"ಮೊದಲು ಕಿವಿ ಹೋಯ್ತು....ಆಮೇಲೆ ಕಣ್ಣು ಹೋಯ್ತು..ಪ್ರಾಣ ಒಂದು ಉಳಿದಿದೆ"
ನನಗೆ ನಮ್ಮ ಅಪ್ಪ ಹೇಳಿದ ಕಡೆ ಸ್ಪಷ್ಟ ಮಾತುಗಳು...ಇನ್ನೂ ಕಿವಿಯಲ್ಲಿ ಗುಯ್ಯ್ಗಗುಟ್ಟುತ್ತ ಇದೆ...
ತಮ್ಮ ಇಡಿ ಜೀವನದಲ್ಲಿ ಛಲ ಹಾಗು ಆತ್ಮ ವಿಶ್ವಾಸದಿಂದ ಬೆಳೆದು ನಮ್ಮನ್ನು ಹಾಗೆ ಬೆಳಸಿದ ನಮ್ಮ ಅಪ್ಪ ಇಂದು ಸಂಜೆ ಸುಮಾರು ೫.೩೫ಕ್ಕೆ ನಮ್ಮನ್ನು ಹರಸಿ ಹೊರಟರು ...ಕಾಲನ ಕರೆ ಬಂದಾಗ ಯಾರು ನಿಲ್ಲುವುದಿಲ್ಲ ಎನ್ನುವ ಸತ್ಯ ನಮಗೆ ಅರಿವಾದ ಆ ಕ್ಷಣ ನಿಜಕ್ಕೂ ಯಾತನಮಯ .
ಬೇರೆಯವರ ಹುಟ್ಟು- ಸಾವಿನ ಬಗ್ಗೆ ಬರೆಯೋದು ತುಂಬಾ ಸುಲಭ..ತಮ್ಮ ಬಂಧು-ಮಿತ್ರರ ಬಗ್ಗೆ ಬರೆಯುವುದು ಕಷ್ಟ ಅಂತ ಪ್ರತೀತಿ..ಆದ್ರೆ ನಮ್ಮ ಅಪ್ಪ ನಮ್ಮ ಒಳಗೆ ಇದ್ದು ನನಗೆ ಬರೆಯೋದಕ್ಕೆ ಚೈತನ್ಯ ತುಂಬಿದ್ದರೆ ಅಂತ ನನ್ನ ಬಲವಾದ ನಂಬಿಕೆ...
ಜೀವನದ ಪ್ರತಿಯೊಂದು ಕ್ಷಣದಲ್ಲೂ ತಾಳ್ಮೆ, ಮೃದು ಮನಸಿಗೆ ಹೆಸರಾಗಿದ್ದ ನಮ್ಮ ಅಪ್ಪ..ಅವರ ಅಂತಿಮ ಕ್ಷಣಗಳು ಯಾತನಮಯವಾಗಿದ್ದು ವಿಧಿ ವಿಪರ್ಯಾಸ. ಪ್ರಾಯಶಃ ಆ ತಾಳ್ಮೆಯೇ ನಮ್ಮ ಮನಸನ್ನು ಹಿಡಿತದಲ್ಲಿರಿಸಿದೆ ಅಂದರೆ ತಪ್ಪಿಲ್ಲ..
ಸುಮಾರು ಎಪ್ಪತೊಂಬತ್ತು ಹುಟ್ಟು ಹಬ್ಬಗಳನ್ನ ಆಚರಿಸಿದ ಹಿರಿಯ ಜೀವ..ತನ್ನ ಎಂಬತ್ತನೇ ವರುಷಕ್ಕೆ ಕಾಲು ಇರಿಸಿದ ಸುಮಾರು ಮೂರು ತಿಂಗಳ ತರುವಾಯ ತನ್ನ ನೆನಪನ್ನು ನಮಗೆ ನೀಡಿ ಹೋಗಿದ್ದಾರೆ...
ನಮ್ಮ ಅಪ್ಪನ ಬಗ್ಗೆ ಏನೇ ಬರೆದರೂ ಅದು ಕಮ್ಮಿ ಎನ್ನುವುದು ನನ್ನ ಭಾವನೆ...
ಅವರ ತಾಳ್ಮೆ, ಎಂತಹ ಸಮಯದಲ್ಲೂ ಅಸಹನೆಗೊಳ್ಳದ ಸ್ವಭಾವ ತನ್ನ ಎಲ್ಲ ಮಕ್ಕಳನ್ನು ಒಂದು ನೆಲೆಗಟ್ಟಿಗೆ ಮುಟ್ಟಿಸಲು ಪಟ್ಟ ಶ್ರಮ ಎಲ್ಲದಕ್ಕೂ ನಾವು ಚಿರಋಣಿ...
ಅಣ್ಣ ನೀವೆಲ್ಲೂ ಹೋಗಿಲ್ಲ...ನಮ್ಮೆಲ್ಲೆ ಇದ್ದೀರಾ...ನಮಗೆ ಮಾರ್ಗದರ್ಶನ ನೀಡುತ್ತ ಇರಿ...
ಹೋಗಿ ಬನ್ನಿ ಅಣ್ಣ...ನಿಮ್ಮ ಅಪ್ಪ, ಅಮ್ಮ, ಚಿಕ್ಕಮ್ಮ ಎಲ್ಲರೂ ನಿಮಗಾಗಿ ಕಾಯುತ್ತ ಇದ್ದಾರೆ...
ನಿಮ್ಮ ಶ್ರಮ ಸಾರ್ಥಕವಾಗುವುದು ನಮ್ಮ ಸಾರ್ಥಕ ಜೀವನದಲ್ಲಿ...ಅದೇ ನಿಮಗೆ ನಾವು ತೋರುವ ಶ್ರದ್ದಾಂಜಲಿ...