Monday, April 1, 2013

ನಸೀಮ ಮತ್ತು ಅವಳಿ ಮಕ್ಕಳು - ಒಂದು ಸುಂದರ ಸಮಾರಂಭ!!!

ಮಹಾಭಾರತ ಯುದ್ಧವನ್ನು ಸಂಜಯನ ಕಣ್ಣಲ್ಲಿ ನೋಡಿ ಬಳಲಿದ್ದ ಧೃತರಾಷ್ಟ್ರ...ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನದಲ್ಲಿ ಕುಳಿತು ಶ್ರೀ ವೇದವ್ಯಾಸರನ್ನು ಪ್ರಾರ್ಥಿಸಿ  "ನನಗೆ ಯುದ್ಧವನ್ನು ನೋಡಿ ಸಾಕಾಗಿದೆ, ದಯಮಾಡಿ ಒಂದು ಒಳ್ಳೆಯ ಸಂಧರ್ಭವನ್ನು ನೋಡಿ, ಕೇಳಿ  ಅನುಭವಿಸುವ ಸುಯೋಗವನ್ನು ಕರುಣಿಸಿ ಗುರುದೇವ" ಎಂದು ಕೇಳುತ್ತಾನೆ

ಆಗ ವೇದವ್ಯಾಸರು ಪ್ರತ್ಯಕ್ಷರಾಗಿ "ಮಗು ಧೃತರಾಷ್ಟ್ರ, ನಾನು ನಿನಗೆ ಮತ್ತೆ ದಿವ್ಯದೃಷ್ಟಿಯನ್ನು ಕರುಣಿಸಲಾರೆ ಅಥವಾ ಸಂಜಯನನ್ನು ಕಳಿಸಲಾರೆ, ಆದರೆ ನಾಲ್ಕು ಕಣ್ಣುಗಳು ನಿನಗೆ ಒಂದು ಸುಂದರ ಸಮಾರಂಭದ ವಿವರಣೆಯನ್ನು ಕೊಡುವಂತೆ ಮಾಡಬಲ್ಲೆ"

"ಆಗಲಿ ಗುರುದೇವ  ಹೇಗೆ ಸರಿ ಅನ್ನಿಸುತ್ತೋ ಹಾಗೆ ಆಶೀರ್ವಾದ ಮಾಡಿ"

ವೇದವ್ಯಾಸರು ಅದೃಶ್ಯರಾಗಿ ಅವರ ಜಾಗದಲ್ಲಿ ಎರಡು ಜೊತೆ ಸುಂದರ ಕಣ್ಣುಗಳು ಮೂಡಿಬರುತ್ತವೆ.

"ಮಹಾರಾಜ.. ಇಂದು ನಿಮ್ಮನ್ನು ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ಕರ್ನಾಟಕ ಕ್ಷೇತ್ರೇ, ಬೆಂಗಳೂರು ನಗರೇ, ಸುಚಿತ್ರ ಫಿಲಂ ಸೊಸೈಟಿ ಸಭಾಂಗಣೇ... ಶ್ರೀ ನಟರಾಜು ಸೀಗೆಕೋಟೆ ಮರಿಯಪ್ಪ ಅವರ ಅವಳಿ ಮಕ್ಕಳ ತೊಟ್ಟಿಲು ಶಾಸ್ತ್ರ ಅಂದರೆ ನಾಮಕರಣಕ್ಕೆ ಕರೆದೊಯ್ಯುತಿದ್ದೇವೆ"

"ಪುಟಾಣಿಗಳೇ ಸ್ವಲ್ಪ ವಿವರಿಸಿ"

"ಮಹಾರಾಜ, ಬ್ಲಾಗ್ ಲೋಕದಲ್ಲಿ ಎಲೆ ಮರೆಯಲ್ಲಿ ಹಣ್ಣಾಗುತ್ತಿರುವ ಎಷ್ಟೋ ಸುಂದರ ಕಾಯಿಗಳನ್ನು ಲೋಕಕ್ಕೆ ಪರಿಚಯಿಸುತ್ತಿರುವ ಶ್ರೀ ನಟರಾಜು ಅವರು ಬರೆದ ಎರಡು ಪುಸ್ತಕಗಳು ಇಂದು ಲೋಕಾರ್ಪಣಗೊಳ್ಳುತ್ತಿದೆ. ದೂರದೂರಿನಿಂದ ಬಂದ ಸುಂದರಾಂಗ ಜಾಣ ಎನ್ನುವಂತೆ, ದೂರದ ರಾಜ್ಯದಲ್ಲಿದ್ದರೂ ಕರುನಾಡಿಗೆ, ಕರುನಾಡಿನ ಸ್ನೇಹಿತರಿಗೆ ಮಿಡಿಯುವ ಅವರ ಮನಸ್ಸು ಹೂವಿನಷ್ಟೇ ಮಧುರ"
ಚಿತ್ರಕೃಪೆ - ಪ್ರವರ ಕೊಟ್ಟೂರು 

"ಓಹ್ ಚೆನ್ನಾಗಿದೆ ವಿ"ವರ್ಣನೆ"ಮುಂದುವರೆಯಲಿ"

"ದೊರೆ.... ಭಾನುವಾರವಾದ್ದರಿಂದ ಸಮಾರಂಭ ಸ್ವಲ್ಪ ನಿಧಾನವಾಗಿ ಶುರುವಾಗಿದೆ.. ಹೊರಗೆ ತಮ್ಮ ಸ್ನೇಹಿತರನ್ನು ಭೇಟಿ ಮಾಡಿ, ಉಭಯ ಕುಶಲ ಮಾತಾಡಿಸಿ, ಫೋಟೋ ತೆಗಿಸಿಕೊಂಡು ನಲಿಯುತ್ತಿದ್ದ ಸ್ನೇಹಿತ ಸ್ನೇಹಿತೆಯರನ್ನು ನಟರಾಜು ಅವರು ನಿಧಾನವಾದ ಸ್ವರದಲ್ಲಿ ಎಲ್ಲರನ್ನು ಸಭಾಂಗಣಕ್ಕೆ ಕರೆಯುತಿದ್ದಾರೆ".

"ಅರಸರೆ ಈಗೋ ನೋಡಿ ಒಂದು ಸುಂದರ ಜಾನಪದ ಗೀತೆಯಿಂದ ಕಾರ್ಯಕ್ರಮ ಶುರುವಾಯಿತು... ನಿರೂಪಕರಿಂದ ಕಾರ್ಯಕ್ರಮದ ಕಿರು ಪರಿಚಯ, ಸ್ವಾಗತ ಮಾತುಗಳು ನಡೆಯುತ್ತಿದೆ."

ಇಂದಿನ ಕಾರ್ಯಕ್ರಮದ ಒಂದು ಪಕ್ಷಿ ನೋಟ ನಿಮಗೆ ನೀಡುತ್ತಿದ್ದೇವೆ... ಮಹನೀಯರ ಹೆಸರು ಮತ್ತು ಅವರ ಕಿರುಪರಿಚಯ ಈ ಕೆಳಗಿನಂತಿದೆ ಮತ್ತು ನಂತರದ ವಿವರಣೆಯನ್ನು ಫೇಸ್ ಬುಕ್ನಲ್ಲಿ ಚಿತ್ರಗಳು ಹಾಕಿರುತ್ತಾರೆ.. ಅದನ್ನ ನೋಡಲು ನಿಮಗೆ ನಾವು ಕಣ್ಣಾಗುತ್ತೇವೆ"
  ಚಿತ್ರಕೃಪೆ - ನಸೀಮ - ಕಾರ್ಯಕ್ರಮದ ಪಕ್ಷಿನೋಟ 
ಮೊದಲಿಗೆ ನಿರೂಪಕ ವಿನಯ್ ಅವರು ಅಬ್ದುಲ್ ಸತ್ತಾರ್ ಅವರನ್ನು ವೇದಿಕೆಗೆ ಕರೆದು ರವಿ ಮೂರ್ನಾಡ್ ಅವರ ಬಗ್ಗೆ ಮಾತಾಡೋಕೆ ಹೇಳಿದ್ರು. ಅವರು ಮಾತಾಡ್ತಾ ರವಿಯವರು ಎಲೆ ಮರೆ ಕಾಯಿಗಳಿಗೆ ಕೊಡ್ತಾ ಇದ್ದ ಪ್ರೋತ್ಸಾಹ, ಅವರ ಬ್ಲಾಗ್, ಕನ್ನಡ ಪ್ರೀತಿ, ಕನ್ನಡ ಬ್ಲಾಗ್ ಗ್ರೂಪ್ ಲಿ ಅವರ ಸಾಧನೆ ಬಗ್ಗೆ ಮಾತಾಡಿ ಒಂದು ನಿಮಿಷದ ಮೌನಾಚರಣೆ ಗೆ ಕರೆ ಕೊಟ್ಟರು.

ಇವಾಗ  ಗಣ್ಯರನ್ನು ವೇದಿಕೆಗೆ ಕರೆಸಲಾಗುತ್ತಿದ್ದೆ  ಮತ್ತು ಡಾ. ಎಸ್.ಎಂ.ನಟರಾಜು ಅವರ 'ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ... ಮತ್ತು ಖುಷಿನಗರಿಯ ಆತನ ನಲ್ಮೆಯ ಗೆಳತಿಯೂ...' ಹಾಗೂ 'ಎಲೆಮರೆಕಾಯಿ' ಕೃತಿಗಳು   ಗೋಪಾಲ ವಾಜಪೇಯಿ ಅವರಿಂದ ಬಿಡುಗಡೆಯಾಗುತ್ತಿದೆ.

ಚೇತನಾ ತೀರ್ಥಹಳ್ಳಿಯವರು ಎರಡು ಕೃತಿಯ ಬಗ್ಗೆ ಮಾತಾಡುತ್ತಾ . "ವಂಡರ್ ಲ್ಯಾಂಡಿನ... " ಈ ಪುಸ್ತಕ ಪತ್ರ ಕಾದಂಬರಿಯ ರೂಪದಲ್ಲಿದೆ ಅಂತ ಹೇಳುತ್ತಾ ಇದ್ದಾರೆ, ಜೊತೆಗೆ ಹೇಗೆ ಮತ್ತು ಯಾಕೆ ಆಪ್ತವಾಗುತ್ತದೆ ಎಂದು ತಿಳಿಸುತ್ತಿದ್ದಾರೆ . ಎಲೆ ಮರೆ ಕಾಯಿಯನ್ನು ಅವರು ಕಾರಣಾಂತರಗಳಿಂದ ಓದಲಾಗಲಿಲ್ಲವಂತೆ ಹಾಗಾಗಿ ಬ್ಲಾಗ್ ಬಗ್ಗೆ ಮಾತಾಡುತ್ತಾ ಇದ್ದಾರೆ.
  ಆಮೇಲೆ ಡಾ. ಬಾನಂದೂರು ಕೆಂಪಯ್ಯ ಅವರಿಂದ ಒಂದು ಹಾಡು ಸುಶ್ರಾವ್ಯವಾಗಿ ಹಾಡುತ್ತಿದ್ದಾರೆ ,  ಮನು ಬಳಿಗಾರ್ &
  ಗೋಪಾಲ ವಾಜಪೇಯಿ ಅವರಿಂದ ಶುಭ ನುಡಿಗಳು ಕೇಳಿಬರುತ್ತಿದೆ
   ಡಾ. ಬಾನಂದೂರು ಕೆಂಪಯ್ಯ ಅವರಿಂದ "ಪಂಜು" ವೆಬ್ ಸೈಟ್ ನ ಬಿಡುಗಡೆಯಾಗುತ್ತಿದೆ.
    "ಜರಗನಹಳ್ಳಿ ಶಿವಶಂಕರ್ ಅವರಿಂದ ಭಾಷಣ ನಡೆಯಬೇಕು ಮತ್ತು ಚುಟುಕು ಸ್ಪರ್ಧೆಯ ಬಹುಮಾನ ವಿತರಣೆ... ವಿಜೇತರಿಗೆ ಅಭಿನಂದನೆ ಸಲ್ಲಿಸುತ್ತಾ ಬಹುಮಾನ ವಿತರಿಸಲು ಸಜ್ಜಾಗುತ್ತಿದೆ ವೇದಿಕೆ"

    "ಮಹಾರಾಜ ನಿಮಗೆ ವೀಕ್ಷಕ ವಿವರಣೆ ಹೇಳುತ್ತಲೇ ನಮಗೆ ಅಲ್ಲಿ ಹೋಗಲು ಮನಸಾಗುತ್ತಿದೆ... ಅದೂ  ಅಲ್ಲದೆ ಒಂದು ಜೊತೆಯ ಕಣ್ಣುಗಳು ಬರೆದ ಚುಟುಕಗಳಿಗೆ ಮೊದಲನೇ ಬಹುಮಾನ ಕೂಡ ಬಂದಿದೆ.. ಅದನ್ನು ಸ್ವೀಕರಿಸಲು ಅಲ್ಲಿಗೆ ಹೋಗಲೇ ಬೇಕು.. ನಿಮ್ಮ ಅಪ್ಪಣೆ ಇದ್ದರೆ ನಾವಿಬ್ಬರು ಅಲ್ಲಿಗೆ ಹೋಗಿಬಂದು ಮತ್ತೆ ಸುದೀರ್ಘ ವಿವರಣೆ ಕೊಡುತ್ತವೆ ಆಗಬಹುದೇ ಮಹಾರಾಜ?"

    "ಓಹ್ ಹೌದೆ ಮಗು.. ಅಭಿನಂದನೆಗಳು ಹೋಗಿಬನ್ನಿ... ಅಲ್ಲಿಯವರೆಗೆ ನಾನು ಇಲ್ಲೇ ಓಡಾಡಿಕೊಂಡು ಇರ್ತೇನೆ.. ಬರುವಾಗ ಆ ಎರಡು ಪುಸ್ತಕಗಳನ್ನು ತನ್ನಿರಿ"

    "ಹಾಗೆ ಆಗಲಿ ಮಹಾರಾಜ.. ಬೇಗ ಬಂದು ಬಿಡುತ್ತೇವೆ.. ಬಂದು ಮುಂದಿನ ಕಾರ್ಯಕ್ರಮದ ವಿವರಣೆಯನ್ನು ನೀಡುತ್ತೇವೆ ... ನಮಸ್ಕಾರ ಮಹಾರಾಜ"

    ನಾಲ್ಕು ಜೊತೆ ಕಣ್ಣುಗಳು ಸೀದಾ ಸಭಾಂಗಣಕ್ಕೆ ಬಂದರು,ಅಷ್ಟರಲ್ಲಿ ವೇದಿಕೆ ಬಹುಮಾನವನ್ನು ವಿತರಿಸಲು ವೇದಿಕೆ ಸಿದ್ಧವಾಗಿತ್ತು.  ವಿಜೇತರ ಹೆಸರುಗಳನ್ನೂ, ಅವರ ಕಿರುಪರಿಚಯ ಮಾಡಿಸುವ ಮಾತುಗಳನ್ನು ಭಿತ್ತರಗೊಳಿಸುತಿತ್ತು ಒಂದು ಸುಂದರವಾಣಿ! 

    ಚಿತ್ರ ಕೃಪೆ - ಪಂಜು ಅಂತರ್ಜಾಲ 

    ಚಿತ್ರ ಕೃಪೆ - ಪಂಜು 
    ಬಹುಮಾನ ಸ್ವೀಕರಿಸಿದ ನಂತರ, ಮತ್ತೆ ಕಾರ್ಯಕ್ರಮದ ವೀಕ್ಷಕ ವಿವರಣೆ ಮುಂದುವರೆಯಿತು.. 

    "ಮಹಾರಾಜ..ನಾವು ಬಂದೆವು... ಮತ್ತೆ ಮುಂದುವರೆಸುತ್ತಿದ್ದೇವೆ...  ಡಾ. ಬಾನಂದೂರು ಕೆಂಪಯ್ಯ ಅವರಿಂದ ಮತ್ತೆ ನಾಲ್ಕು ಮಾತುಗಳು ಜೊತೆಗೆ ಹಾಡುಗಳನ್ನೂ ಹಾಡಿದರು, ಲೇಖಕ ನಟರಾಜು ಅವರು ಒಂದು ಕಿರು ಮಾತಗಳನ್ನು ಉಲಿದರು  ಮತ್ತು ಪ್ರಕಾಶಕರಿಂದ ಕಿರು ಭಾಷಣ ನಡೆಯಿತು . ನಂತರ ಎನ್ ಸಿ ಮಹೇಶ ಅವರಿಂದ ಮಾತುಗಳು, ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಅರ್ಪಣೆಯ ಸಮಯದಲ್ಲಿ  ಉಷಾ ಕಟ್ಟೆಮನೆಯವರು ಬಂದಿದ್ದನ್ನ ಗಮನಿಸಿ ಅವರನ್ನು ವೇದಿಕೆಗೆ ಕರೆದು ಗೌರವಾರ್ಪಣೆ ಮಾಡಲಾಯಿತು" 
     "ಇದಾದ ಮೇಲೆ ಈಶಾನ್ಯ ಭಾರತೀಯ ನೃತ್ಯಗಳ ಕಿರುಚಿತ್ರ ಪ್ರದರ್ಶನದ ಮೂಲಕ ಕಾರ್ಯಕ್ರಮದ ಮುಕ್ತಾಯವಾಯಿತು"

     "ಮಹಾರಾಜ ಇದು ಇಂದಿನ ಕಾರ್ಯಕ್ರಮ ಒಂದು ವಿವರಣೆ. ನಿಮಗೆ ಇಷ್ಟವಾಯಿತೆ?"

     "ಪುಟಾಣಿಗಳೇ ನಿಮ್ಮ ಮಧುರವಾಣಿಯಲ್ಲಿ ಅರಳಿದ ಕಾರ್ಯಕ್ರಮದ ವಿವರಣೆ ಕುರುಕ್ಷೇತ್ರದ ವಿವರಣೆಗಿಂತ ಒಂದು ಕೈ ಮೇಲು ಎನ್ನಬಹುದು.. ಶ್ರೀ ಕೃಷ್ಣನ ಆಶೀರ್ವಾದ ಬ್ಲಾಗ್ ಲೋಕದ ಎಲ್ಲ ತಾರೆಗಳ ಮೇಲೂಇರಲಿ ... ಹಾಗು ಇಂದಿನ ಲೇಖಕ ಮೃದು ಮನಸಿನ ನಟರಾಜು ಅವರಿಗೆ ಯಶಸ್ಸು ಸದಾ ನೆರಳಿನಂತೆ ಇರಲಿ ಎಂದು ಆಶೀರ್ವಾದ ಕಳಿಸುತ್ತಿದ್ದೇನೆ. ಶುಭವಾಗಲಿ ಪುಟಾಣಿಗಳೇ!!!"

     "ಧನ್ಯವಾದಗಳು ಮಹಾರಾಜ.. !"

     (ಅಣ್ಣಯ್ಯ.. ಕಾರ್ಯಕ್ರಮ ತುಂಬಾ ಸುಂದರವಾಗಿತ್ತು, ನಿಮಗಾಗಿ ಎರಡು ಪುಸ್ತಕಗಳನ್ನು ಸುಲತ ತೆಗೆದುಕೊಂಡಿದ್ದಾರೆ..ಹಾಗು ಶ್ರೀಕಾಂತಣ್ಣ ಕಾರ್ಯಕ್ರಮ ಸುಂದರವಾಗಿತ್ತು... ಎಲ್ಲರ ಮಾತುಗಳು ತುಂಬಾ ಖುಷಿ ಕೊಟ್ಟಿತು. ಅದರಲ್ಲೂ ಹೆಣ್ಣನ್ನು ಅಳಿಸಬೇಡಿ.. ಅವರ ಕಣ್ಣೀರನ್ನು ದೇವರು ಅಳೀತಾನೆ  ಎನ್ನುವ ಮಾತು ಬಹಳ ಇಷ್ಟವಾಯಿತು.. ಚುಟುಕಗಳು ತುಂಬಾ ಇಷ್ಟವಾದವು " ಈ ಸಂದೇಶಗಳು  ಮೊಬೈಲ್ ನಲ್ಲಿ ರಿಂಗಣಿಸಿದಾಗ ಮನಸ್ಸಿಗೆ ಬಂದ ಮಾತುಗಳು ಹಾಗೂ ಅವರ ಕೆಲ ಮಾತುಗಳು, ನನ್ನ ವಿಚಿತ್ರ ಕಲ್ಪನೆ ಇವೆಲ್ಲ ಸೇರಿ ಲೇಖನವಾಗಿ ಹರಡಿಕೊಂಡಿದೆ.. ಈ ಲೇಖನದಲ್ಲಿ ಮೂಡಿಬರುವ ಜೋಡಿ ಕಣ್ಣುಗಳ ಒಡತಿಯರು ಪುಟ್ಟಿ ಸುಷ್ಮಾ ಮತ್ತು ಸುಲತ ಸಿಸ್ಟರ್!)

     23 comments:

     1. ಅಣ್ಣಯ್ಯ..
      ವರದಿಯಂತೆ ಸಾಸಿವೆ ಕಾಳಿನಷ್ಟು ಮಾಹಿತಿ ಕೊಟ್ಟರೆ, ನೀವೇ ಪ್ರತ್ಯಕ್ಷ ಕಂಡಷ್ಟು ಸೊಗಸಾಗಿ, ರಾಜ ಮಹಾರಾಜರನ್ನೆಲ್ಲಾ ತಂದು ಕೂರಿಸಿ ಪುಟ್ಟಾ ಮಕ್ಕಳಿಗೆ ಕಥೆ ಹೇಳುವ ಹಿರಿಯಣ್ಣನಂತೆ ವಿವರಿಸುವ ಬಗೆಗೆ ನಿಮಗೆ ನೀವೇ ಸಾಟಿ.

      ತುಂಬಾ ತುಂಬಾ ಇಷ್ಟವಾಯಿತು..
      ನಿಮ್ಮನ್ನ ಕಾರ್ಯಕ್ರಮದಲ್ಲಿ ಬಹಳ ಮಿಸ್ ಮಾಡಿಕೊಂಡೆವು..

      ReplyDelete
      Replies
      1. ಮೊದಲು ಪಿ ಎಸ್ ನಿನಗೆ ಧನ್ಯವಾದಗಳು. ಮೊದಲ ವರದಿಯ ಸಂದೇಶ ಬಂದದ್ದು ನನಗೆ ಬರೆಯಲು ಅನುಕೂಲವಾಯಿತು. ಸುಂದರ ಪ್ರತಿಕ್ರಿಯೆಗೆ ನನ್ನ ಸುಂದರ ಮುಗುಳು ನಗೆ!!

       Delete
     2. ನಮಗೆ ಸಂಕಟವಾಗುವ ಹಾಗೆ ಬರೆಯುತ್ತೀರಿ ಶ್ರೀಕಾಂತ್...:)ನಾವು ಇಂತಹ ಕಾರ್ಯಕ್ರಮಗಳಿಂದ ದೂರವೇ ಇರುವಂತಾಗಿದೆ. ಸದಾ ನೀವು ನೀಡುವ ಕಾರ್ಯಕ್ರಮದ ವಿವರ ನಾವೇ ಅಲ್ಲೇ ಕುಳಿತು ನೋಡಿದಂತಿರುತ್ತದೆ ಧನ್ಯವಾದಗಳು

      ReplyDelete
      Replies
      1. ಅಕ್ಕಯ್ಯ ನಿಮ್ಮ ಅಭಿಮಾನ ದೊಡ್ಡದು. ಕಣ್ಣು ತುಂಬಿ ಬಂತು. ನಿಮ್ಮ ಸುಂದರ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು

       Delete
     3. ಹಹಹ ವಿಭಿನ್ನಂ ನಿರೂಪಣಂ ಧನ್ಯೋಸ್ಮಿ...ಶ್ರೀಮನ್ ನಿಜವಾಗಿಯೂ ಎಲ್ಲಿ ಹೋಗ್ಬಿಡ್ತೀನೋ ದ್ವಾಪರಕ್ಕೆ ಅಂದ್ಕೊಂಡೆ...ಹಹಹಹಹ.... ನಟ್ರಾಜ್ ಕಾರ್ಯಕ್ರಮ ವೀಕ್ಷಕ ವಿವರಣೆಗೆ ಮೆಚ್ಚಿ ಇಂದ್ರಪ್ರಸ್ಥದಲ್ಲಿ ಪ್ರಶಸ್ತ ಸ್ಥಾನವೊಂದನ್ನು ನಿಮಗಾಗಿ ದಯಪಾಲಿಸಲಿದ್ದಾರೆ ನಮ್ಮಧೃತರಾಷ್ಟ್ರ ಮಹಾಪರ್-ಭು.

      ReplyDelete
      Replies
      1. ವಾವ್ ಇದು ಸರ್ ಮಾತು ಅಂದ್ರೆ. ತಮಾಷೆ ಏನು ಗೊತ್ತಾ ವಿಜಯನಗರದ ಹತ್ತಿರ ಇಂದ್ರ ಪ್ರಸ್ಥ ಎನ್ನುವ ಹೋಟೆಲ್ ಇದೆ. ಅದರ ಹತ್ತಿರ ಒಂದು ಸೈಟ್ ಸಿಕ್ಕರೆ....
       ಬಿಡಿ ಆ ಮಾತು ಬೇರೆ.... ಧನ್ಯವಾದಗಳು ಸರ್ಜಿ

       Delete
     4. ಕಾರ್ಯಕ್ರಮಕ್ಕೆ ಬರದೇನೆ.. ಬಂದವರು ಕೂಡ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಷ್ಟು ಸವಿಸ್ತಾರ ಮತ್ತು ಸೂಕ್ಷ್ಮವಾಗಿ ಬರೆದಿದ್ದೀರಿ.. ಸೂಪರ್ ಶ್ರೀ ಸಾರ್.. ಎಂದಿನಂತೆ ಲೇಖನದ ಓಪನಿಂಗ್ ಸೀನ್ ನಿಮ್ಮ ಕ್ರಿಯೇಟಿವಿಟಿಗೆ ಕನ್ನಡಿಯಾಗಿ ನಿಲ್ಲುತ್ತದೆ. ಇಷ್ಟವಾಯ್ತು. :)

      ReplyDelete
      Replies
      1. ಸತೀಶ್ ಖುಷಿಯಾಗುತ್ತಿದೆ ನಿಮ್ಮ ಪ್ರತಿಕ್ರಿಯೆಗಳನ್ನು ಓದಿ. ಓದುಗರಿಗೆ ಇಷ್ಟವಾಗಿದೆ ಎಂದರೆ ನನಗೆ ಸನ್ತಸ. ಧನ್ಯವಾದಗಳು ನಿಮ್ಮ ಮಾತುಗಳಿಗೆ

       Delete
     5. its simply superb shrikanth. u rock. like it...liek it.... :))

      ReplyDelete
      Replies
      1. ಸಹೋದರಿ... ತಪ್ಪಿಸಿಕೊಳ್ಳಬಾರದು ಈ ಕಾರ್ಯಕ್ರಮಕ್ಕೆ ಎನ್ನುವ ಹಂಬಲ ತುಂಬಾ ಇತ್ತು. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಮವಿದ್ದದರಿಂದ ನಿಮ್ಮನ್ನು ಭೇಟಿ ಮಾಡುವ ಒಂದು ಸುಂದರ ಅವಕಾಶ ತಪ್ಪಿ ಹೋಯಿತು. ಧನ್ಯವಾದಗಳು.

       Delete
     6. ಚಂದಾ ಚಂದಾ ನಿಮ್ಮ ವಿವರಣಾ ಶೈಲಿಯೇ ಅಂದ

      ReplyDelete
      Replies
      1. ಮಾನಸ ಸರೋವರ ಚಿತ್ರದ ಹಾಡು ನೆನಪಿಗೆ ತನ್ದಿರಿ. ಸಂತಸದ ಅಲೆಗಳು ನನ್ನ ಮಾನಸ ಸರೋವರದಲ್ಲಿ ಏಳುತ್ತಿವೆ . ಧನ್ಯವಾದಗಳು ಸ್ವರ್ಣ

       Delete
     7. ಹಾ ಹಾ ಗುರುಗಳೇ ಶರಣು...
      ವಂದನೆ ಚಂದದ ವರದಿಗೆ...
      ಅಭಿನಂದನೆ ಅಂದದ ಬರಹಕ್ಕೆ!!!
      ನಮಸ್ತೆ :)

      ReplyDelete
      Replies
      1. ಹ ಹ ಹ ಚಿನ್ಮಯ ಸೂಪರ್ ಇಷ್ಟವಾಯಿತು ಹಾಗು ಧನ್ಯವಾಯಿತು

       Delete
     8. ಸಮಾರಮ್ಭದ ವರದಿ ಬಹಳ ಚೆನ್ನಾಗಿದೆ. ಅಂದ ಹಾಗೆ ನೀವು ಬಂದಿದ್ದರೆ ಖುಷಿ ಇತ್ತು. ತುಂಬಾ ಮಿಸ್ ಮಾಡಿಕೊಂಡೆ.

      ReplyDelete
      Replies
      1. ಕಾರ್ಯಕ್ರಮ ಮೊದಲೇ ನಿರ್ಧರಿಸಿಯಾಗಿತ್ತು. ಹಾಗಾಗಿ ಅದನ್ನು ಬಿಡೋಕೆ ಸಾಧ್ಯವಾಗಲೇ ಇಲ್ಲ. ನಾನು ಕೂಡ ನಿಮ್ಮನ್ನೆಲ್ಲ ಭೇಟಿ ಮಾಡುವ ಒಂದು ಸುಂದರ ಅವಕಾಶಕ್ಕೆ ಮುಂದಿನ ದಿನಗಳ ತನಕ ಕಾಯಬೇಕು. ಧನ್ಯವಾದಗಳು ಬದರಿ ಸರ್

       Delete
     9. ಪ್ರತ್ಯಕ್ಷ ಕಂಡ ಹಾಗೆ ಚಿತ್ರಿಸಿದ ರೀತಿ ತುಂಬ ಇಷ್ಟ ಆಯಿತು....Hat's off Srikanthanna:)

      ReplyDelete
      Replies
      1. ಈ ಸಂತಸದ ಅರ್ಧ ಭಾಗ ನಿಮಗೂ ಹಾಗು ಉಳಿದರ್ಧ ಪುಟ್ಟಿ ಸುಷ್ಮಾಗೂ ಸೇರಬೇಕು. ಧನ್ಯವಾದಗಳು ಎಸ್ ಎಸ್

       Delete
     10. ಅಣ್ಣಯ್ಯ ಯಾವತ್ತೂ ಸೂಪರ್ ... ಎಂಬ ಊಹೆಯಲ್ಲೇ ನೂರರಲ್ಲಿ ಬಂದವಳಿಗೆ ಇಲ್ಲೂ ಮೋಸವಾಗಿಲ್ಲ...:) ಎಂದಿನನಂತೆ ಸೂಪರೂ....

      ನಾನೇನೋ ಕಾರಣಗಳಿಂದ ಬರಲಾರದೆ ಮಿಸ್ ಮಾಡಿಕೊಂಡೆ ಎನ್ನುತ್ತಿದ್ದ ಕಾರ್ಯಕ್ರಮವನ್ನು ಹೋಗಿ ಬಂದಷ್ಟೇ ಖುಷಿಪಡುವಂತೆ ಬರೆದಿದ್ದು ಓದುವಾಗ ಖುಷಿ ಕೊಡುತ್ತಿದ್ದರೂ.. ಅಲ್ಲ ಈ ಅಣ್ಣ ನನಗೆ ಹೇಳದೇನೇ ಪ್ರೋಗ್ರಾಮ್ ಗೆ ಹೋಗಿದ್ದರಲ್ಲ ಅಂತ ಸಣ್ಣದೊಂದು ಜಲಸಿ ಇದ್ದೇ ಇತ್ತು ಮನಸಲ್ಲಿ... ಆದರೆ ಸುಷ್ಮಾ ಮತ್ತು ಸುಲಥಾ ( ಇವರಿಬ್ಬರನ್ನೂ ಮಿಸ್ ಮಾಡಿಕೊಂಡಿದ್ದು... :( ) ಕಳಿಸಿದ ಮೆಸೇಜ್ ಗಳನ್ನೇ ಇಟ್ಟುಕೊಂಡು ಬರೆದಿದ್ದಾರೆ ಎಂದು ಗೊತ್ತಾದಾಗ ಹೆಮ್ಮೆ ಆಯಿತು ಅಣ್ಣ. ಅಲ್ಲಿಯ ಪ್ರತ್ಯಕ್ಷ ದರ್ಶಿಗಳು ನನಗೆ ಫೋನ್ ಲ್ಲಿ ಏನೇನಾಯಿತು ಎಂದು ಹೇಳಿದ್ದಾರೋ ಅದೆಲ್ಲವೂ ನಿಮ್ಮ ಲೇಖನದಲ್ಲೂ ಇದೆ ...

      Hats off...!!!

      ReplyDelete
      Replies
      1. ಈ ತಂಗಿಯರಿಗೆ ಕೆನ್ನೆಯುಬ್ಬಿಸಿಕೊಳ್ಳೋಕೆ ಏನಾದರೂ ಕಾರಣ ಹುಡುಕುತ್ತಲೇ ಇರುತ್ತಾರೆ. ಹಹಹ ಸೂಪರ್ ಪ್ರತಿಕ್ರಿಯೆ ಎಸ್ ಪಿ. ಈ ಕಾರ್ಯಕ್ರಮಕ್ಕೆ ಬರೋಕೆ ಆಗೋಲ್ಲ ಎಂದಾಗಲೇ ಸಂಜಯ ದೃತರಾಷ್ಟ್ರ ಕಣ್ಣ ಮುಂದೆ ಬಂದು ನಿಂತಿದ್ದರು. ಸರಿ ಸುಮಾರು ಡ್ರಾಫ್ಟ್ ರೆಡಿ ಇತ್ತು. ಇಬ್ಬರು ಪುಟ್ಟಿಗಳಿಂದ ಬಂದ ಸಂದೇಶ ಅದಕ್ಕೆ ಹೂರಣ ತುಂಬಲು ಸಹಾಯ ಮಾಡಿತು. ಧನ್ಯವಾದಗಳು ಎಸ್ ಪಿ

       Delete
     11. ವರದಿ ಬಹಳ ಚೆನ್ನಾಗಿದೆ..ತುಂಬಾ ಇಷ್ಟವಾಯಿತು:)

      ReplyDelete
      Replies
      1. ತುಂಬು ಹೃದಯದಿಂದ ಧನ್ಯವಾದಗಳು ಮೇಡಂ

       Delete