Wednesday, February 9, 2011

ಬಾರಿಸು ಕನ್ನಡ ಡಿಂಡಿಮ – ಮಾಡು ಶಂಖನಾದ - ೭೭ನೆ ಕನ್ನಡ ಸಾಹಿತ್ಯ ಸಮ್ಮೇಳನ


೭೭ನೆ ಕನ್ನಡ ಸಾಹಿತ್ಯ ಸಮ್ಮೇಳನ

ಇದು ನಾಲ್ಕು ದಶಕಗಳನಂತರ ಬೆಂಗಳೂರುನಲ್ಲಿ ಜರುಗಿರುವ ಅತ್ತ್ಯುತ್ತಮ ಕಾರ್ಯಕ್ರಮ.

ಇಲ್ಲಿನ ಜನ ಮರುಳೋ ಜಾತ್ರೆ ಮರುಳೋ ಎನ್ನುವ ನಾಣ್ಣುಡಿಯನ್ನೂ ತಪ್ಪು ಎಂದು ಹೇಳುವ ಒಂದು ಪ್ರಯತ್ನದಂತೆ ಕಂಡಿತು.  ಸುಮ್ಮನೆ ಸಮಯ ಕಳೆಯಲು ಬಂದಂತೆ ಜನರು ಇರಲಿಲ್ಲ.  ಎಲ್ಲರ ಮನದಲ್ಲೂ ಇದು ನಮ್ಮ ಮನೆಯ ಹಬ್ಬ ಅನ್ನುವ ಸಂಭ್ರಮ, ನಮ್ಮ ಭಾಷೆ ಯಾವದಕ್ಕೂ ಕಮ್ಮಿ ಇಲ್ಲ ಎಂದು ತೋರಿಸುವ ತವಕ ಕಾಣುತಿತ್ತು. 


ಗೋಷ್ಠಿಯಲ್ಲಿ ನೆರೆದಿದ್ದ ಜನರು, ಹಾಸ್ಯ ಸಂಭ್ರಮದಲ್ಲಿ ಮುಳುಗೆದ್ದರು  ಸಭಿಕರು, ಪುಸ್ತಕ ಪ್ರದರ್ಶನದಲ್ಲಿ ಜನ ಜಂಗುಳಿ ಇದ್ದರು ಕೂಡ, ಯಾರು ಸಿಟ್ಟು ಸೆಡುವು ತೋರಿಸದೆ, ಎಲ್ಲರು ಎಲ್ಲರಿಗು ಅವಕಾಶ ಕೊಡುತ್ತ ಇದ್ದರು. ಪುಸ್ತಕಗಳನ್ನು ಕೊಂಡವರು ಖುಶಿ ಪಡುತ್ತ ಹೋದರು. ಪುಸ್ತಕಗಳ ಭಂಡಾರವನ್ನೂ ನೋಡಿದ್ದ ಜನತೆ ಅಚ್ಹರಿಪಡುತ್ತ ಕೊಳ್ಳುವ ಪುಸ್ತಗಳ ಪತ್ತಿಮದಿಕೊಳ್ಳುತ್ತ ಹೋದರು.  


ಸಮ್ಮೇಳನದ ಹೊರಗೆ, ಏನು ಬೇಕು ಅಂದ್ರೆ ಅದು ಸಿಕ್ತಾ ಇತ್ತು.  ಕನ್ನಡ ಫಲಕಗಳು, ಶಾಲುಗಳು, ಟೋಪಿಗಳು ಎಲ್ಲೆಲ್ಲೂ ಕನ್ನಡಮಯ ಆಗಿತ್ತು.  ದೇವಸ್ಥಾನದಲ್ಲಿ ಮಂಗಳಾರತಿ ಸಮಯದಲ್ಲಿ ಜೋರಾಗಿ ಘಂಟೆ, ಶಂಖನಾದ ಮಾಡುತ್ತಾರೆ, ಯಾಕೆ ಅಂದ್ರೆ, ಜನಗಳಿಗೆ ಗೊತ್ತಾಗಬೇಕು ಅಂತ.  ಅದೇ ರೀತಿ ಇದು ಕೂಡ.  

ಇಗೋ ಕನ್ನಡದ ದಾದಾ, ಹಿರಿಯಜ್ಜ, ಶ್ರೀಯುತ ಜಿ. ವಿ. ಅಲಂಕರಿಸಿದ ಈ ಸಮ್ಮೇಳನ ೭೭ ಸಮ್ಮೇಳನದ ರಾಜ ಅಂತ ಹೇಳಬಹುದು.

ಈ ಜಾತ್ರೆಯಲ್ಲಿ ತಿಂಡಿ ತಿನಿಸುಗಳ ಅಬ್ಬರವಿರಲಿಲ್ಲ, ಆದರು ಜನರು ಬಂದು ಸೇರಿ, ನಲಿದರು.  ಇದು ಬೆಂಗಳೂರಿನ ಜನತೆ ಬರಿ ತಿನ್ನ್ನೋಕೆ ಮಾತ್ರ ಬರ್ತಾರೆ ಅನ್ನುವ ಒಂದು ಸುಳ್ಳು ಸತ್ಯವನ್ನೂ ಸುಳ್ಳು ಮಾಡಿತು.

 ಎಲ್ಲ ಹಿರಿ, ಕಿರಿ ಕವಿಗಳು, ಸಾಹಿತಿಗಳ ಹೆಸರು, ಶಿಕ್ಷಣ ತಜ್ಞರ, ನಾಟಕಕಾರರ, ಪ್ರಬುದ್ದ ರಾಜಕಾರಣಿಗಳ ಹೆಸರನ್ನು ಪ್ರವೇಶ ದ್ವಾರಗಳಿಗೆ ಇಡಲಾಗಿತ್ತು.  ಇಲ್ಲಿ ಯಾರು ಮರೆಯಾಗಿಲ್ಲ, ಎಲ್ಲರು ನಮ್ಮ ಜೊತೆಯಲ್ಲಿಯೇ ಇದ್ದಾರೆ ಎನ್ನುವ ಅಮೂಲ್ಯ ಸಂದೇಶವನ್ನು ತೋರುತಿತ್ತು.

ಅಣ್ಣಾವ್ರನ್ನು ನೆನೆಯದ, ಅಥವಾ ಅಣ್ಣಾವ್ರ ಹೆಸರಿಸದ ಕನ್ನಡ ಕಾರ್ಯಕ್ರಮ ಸಾಧ್ಯವೇ ಇಲ್ಲ ಎನ್ನುವ ಹಾಗೆ ಇತ್ತು.  ಆಟೋಗಳ ಮೇಲೆ ಭಾವಚಿತ್ರ ರಾರಾಜಿಸುತಿತ್ತು.  


ಒಂದಂತು ಅನಿಸಿತು, ಕನ್ನಡದ ಏಳಿಗೆಗೆ ಈ ತರಹದ ಸಂಭ್ರಮವಿರುವ ಸಮ್ಮೇಳನ ಅವಾಗ ಅವಾಗ ಆಗುತಿದ್ದರೆ, ಕುವೆಂಪು ಹೇಳಿದಂತೆ ಡಿಂಡಿಮ ಬಾರಿಸುತ್ತ ಇರಬಹುದು.  ನಮ್ಮ ತಾಯಿಯ ಬಗ್ಗೆ ನಾವೇ ಹೆಮ್ಮೆ ಪಡದೆ ಹೋದರೆ ಇನ್ನ್ಯಾರು ಮಾಡ್ತಾರೆ
https://picasaweb.google.com/srmanjun/KannadaMela#2 comments:

  1. ಬೆಂಗಳೂರಿನಲ್ಲಿ ಇದು ನಡೆದದ್ದು ತುಂಬಾ ಒಳ್ಳೇದು. ನೀವು ಹೇಳಿದಂತೆ, ಬೆಂಗಳೂರಿನ ಕನ್ನಡಿಗರು ಜಾಗೃಥರಗಿರುವ೦ತೆ ಕಂಡು ಬರುತ್ತಿದೆ. ಹೊರ ಭಾಷಿಕರ, ಅದರಲ್ಲೂ ಮುಖ್ಯವಾಗಿ ಉತ್ತರ ಭಾರತೀಯರ ಹಾವಳಿ ಇಂದಾಗಿ ಬೆಂಗಳೂರಿನ ಕೆಲವೊಂದು ಭಾಗಗಳು (ಮಾರತ್ ಹಳ್ಳಿ , ಕೋರಮಂನಗಲ, ಸರ್ಜಾಪುರ ರಸ್ತೆ,..) ಸಂಪೂರ್ಣ ಹಿಂದಿಮಯ ಆಗುತ್ತಿವೆ. ಇದಕ್ಕೆ ಪೂರಕವಾಗಿ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಕನ್ನಡ ಮಾಯಾ ಆಗ್ತಿದೆ. ಅಕ್ಕಿ, ಬೆಲೆ, ದಿನಸಿ ಹೆಸರುಗಳೆಲ್ಲ 'ದಾಲ್' , 'ಅಟ್ಟ', ಆಗಿವೆ. ಊರುಗಳ ಹೆಸರಗಅಳು ಕೂಡ ಅವರ ಉಚ್ಚರನೆಯಲ್ಲಿ ಬದಲಾಗಿವೆ. 'ಬೆಳ್ಳ್ ೦ದೋರು' ಹೋಗಿ 'ಬೇಲ೦ದೊರ್' ಆಗಿದೆ. ಕತ್ತರಿಗುಪ್ಪೆ ಹೋಗಿ 'ಕತ್ತರಿಗುಪ್ಪ' ಆಗಿದೆ. ಹೀಗೆ ಮುಂದುವರಿದಲ್ಲಿ ನಮ್ಮ ಹೆಸರುಗಳನ್ನೂ ಬದಲಾಯಿಸಿ, 'ಮಿಶ್ರ' 'ಗುಪ್ತ' ಅಂತ ಇಡುವ ಕಾಲ ದೂರವಿಲ್ಲ. ಎಚ್ಚೆತ್ತುಕೊಳ್ಳಿ ಕನ್ನಡಿಗರೇ.. ಪ್ರತಿಭಟಿಸಿ.

    ReplyDelete
  2. ಒಳ್ಳೆಯ ಬ್ಲಾಗ್ , ಮತ್ತು ಅದಕ್ಕೆ ಬಂದಿರುವ ಕಾಮೆಂಟ್ ಕೂಡ

    ReplyDelete