-)
Deleteಸವಿತಾ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳು. ಸುಂದರ ನೆನಪುಗಳ ಸರಮಾಲೆ ಶ್ರೀಕಾಂತ್.. :))
ReplyDeleteಒಳ್ಳೆಯ ದೀಪವಾಗಿರುವ ಸುಮತಿ ಸಹೋದರಿ..ಹೃದಯ ತುಂಬಿದ ಧನ್ಯವಾದಗಳು
Deletehappy b'day attige:) u got a nice gift from shrikanth ji here ...
ReplyDeleteWishing you all d happyness and joys as yours:)
Thank you Bhagya Putty. your wishes too tender filled with great warmth. Thank you So much!
Deleteನಿಮ್ಮ ಮನಸನ್ನ ಅರಿತ ಮನದೆನ್ನೆ ಪಡೆದ ನೀವೇ ಭಾಗ್ಯವಂತ.
ReplyDeleteಶ್ರೀ ಸಾನಿಧ್ಯದಲ್ಲೇ ಕಾಂತನದೂ ದಿವ್ಯ ಪ್ರಭೆ. ಜೋಡಿಯನು ಹರಿಸಲು ಹರಿಯೂ ಹರನೂ ಅನವರತ.
ಮೇಡಂ ಅವರಿಗೆ ಈ ತಮ್ಮನ ಜನುಮದಿನದ ಶುಭಾಶಯಗಳನ್ನು ತಿಳಿಸಿರಿ.
ಈ ಸಮಯ ಕಾವ್ಯದ ಸಮಯ...ಬದರಿ ಕಾಲಿಟ್ಟ ಘಳಿಗೆ ಪದಗಳು ಕವನಗಳಾಗಿ ನಾಟ್ಯ ಮಾಡುತ್ತವೆ..ಧನ್ಯವಾದಗಳು ಬದರಿ ಸರ್
Deleteಒಳ್ಳೆಯ ಹೃದಯದ ಗೆಳಯನಿಗೆ ತಕ್ಕ ಪತ್ನಿ, ಅತ್ತಿಗೆಗೆ ನನ್ನ ಶುಭಾಶಯ ತಿಳಿಸಿ, ವಿಳಂಬದ ಹಾರೈಕೆಗೆ ಕ್ಷಮೆ ಇರಲಿ. ನಿಮ್ಮ ಪ್ರೀತಿಯ ದಾಂಪತ್ಯ ಹೀಗೆ ಇರಲಿ.
ReplyDeleteಮನಸು ಸುಂದರವಾಗಿದ್ದರೆ ಜಗವು ಸುಂದರ ಎನ್ನುವ ಬಾಲೂ ಸರ್ ನಿಮ್ಮ ಆಶೀರ್ವಾದಕ್ಕೆ ಬೆಲೆ ಕಟ್ಟಲಾಗದು...ಧನ್ಯವಾದಗಳು
Deleteಅತ್ತಿಗೆಗೆ ನನ್ನ ಶುಭಾಶಯವನ್ನೂ ತಿಳಿಸಿಬಿಡಿ ಶ್ರೀ ಸಾರ್. ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ.
ReplyDeleteಬಹಳ ಚೆಂದದ ಬರಹ. ತುಂಬಾನೇ ಚೆಂದಗೆ ನಿವೆದಿಸಿದ್ದೀರಿ. :)
ದೂರದೂರಿಗ ಎನ್ನುತ್ತಾ ಮನದ ಹತ್ತಿರ ಹತ್ತಿರದಲ್ಲೆ ಸುಳಿದಾಡುವ ಸತೀಶ್ ನಾಯಕ್ ನಿಮ್ಮ ಹಾರೈಕೆಗೆ ಧನ್ಯವಾದಗಳು
Deleteಹುಟ್ಟು ಹಬ್ಬದ ಶುಭಾಶಯಗಳು..... ಪ್ರೀತಿ ತುಂಬಿ ಹಸಿರಾಗಿದೆ ನಿಮ್ಮ ಲೇಖನದಲ್ಲಿ. ಒಳ್ಳೆಯ ಹಾಡನ್ನೇ ನೆನಪಿಸಿದ್ದೀರಿ ಶ್ರೀಕಾಂತ್. ಸದಾ ಸಂತೋಷ ತುಂಬಿರಲಿ
ReplyDeleteಧನ್ಯವಾದಗಳು ಸುಗುಣಕ್ಕ..ನಿಮ್ಮ ಪ್ರತಿಕ್ರಿಯೆ ತಂಗಾಳಿಯಂತೆಯೇ ತಂಪಾಗಿ ಬಂತು...
Deleteಶ್ರೀಕಾಂತ್ ಸಾರ್ ನಿಮ್ಮ ಪ್ರೀತಿ ತುಂಬಿದ ಬರಹದಲಿ ಬೆಳಗುತಿಹ ಜ್ಯೋತಿಗಳೇ ಹೇಳುತಿವೆ ಎಲ್ಲವನು :-)
ReplyDeleteನನ್ನ ತಡ-ಸಂದೆಶವನ್ನ ಹೇಳಿಬಿಡಿ ಬಹುಬೇಗ....
ಜನ್ಮದಿನದ ಹಾರ್ದಿಕ ಶುಭಾಶಯಗಳು ಅಕ್ಕನಿಗೆ :-)
ಅಂದದ ಮನಸಿನಿಂದ ಬಂದ ಚಂದದ ಪ್ರತಿಕ್ರಿಯೆ..ಹಾಗು ಹಾರೈಕೆ...ಧನ್ಯವಾದಗಳು ರಾಘವ
Deletesundara neeroopane, huttu habbake amogha kanike
ReplyDeleteThank you Guru..!
Delete