"ಏನೂ ಲಕ್ಷ್ಮಿಕಾಂತ..ನೀನು ಸುಮ್ಮನಿದ್ದೀಯ..ಎಲ್ಲರು ಬರೆಯುತಿದ್ದಾರೆ..ನೀನು ಏನು ಬರೀಲಿಲ್ಲ ಅಂತ ಯೋಚನೆ ಮಾಡ್ತಾ ಇದ್ದೆ..ಆದ್ರೆ ನಿನ್ನ ಉತ್ತರ ನನಗೆ ಗೊತ್ತು...ನಾನೇ ಹೇಳಲೇ ಕಾಂತ..."
ಹೇಳಿ ಅಜ್ಜಯ್ಯ..
"ನನ್ನ ಎರಡು ತಲೆಮಾರನ್ನು ನೀನು ಪರಿಚಯಿಸಿದ್ದು, ಕಳೆದ ಯುಗಾದಿ ಹಬ್ಬಕ್ಕೆ ಅಜ್ಜ, ಅಜ್ಜಿಯರನ್ನು ಕರೆಸಿದ್ದು..ಎಲ್ಲ ನಿನ್ನ ಕಪಿ ತಲೆಯೊಳಗೆ ಹೇಗೆ ಬರುತ್ತೋ ನಾನು ಬೇರೆ ಕಾಣೆ..ನಿಜಕ್ಕೂ ನಾನು ಬಹಳ ಹೆಮ್ಮೆ ಪಟ್ಟು ಕೊಳ್ಳಬೇಕು..ನಿಮ್ಮಂತಹ ಮೊಮ್ಮಕ್ಕಳನ್ನು ಪಡೆಯೋಕೆ..."
"ಹೀಗೆ ಸ್ವರ್ಗದಲ್ಲಿ ಓಡಾಡುತಿದ್ದಾಗ...ಸೂರ್ಯ ದೇವ ಹೇಳಿದ.."ರಂಗಸ್ವಾಮಿ ಅವರೇ..ನನ್ನ ಸೌರ ಮಂಡಲ ಹೆಂಗಿದೆ...ಅಂತ..ನಮ್ಮ ಗ್ರಹಗಳು ಹೇಗೆ ಬೆಳಗುತಿದ್ದೆ ಅಂತ..."
ಅದಕ್ಕೆ ನಾನು ಕೊಟ್ಟ ಉತ್ತರ ಏನು ಗೊತ್ತ ಮಗು.."...ಸೂರ್ಯ ದೇವ..ನನ್ನ ನವ ಗ್ರಹಗಳನ್ನು ನೋಡು..ಅವುಗಳ ಮುಂದೆ ಹಹಹಹ..."
"ಮಗು..ಸೂರ್ಯ ದೇವ ತನ್ನ ಬೆಳಕನ್ನು ಎಲ್ಲರಿಗೂ ಸಮಾನವಾಗಿ ಹಂಚುತ್ತಾನೆ..ನಾನು ಕೂಡ ಹಾಗೆ ನನ್ನ ಆಸ್ತಿ....ನನ್ನ ಪ್ರೀತಿ..ನನ್ನ ಆಶೀರ್ವಾದ ಅದನ್ನು ನನ್ನ ಗ್ರಹಗಳಿಗೆ ಸಮಾನವಾಗಿ ಉಣ ಬಡಿಸಿದ್ದಿನಿ.."
"ಮಗು ಹೊತ್ತಾಯ್ತು..ಇನ್ನು ೩೦ ದಿನಗಳಲ್ಲಿ ಬರುತ್ತೇನೆ..ನನ್ನ ಗ್ರಹಗಳನ್ನು ಒಂದೇ ಕಡೆ ಸೇರಿಸುವ ಜವಾಬ್ಧಾರಿ ನಿನ್ನದು...ತುಂಬಾ ಮುಖ್ಯವಾದ ವಿಷಯ ಹೇಳುವುದಿದೆ..."
"ಬರುತ್ತೇನೆ ಮಗು..."
"ನಿನ್ನೊಲುಮೆ ನಮಗಿರಲಿ ತಂದೆ...ಕೈ ಹಿಡಿದು ನೀ ನೆಡೆಸು ಮುಂದೆ.." ಮೊಬೈಲ್ ಅಲಾರಂ ಹೊಡಿತಾ ಇತ್ತು...ಎಚ್ಚರವಾಗಿ ನೋಡಿದರೆ..ಆಗ್ಲೇ ಬೆಳಗಿನ ಜಾವ ೪.೩೦.....ಆಹಾ ಎಂತಹ ಮಾತುಗಳು ಅಜ್ಜಯ್ಯನದು...ಎದ್ದು ಅವರ ಸುತ..ನಮ್ಮ ಅಪ್ಪನ ಫೋಟೋಗೆ ನಮಸ್ಕರಿಸಿ ಅಜ್ಜಯ್ಯ..ನಮ್ಮ ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಿ....ಕಂಡಿತ ಎಲ್ಲರನ್ನು ಸೇರಿಸುತ್ತೇನೆ..ಮಾತಾಡೋಣ...