Saturday, September 2, 2017

ಪ್ರಥಮಂ ವಕ್ರತುಂಡಂಚ ......................ಮುಂದುವರೆದಿದೆ - ಎರಡನೇ ಭಾಗ

ಪ್ರಥಮಂ ವಕ್ರತುಂಡಂಚ... ಅದ್ಭುತ ಅನುಭವಕ್ಕೆ ಮುನ್ನುಡಿಯಾಗಿ ವಿಮಾನ ಜರ್ ಅಂತ ಶುರುವಾಯಿತು.. !!! (ಮೊದಲ ಭಾಗ ಈ ಕೊಂಡಿಯಲ್ಲಿದೆ)

ಒಳಗೆ ಕೂತಿದ್ದೆ.. ಅಕ್ಕ ಪಕ್ಕದ ಸಹಪಯಣಿಗರು  ಬಂದು ಕೂತರು.. ನಾ ಮಧ್ಯೆ.. ನೋಡಿದರೆ.. ಇಬ್ಬರೂ ಹುಡುಗಿಯರೇ.. ನಾ ಗಗನಸಖಿಯ ಬಳಿ ಸೀಟು ಬದಲು ಮಾಡೋಣ ಎಂದುಕೊಂಡೆ.. ಅಷ್ಟರಲ್ಲಿ ಒಂದು ಹುಡುಗಿ ತನ್ನ ಪ್ರಿಯಕರನ ಪಕ್ಕದ ಸೀಟಿನಲ್ಲಿ ಕೂತು... ಅವಳ ಜಾಗದಲ್ಲಿ ಇದ್ದವ ನನ್ನ ಪಕ್ಕದಲ್ಲಿ ಕೂತ.. ಮನಸ್ಸು ನಿರಾಳವಾಯಿತು.. ಪಕ್ಕದಲ್ಲಿ ಕೂತಿದ್ದ ಇನ್ನೊಬ್ಬ ಹುಡುಗಿ.. ಗಗನಸಖಿ ಕೊಟ್ಟಿದ್ದ ಚಾದರ್ ಹೊದ್ದು ನಿದ್ದೆಗೆ ಜಾರಿದಳು.. ಮನಸ್ಸು ಇನ್ನೂ ನಿರಾಳವಾಯಿತು.. !!!

ಬೆಳಗಿನ ಜಾವ.. ಹೊಟ್ಟೆ ಚುರುಗುಟ್ಟುತ್ತಾ ಇತ್ತು.. ಚಿಟ್ಟೆಗಳಿದ್ದವು ಅಲ್ಲವೇ.. ಅವಕ್ಕೂ ಊಟ ಬೇಕಿತ್ತು :-).. ಮೊದಲ ಬಾರಿಗೆ ಹೊರದೇಶಕ್ಕೆ ಪಯಣ.. ಮೂರನೇ ಬಾರಿಗೆ ವಿಮಾನದಲ್ಲಿ ಕೂತಿದ್ದು.. ಟಿವಿ ಕೈಕೊಟ್ಟಿತ್ತು.. ಟಚ್ ಸ್ಕ್ರೀನ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.. ರಿಮೋಟ್ ಕೈಕೊಟ್ಟಿತ್ತು.. ಅಥವಾ ನನಗೆ ಅದನ್ನು ಸರಿಯಾಗಿ ಉಪಯೋಗಿಸಲು ಬರಲಿಲ್ಲ ಅನ್ನಿಸುತ್ತೆ..

ಉಪಹಾರ.. ಮುಗಿಯಿತು.. ಕಾಫಿ ಕಪ್ ಕೈಗೆ ತಗೊಂಡೆ.. ನಸು ಬೆಳಕು.. ನನಗೆ ವಿಮಾನದಲ್ಲಿ ಕಾಫಿ ಕುಡಿಯುತ್ತಿದ್ದೀನಿ ಎನ್ನುವ ಖುಷಿ.. ಯಾಕೋ ಕಣ್ಣು ಪಕ್ಕಕ್ಕೆ ಹರಿಯಿತು.. ಆ ಹುಡುಗಿ ಕೈಯಲ್ಲಿ ವೋಡ್ಕಾ ಹಿಡಿದಿದ್ದಳು.. ಒಂದೇ ಗುಟುಕಿಗೆ ಕಾಫಿ ಹೊಟ್ಟೆ ಸೇರಿತು.. ಮತ್ತೆ ಆ ಕಡೆ ನೋಡಲಿಲ್ಲ (ಮಹಿಳೆಯರು.. ಕುಡಿಯಬಾರದು.. ಕೆಟ್ಟದ್ದು ಎನ್ನುವ ಭಾವವಲ್ಲ .. ಹಿಂದಿನ ಕಂಪೆನಿಗಳಲ್ಲಿ ಕೆಲಸ ಮಾಡುವಾಗ.. ಪಾರ್ಟಿಗಳಲ್ಲಿ ಇದೆಲ್ಲಾ ಮಾಮೂಲಿನ ದೃಶ್ಯಗಳಾಗಿತ್ತು.. ಆ ಕ್ಷಣ ಹೆಮ್ಮೆಯಿಂದ ಕಾಫಿ ಕುಡಿಯುತ್ತಿದ್ದ ರೀತಿಗೆ ಜರ್ ಅಂಥಾ ಇಳಿಯಿತು ಅಷ್ಟೇ)

ವಿಮಾನ ಎಲ್ಲಿಗೆ ಸಾಗುತ್ತಿದೆ, ಎಷ್ಟು ಎತ್ತರದಲ್ಲಿ ಹಾರುತ್ತಿದೆ.. ಹವಾಮಾನ, ಮುಗಿಲಲ್ಲಿ ಮೋಡಗಳ ಮೇಲೆ ಹಾರಾಡುವ ದೃಶ್ಯ.. ಎದುರು ಇದ್ದ ಟಿವಿಯಲ್ಲಿ ಬಿತ್ತರಗೊಳ್ಳುತ್ತಿತ್ತು.. ಪ್ರತಿಯೊಂದು ವಿವರವನ್ನು ಓದುತ್ತಿದ್ದೆ.. ಪರೀಕ್ಷೆಗೆ ಓದುವ ವಿದ್ಯಾರ್ಥಿಯಂತೆ..
ಖುಷಿಯಾಗುತ್ತಿತ್ತು ಮನಸ್ಸಿಗೆ.. ಬೆಂಗಳೂರಿನಲ್ಲಿ ಸಮಯವೆಷ್ಟು.. ನಾ ಇಳಿಯುವ ಮೊದಲ ತಾಣದಲ್ಲಿ ಸಮಯವೆಷ್ಟು.. ಹವಾಮಾನ ಹೇಗಿದೆ ಇದನ್ನೆಲ್ಲಾ ನೋಡುತ್ತಾ.. ನನ್ನ ಕೈಗಡಿಯಾರವನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತಿದ್ದೆ..

ಮತ್ತೆ ಊಟ ಬಂತು.. ಚಿಟ್ಟೆಗಳು ಹೊರ ಬರುವ ಪ್ರಯತ್ನ ಮಾಡುತ್ತಿದ್ದವು.. ತಡೆ ಹಿಡಿದೆ..... ಈಗ ವಿಮಾನ ದೋಹಾದಲ್ಲಿ ಇಳಿಯುತ್ತಿದೆ.. ಸಮಯ ಇಷ್ಟು.... ಮುಂದಿನ ಪಯಣ ಶುಭಕರವಾಗಿರಲಿ ಎನ್ನುವ ಹಾರೈಕೆಗಳು ಕೇಳಿಬಂದವು..

ನಾ ನನ್ನ ಕೈಚೀಲ ಹಿಡಿದು ಹೊರಗೆ ಬಂದೆ.. ಎರಡು ಘಂಟೆಗಳು ಕಾಯಬೇಕಿತ್ತು.. ಆದರೆ ಅದು ಟಕ್ ಅಂತ ಓಡುತ್ತೆ ಅಂತ ಗೊತ್ತಿತ್ತು..ಕಾರಣ .. ವಿದೇಶದ ನೆಲದಲ್ಲಿ ಕಾಲಿಟ್ಟಿದ್ದೆ.. ಮನಸ್ಸು ಹಕ್ಕಿಯಾಗಿತ್ತು ..

ನಾ ಆರಾಮಾಗಿ ಇರೋಣ.. ಬಿಲ್ಡ್ ಅಪ್ ಬೇಡ ಅಂತ... ಸಾಮಾನ್ಯ ಜೀನ್ಸ್, ಟೀ ಶರ್ಟ್.. ಬೆಂಗಳೂರಿನಲ್ಲಿ ಚಳಿಯ ತಡೆದುಕೊಳ್ಳಲು ನನ್ನ ಸಹೋದರಿಯೊಬ್ಬಳು ಕೊಟ್ಟಿದ್ದ ಜರ್ಕಿನ್.. ಕಾಲಲ್ಲಿ ಫ್ಲೋಟರ್ (ಸ್ಲಿಪ್ಪರ್) ಇತ್ತು.. ಎಷ್ಟು ಸರಳವಾಗಿ ಇರಬೇಕಿತ್ತೋ ಅಷ್ಟುಸರಳವಾಗಿದ್ದೆ .. ಬೇಡದ ಅಹಂ ತಲೆಗೆ ಇರಬಾರದು ಅನ್ನುವ ಉದ್ದೇಶ ಮಾತ್ರ ತಲೆಯೊಳಗೆ ಇತ್ತು..

ದೋಹಾ ವಿಮಾನ ನಿಲ್ದಾಣದಲ್ಲಿ  ಇಳಿದು.. ವೈಫೈ ಸಿಕ್ಕಿದ ಮೇಲೆ.. ಮನೆಗೆ ಕರೆ ಮಾಡಿ ಹೇಳಿದೆ.. ಅವತ್ತು ಸವಿತಾ ಮತ್ತು ಶೀತಲ್.. ಒಂದು ಗೃಹ ಪ್ರವೇಶಕ್ಕೆ ಹೋಗಿದ್ದರು .. ಬಂಧು ಬಾಂಧವರ ಭೇಟಿ.. ಇಬ್ಬರಿಗೂ ಖುಷಿ ಕೊಟ್ಟಿತ್ತು ಅಂತ ಶೀತಲ್ ಮೆಸೇಜ್ ಮಾಡಿದ್ದಳು.. ಜೊತೆಯಲ್ಲಿ ಇಬ್ಬರೂ ಖುಷಿಯಾಗಿದ್ದಾರೆ ಎನ್ನುವ ಸಮಾಚಾರ ನನ್ನ ಮನಸ್ಸಿಗೆ ಸಮಾಧಾನ ನೀಡಿತು.. ಜರ್ಮನಿಗೆ ತಲುಪಿದ ಮೇಲೆ ಕರೆ ಮಾಡಿ ಅಂತ ಹೇಳಿದರು..
ವಿನ್ಯಾಸ ಮತ್ತು ಕಲೆ ಇಷ್ಟವಾಯಿತು 

ನಿಲ್ದಾಣದ ಒಂದು ಕಿರು ನೋಟ 

ದೋಹಾದ ವಿಮಾನ ನಿಲ್ದಾಣ ದೊಡ್ಡದಾಗಿತ್ತು.. ಅಲ್ಲಿನ ವಿನ್ಯಾಸ ಮನಸ್ಸಿಗೆ ಖುಷಿ ಕೊಡ್ತಾ ಇತ್ತು.. ಒಂದೆರಡು  ಸೆರೆ ಹಿಡಿದೆ .. ಅದರಲ್ಲಿ ಈ ಕೆಳಗಿನ ಚಿತ್ರ ಇಷ್ಟಆಯಿತು .. ಈ ಚಿತ್ರದ  ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ..

ಯಾಕೋ ಕಾಣೆ ಇಷ್ಟವಾಯಿತು..  ಮುಂದಿನ ದಿನಗಳ ಭವಿಷ್ಯ ಹೇಳುತ್ತಿತ್ತೇ?

ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು.. ಒಂದು ಪುಟ್ಟ ಟ್ರಾಮ್ .. ಅದು ಎತ್ತರದಲ್ಲಿ (ಸರಿಯಾದ ಹೆಸರು ಗೊತ್ತಿಲ್ಲ ಹಾಗಾಗಿ ಟ್ರಾಮ್ ಅಂತ ಹೇಳಿದ್ದೀನಿ)

ಹೊಸ ಹೊಸ ಬದಲಾವಣೆಗಳಿಗೆ ಮತ್ತು ವಸ್ತು ಸ್ಥಿತಿಗೆ ಮನಸ್ಸು ಮತ್ತು ದೇಹ ಹೊಂದಿಕೊಳ್ಳುತ್ತಿತ್ತು..

ದೋಹಾದಿಂದ ಫ್ರಾಂಕ್ಫರ್ಟ್  (Frankfurt) ಗೆ ಹೋಗುವ ವಿಮಾನದಲ್ಲಿ ಕುಳಿತಾಗ.. ರಿಮೋಟ್ ಕೆಲಸ ಮಾಡುತ್ತಿತ್ತು.. ಟಚ್ ಸ್ಕ್ರೀನ್ ಆರಾಮಾಗಿತ್ತು.. ಪಕ್ಕದಲ್ಲಿ ಅಕ್ಕ ಪಕ್ಕದಲ್ಲಿ ಇಬ್ಬರೂ ಹುಡುಗರು... ಮನಸ್ಸು ರಿಲಾಕ್ಸ್ ಆಯಿತು..

"ಅಬ್ ತಕ್ ಚಪ್ಪನ್" ಸಿನಿಮಾ ನೋಡಿದೆ.. ನನ್ನ ಚಾರಣ ಸ್ನೇಹಿತ ಯಶದೀಪ್ ಸಂತ್ .. ನನಗೆ ಹೇಳುತ್ತಲೇ ಇದ್ದ.. ಶ್ರೀ ನೀನು ಈ ಸಿನಿಮಾ ನೋಡಬೇಕು ಅಂತ.. ಬಯಸದೆ ಬಂದ ಭಾಗ್ಯ.. ಸಿನಿಮಾ ತುಂಬಾ ಸೊಗಸಾಗಿತ್ತು.. ನಾನಾ ಪಾಟೇಕರ್ ಸಿಕ್ಕಾಪಟ್ಟೆ ಇಷ್ಟ ಆಗ್ತಾರೆ.. ಸೀರಿಯಸ್ ಸಿನಿಮಾ.. ಇಷ್ಟವಾಯಿತು...

ಫ್ರಾಂಕ್ಫರ್ಟ್ ಬಂತು ಅಂತ ಸಂದೇಶ.. ಅಬ್ಬಾ ಅಂತೂ ಬೆಳಿಗ್ಗೆ ಮೂರು ಘಂಟೆಯಿಂದ ಹೊರಟಿದ್ದ ಪಯಣ.. ಇನ್ನೇನು ಮುಗಿಯುವ ಹಂತಕ್ಕೆ ಬಂದಿತ್ತು..

ನಿಧಾನವಾಗಿ ಹೊರಬರಲು ಪ್ರಯತ್ನಮಾಡುತ್ತಿದ್ದ ಚಿಟ್ಟೆಗಳನ್ನು ಮತ್ತೆ ಹೊಟ್ಟೆಯೊಳಗೆ ಅದುಮಿ.. ನನ್ನ ಬ್ಯಾಗ್ ತೆಗೆದುಕೊಂಡು ಫ್ರಾಂಕ್ಫರ್ಟ್ ನಿಲ್ದಾಣದ ಬಾಗಿಲಿಗೆ ಬಂದೆ.. ಅಲ್ಲಿ ಕಂಡ ದೃಶ್ಯ ಮನಸ್ಸೆಳೆಯಿತು... ಜೀವನದಲ್ಲಿ ಕುತೂಹಲಿಗಳಾಗಿ.. ವಾಹ್ ಅದ್ಭುತ ವಾಕ್ಯ... !
ಕುತೂಹಲವೇ ಜೀವನ ಅಲ್ಲವೇ.. ನಾಳೆ ಎಂದು ಎಂಬ ಕುತೂಹಲ!!! 
ತಾಂತ್ರಿಕ ಕಾರಣಗಳಿಂದ ನನ್ನ ಸಿಮ್ ಕೆಲಸ ಮಾಡುತ್ತಿರಲಿಲ್ಲ.. ಹಾಗಾಗಿ  ನಿಲ್ದಾಣದ ವೈಫೈ ಉಪಯೋಗಿಸಿಕೊಂಡು ನನ್ನ ಆತ್ಮ ಸ್ನೇಹಿತ ಜೆ ಎಂ ಗೆ ವಾಟ್ಸಾಪ್ ಕರೆ ಮಾಡಿದೆ.. (ನನ್ನ ಸ್ನೇಹಿತ ಜರ್ಮನಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಇದ್ದಾನೆ.. ಈ ವಿಷಯ ಚಿಟ್ಟೆಗಳು ಹೊಟ್ಟೆಯೊಳಗೆ ಇರಲು ಸಹಾಯ ಮಾಡಿತ್ತು  :-)

ಅಲ್ಲಿಯೇ ಕುಳಿತು.. ನನ್ನ ಜರ್ಮನಿಯ ಆಫೀಸ್ ನಲ್ಲಿ ನನಗೆ ಆಹ್ವಾನವಿತ್ತ ನನ್ನ ಸಹೋದ್ಯೋಗಿಗೆ ಈ-ಮೇಲ್ ಮಾಡಿದೆ.. ಅವರು ತಕ್ಷಣ ಮರು ಪ್ರತಿಕ್ರಿಯೆ ಮಾಡಿದರು.. ಎಲ್ಲಿ ಹೇಗೆ ಬರಬೇಕು ಎಂದು ವಿವರ ಕೊಟ್ಟಿದ್ದರು.. .. ಇಲ್ಲಿಂದ ಹೊರಗೆ ಬಂದು.. ಒಂದು ಜರ್ಮನಿ ಸಿಮ್ ತೆಗೆದುಕೊಂಡು ಹೊರ ಪ್ರಪಂಚದ ಸಂಪರ್ಕ ಪಡೆದೆ..

ನನ್ನ ಜೀವದ ಗೆಳೆಯನ ಜೊತೆಯಲ್ಲಿ ವಿದೇಶದಲ್ಲಿ
"ರುಚಿ" ಎನ್ನುವ ಹೋಟೆಲಿಗೆ ಹೋಗಿ.. ಪುಷ್ಕಳವಾದ ವೆಜ್-ಬಿರಿಯಾನಿ ತಿಂದ ಮೇಲೆ.. ಹೊಟ್ಟೆಯೊಳಗಿನ ಚಿಟ್ಟೆಗಳು ಸುಮ್ಮನಾದವು.. ಫ್ರಾಂಕ್ಫರ್ಟ್ ಇಂದ ಕಾಸೆಲ್ ಎನ್ನುವ ಜಾಗ ೧೯೬ಕಿಮಿ ದೂರ ಇತ್ತು.... ಇಂಟೆರ್ ಸಿಟಿ ಟ್ರೈನ್ ಹತ್ತಿದೆ..

ನನ್ನ ಸ್ನೇಹಿತ ಜೆ ಎಂನನ್ನು ತಬ್ಬಿದೆ...  ಮತ್ತೆ ಶುಕ್ರವಾರ ಸಿಗ್ತೀನಿ ಎಂಬ ಭರವಸೆ ಕೊಟ್ಟು ಟ್ರೈನ್ ಹತ್ತಿದೆ.. ನಮ್ಮ ಕಂಪೆನಿಯವರೇ ತಯಾರು ಮಾಡುವ ಗ್ಯಾಂಗ್-ವೆ ರೈಲಿನಲ್ಲಿದ್ದು ನೋಡಿ... ಅದನ್ನು ಮುಟ್ಟಿ ಸವರಿ ಖುಷಿ ಪಟ್ಟೆ .. ಟ್ರೈನ್ ಒಂದು ಬೋಗಿಯನ್ನು ಇನ್ನೊಂದು ಬೋಗಿಗೆ ಸೇರಿಸುವುದೇ ಈ ಗ್ಯಾಂಗ್-ವೆ  ... ಮಗುವಿನ ಕುತೂಹಲ ನನ್ನಲ್ಲಿತ್ತು.. ಅದನ್ನು ನೋಡಿದೆ.. ಖುಷಿ ಪಟ್ಟೆ.. ಮುಟ್ಟಿದೆ.. ಅದರ ಫೋಟೋ ತೆಗೆದೆ..
ಸುಂದರ ಭೂ ಪ್ರದೇಶ

ಸುಡುತ್ತಿರುವ ಸೂರ್ಯ... ಸಂಜೆ ಆರು ಘಂಟೆ 

ಗ್ಯಾಂಗ್-ವೆ 

೨೦೦ ಕಿಮಿ ವೇಗದಲ್ಲಿ ಸಾಗುತ್ತಿರುವ ರೈಲಿನ ಒಳಗೆ 
ಟ್ರೈನ್ ೨೦೦ ಕಿಮಿ ವೇಗದಲ್ಲಿ ಓಡುತ್ತಿತ್ತು.. ಈ  ವೇಗ ನನಗೆ ಹೊಸದು.. ಗರ ಗರ ಅಂತ ಓಡುತ್ತಿತ್ತು.. ಸುತ್ತಲ ಪ್ರದೇಶ ರಮಣೀಯವಾಗಿತ್ತು.. ಅಲ್ಲಿನ ಸಮಯ ಸುಮಾರು ಐದು ಘಂಟೆ.. ಆದರೆ ಸೂರ್ಯ ನೆತ್ತಿಯ ಮೇಲಿದ್ದ.. ಹೌದು ಬೇಸಿಗೆಯಲ್ಲಿ ದಿನಗಳು ದೀರ್ಘವಾಗಿರುತ್ತವೆ.. ರಾತ್ರಿ ಸುಮಾರು ಹತ್ತರ ತನಕ  ಬೆಳಕು ಇರುತ್ತೆ.. ಬೆಳಿಗ್ಗೆ ಸುಮಾರು ನಾಲ್ಕು ಘಂಟೆಗೆಲ್ಲ ದಿನಕರ ಬಂದಿರುತ್ತಾನೆ..
ಕಾಸೆಲ್ ನಗರದ ನೋಟ 


ನಾ ಉಳಿದಿದ್ದ ಹೋಟೆಲ್ 
ನಿಗದಿಯಾಗಿದ್ದ ಹೋಟೆಲ್ ಕೋಣೆಗೆ ಬಂದಾಗ ಸಂಜೆ ಏಳು ಘಂಟೆಯಾಗಿತ್ತು.. ಜೆ ಎಂ ಕರೆ ಮಾಡಿದ.. ತಲುಪಿದ ಕ್ಷೇಮ ಸಮಾಚಾರಕ್ಕೆ.. ನಾ ಆರಾಮಾಗಿ ಬಂದದ್ದು ಕೇಳಿ ಖುಷಿ ಪಟ್ಟ...

ನನ್ನ ಲಗ್ಗೇಜ್ ಬ್ಯಾಗಿನಲ್ಲಿದ್ದ ಬಟ್ಟೆಗಳನ್ನೆಲ್ಲ ಕಪಾಟಿನಲ್ಲಿಟ್ಟು.. ಮೋರೆ ತೊಳೆದು.. ಹೋಟೆಲಿನ ಹೊರಗೆ ಒಂದು ಪುಟ್ಟ ಸುತ್ತು ಹೊಡೆದು ಬಂದೆ
ಸಂಜೆ ಒಂದು ಸಣ್ಣ ಸುತ್ತು 

ಕೋಣೆಗೆ ಬಂದು ಮನೆಗೆ ಕರೆ ಮಾಡಿದೆ.. ಆಗಲೇ  ಬೆಂಗಳೂರಿನಲ್ಲಿ ರಾತ್ರಿ ಹನ್ನೊಂದು ಆಗಿತ್ತು... ಸವಿತಾ ಮತ್ತು ಶೀತಲ್ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು.. ತಮ್ಮ ಚಿಕ್ಕಪ್ಪ ಮತ್ತು ಅವರ ಮಕ್ಕಳ ಜೊತೆ ಮನೆಗೆ ಬಂದಿದ್ದರು.. ವಿಡಿಯೋ ಕರೆ ಇಬ್ಬರಿಗೂ ಸಂತಸ ತಂದಿತ್ತು.. ಹೋಟೆಲಿನ ಕೋಣೆಯ ಹೊರಗಿನ ದೃಶ್ಯವನ್ನು ತೋರಿಸಿ ಹೇಳಿದೆ.. ಇನ್ನೂ ಕತ್ತಲಾಗಿಲ್ಲ ಎಂದು.. ಅವರಿಗೆ ಖುಷಿ.. ನನಗೂ ಅವರು ಖುಷಿಯಾಗಿರುವುದ ಕಂಡು ಮನಸ್ಸು ನಿರಾಳವಾಯಿತು..

ಇಬ್ಬರದೂ ಒಂದೇ ಮಾತು.. "ಜೋಪಾನ ಹುಷಾರಾಗಿರಿ.. ಹುಷಾರಾಗಿ ಬನ್ನಿ"

ಅವರಿಗೆ ಶುಭರಾತ್ರಿ ಹೇಳಿ.. ಒಂದು ಸೇಬು ಹಣ್ಣನ್ನು ತಿಂದು.. ಮಲಗಿದೆ..

ಬೆಳಿಗ್ಗೆ ನನ್ನ ಆಫೀಸಿನ ಕೇಂದ್ರ ಕಚೇರಿಗೆ ಹೋಗಬೇಕಿತ್ತು.. ಅಲ್ಲಿನ ಸಹೋದ್ಯೋಗಿಗಳ ಭೇಟಿ.. ಅವರೊಡನೆ ಕೆಲಸ.. ನಾ ಇಲ್ಲಿಗೆ ಬಂದಿದ್ದ ಉದ್ದೇಶ.. ಎಲ್ಲವೂ ಕಣ್ಣ ಮುಂದೆ ಬಂತು.. ಅದೇ ಗುಂಗಿನಲ್ಲಿ ಮಲಗಿದೆ.. ಮೆತ್ತನೆಹಾಸಿಗೆ .. ಮಧುರ ನೆನಪುಗಳು... ಬೆಳಿಗ್ಗೆ ಇಂದ ಪಯಣದ ಆಯಾಸ (????) ಎಲ್ಲವೂ ನಿದ್ರಾ ದೇವಿಯನ್ನು ಬರ ಸೆಳೆದು ಅಪ್ಪಿಕೊಳ್ಳಲು ಸಹಾಯ ಮಾಡಿತು...
ಮುಂದಿನ ಕ್ಷಣಗಳಿಗೆ ಕುತೂಹಲಿಯಾಗಿ!!!
ಮುಂದೆ... ಮುಂದೆ... ಐದು ದಿನದ ಸುಂದರ ಕ್ಷಣಗಳನ್ನು ಬಚ್ಚಿಟ್ಟುಕೊಂಡ ಕಪಾಟನ್ನು ತೆರೆಯಲು ಕೀಲಿ ಕೈ ನನ್ನ ಕಣ್ಣ ಮುಂದೆ ಓಡಾಡುತ್ತಿತ್ತು... ಅದು ಕೈಗೆ ಬಂದ ಕ್ಷಣ... !!!!

15 comments:

  1. ಆಹಾ ಎಂತಹ ವಿವರಣೆ, ನಿಮ್ಮ ಜೊತೆ ನಮ್ಮ ಕಣ್ಣುಗಳೂ ಸಹ ಪ್ರವಾಸದ ದೃಶ್ಯಗಳನ್ನು ಅನುಭವಿಸಿ ನೋಡುತ್ತಿವೆ, ಚಿತ್ರಗಳು ಬಹಳ ಸುಂದರವಾಗಿ ಲೇಖನಕ್ಕೆ ಪೂರಕವಾಗಿವೆ. ಖುಷಿಯಾಯ್ತು ನಿಮ್ಮ ಬರವಣಿಗೆ ಶ್ರೀಕಾಂತ್ ಜಿ

    ReplyDelete
    Replies
    1. ಧನ್ಯವಾದಗಳು ಸರ್.. ನಿಮ್ಮಂತಹ ಓದುಗರ ಅಭಿಪ್ರಾಯವೇ ಬರಹಕ್ಕೆ ಶಕ್ತಿ ನೀಡುತ್ತದೆ..
      ಸುಂದರ ಪ್ರತಿಕ್ರಿಯೆ ನಿಮ್ಮದು..

      Delete
  2. Wonderful description about yur travel experience hope to see d next part of description about Germany.... And pictures are truly mesmerizing , no words, Truly realistic and artistic pictures, Very very good, Keep up d good work Sri

    ReplyDelete
    Replies
    1. Thank you PBS.the narration flows just like that from the experience i had..nice comment.

      Delete
  3. ಪ್ರಯಾಣದ ವಿವರಗಳು ಹಾಗು ಅಲ್ಲಿಯ ಚಿತ್ರಗಳು ಖುಶಿ ಕೊಟ್ಟವು.ಬರವಣಿಗೆ ಆಪ್ತವಾಗಿದೆ.

    ReplyDelete
    Replies
    1. ಆಹಾ ಗುರುಗಳೇ.. ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ ನನಗೆ ಟಾನಿಕ್.. ಧನ್ಯವಾದಗಳು ಗುರುಗಳೇ

      Delete
  4. ಭಾವ, ಭಾಷೆ, ಬರಹ ಗಳಲ್ಲಿ ತಲ್ಲೀನವಾಗಿ ಸ್ಥಳದ ಇಂಚಿಂಚು ಮಾಹಿತಿಯ ಜೊತೆಗೆ ನಿಮ್ಮ ಅನುಭವದ ಖಜಾನೆಯನ್ನೂ ಹಂಚಿಕೊಳ್ಳುವ ರೀತಿಯೇ ಓದುಗರಿಗೆ ಕುತೂಹಲ.. ಅದೇ. ನಿಮ್ಮ ಬರಹಗಳಲ್ಲಿನ ವಿಶೇಷತೆ..
    ವಿಮಾನ ಎಂದರೆ ಇನ್ನೂ ತಲೆಎತ್ತಿ ಆಕಾಶ ನೊಡಿದ್ದೊಂದೇ ಅನುಭವ ಇರುವ ನನಗೆ ನಿಮ್ಮ ವಿಮಾನಯಾನದ ವಿಶ್ಲೇಷಣೆ ನಿಮ್ಮ ಜೊತೆಗೇ ಕಾಫಿ ಸೇವಿಸಿದಷ್ಟು ಹತ್ತಿರವಾಗಿಸಿದ್ದು ಸುಳ್ಳಲ್ಲ..

    ಬರಹ ಮತ್ತು ಭಾವಚಿತ್ರ ನಿಮ್ಮಿಷ್ಟದ ಹಾಗೇ ಆಡಂಬರವಿಲ್ಲದೆ ಅಹಂ ಇಲ್ಲದೆ ಸರಳವಾಗಿಯೇ ಸೆಳೆಯುವಂತಿದೆ..

    ReplyDelete
    Replies
    1. ವಾಹ್.. ಸುಂದರ ಮಾತುಗಳು.. ನಾವು ನೋಡದ ಪ್ರಪಂಚ ಕಾಣುವಾಗ ಮನಸ್ಸು ಹಕ್ಕಿಯ ಹಾಗೆ ಹಾರುತ್ತದೆ.. ಅದನ್ನು ಬರೆದಾಗ ಇನ್ನಷ್ಟು ಸಂತಸ.. ಇಂತಹ ಪ್ರತಿಕ್ರಿಯೆ ಓದಿದಾಗ ಮನಸ್ಸು ಬಾನಾಡಿಯಾಗುತ್ತದೆ..

      ಧನ್ಯವಾದಗಳು ಎಂ ಎಸ್

      Delete
  5. ಪ್ರತಿ ಕ್ಷಣವೂ ಜೀವಿಸಬೇಕು ಎನ್ನುವ ಹಾಗೆ ಪ್ರತಿ ಕ್ಷಣವನ್ನೂ ಸೆರೆಹಿಡಿದು ಸುಂದರವಾಗಿ ವಿವರಿಸಿದ್ದೀರಿ ಶ್ರೀ... ನಿಮ್ಮೊಂದಿಗೆ ನಾವು ಕೂಡ ದೇಶ ಸುತ್ತುತಿದ್ದೇವೆ....
    ಇಷ್ಟವಾಯಿತು...

    ReplyDelete
    Replies
    1. ನಿಮ್ಮ ಪ್ರತಿಕ್ರಿಯೆ ಖುಷಿ ಕೊಡ್ತು DFR... ಜೀವನ ಪಯಣದಲ್ಲಿ ಸಾಗುವಾಗ ಇಂತಹ ಅನುಭವಗಳು ಇನ್ನಷ್ಟು ಸಂತಸ ಕೊಡುತ್ತದೆ

      ಧನ್ಯವಾದಗಳು DFR

      Delete
  6. Beautiful and very realistic description.... Felt we are only @Germany .... Damn good description ....

    ReplyDelete
  7. Delightful write-up..I could factually visualise your journey so far…looking forward for your adventures in Germany..Bring it on! :)

    ReplyDelete