Friday, December 24, 2010

ಶಿವ-ಪಾರ್ವತಿ ಸಂಭಾಷಣೆ

ಶಿವ : ಪಾರ್ವತಿ ನನ್ನನ್ನ ಅರ್ಧ ನಾರೀಶ್ವರ ಅಂತ ಯಾಕೆ ಕರಿತಾರೆ ಗೊತ್ತ

ಪಾರ್ವತಿ : ಮಹೇಶ್ವರ ಇದು ನನಗೆ ತಿಳಿಯದ ಸಂಗತಿಯೇ.  ನೀನು ನಿನ್ನ ದೇಹದಲ್ಲಿ ಅರ್ಧ ಭಾಗವನ್ನೇ ಕೊಟ್ಟು...ನನ್ನಲ್ಲಿ ನೀನು, ನಿನ್ನಲ್ಲಿ ನಾನು ಅಂತ ಸಮಸ್ತ ಲೋಕಕ್ಕೆ ತೋರಿಸಿಕೊಟ್ಟವನು ಅಲ್ಲವೇ .  ಇದರಿಂದ ತಿಳಿಯುವುದು ಏನೆಂದರೆ 

ಗಂಡ ಹೆಂಡತಿ ಇಬ್ಬರು ಒಂದು ಮುಖದ ಎರಡು ಕಣ್ಣುಗಳು ಇದ್ದ ಹಾಗೆ ಅಂತ...ಅಲ್ಲವೇ ಪ್ರಾಣಕಾಂತ.

ಶಿವ : ಹೌದು ಗಿರಿಜೆ...ನೀನು ಹೇಳಿದ್ದು ಸರಿ...ಆದರೆ ಭಾರತ ದೇಶದ, ಕರ್ನಾಟಕದ, ಬೆಂಗಳೂರಿನಲ್ಲಿ ಒಬ್ಬ ಇದ್ದಾನೆ...ಅವನು ಹೇಳುವ ಅರ್ಧಾಂಗಿಯ ಪರಿಯಾ ಕೇಳು 

ಗಿರಿಜೆ : ಹೇಳು ನೀಲಕಂಠ....ಏನದು 

ಶಿವ : ಅವನ ಪ್ರಕಾರ  ಅರ್ಧ ನಾರೀಶ್ವರ ಅಂತ ಅಂದ್ರೆ ಅರ್ಧನಾರು, ಈಶ್ವರ   ಅಂತ...ಅಂದ್ರೆ...ಯಾರು ಶಿವ,  ಅರ್ಧ ಅಂತ.  ಅರ್ಧಾಂಗಿ ಅಂದ್ರೆ ಶರಪಂಜರದಲ್ಲಿ ಕಾವೇರಿ ಹರಿದು ಹಾಕುವ ರೀತಿ ಗಂಡನ ಅಂಗಿಯನ್ನು ಅರ್ಧ ಮಾಡುವವಳೇ ಅರ್ಧಾಂಗಿ ಅಂತ...ಅಂದ್ರೆ ಅರ್ಧ=ಹಾಫ್ ಅಂಗಿ=ಶರ್ಟ್ ...ಗೊತ್ತಾಯಿತೆ ಶಿವೆ....ಅಂದ್ರೆ ಗಂಡ ಮತ್ತು ಹೆಂಡತಿ ಯಾವಾಗಲು ಸಮಾನರು ಅಂತ ಹೇಳುವ ವಿಚಾರವನ್ನು ಈ ರೀತಿ ತಮಾಷೆಯಾಗಿ ಹೇಳುತ್ತಾನೆ ಅವನು.

ಗಿರಿಜೆ : ಮಹೇಶ್ವರ ಈ ಅರ್ಥ ನಿಜವಾಗಿಯೂ ಅರ್ಥಗರ್ಭಿತ....ಇನ್ನು ಈತರಹ ವಿಷಯಗಳನ್ನು ತಿಳಿಯಬೇಕಲ್ಲ..

ಶಿವ : ಅದು ಸುಲಭ..ಆತನ ಬ್ಲಾಗ್ಸ್ ನೋಡು http://www.lakshavarsha.blogspot.com/.  ತುಂಬಾ ಚೆನ್ನಾಗಿರುತ್ತೆ...ಅವನ ಬ್ಲಾಗ್ನಲ್ಲಿ ಸಿನಿಮಾ, ಪ್ರವಾಸ-ಪ್ರಯಾಸ, ಸ್ನೇಹಿತರು, ಶುಭ ಮಾತುಗಳು, ಅವನ ಪ್ರಪಂಚ ಎಲ್ಲವು ಅನಾವರಣಗೊಳ್ಳುತ್ತದೆ.

ನಾವಿಬ್ಬರು ಅವನಿಗೆ ಹೀಗೆ ಒಳ್ಳೇದು ಬರೆಯುವ ಬುದ್ದಿಯನ್ನು, ಜ್ಞಾನವನ್ನು, ಹಾಗು ಆಸಕ್ತಿ ಯನ್ನು ಸದಾ ಕೊಡುತ್ತ ಇರೋಣ 

2 comments:

  1. nice one.. arthagarbitha sambhashane...:)

    ReplyDelete
  2. ಶ್ರೀಕಾಂತ....... ,

    ನಿನ್ನ ಪ್ರಯತ್ನಕ್ಕೆ ನಾವು ಮೆಚ್ಚಿದೇವೆ, ನೀನು 75 ವರ್ಷಗಳ ಕಾಲ ಸಾಮಾನ್ಯ ನಾಗರೀಕನಾಗಿ ಸಾಮಾನ್ಯರ ನಡುವೆ ಸಮಾಜ ಸೇವೆ ಮಾಡುತ್ತ ತಲೆ ಎತ್ಕೊಂಡ್ ಬಾಳು .

    Regards
    ಅರ್ಧ ನಾರ್ತ ಇರೋ ಈಶ್ವರ
    ಅಂಗಿಯನ್ನು ಅರ್ಧಾಕಿರೋ ಪಾರ್ವತೀ ಉರ್ಫ್ ಅರ್ದಂಗಿ

    ReplyDelete