Tuesday, January 11, 2011

ಸಂಸ್ಕೃತ ಮತ್ತು ಸುಸಂಸ್ಕೃತರ ನಡುವೆ ಕೆಲವು ಘಂಟೆಗಳು


ಹೆಬ್ಬಾಗಿಲು 
ದೀಪುವಿನ ಒಂದು ಜಂಗಮ ಗಂಟೆ ಕರೆ, ಸೋಮವಾರ ಮತ್ತೊಮ್ಮೆ ಭೇಟಿ ನೀಡಲು ಮನಸು ನಿರ್ಧರಿಸಿತು.  ಸವಿತಾ, ಮತ್ತು ಶೀತಲ್ ಜೊತೆ ನಮ್ಮ ನೆಚ್ಚಿನ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಹೋದೆ.  ಅಲ್ಲಿಗೆ ಹೋಗುವಾಗ ಆಶ್ಚರ್ಯಕರ ರೀತಿಯಲ್ಲಿ ರಜನಿ-ರೂಪ-ಭರತ್ ಸಿಕ್ಕರು.  ಅಲ್ಲಿಂದ ಶುರುವಾಯಿತು ನಮ್ಮ ಕೊರವಂಗಳದ ಬೇರು, ಕೊಂಬೆಗಳು ಸಿಕ್ಕವು.  ನಾನು, ಸವಿತಾ, ಶೀತಲ್, ದೀಪು, ರಮ್ಯಕ್ಕ, ಶಾರ್ವರಿ, ರಜನೀಶ, ರೂಪ, ಭರತ್, ಜ್ನಾನೇಶ, ಆಶಾ, ಅವರ ಅಪ್ಪ, ಅಮ್ಮ, ಅಮೃತ, ಚಂದ್ರಮೌಳಿ, ವಿನುತ ಎಲ್ಲರು ಒಂದು ಕಡೆ ಮಾತಾಡ್ತಾ ನಿಂತಿದ್ವಿ.  
ಚಕ್ರವ್ಯೂಹ
ನಮ್ಮ ಪುರಾಣ, ಸಂಸ್ಕೃತದ ಪಲಕ ಪ್ರದರ್ಶನಕ್ಕೆ ಒಳಗೆ ಹೋದೆವು. ಅಲ್ಲಿಗೆ ಕುಮಾರ ಚಿಕ್ಕಪ್ಪ ಸಿಕ್ಕಿದರು. ಎಲ್ಲವನ್ನು ನೋಡುತ್ತಾ, ವಿಷಯಗಳನ್ನು ಮೆಲುಕು ಹಾಕುತ್ತ, ಛಾಯಾಚಿತ್ರಣ ಮಾಡುತ್ತ...ಮುಂದೆ ಮುಂದೆ ಸಾಗಿದೆವು. 

ನಂತರ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಹೋದೆವು. ಅಲ್ಲಿ ಕೆಲವು ಪುಸ್ತಕಗಳನ್ನು ನಾನು, ದೀಪು, ರಜನೀಶ, ಚಿಕ್ಕಪ್ಪ ಕೊಂಡೆವು. 
ಭರತ್ ,ಶೀತಲ್,ಶಾರ್ವರಿ

ಶೀತಲ್,ಶಾರ್ವರಿ
ಹೊರಗೆ ಬಂದು  ಛಾಯಾಚಿತ್ರಣಕ್ಕೆ ನಮ್ಮ ಮುದ್ದು ಮುಖಗಳನ್ನು ಕೊಟ್ಟು, ಆದಸ್ಟು ಹಲ್ಲುಗಳನ್ನು ಬೀರುತ್ತ, ಖುಷಿ ಪಟ್ಟೆವು.


ಇದು ಒಂಥರಾ ಯೋಚನೆ, ಕಾರ್ಯಕ್ರಮದ ಪೂರ್ವಸಿದ್ದತೆ ಇಲ್ಲದೆ ಸೇರಿದಂಥ ಒಂದು ಅಪರೂಪದ ಭೇಟಿ. ಹೊಸವರ್ಷದಲ್ಲಿ ನಾವೆಲ್ಲರೂ ಸೇರಬೇಕೆಂಬ ಒಂದು ಪ್ರಯತ್ನಕ್ಕೆ ಅದ್ಭುತ ಆರಂಭ ಸಿಕ್ಕಿತು.

ತಲೆಗೆ ತುಂಬಾ ವಿಷಯಗಳು ಸಿಕ್ಕಮೇಲೆ, ಜ್ಞಾನದ ಹಸಿವು ಜಾಸ್ತಿ ಆಯಿತು...ಅದಕ್ಕೆ ಪ್ರತಿಸ್ಪರ್ಧಿಯಾಗಿ, ಹೊಟ್ಟೆಯು ತಾಳ ಹಾಕಲು ಶುರು ಮಾಡಿತು. ಸೇರಿ ಎಲ್ಲರ ನಿರ್ಧಾರದಂತೆ ಶೆಟ್ಟರ ಪಾಳ್ಯ ಉರುಫ್ ಫುಡ್ ಸ್ಟ್ರೀಟ್ಗೆ ಹೋದೆವು.  ಅಲ್ಲಿ ಹೊಟ್ಟೆ ತುಂಬಾ ತಿಂದು ಮನೆಗೆ ಸೇರಿದಾಗ, ಹಾಸಿಗೆ ಮತ್ತು ನಿದ್ದೆ ನಮಗಾಗಿ ಕಾಯುತ್ತ ನಿಂತಿತ್ತು 

ತುಂಬಾ-ಮೇಲೆ-ಬೆಳಕು (Highlights)


೧. ಎಲ್ಲರು ಸೇರುವ ಒಂದು ಅದ್ಭುತ ವೇದಿಕೆಯಾಗಿ ಈ ಸಮ್ಮೇಳನ ಸಹಾಯಮಾಡಿತು.


೨. ಯಾರಿಗೂ ಒಬ್ಬರಿಗೆ ಒಬ್ಬರು ಸೇರುವ ವಿಷಯ ಗೊತ್ತಿಲದೆಯು ಎಲ್ಲರು ಸೇರಿದ್ದು ಒಂದು ಪವಾಡವೇ ಸೇರಿ.


೩. ನನ್ನ ಅದ್ಭುತ ಮತ್ತು ಸದಾಕಾಲ ಸಹಾಯ ಮಾಡುವ ನನ್ನ ವಾಹನ, ಅಂದು ಯಾರೋ ಇಟ್ಟ ಸೂಜಿಗೆ ಅದರ ಹೊಟ್ಟೆಯಲ್ಲಿರುವ ಗಾಳಿಯೆಲ್ಲ ಹೊರಗೆ ಹೋಗಿ, ಪುಸ್ಸಾದ ಬಲೂನಿನಂತೆ ಆಯಿತು. ಆದರೂ ಮಾರುಕಟ್ಟೆ ಪ್ರದೇಶದ ಹತ್ತಿರ ಗಾಲಿಚೀಲ ಬೇರೆ ಹಾಕಿಸಿಕೊಂಡು ಮನೆಗೆ ಸೇರಿದಾಗ ರಾತ್ರಿ ಹನ್ನೊಂದು ವರೆ.  ಮನೆ ಹತ್ತಿರ ಇಳಿದು ನನ್ನ ವಾಹನದ ಮೈಯನ್ನು ಮುದ್ದಿನಿಂದ ಸವರಿದಾಗ ಅದರ ಸಂತೋಷ ಹೇಳೋಕೆ ಆಗದು.  ನನ್ನ, ಮತ್ತು ವಾಹನದ ನಂಟು ಕಾಳಿದಾಸ ಹಾಗು ಭೋಜರಾಜನ ಸ್ನೇಹದ ರೀತಿ ಇಬ್ಬರು ಒಬ್ಬರನ್ನ ಒಬ್ಬರು ಹೊಗಳಿಕೊಂಡು ಖುಷಿ ಪಟ್ಟೆವು.

2 comments:

  1. sheetu,bharath and shavari look very cute bro..
    can u pls introduce them to me want to play with them..hehe..

    ReplyDelete
  2. ಸಿಸ್ಕೋದಲ್ಲಿ ನನಗೆ ಸಿಕ್ಕ ವಾಗ್ಮಿ, ಪ್ರೋತ್ಸಾಹಿ ಸ್ನೇಹಿತ ಶ್ರೀಕಾಂತ್ ....ಎಂದಿನಂತೆ ಹಾಗೆ ನಿಮ್ಮ ವಾಕ್ಚಾತುರ್ಯಕ್ಕೆ ನಾನು ಶರಣು ...ನಿಮ್ಮ ಮಲ್ನಾಡ್ ಹುಡ್ಗ ..ಗಿರಿ

    ReplyDelete