Wednesday, May 8, 2013

ಕೌಶಿಕದ ಅಜ್ಜಯ್ಯ - ಉಸಿರಲ್ಲಿ ಹಸಿರಾದ ಜೀವನ


ದಿನವೂ ಚಂದ್ರನನ್ನು ಕಾಣುವ ಹಂಬಲ ಇದ್ದೆ ಇರುತ್ತೆ 

ಬಾಲ್ಯದಲ್ಲಿ ನಲಿಯುತ್ತಾ ತಾಯಿಯ ಮಡಿಲಲ್ಲಿ ಆಡುತ್ತಾ ನಲಿವ ಮಗುವಿಗೆ ಚಂದಮಾಮನೇ ಜೊತೆಗಾರ 

ಬಾಲ್ಯಾವಸ್ಥೆ ತಲುಪುವ ಹೊತ್ತಿಗೆ ಚಂದಮಾಮನ ಜೊತೆ ತಾಯಿಯ ತುತ್ತು ತಿನ್ನುತ್ತಾ ನಲಿಯುವ ಭಾಗ್ಯ 

ಯೌವನಕ್ಕೆ ಬಂದಾಗ ಜೀವನದ ಆಸೆ ಆಕಾಂಕ್ಷೆಗಳನ್ನು ಗುರಿಯನ್ನು ಚಂದಮಾಮನ ಜೊತೆ ಹಂಚಿಕೊಂಡು ನಲಿಯುವ ಹುಮ್ಮಸ್ಸು 

ದಾಂಪತ್ಯಕ್ಕೆ ಕಾಲಿಟ್ಟಾಗ ಜೀವನದ ಸುಖ ದುಃಖಗಳನ್ನೂ ಚಂದಮಾಮನ ಜೊತೆ ಸಮೀಕರಿಸಿಕೊಳ್ಳುತ್ತಾ ಸುಂದರ ಜೀವನದ ಹೆಜ್ಜೆ ಗುರುತು ಮೂಡಿಸುವ ನೈಪುಣ್ಯತೆ 

ಸಹಸ್ರ ಚಂದ್ರ ದರ್ಶನ ಮಕ್ಕಳ ಕಣ್ಣಲ್ಲಿ ಕಂಡ ಒಂದು ಸುಂದರ ಸರಳ ಜೀವಿ


ಸಹಸ್ರಚಂದ್ರ ದರ್ಶನದ  ಕರೆಯೋಲೆ

ಇವೆಲ್ಲ ಬ್ರಹ್ಮನ ಸುಂದರ ಕಲಾಕೃತಿಯ ಬಗ್ಗೆ ಮನದಾಳದಲ್ಲಿ ಹುಟ್ಟಿದ ಮಾತು!


ಕಳೆದ ಆಗಸ್ಟ್ ತಿಂಗಳಲ್ಲಿ ಭೇಟಿ ಮಾಡಿದಾಗ - ಕೌಶಿಕದ ಅಜ್ಜಯ್ಯ 

ಮೃದುಭಾಷಿ, ಸುಂದರ ಮನಸ್ಸು, ಸುಂದರ ವ್ಯಕ್ತಿತ್ವ, ಮಕ್ಕಳ, ಮೊಮ್ಮಕ್ಕಳ, ಮರಿಮೊಮ್ಮಕ್ಕಳ ಸುಂದರ ಪೀಳಿಗೆಯನ್ನು ಕಂಡ ಸುಮಾರು ತೊಂಭತ್ತೈದು ನವ ಚಿಗುರಿನ ಚೈತ್ರ ಮಾಸವನ್ನು ಕಂಡು ಭೂಮಿತಾಯಿ ಕೂಡಾ ಹೆಮ್ಮೆ ಪಡುವಂತೆ ಸಹನಮೂರ್ತಿಯಾಗಿದ್ದ ಕೌಶಿಕದ ಅಜ್ಜಯ್ಯ ಎಂದೇ ಹೆಸರಾಗಿದ್ದ ಶ್ರೀ ಸೋಮೇಶ್ವರ ಭಟ್ಟ (ಚಿಂತಾಮಣಿ) ಅವರು ತನ್ನ ಮಾತಾ ಪಿತೃಗಳಿಗೂ ಆತ್ಮೀಯ ಸುತರಾಗಿದ್ದರು, ಹಾಗೆಯೇ ಬಂಧು-ಮಿತ್ರರಿಗೆ ಮಾರ್ಗದರ್ಶಕರಾಗಿದ್ದರು. 


ಕ್ಲಾಸಿಕ್ ಚಿತ್ರ .. ತಾರುಣ್ಯದಲ್ಲಿ ಶಂಖದ ದೇವರಭಟ್ಟರ ಮಗ ಶ್ರೀ ಕಿಟ್ಟಣ್ಣ ಅವರ ಜೊತೆಯಲ್ಲಿ 
ಇಂದು ಸಂಜೆ ಸುಮಾರು  ನಾಲ್ಕು ಘಂಟೆ ಆಸು ಪಾಸಿನಲ್ಲಿ ನಮ್ಮೆಲ್ಲರ ಮನಸ್ಸಲ್ಲಿ ಹಸಿರಾಗಿ ಉಳಿದುಕೊಂಡು, ತಮ್ಮ ಉಸಿರನ್ನು ನಮ್ಮ ಜೀವನದ ನಂದನವನಕ್ಕೆ ಪ್ರಾಣವಾಯುವನ್ನಾಗಿಸಿ , ತಮ್ಮ ಹೆಸರನ್ನು, ಗುರುತನ್ನು ಭೂರಮೆಯಲ್ಲಿ ಉಳಿಸಿ ಹೊರಟು ಬಿಟ್ಟರು.

ನನ್ನ ಅಣ್ಣನ ಮಗಳ ಮೊದಲ ವರ್ಷದ ಸಂಭ್ರಮದಲ್ಲಿ ಅನೀರೀಕ್ಷಿತವಾಗಿ ಬಂದು ನನ್ನ ಅಪ್ಪ ಅಮ್ಮನನ್ನು ಹರಸಿದ್ದು ಕಣ್ಣಿಗೆ ಕಟ್ಟಿದಂತಿದೆ. ಕೆಲವು ತಿಂಗಳ ಹಿಂದೆ ನಮ್ಮ ಮನೆಯ ಪರಿವಾರ ಅಜ್ಜಯ್ಯನನ್ನು ಕಂಡು ಮಾತಾಡಿಸಿ ಆಶೀರ್ವಾದ ಪಡೆದ ನೆನಪು ಇನ್ನು ಬೆಟ್ಟದ ತಪ್ಪಲಲ್ಲಿ ಬೆಳೆದ ಹುಲ್ಲಿನಂತೆಯೇ ಹಸಿರಾಗಿದೆ.


ನಮ್ಮ ಕುಟುಂಬ ಅವರೊಡನೆ ಕಳೆದ ಒಂದು ಸುವರ್ಣ ನೆನಪು 
ಅವರ ಮಾರ್ಗದರ್ಶನ, ಅವರು ಜೀವನ ಸಾಗಿಸಿದ ಹಾದಿಯಲ್ಲಿ ನೆಡೆದು ಹಸಿರಾದ ತರುಲತೆಗಳಲ್ಲಿ ನಮ್ಮ ಜೀವನದ ಸಾರ್ಥಕತೆ ಕಾಣುವುದು ಅವರಿಗೆ ನಾವು ಸಲ್ಲಿಸುವ ಭಾವಪೂರ್ಣ ಶ್ರದ್ದಾಂಜಲಿ. 

10 comments:

  1. ಶ್ರೀ ಸೋಮೇಶ್ವರ ಭಟ್ಟ (ಚಿಂತಾಮಣಿ) ಅವರ ಮೇರು ವ್ಯಕ್ತಿತ್ವ, ಆ ತೇಜೋ ಪೂರ್ಣ ಮಂದಹಾಸ ಮತ್ತು ಅವರು ಬದುಕಿನುದ್ದಕ್ಕೂ ಬೀರಿರ ಬಹುದಾದ ಮಾರ್ಗದರ್ಶಕ ನಡೆ ನಿಮ್ಮ ಬರಹದುದ್ದಕ್ಕೂ ನಮಗೆ ಕುರುಹುಗಳ ಮೂಲಕ ಸಿಗುತ್ತಾ ಹೋಗುತ್ತದೆ.

    ಸಹಸ್ರ ಚಂದ್ರ ದರ್ಶನ ಕಂದ ಕೌಶಿಕದ ಅಜ್ಜಯ್ಯ ನಮ್ಮನ್ನು ಬಿಟ್ಟು ಆಗಳಿದರು ಅವರು ಬೆಳಗಿ ಹೋದ ಜ್ಞಾನದ ಹಣತೆ ಎಲ್ಲರಿಗೂ ಬೆಳಕು ಚೆಲ್ಲುತ್ತಲೇ ಇರುವುದು.

    ReplyDelete
    Replies
    1. ಸುಂದರ ಪ್ರತಿಕ್ರಿಯೆ ಬದರಿ ಸರ್. ಹೌದು ಹಿರಿಯರ ಮಾರ್ಗದರ್ಶನ ಸಿಕ್ಕರೆ ಕತ್ತಲು ಕೂಡ ಬೆಳಕಾಗುತ್ತದೆ

      Delete
  2. 'ವನಸುಮದೊಲೆನ್ನ ಜೀವನವು ವಿಕಸಿಸುವಂತೆ ...' ನೆನಪಾಯಿತು.
    ಅಜ್ಜನ ನೆನಪು ಚಿರಾಯು.

    ReplyDelete
    Replies
    1. ಸ್ವರ್ಣ ಹೌದು ಅಜ್ಜಯ್ಯ ತಾವು ಹೇಳದೆ ಉತ್ತಮ ನೆಡೆದು ಹೊನ್ನಿನ ಬೆಳಕನ್ನು ನಮಗೆ ಬಿಟ್ಟಿದ್ದಾರೆ.

      Delete
  3. ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು..........ಸಾರ್ಥಕ ಬದುಕಿನ ವ್ಯಕ್ತಿ ರೂಪ ಚಿಂತಾಮಣಿ ಮಾವ ... ಒಮ್ಮೆಯೂ ಯಾರ ಬಗ್ಗೆಯೂ ಕೆಟ್ಟ ಯೋಚನೆಯನ್ನೂ ಮಾಡಲು ಬಾರದ ಇವರ ಬದುಕು ಸಾರ್ಥಕ. ನಿರ್ಲಿಪ ಜೀವನದ ಸಂಗವನ್ನು ಎಂದೋ ತೊರೆದು, ಆಧ್ಯಾತ್ಮಿಕ ಜೀವನಕ್ಕೆ ಒಗ್ಗಿಸಿಕೊಂಡ ಮುಕ್ತಜೀವ. ಬೇಕುಗಳ ಕಡಿಮೆ ಮಾಡಿಕೊಂಡು, ಎಚ್ಚರವಾದಾಗಲೆಲ್ಲ ಕೇವಲ ನಾರಾಯಣ ಗೋವಿಂದ ಎಂದು ಸದಾ ಕಾಲ ಸ್ಮರಣೆ ಮಾಡುತ್ತಾ ಅನ್ತ್ಯಕಾಲೆ ಸ್ಮರೇ ನಿತ್ಯಂ ಮಹಾಪಾತಕ ನಾಶನಂ ಎಂಬ ಮಾತನ್ನು ದಿಟವಾಗಿಸಿದವರು. ಇಂತಹ ಹಿರಿಯ ಚೇತನ ವ್ಯಕ್ತಿರೂಪದಲ್ಲಿ ದೂರವಾದರೂ, ಆತ್ಮರೂಪದಲ್ಲಿ ನಮ್ಮೊಳಗೇ ಇದ್ದಾರೆ.

    ReplyDelete
    Replies
    1. ಒಂದು ಶಕ್ತಿಯಾಗಿದ್ದ ಅಜ್ಜಯ್ಯ ತಮ್ಮ ಇರುವಿಕೆಯೊಂದೆ ಸಾಕು ಅನ್ನಿಸುತಿತ್ತು. ಅವರ ಇರುವಿಕೆಯ ಗುರುತೇ ಅವರು ನಂಬಿದ್ದ ಮೌಲ್ಯಗಳು.

      Delete
  4. "ಪರಿವರ್ತಿನಿ ಸಂಸಾರೇ, ಮೃತಃ ಕೋವಾ ನ ಜಾಯತೆ
    ಸ ಜಾತೋ ಯೇನ ಜಾತೇನ ಯಾಂತಿ ದೇಶ: ಸಮುನ್ನತಿಂ"
    ಸದಾ ಬದಲಾಗುತ್ತಿರೋ ಈ ಜಗತ್ತಿನಲ್ಲಿ ಸಾಯೋರು ಯಾರಿಲ್ಲ. ಆದರೆ ಯಾರಿಂದ ದೇಶಕ್ಕೆ, ಜನರಿಗೆ ಸಹಾಯವಾಗುತ್ತೋ ಆತನ ಜನ್ಮ ಸಾರ್ಥಕ.. ಎಂಬ ಮಾತಿದೆ. ನಿಮ್ಮ ಮಾತುಗಳಿಂದ ಅಂತೊಂದು ಜೀವದ ಬಗ್ಗೆ ಓದಿದಂತಾಯಿತು.

    ReplyDelete
    Replies
    1. ಇದು ಸಾಧಿಸಿ ಹೋದ ಮೇಲೆಯೂ ತಮ್ಮ ಇರುವಿಕೆಯನ್ನ ತೋರಿಸುವ ಇಂತಹ ಮಹಾನ್ ಚೇತನಗಳ ಜೊತೆ ಕೆಲ ಸಮಯವನ್ನು ಕಳೆದಿದ್ದೇವೆ ಎಂದರೆ ಅದೇ ನಮಗೆ ಸಂತಸ ಕೊಡುತ್ತೆ.

      Delete
  5. ನನ್ನ "ಅಜ್ಜೆರ್ " ನೆನಪಾದರು..

    ReplyDelete
    Replies
    1. ಧನ್ಯವಾದಗಳು ಪಿ ಎಸ್. ತಲೆಮಾರಿನ ಹಿರಿಯರು ನೋಡಿದ ನೋಟವನ್ನು ನಾವು ಓದಲು ಸಾಧ್ಯವಿಲ್ಲ. ಅಂತಹ ಹಿರಿಯರ ಜೊತೆ ನೆಡೆದಾಡಿದ್ದು ನಮ್ಮ ಭಾಗ್ಯ ಎನ್ನಬಹುದು

      Delete