Monday, October 19, 2020

ಅಮ್ಮ ಎನ್ನುವ ದೈತ್ಯ Server ಲಾಗ್ ಆಫ್ ಆದ ದಿನ

ಬರ್ತಾ ಇದ್ದೀನಿ.. ಅಂದ ಅಣ್ಣ.. 

ನಾನೂ ಹೊರಟೆ ಅಂದೇ ನಾನು... 

ಮನೆ ಹತ್ತಿರ ಬೈಕ್ ನಿಲ್ಲಿಸಿ ಲಗುಬಗೆಯಿಂದ ಮನೆಯೊಳಗೇ ಓಡಲು ಶುರು ಮಾಡಿದೆ.. ಮೆಟ್ಟಿಲು ಹತ್ತಿರಾನೇ ಮುರುಳಿ ಕಂಡು ತಲೆ ಅಲ್ಲಾಡಿಸಿದ.. 

ಮನದೊಳಗೆ ಒಂದು ತಂತಿ ಸಣ್ಣಗೆ ಮಿಡಿಯಿತು.. ಏನೋ ಅನಾಹುತವಾಗಿದೆ ಅಂತ ಅರಿವಾಯಿತು.. 

ಭಾರವಾದ ಹೆಜ್ಜೆಗಳಿಂದ ಮೊದಲನೇ ಮಹಡಿಗೆ ಬಂದೆ.. 

ಹೃದಯ ಒಡೆದು ಹೋಗುವಂತಹ ಅಳು.. ಅಕ್ಕ ಆ ರೀತಿ ಎಂದೂ ಅತ್ತಿದ್ದು ನೋಡಿರಲಿಲ್ಲ.. ಕೇಳಿರಲಿಲ್ಲ.. ತಾಯಿಯನ್ನು ತಾಯಿಯಂತೆ  ನೋಡಿಕೊಂಡಿದ್ದ ಅಕ್ಕನ ಮನಸ್ಸು ಅಕ್ಷರಶಃ ಕಣ್ಣೀರಾಗಿ, ಅಳುವಾಗಿ ಹೊರಬರುತ್ತಿತ್ತು.. 

ಅಲ್ಲಿ ನಿಲ್ಲಲಾರದೆ ಕೆಳಗೆ ಆಂಬುಲೆನ್ಸ್ ಬಳಿ ಬಂದೆ.. ಅಲ್ಲಿಂದ ಮೆಲ್ಲಗೆ ಮಂಚದ ಮೇಲೆ ಮಲಗಿಸಲು ಎತ್ತಿ ತರುವಾಗ ಅಮ್ಮನ ಕೈಗಳು ಅಚಾನಕ್ ಚಲನೆ ಬಂದ ಹಾಗೆ ಭಾಸವಾಯಿತು.. 

ಅದೇ ಉತ್ಸಾಹಭರಿತ ಮುಖ.. ಆದರೆ ಅಲ್ಲಿ ಜೀವ ಮಾತ್ರ ಇರಲಿಲ್ಲ.. 

ತಾನು ಇಷ್ಟಪಡುತ್ತಿದ್ದ ಹಿರಿಯರನ್ನು, ಕಿತ್ತಾನೆಯ  ಕಿರಿ ಹಿರಿಯರನ್ನು,  ತನ್ನ ಪತಿರಾಯನನ್ನು, ತನಗೆ ಎರಡನೇ ತಾಯಿ ಎನಿಸಿಕೊಂಡಿದ್ದ ತನ್ನ ಅತ್ತೆಯನ್ನು ಸೇರಲು ಹೊರಟೇಬಿಟ್ಟಿದ್ದರು.. 

ಅಮ್ಮ ಎನ್ನುವ ಪದದ ಅರ್ಥ ನನಗೆ ಅರ್ಥವಾದದ್ದು ಬಾಲ್ಯದಲ್ಲಿ.. ಹೊಟ್ಟೆ ಹಸಿದು, ನೆಲಕ್ಕೆ ಹೊಟ್ಟೆ ತಾಗಿಸಿಕೊಂಡು ಹಸಿವನ್ನು ಮರೆಮಾಚುವ ಪ್ರಯತ್ನ ಮಾಡುತಿದ್ದಾಗ, ಹಸಿದ ಹೊಟ್ಟೆಗೆ ಒಂದಷ್ಟು ತಿಂಡಿ ತರುತ್ತಾರೆ ಎನ್ನುವ ಕಾಯುವಿಕೆಯಲ್ಲಿ.. 

ಸಾಹಸ, ಛಲದ ಜೀವನ, ವಿಧಿಯ ಆಟಕ್ಕೆ ತಲೆಬಾಗದೆ.. ತನ್ನ ಪತಿರಾಯನ ಹೆಗಲಿಗೆ ಹೆಗಲು ಕೊಟ್ಟು ತನ್ನ ನಾಲ್ಕು ಮಕ್ಕಳನ್ನು ಯಾರ ಹಂಗು ಇಲ್ಲದಂತೆ ಬೆಳೆಸಿ.. ತನ್ನ ಅತ್ತೆ ಅರ್ಥಾತ್ ತನ್ನ ಪತಿದೇವರ ಅಮ್ಮನ ಹೇಳಿದಂತೆ.. ನನ್ನ ಮಗನನ್ನು ನನ್ನ ಮೊಮ್ಮಕ್ಕಳನ್ನು ಯಾರ ಮನೆ ಬಾಗಿಲಿಗೂ ಕಳಿಸದೆ ಸಾಕಬೇಕು ಎಂದು ಹೇಳಿದ ಮಾತು.. ವಿಶಾಲೂ ನನ್ನ ಮಗನೂ ಸೇರಿದಂತೆ ನಿನಗೆ ಐದು ಮಕ್ಕಳು..  ಅವರ ಜವಾಬ್ಧಾರಿ ನಿನದು ಎಂದು ಭಾಷೆ ತೆಗೆದುಕೊಂಡಿದ್ದನ್ನು ಅಮ್ಮ ಸದಾ ಹೇಳುತ್ತಿದ್ದರು.. 

ಸಾಹಸ ಎಂದರೇನು, ಬದುಕು ಎಂದರೇನು.. ಇದನ್ನು ನಾ ನೋಡಿ ಕಲಿತದ್ದು ಅಮ್ಮನಿಂದ.. ಜೀವನದಲ್ಲಿ ಕಿರುಚಾಡದೆ, ಕೂಗಾಡದೆ.. ಎಲ್ಲರ ಮುಂದೆ ತಲೆ ಎತ್ತಿ ನಿಲ್ಲುವುದನ್ನು ಕಲಿಸಿದ ಅಮ್ಮ ಎಂದು ಗಗನತಾರೆಯಾಗಿದ್ದಾರೆ.. 

ಚಾಮರಾಜಪೇಟೆಯ ಟಿ ಆರ್ ಮಿಲ್ ರುದ್ರಭೂಮಿಯಲ್ಲಿ ಚಿತೆಯನ್ನು ಸಿದ್ಧಪಡಿಸಿ ಅಂತ್ಯ ಸಂಸ್ಕಾರ ನೆರೆವೇರಿಸಿದೆವು.. ಚಿತೆ ಧಗ ಧಗ ಉರಿಯುತ್ತಿತ್ತು.. ಹಾಗೆ ಉರಿಯುತ್ತಿದ್ದ ಚಿತೆಯನ್ನು ನೋಡುತ್ತಾ  ಸ್ವಲ್ಪ ಹೊತ್ತು ನಿಂತಿದ್ದೆ.. 

ಚಿತೆಯೊಳಗೆ ಮಲಗಿದ್ದ ಅಮ್ಮ.. "ಶ್ರೀಕಾಂತಾ ಇದು ಬೆಂಕಿಯಲ್ಲ.. ನನ್ನ ಬಾಲ್ಯದಿಂದಲೂ ಹತ್ತಿ ಉರಿಯುತ್ತಿರುವ ಉತ್ಸಾಹದ ಜ್ಯೋತಿಯಿದು.. ಈ ಬೆಳಕಿನಲ್ಲಿ ನನ್ನ ಬದುಕನ್ನು ನಿನ್ನ ಅಪ್ಪನ ಜೊತೆ ಹೆಜ್ಜೆ ಹಾಕುತ್ತಾ ಸಾಗಿದೆ.. ಇಂದು ಆ ಜ್ಯೋತಿ ಜ್ವಾಲೆಯಾಗಿ ನನ್ನ ಭೌತಿಕ ಶರೀರವನ್ನು ದಹಿಸುತ್ತಿರಬಹುದು.. ಆದರೆ ಇದು ನನ್ನ ಸುಡುತ್ತಿಲ್ಲ.. ಬದಲಿಗೆ ನಿಮ್ಮ ಜೀವನದ ಹಾದಿಗೆ ಬೆಳಕಾಗಿರುತ್ತದೆ.. 


"ಒಂದೆರಡು ಕಣ್ಣೀರ ಹನಿಗಳು ಜಾರಬಹುದು.. ಆದರೆ ಈ ಜ್ಯೋತಿ ಎಂದಿಗೂ ನಂದಿ ಹೋಗದು.." 

"ನನ್ನ ಆಶೀರ್ವಾದ ಅನುಗ್ರಹ ಸದನದ ಮೇಲೆ ಸದಾ ಇರುತ್ತದೆ.. ನನ್ನ ಎಲ್ಲಾ ಮಕ್ಕಳೂ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದೀರಾ ನಿಮಗೆ ಸದಾ   ಒಳ್ಳೆಯದೇ ಆಗುತ್ತದೆ.. "

ತಲೆ ಎತ್ತಿ ಆಗಸ ನೋಡಿ.. ನಕ್ಷತ್ರದ ಬೆಳಕಲ್ಲಿ ನಾ ಇರುತ್ತೇನೆ ಎಂದು ಹೇಳುತ್ತಾ ಆ ಜ್ಯೋತಿಯಲ್ಲಿ ಜ್ವಾಲೆಯಾಗಿ ಆಗಸಕ್ಕೆ ಸಾಗಿದರು.. !

ಅಮ್ಮ.. ನಿನ್ನ ತ್ಯಾಗಕೆ ಸರಿಸಾಟಿ ಯಾರೂ ಇಲ್ಲ ಎಂದಿತು ಒಂದು ಧ್ವನಿ.. 

ಸಾವಿರ ನದಿಗಳು ಸೇರಿದರೇನು ಸಾಗರಕೆ ಸಮನಾಗುವುದೇನು.. 

ಶತಕೋಟಿ ದೇವರ ಪೂಜಿಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು.. 

ತಾಯಿಗೆ ಆನಂದ ತಂದರೆ ಸಾಕು ಬೇರೆ ಪೂಜೆ ಏತಕೆ ಬೇಕು.. 

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಬಾಳಲೆ ಬೇಕು ಈ ಮನೆ ಬೆಳಕಾಗಿ!!!!

25 comments:

  1. Doddamma really miss you and loved you. Bless all of us.

    ReplyDelete
  2. RIP 🙏🙏🙏 Vishalu Atte was very kind hearted and caring. Can’t believe

    ReplyDelete
  3. ಅವರ ಆತ್ಮಕ್ಕೆ ಶಾಂತಿ ಸಿಗಲಿ

    ReplyDelete
  4. Sorry to hear this news..may you have the strength to cope with this loss

    ReplyDelete
  5. Amma nimma atmakke shanthi sigalendu haraisi mattu nanna tammanige samadhana dhairya kodalendu devaralli prarthisuttene😪😪😪😪

    ReplyDelete
  6. ಓಂ ಶಾಂತಿ,,,, ನಮನಗಳು

    ReplyDelete
  7. Sorry to hear about this. May her soul find the peace it wishes for. My condolences to you and your family.

    ReplyDelete
  8. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ..

    ReplyDelete
  9. Amma nimage yaru saati illa, e jeevana nimma bikshe, namma jeevanakke artha endhare adhu tandhe, taayi indha mathra saadhya, antha Devaru Saamaana vyakti nammanu agalidhre a novu thumbalu assadhya. Devaru ammana athmakke shaanthi nidali, a novannu barisu shakthi nidali. 🙏🙏🙏

    ReplyDelete
  10. Prathi kshana avlan nensdagela yeno kushi, jothe edrea adru sukanea bere, Nijvaglu anna nimasht dharya ella nangea, Devru oled maadli nimge.

    ReplyDelete
  11. ಮಾತೃವಿಯೋಗ ಅತ್ಯಂತ ದುಃಖದ ಸಂಗತಿ. ತಾಯಿ ಎಷ್ಟು ದಿನ ಇದ್ದರೂ ಬೇಕೇ ಹೊರತು ಸಾಕು ಎನುಸುವುದಿಲ್ಲ. ಅದರಲ್ಲೂ ಸ್ನೇಹಮಯಿಯಾದ ಕಾರುಣ್ಯಪೂರ್ಣವಾಗಿ ಕಷ್ಟದ ಬೇಗೆಯಲ್ಲಿ ಬೆಂದು ಮಕ್ಕಳನ್ನು ದಡ ಸೇರಿಸಿ ಸಂತೃಪ್ತ ಭಾವದಲ್ಲಿ ನಿರಾಳವಾಗಿ ದೇಹ ತ್ಯಾಗ ಮಾಡಿದ ಜೀವಕ್ಕೆ ಎಷ್ಟು ನಮನ ಸಲ್ಲಿಸಿದರೂ ಕಡಿಮೆಯೇ. ಪುತ್ರ ಶೋಕಮ್ ನಿರಂತರಂ ಎನ್ನುವ ಮಾತು ನಿಜ ಆದರೆ ಮಾತೃಶೋಕವು ಹಾಗೆ ಕೆಲವರ ಪಾಲಿಗೆ. ಅಮ್ಮನ ನೆನಪೆ ಸಾಕು, ಮಾರ್ಗದರ್ಶನಕ್ಕೆ. ವಾತ್ಸಲ್ಯ ಮಯಿಯಾದ ಅಮ್ಮನಿಗೆ ಸದ್ಗತಿ ಸಿಗಲೆಂದು ಬಿಡುತ್ತೇನೆ.

    ReplyDelete
  12. ಸಿಕ್ಕಿದಾಗ ಕೇಳಿಕೊಂಡಿದ್ದೆ ಮನೆಗೆ ಕರೆದುಕೊಂಡು ಬಾನನ್ನ ಅಮ್ಮನಾ ಭೇಟಿಯಾಗಿ ಮಾತನಾಡಿಸಲಿ ಅಂತ...

    ReplyDelete
  13. Kittane yendare jeva bidutida boberamayanavara pritiya momagalu krishnappa mathu shankrappanava prithiya sose kittane boberamayanavara kutumbada hiriya jiva namelaranu nene bitu e haloka thegisidare edu boberamayanavara kutumbake thumbalarad nasta om shanti

    ReplyDelete
  14. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ .......ಓಂ ಶಾಂತಿ

    ReplyDelete
  15. ನಿಮ್ಮ ಮಾತೃಶ್ರೀ ಅವರ ಆತ್ಮಕ್ಕೆ ಶಾಂತಿ ದೊರಕಲಿ...🙏🙏🙏

    ReplyDelete
  16. No words Sri. ಅಮ್ಮನ ಆಶೀರ್ವಾದ ಅಮ್ಮನ ಹರಕೆ ನಿಮ್ಮೊಟ್ಟಿಗೆ ಸದಾ ಇರುತ್ತದೆ. ಚಿರನಿದ್ರೆಗೆ ಜಾರಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ. 🙏🙏🙏

    ReplyDelete
  17. ವಿಶಾಲವಾದ ಹೃದಯದ ವಿಶಾಲು, ಎಂತಹ ಸಂದರ್ಭದಲ್ಲೂ ಬಂದ ಕಷ್ಟಕಾರ್ಪಣ್ಯಕ್ಕೂ ಜಗ್ಗದ ಸಾಹಸಿ, ಮಕ್ಕಳನ್ನು ಮಮತೆಯಿಂದ, ಬಂಧುಗಳನ್ನು ಆದರಣೀಯವಾಗಿ ಕಾಣುವ ಕರುಣಾಮಯಿ, ನೀನೆಂದರೆ ಪ್ರೀತಿ ವಾತ್ಸಲ್ಯದ ಖಣಜ, ನೀನಿಲ್ಲದೆ "ಅನುಗ್ರಹ ಸದನ"
    ಬಿಕೋ ಎನ್ನುತ್ತಿತ್ತು. ಸಾದಾ ನಗುನಗುತ್ತಿದ್ದ ಮನೆಯಿಂದು ನೀರವಮೌನವಾಗುತದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ.
    ಆದರೂ ನನ್ನ ಮನಸ್ಹೇಳುತ್ತಿದೆ ಆ ಸದನದಲ್ಲಿ ಮಕ್ಕಳಿಗೆ ಆದರ್ಶ ಮಾತೆಯಾಗಿ,ಆ ಕುಟುಂಬದ ಸಾರಥಿಯಂತೆ ಧೈರ್ಯ, ಹಾಗೂ ಮಾರ್ಗಸೂಚಿಯಾಗಿರುತ್ತೀಯಾ ಎಂಬ ಅಚಲವಾದ ನಂಬಿಕೆ ಇದೆ.
    ಆದರೂ ಸಹ ನಮ್ಮನ್ನೆಲ್ಲಾ ಬಿಟ್ಟು ಅಗಲಿದ ನಿನ್ನ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
    ಹೆಚ್.ಎನ್.ರಾಮಮೂರ್ತಿ ಮತ್ತು ಕುಟುಂಬವರ್ಗ

    ReplyDelete
  18. ಅವರ ಆತ್ಮಕ್ಕೆ ಶಾಂತಿ ಸಿಗಲಿ.

    ReplyDelete
  19. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ತಮ್ಮೆಲ್ಲರಿಗೂ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ.

    ReplyDelete