Friday, April 30, 2021

ಶ್ರೀ ನಾಗಭೂಷಣ - ದಶವೇದ ಆಶ್ರಮ - ಸಾಧಕರು - ಗಣಪತಿ ಉಪಾಸಕರು

ಪ್ರತಿಯೊಬ್ಬರ ಒಳಗೂ ಪರಮಾತ್ಮನು ಇದ್ದಾನೆ .. ಆದರೆ ಅವನ ಇರುವಿಕೆಯನ್ನು ಪರಿಚಯಿಸಲು ನಮಗೊಬ್ಬ ದೇವಾಂಶ ಸಂಭೂತರಾ ಅವಶ್ಯಕತೆ ಇರುತ್ತದೆ. 

ಅಂತಹ ಒಬ್ಬ ಮೇರು ವ್ಯಕ್ತಿತ್ವವೇ ನನ್ನ ಸೋದರತ್ತೆಯ ಮಗ  ಶ್ರೀಯುತ ನಾಗಭೂಷಣ. 

ಸದ್ದಿಲ್ಲದೇ ಸಾಧನೆಯ ಶಿಖರವನ್ನು ಏರುತ್ತಿರುವ ಅವರ ಸಾಧನೆಯ ಹಾದಿ, ಧಾರ್ಮಿಕ ಕೈಂಕರ್ಯಗಳು, ನಂಬಿದವರಿಗೆ ನೀಡುತ್ತಿರುವ ಶಾಂತಿ ನೆಮ್ಮದಿ, ಅವರು ಕಟ್ಟಿ ಬೆಳೆಸುತ್ತಿರುವ ಆಶ್ರಮ, ದೇವಸ್ಥಾನಗಳನ್ನು ಪರಿಚಯಿಸುವ  ಒಂದು ವಿನಮ್ರ ಪ್ರಯತ್ನವಷ್ಟೇ ಈ ಲೇಖನ.. 

ಶ್ರೀ ನಾಗಭೂಷಣ ಅವರ ಸಾಧನೆಯನ್ನು ಹೇಳುವುದು ಅಂದರೆ ಸೂರ್ಯನಿಗೆ ಆರತಿ ಬೆಳಗಿದಂತೆ.. ಆದರೂ ನನಗೆ ತೋಚಿದ ಎರಡು ಮಾತುಗಳಲ್ಲಿ.. ಅವರ ಸಾಧನೆಯ ಒಂದು ಮಜಲನ್ನು ತೋರಿಸುವ ಒಂದು ಅಳಿಲು ಪ್ರಯತ್ನ ಈ ಲೇಖನದಲ್ಲಿ ಹೊಮ್ಮಿದೆ.. !

*******

> ಶ್ರೀಕಾಂತಾ ನನಗೆ ಒಂದು ಹತ್ತು ಎಕರೆ ಜಾಗದಲ್ಲಿ ಇಪ್ಪತೇಳು ನಕ್ಷತ್ರಗಳ ಗುಣಗಳನ್ನು ಹೊಂದಿರುವ ಗಿಡಗಳನ್ನು ನೆಟ್ಟು, ಸಂಬಂಧ ಪಟ್ಟ ನಕ್ಷತ್ರದವರು ಅದರ ಕೆಳಗೆ ಕೂತು.. ಜಪತಪ ಮಾಡಿ ಉತ್ಸಾಹ ತುಂಬಿಕೊಳ್ಳಬಹುದು.. ಇದನ್ನು ಮಾಡುವ ಹಂಬಲವಿದೆ 

> ದಶವೇದ ಅಂತ ಒಂದು ಆಶ್ರಮ ಕಟ್ಟುವ ಆಸೆ ಇದೆ.. 

> ನದಿಯ ನೀರಿನಲ್ಲಿ, ಹಾಲು, ಮೊಸರು, ಹರಳು, ಅರಿಶಿನ, ಲಾವಂಚ, ಅಷ್ಟ ಗಂಧ, ಮುಂತಾದ ದ್ರವ್ಯಗಳನ್ನು ಬಳಸಿಕೊಂಡು ಮಂತ್ರ ಘೋಷಗಳ ಜೊತೆಯಲ್ಲಿ ಸ್ನಾನ ಮಾಡಿ, ಜಪ ಮಾಡಿದಾಗ ಮನಸ್ಸು ಉಲ್ಲಸಿತಗೊಳ್ಳುವುದಷ್ಟೇ ಅಲ್ಲ.. ಶಕ್ತಿ, ಉತ್ಸಾಹ ಬರುತ್ತದೆ.. 

> ನಿಷ್ಕಲ್ಮಶದಿಂದ ಜಪ ತಪ ಮಾಡಿದಾಗ ನಮ್ಮ ಕರ್ಮಗಳು ಸವೆಯುವುದಷ್ಟೇ ಅಲ್ಲ.. ಬದುಕುವುದಕ್ಕೆ ದಾರಿ ಕಾಣುತ್ತದೆ, ಸಂಕಷ್ಟಗಳನ್ನು ದಾಟಿ ನಿಲ್ಲುವ ಚೈತನ್ಯ ಬರುತ್ತದೆ 

> ನದಿಯ ನೀರು ಸಮುದ್ರವನ್ನು ಸೇರುವ ಗುರಿಯನ್ನು ಇಟ್ಟುಕೊಂಡು ಹರಿಯುತ್ತಾ ತನ್ನ ಎದುರಿಗೆ ಬರುವ ಅಡೆ ತಡೆಗಳನ್ನು ದಾಟಿ ಮುನ್ನುಗ್ಗಿ, ತನ್ನ ಗುರಿಯನ್ನು ಸಾಧಿಸಿಕೊಳ್ಳುವ ಹಾಗೆ, ಈ ರೀತಿಯ ವಿಧಾನಗಳು ನಮ್ಮ ಬದುಕನ್ನು ಹಸಿರು ಮಾಡುತ್ತದೆ.. 

> ಶ್ರೀಕಾಂತಾ ಗಣಪತಿ ಇದ್ದಾನೆ, ದತ್ತಾತ್ರೇಯ ಇದ್ದಾನೆ, ನಾನಿದ್ದೀನಿ ಯಾವುದಕ್ಕೂ ಹೆದರಬೇಡ.. ಬದುಕು ಸುಂದರವಾಗುತ್ತದೆ ..ಧೈರ್ಯವಾಗಿರು.. ಇದೆಲ್ಲಾ ದೇವರು ಕೊಡುವ ಪರೀಕ್ಷೆಗಳು.. ನೀನು ಗೆದ್ದೇ ಗೆಲ್ಲುತ್ತೀಯ.. 

> ನೀ ಸುಮ್ಮನೆ ಬಾ ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ.. 

ಈ ರೀತಿಯ ಮಾತುಗಳು ಎಲ್ಲರ ಹೃದಯದಿಂದಲೂ ಬರುವುದಿಲ್ಲ.. ಅಂತಹಃಕರಣ, ವಿಶ್ವಾಸ ತುಂಬುವ ಮನಸ್ಸು, ನಾ ಇದ್ದೀನಿ ನಿನ್ನ ಜೊತೆಯಲ್ಲಿ ಎಂದು ಕೊಡುವ ಭರವಸೆಯ ಮಾತುಗಳು ಬಂದಿದ್ದು, ಬರುತ್ತಲಿರುವುದು, ಬರುತ್ತಲೇ ಇರುವುದು ನನ್ನ ಸೋದರತ್ತೆಯ ಮಗ ಶ್ರೀ ನಾಗಭೂಷಣನಿಂದ.. 

ಹೌದು.. ಏಕವಚನದಲ್ಲಿ ಮಾತಾಡುವ ಸಲಿಗೆ ಇದ್ದದ್ದರಿಂದ ಹಾಗೆ ಬರೆಯುತ್ತಿದ್ದೇನೆ. 

******

ಬೂದಿಯಿಂದ ಮೇಲೆದ್ದು ಬರುವ ಕಾಲ್ಪನಿಕ ಪಕ್ಷಿ ಫೀನಿಸ್ ತರಹ ಕಷ್ಟ ಕೋಟಲೆಗಳಿದ್ದರೂ ತನ್ನ ಸ್ವಂತ ಪರಿಶ್ರಮದಿಂದ ಮೇಲೆದ್ದು ಬಂದು ಹತ್ತಾರು, ನೂರಾರು ಕುಟುಂಬಗಳಿಗೆ ಸಾಂತ್ವನ ನೀಡುತ್ತಾ, ಬದುಕನ್ನು ಕಟ್ಟಿಕೊಳ್ಳುವ ಉತ್ಸಾಹ ತೋರುತ್ತಿರುವ ನಾಗಭೂಷಣ ಬೆಳೆದು ಬಂದ ಹಾದಿ ವಿಸ್ಮಯವೇ ಹೌದು. 

ಸುಮಾರು ಇಪ್ಪತ್ತು ವರ್ಷಗಳಿಂದ ಇವನ ಜೊತೆ ಒಡನಾಟವಿದೆ.. ಪ್ರತಿ ಬಾರಿ ಇವನ ಜೊತೆ ಮಾತಾಡಿದಾಗಲೂ ಆರೇಳು ತಿಂಗಳಿಗಾಗುವಷ್ಟು ಉತ್ಸಾಹ ತುಂಬಿ ಕಳಿಸುವ ಇವನ ಮಾತುಗಳು ನನಗೆ ಇಂದಿಗೂ ಶ್ರೀ ರಕ್ಷೆ.. ನನ್ನ ಬದುಕು ಕವಲು ಹಾದಿ ಹಿಡಿದಾಗಲೂ ಹುರುದುಂಬಿಸಿ, ನಾ ಇದ್ದೀನಿ ನಿನ್ನ ಜೊತೆ ಎಂದು ತನ್ನ ಹೆಗಲನ್ನು ಕೊಟ್ಟು ಸಾಂತ್ವನ ಹೇಳಿದ ಮಮತಾಮಯಿ.. 

ನನ್ನ ತಾಯಿ ತಂದೆಗೆ ನಾಗಭೂಷಣ ಇದ್ದಾನೆ ಶ್ರೀಕಾಂತನನ್ನು ನೋಡಿಕೊಳ್ಳೋಕೆ ಎನ್ನುವಷ್ಟು ನಂಬಿಕೆ.. ಹಾಗಾಗಿ ನಾ ಯಾವಾಗ ಹಾಸನಕ್ಕೆ ಹೋಗಲಿ, ಅಥವ ನಾಗಭೂಷನನ್ನು ಭೇಟಿ ಮಾಡಿ ಬರುತ್ತೇನೆ ಅಂತ ಹಲವಾರು ಬಾರಿ ಅಚಾನಕ್ ಹೊರಟಿದ್ದರೂ ಒಮ್ಮೆಯೂ ನನ್ನ ತಡೆದಿರಲಿಲ್ಲ.. ಅಷ್ಟು ವಿಶ್ವಾಸ ನಾಗಭೂಷಣನ ಮಾತುಗಳಿಂದ ನನ್ನ ಮನಸ್ಸು ಸರಿಯಾಗುತ್ತದೆ ಎಂದು.. 

*****

ತಾನು ಕಟ್ಟಿದ ಕನಸುಗಳನ್ನು ಒಂದೊದಾಗಿ ನನಸು ಮಾಡಿಕೊಳ್ಳುವ ಇವನ ಛಲ ನೋಡಿ ಬಲು ಖುಷಿಯಾಗುತ್ತಿತ್ತು..

ಘಂಟೆಗಟ್ಟಲೆ ಹಾಸನದ ಗೊರೂರು ಗ್ರಾಮದ ಹೇಮಾವತಿ ನದಿಯಲ್ಲಿ ಮಳೆ ಚಳಿ ಗಾಳಿ ಎನ್ನದೆ ನಿಂತು ಹಗಲು ರಾತ್ರಿ ಜಪ ಮಾಡಿ ಸಿದ್ಧಿಸಿಕೊಂಡ ಶಕ್ತಿಯನ್ನು ತನ್ನ ಏಳಿಗೆಗೆ ಉಪಯೋಗಿಸದೆ, ತನ್ನ ಬಳಿ ಬಂದ ಅನೇಕಾನೇಕ ಕುಟುಂಬಗಳಿಗೆ ಶಕ್ತಿಯಾಗಿ ನಿಂತದ್ದು, ನಿಂತಿರುವುದು, ನಿಲ್ಲುತ್ತಿರುವುದು ಈಗ ಇತಿಹಾಸ..

ಕೇರಳದ ಒಬ್ಬ ಗುರುಗಳಿಂದ ಮಂತ್ರೋಪದೇಶವಾಗಿ ಗಣಪತಿಯನ್ನು ನಂಬಿ ಗಣಪತಿ  ಉಪಾಸಕನಾಗಿ ಒಂದು ರೀತಿಯ ಪವಾಡ ಸದೃಶ್ಯವಾಗಿ  ಸಾಧನೆ ಮಾಡಿರುವುದು, ನಮ್ಮ ಕೊರವಂಗಲದ ಕುಟುಂಬದ ಒಂದು ಕೊಂಬೆಯಾಗಿ ನಿಂತಿರುವುದು ನನ್ನ ಪುಣ್ಯ. 

ಬಂದೂಕಿನಿಂದ ಹೊರಟ ಗುಂಡು ಗುರಿ ತಪ್ಪಬಹುದು, ಆದರೆ ನಾಗಭೂಷಣ ಹೇಳಿದ ಮಾತುಗಳು ನೆರವೇರದೆ ಹೋಗಿದ್ದು ನನ್ನ ಬದುಕಿನಲ್ಲಿ ನಾ ಎಂದೂ ಕಂಡೆ ಇಲ್ಲ ಕೇಳೇ ಇಲ್ಲ.. 

*****

ಸುಮಾರು ಹದಿನೈದು ಇಪ್ಪತ್ತು ಎಕರೆಯನ್ನು ಜಮೀನನ್ನು ಕೊಂಡು ಅದರಲ್ಲಿ ಆಶ್ರಮ ಕಟ್ಟುವ ಸಾಹಸಕ್ಕೆ ಕೈ ಹಾಕಿದಾಗ, ಮೊದಲು ಅಚ್ಚರಿ ಎನಿಸಿದರೂ ನಾಗಭೂಷಣನ ಸಾಮರ್ಥ್ಯದ ಬಗ್ಗೆಯಾಗಲಿ, ಅವನ ಆತ್ಮ ವಿಶ್ವಾಸದ ಮೇಲಾಗಲಿ ಕೊಂಚವೂ ಸಂದೇಶ ಇರಲಿಲ್ಲ ಬದಲಿಗೆ ಒಂದು ಪವಾಡವನ್ನು ಕಣ್ಣಿಂದ ನೋಡುವ ಸದವಕಾಶ ನನಗೆ ಸಿಕ್ಕಿದ್ದು ನನ್ನ ಪುಣ್ಯ ಎನ್ನಬೇಕು.. 

ನನ್ನ ಭಾಷೆಯಲ್ಲಿ ಹೇಳುವುದಾದರೆ, ಒಂದು ಬರಡು ಭೂಮಿಯನ್ನು ಹೊನ್ನಿನ ಭೂಮಿಯನ್ನಾಗಿ ಮಾಡಿದ್ದು ನಾಗಭೂಷಣನ ಸಾಧನೆ.  

ಮೊದಲು ಭೂಮಿ ಪೂಜೆ ಮಾಡಿದಾಗ ಕುಡಿಯಲು ನೀರನ್ನು ಹೊತ್ತು ತರಬೇಕಿತ್ತು, ನೆರಳಿಗೆ ಸುತ್ತಮುತ್ತಲೂ ಮರಗಳಿರಲಿಲ್ಲ... ವಾಹನವನ್ನು ಅನತಿದೂರದಲ್ಲಿ ನಿಲ್ಲಿಸಿ ಕಲ್ಲು ಮುಳ್ಳುಗಳ ಮಧ್ಯೆ ನೆಡೆದು ಬರಬೇಕಿತ್ತು.. 

ನಂತರ ವಾಹನವನ್ನು ಹಾಗೂ ಹೀಗೂ ಹತ್ತಿರ ಬರುವಂತಾದರೂ ಸುಮಾರು ಏಳೆಂಟು ಅಡಿಯಾಳಾದ ತಗ್ಗಾದ ನೀರಿನಿಂದ ಕೂಡಿದ ಹಾದಿಯನ್ನು ಏರಿ ಬರಬೇಕಿತ್ತು.. 

ಬರಬಿಸಿಲು, ಇಲ್ಲವೇ ತಡೆಯಲಾಗದಷ್ಟು ಬಿರುಸು ಮಳೆ, ಗಾಳಿ, ಚಳಿ ಎಲ್ಲವೂ ಆ ಪ್ರದೇಶದಲ್ಲಿ ತುಸು ಅಧಿಕವಾಗಿಯೇ ಬರುತ್ತಿತ್ತು ಎನ್ನಬಹುದು.. 

ಒಂದೊಂದೇ ಹಂತವನ್ನು ದಾಟಿ ಬರುತ್ತಿದ್ದ ಆಶ್ರಮ.. ದಶವೇದ ಎನ್ನುವ ಹೆಸರಿಗೆ ದಕ್ಕಂತೆ ದಶದಿಕ್ಕುಗಳಲ್ಲೂ ಪಸರಿಸ ತೊಡಗಿತು.. 

ಹತ್ತಾರು ಹಸುಗಳು ಇರಲಿ ಎಂಬ ಎಂಬ ಆಶಯದಿಂದ ಗೋಶಾಲೆ ರೂಪಗೊಂಡಿತು.. ಅಲ್ಲಿ ಬಂದಾಗ ಉಳಿಯಲು ಒಂದು ಅಡಿಗೆ ಮನೆ, ದೇವರ ಮನೆ, ಕೋಣೆ, ಸ್ನಾನದ ಗೃಹ, ಪೂಜಾ ಮಂದಿರ ಹೊಂದಿದ್ದ ಮನೆ ನಿರ್ಮಾಣವಾಯಿತು.. ಮೊದಲು ಪೂಜೆ, ಹೋಮಗಳು ಆ ಮನೆಯಲ್ಲಿಯೇ ನೆಡೆಯುತ್ತಿತ್ತು.. 

ನಂತರ ಯಾಗ ಶಾಲೆ ಆರಂಭ.. ಮೊದಲ ಕಟ್ಟಡಕ್ಕಿಂತಲೂ ಇನ್ನಷ್ಟು ಸೊಗಸಾಗಿ ಮೂಡಿಬಂದಿತು ಯಾಗ ಶಾಲೆ.. ಅದರ ಜೊತೆಯಲ್ಲಿಯೇ ಪ್ರವಚನ ಮಂದಿರ.. ಎಂಭತ್ತರಿಂದ ನೂರು ಜನ ನೆಲದ ಮೇಲೆ ಕುಳಿತು ಪ್ರವಚನ ಕೇಳಬಹುದಾದ ಪ್ರವಚನ ಮಂದಿರ ನಿರ್ಮಾಣವಾಯಿತು.. 

ಇಲ್ಲಿಂದ ನಾಗಭೂಷಣ ಹಿಂತಿರುಗಿ ನೋಡಿದ್ದೇ ಇಲ್ಲ (ನಾಗಭೂಷಣ ಎಂದಿಗೂ...  ಇಂದಿಗೂ ಹಿಂದೆ ತಿರುಗಿ ನೋಡಿದ್ದು, ಯೋಚಿಸಿದ್ದು ನನ್ನ ಪ್ರಕಾರ ಇಲ್ಲವೇ ಇಲ್ಲ).. 




ಪ್ರತಿ ತಿಂಗಳೂ ಹುಣ್ಣಿಮೆ ದಿನ ತಪ್ಪದೆ ಹೋಮಗಳು ನೆಡೆಯುತ್ತಿದೆ. ಜೊತೆಯಲ್ಲಿ ನಂಬಿ ಬಂದ ಅನೇಕ ಕುಟುಂಬಗಳು ತಮ್ಮ ಗುರುಗಳ ಅಣತಿಯಂತೆ ಹೋಮಗಳನ್ನು ಪೂಜೆಗಳನ್ನು ಮಾಡಿಸುತ್ತಿದ್ದರಿಂದ.. ಪೂಜೆ, ಹೋಮಗಳು ಯಥೇಚ್ಛವಾಗಿ ನೆಡೆಯಲಾರಂಭಿಸಿತು.. ಎಂದಿಗೂ ಯಾವುದರಿಂದಲೂ ಪ್ರತಿಫಲಾಪೇಕ್ಷೆಯನ್ನು ಬಯಸದೆ, ತನ್ನ ನಂಬಿ ಬಂದವರಿಗೆ ತನ್ನ ತಿಳುವಳಿಕೆಯ ಮಾತುಗಳಿಂದ ಸಂತೈಸುತ್ತಿದ್ದದ್ದು ಅಷ್ಟೇ ಅಲ್ಲದೆ, ಸಂಕಷ್ಟಗಳಿಂದ ಮೇಲೆದ್ದು ಬರಲು.. ತಾನು ನಂಬಿದ್ದ ಗಣಪತಿ ದತ್ತಾತ್ರೇಯರ ಆಶೀರ್ವಾದದ ಬಲದಿಂದ ಹಾದಿಯನ್ನು ತೋರಿಸುತ್ತ ಬಂದಿದ್ದಾನೆ. 




ದತ್ತ ಜಯಂತಿ, ಸಂಕಷ್ಟ ಚೌತಿ, ಹುಣ್ಣಿಮೆ ಸಂಕ್ರಮಣ ದಿನಗಳಲ್ಲಿ ನದಿ ಸ್ನಾನ, ಹೋಮಗಳು, ಗುರು ಪೌರ್ಣಿಮೆ, ರಾಮ ನವಮಿ, ಶರನ್ನವರಾತ್ರಿ ಹೀಗೆ ಎಲ್ಲಾ ಕಾಲಗಳಲ್ಲೂ ಸಲ್ಲಬೇಕಾದ ಜಪತಪ, ಪೂಜಾ ಹೋಮಾದಿಗಳು ಅವಿರತವಾಗಿ ನೆಡೆಯಲಾರಂಭಿಸಿತು. 

ಭಕ್ತಾದಿಗಳು ಆಶ್ರಮದ ಭವ್ಯವಾದ ತಾಣದಲ್ಲಿ ಬಂದು, ಆ ಭಕ್ತಿ  ಸಂಭ್ರಮಗಳಲ್ಲಿ ಮೈ ಮರೆತು ಭಗವಂತನ ಧ್ಯಾನ ಮಾಡುತ್ತಿದ್ದದ್ದು, ಮಾಡುತ್ತಿರುವುದು ನಾನೇ ಕಣ್ಣಾರೆ ಕಂಡು ಪುಳಕಿತನಾಗಿದ್ದೀನಿ. 

ಗೊರೂರು ಗ್ರಾಮದ ಹೇಮಾವತಿ ನದಿ ತೀರದಲ್ಲಿ ನರಸಿಂಹ ಸ್ವಾಮಿಯವವರ ಪುರಾತನ ದೇವಾಲಯವಿದೆ.. ಋಷಿ ಮುನಿಗಳು ತಪಸ್ಸು ಮಾಡಿದ ತಾಣವೆಂದು ಅಲ್ಲಿನ ಐತಿಹ್ಯ ಹೇಳುತ್ತದೆ.. ಆ ತಾಣ ಹೇಮಾವತಿ ಅಣೆಕಟ್ಟಿನ ತಪ್ಪಲಿನಲ್ಲಿರುವುದರಿಂದ ಅಲ್ಲಿ ನಿರ್ಮಾಣ ಕಾರ್ಯಕಷ್ಟ ಸಾಧ್ಯ .. ಆದರೆ ಭಗವಂತನ ಪ್ರೇರಣೆ.. ಗಣಪತಿಯೇ ನಾ ಇಲ್ಲಿ ನೆಲೆಸುತ್ತೇನೆ ಎಂದು ನಾಗಭೂಷಣನ ಅಂತರಾತ್ಮಕ್ಕೆ ಹೇಳಿದಾಗ.. ಅಲ್ಲಿ ಅಚ್ಚರಿ ಎನ್ನುವಂತೆ ನಾಗಭೂಷಣನ ತಪಶ್ಯಕ್ತಿಯಿಂದ ಪ್ರಭಾವಗೊಂಡು ಸರ್ಕಾರಿ ಅಧಿಕಾರಿಯೊಬ್ಬರ ಸಹಾಯದಿಂದ ಅಲ್ಲೊಂದು ಗಣಪತಿಯ ದೇವಸ್ಥಾನ ನಿರ್ಮಾಣಗೊಂಡಿದ್ದು ನಾ ಕಂಡ ಘಟನೆ ಸೂರ್ಯ ಚಂದ್ರ ಇರುವಷ್ಟೇ ಸತ್ಯ.. !





ಇಲ್ಲಿ ಬಂದು ಮಿಂದು ನರಸಿಂಹನನನ್ನು, ಗಣಪತಿಯನ್ನು ಪೂಜಿಸಿ ಗಜ ಕೇಸರಿ ಯೋಗ ಬರುತ್ತದೆ ಎಂದು ಹೇಳುವಾಗ ನನ್ನ ಮೈ ಕಂಪಿಸಿತ್ತು.. ಎರಡು ಮಹಾನ್ ದೈವವಾದ ಸನ್ನಿಧಿಯ ವಿಶೇಷ ವೆಂದರೆ.. ನರಸಿಂಹ ಸ್ವಾಮಿ ಪಶ್ಚಿಮಾಭಿಮುಖವಾಗಿದ್ದರೆ... ಗಣಪತಿ ಪೂರ್ವಾಭಿಮುಖವಾಗಿದೆ.. ಎರಡು ಶಕ್ತಿ ದೇವರುಗಳು ಎದುರು ಬದುರು ನಿಂತಿರುವುದು ಗಜಕೇಸರಿ ಯೋಗವಿರುವ ತಾಣ ಎನ್ನುವುದಕ್ಕೆ ಪುಷ್ಟಿಕೊಡುತ್ತದೆ.. 

ಈ ದೇಗುಲ ನಿರ್ಮಾಣವಾಗುವುದಕ್ಕೆ ನನಗೆ ತಿಳಿದು ಬಂದ ಒಂದು ಘಟನೆ.. ಇದೆ ಜಾಗದಲ್ಲಿ ಒಮ್ಮೆ ನಾಗಭೂಷಣ ನದಿಯಲ್ಲಿ ಅಹೋರಾತ್ರಿ ಕುತ್ತಿಗೆ ಮಟ್ಟದ ನೀರಿನಲ್ಲಿ ನಿಂತು ಜಪ ಮಾಡುತ್ತಿದ್ದಾಗ ಆನೆಯೊಂದು ಬಂದು ನಿಂತಂತೆ ... ಅದಕ್ಕೆ ನಾಗಭೂಷಣ ಕಬ್ಬನ್ನು ಕೊಡುತ್ತಿರುವಂತೆ ತೆ ತನ್ನ ಯೋಗ ದೃಷ್ಟಿಯಲ್ಲಿ ಕಂಡಾಗ.. ಅಲ್ಲಿಯೇ ಒಂದು ಗಣಪತಿ ದೇವಾಲಯವಾಗಬೇಕೆಂದು, ಗಣಪತಿ ನಾ ಇಲ್ಲಿ ನೆಲಸಲು ಇಚ್ಛಿಸುತ್ತೇನೆ ಎಂದು ಹೇಳಿದಂತೆ ಭಾಸವಾಯಿತು ಎನ್ನುವುದು ಈ ಗಣಪತಿ ದೇಗುಲ ಬರುವುದಕ್ಕೆ ಶಂಕು ಸ್ಥಾಪನೆಯಾಯಿತು ಎಂದು ನಾಗಭೂಷಣನ ಮಾತಲ್ಲಿ ಕೇಳಿದ್ದೇನೆ.. ತನ್ನ ತಾಯಿಗೆ ಈ ವಿಷಯ ಹೇಳಿದಾಗ ಅತಿ ಸಂತೋಷ ಪಟ್ಟು ಆಗಲಿ ಒಳ್ಳೆಯದಾಗಲಿ ಆ ಪರಮಾತ್ಮ ಇಲ್ಲಿ ಬಂದು ನೆಲೆಸುತ್ತಾನೆ ಎಂದರೆ ಅದು ಗಣಪತಿ ನಿನಗೆ ಅನುಗ್ರಹ ಮಾಡಿದ್ದಾನೆ ಎಂದೇ ಅರ್ಥ ಎಂದು ಹರಸಿದ್ದರು.. 

ಇಷ್ಟೆಲ್ಲಾ ಸದ್ದಿಲ್ಲದೇ ತನ್ನ ನಿಷ್ಕಲ್ಮಶ ಮನಸ್ಸಿನಿಂದ ತನ್ನ ಸುತ್ತ ಮುತ್ತಲ ಜನತೆಗೆ ಸಹಾಯ/ಮನಸ್ಸಿಗೆ ಶಾಂತಿ ಸಿಗುತ್ತಿದ್ದರೂ, ತಾನೂ ಏನೂ ಮಾಡಿಲ್ಲ ತನ್ನದೇನೂ ಇಲ್ಲ ಎನ್ನುವ ಮಗುವಿನಂಥ ಮನಸ್ಸಿನ ನಾಗಭೂಷಣನ ಮನಸ್ಸು ಒಂದು ಭವ್ಯವಾದ ಯೋಜನೆಯನ್ನು ನೇಯುತ್ತಲೇ ಇತ್ತು.. 

ದಶವೇದ ಅಂದರೆ ಏನೂ ಅಂದಾಗ.  ನಾಲ್ಕು ವೇದಗಳಿಗೆ ನಾಲ್ಕು ಗುರುಗಳಿದ್ದಾರೆ.. ಸತ್ಯ ಯುಗದಲ್ಲಿ ದತ್ತಾತ್ರೇಯ,  ಕೃತ ಯುಗದಲ್ಲಿ ದಕ್ಷಿಣಾಮೂರ್ತಿ, ದ್ವಾಪರದಲ್ಲಿ ವೇದವ್ಯಾಸರು, ಕಲಿಯುಗದಲ್ಲಿ ಶಂಕರ ಚಾರ್ಯರು ಹೀಗೆ ನಾಲ್ಕು ಗುರುಗಳ ಹೆಸರಿನ ಮೊದಲ ಅಕ್ಷರ ತೆಗೆದುಕೊಂಡು ಹಿಂದೆ ಮುಂದೆ ಮಾಡಿ ದಶವೇದ ಎಂದು ಮಾಡಿದ್ದೇನೆ ಎಂದಾಗ ನಿಬ್ಬೆರೆಗಾಗಿದ್ದೆ.. ವೇದಗಳು ಎಂದರೆ ನಾಲ್ಕು.. ಎಂದು ತಿಳಿತಿದ್ದ ನನಗೆ ಇನ್ನೊಂದು ಅಪೂರ್ವ ಪದಪುಂಜ ಸಿಕ್ಕಿದ್ದಷ್ಟೇ ಅಲ್ಲದೆ ಅದರ ಹಿನ್ನೆಲೆ ಕೂಡ ಅಷ್ಟೇ ಅದ್ಭುತವಾಗಿತ್ತು.. 

ಮದ್ಯದಲ್ಲಿ ಶ್ರೀ ಗಣಪತಿ.. ಅದರ ಸುತ್ತಲೂ ದತ್ತಾತ್ರೇಯ, ಶಂಕರ ಶಂಕರಚಾರ್ಯ, ವೇದವ್ಯಾಸರು, ದಕ್ಷಿಣಾಮೂರ್ತಿ ಈ ಮೂರ್ತಿಗಳ ಪುಟ್ಟ ಗುಡಿಯೂ ಬರುತ್ತದೆ ಎಂದು ನೀಲಿ ನಕ್ಷೆ ತೋರಿಸಿದಾಗ ಮನಸ್ಸಾರೆ ವಂದಿಸಿ ಕಾಲು ಮುಟ್ಟಿ ನಮಸ್ಕರಿಸಿದ್ದೆ.. ಮತ್ತು ನಾಗಭೂಷಣನ ಛಲ ಸಾಧನೆಯ ಆರಂಭಕ್ಕೆ ಸಲಾಂ ಎಂದಿದ್ದೆ.. 

ಭೂಮಿ ಪೂಜೆಯಾಯಿತು, ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ತಾಣದಲ್ಲಿ ಹದಿನೈದು ಇಪ್ಪತ್ತು ಅಡಿಯ ಕೆಳಗೆ ಶಕ್ತಿಯುತ ಯಂತ್ರಗಳನ್ನು ಭಕ್ತಿ ಪೂರ್ವಕವಾಗಿ ಮಂತ್ರಘೋಷಗಳ ನಡುವೆ ಇಟ್ಟು.. ಅದರ ಸುತ್ತಾ ಗುಡಿಯ ಗೋಡೆಯನ್ನು ಬೆಳೆಸುತ್ತಾ ಹೋದ ಹಾಗೆ ದೇವಾಲಯ  ವಿಶಿಷ್ಟ ರೂಪವನ್ನು ಪಡೆಯುತ್ತಾ ಹೋಯಿತು.. 

ದೇವಸ್ಥಾನದ ವಿನ್ಯಾಸ ಹೀಗೆ ಇರಬೇಕು, ಕಂಬಗಳು ಹೀಗೆ ಇರಬೇಕು.. ಇದೆ ಯಂತ್ರ ಚಿನ್ಹೆ ಇದೆ ಕಂಬದಲ್ಲಿ ಇರಬೇಕು.. ಗಣಪತಿಯ ವಾಹನ ಇಲಿಯು ಹೀಗೆ ಇರಬೇಕು .. ಗಣಪತಿ ಮೂರ್ತಿಯ ಶಿಲೆ ಹೀಗೆ ಇರಬೇಕು, ಇಂತದ್ದೇ ಇರಬೇಕು ತಡವಾದರೂ ಸರಿ ಯೋಚಿಸದೆ ಅದೇ ಮಾದರಿ ಶಿಲೆಯನ್ನು ಹುಡುಕಿಸಿದ್ದು ಅಷ್ಟೇ ಅಲ್ಲದೆ.. ಗಣಪತಿ ಹೀಗೆ ಇರಬೇಕು ಎಂದು ಇಂಚು ಇಂಚು ತನ್ನ ಸ್ವಸಾಮರ್ಥ್ಯದ ಯೋಚನಾ ಲಹರಿಯನ್ನು ಪಣಕ್ಕಿಟ್ಟು ಈ ದೇವಾಲಯ ಮೂಡಿ ಬರುವಂತೆ ಮಾಡಿದ.. 

ದೇವಾಲಯದ ಮುಂದೆ ಇರುವ ಕೆರೆಯಿಂದ ಇಷ್ಟೇ ಮೆಟ್ಟಿಲು ಇರಬೇಕು.. ಎರಡು ಹಂತಗಳಲ್ಲಿ ಹೀಗೆ ಇರಬೇಕು.. ಕೆರೆಯ ತೀರದಿಂದ ನೋಡಿದರೆ ಗಣಪತಿ ಮೂರ್ತಿ ಕಾಣಬೇಕು ಎಂದು.. ಯಾವ ಇಂಜಿನೀಯರ್ ಕೂಡ ತಿಣುಕುವಂತೆ ಲೆಕ್ಕಾಚಾರವಾಗಿ ಮೂಡಿಸಿರುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.. 

ಮದ್ಯೆ ಕೊರಾನಾ ದೆಸೆಯಿಂದ ಶಿಲೆಗಳು ಬರುವುದು, ಶಿಲ್ಪಿಗಳು ಬರುವುದು, ಕೆಲಸ ನಿಗದಿತ ಸಮಯದಲ್ಲಿ ಆಗದೆ ಖರ್ಚು ವೆಚ್ಚ ಹೆಚ್ಚಾಗಿದ್ದರೂ ತಲೆ ಕೆಡಿಸಿಕೊಳ್ಳದೆ.. ಅದರ ಬಗ್ಗೆ ಕಷ್ಟವಾದರೂ ಹಿಡಿದ ಕಾರ್ಯವನ್ನು ಬಿಡದೆ.. ತನ್ನ ಆರಾಧ್ಯ ದೇವರಿಗೆ ಒಂದು ತಾಣವನ್ನು ಆ ಭಗವಂತನ ಪ್ರೇರಣೆಯಂತೆ ಕಳೆದ ಭಾನುವಾರ ಏಪ್ರಿಲ್೨೫ ೨೦೨೧ ರಂದು ಪ್ರಾಣಪ್ರತಿಷ್ಠಾಪನೆ ಭವ್ಯವಾಗಿ ನೆರವೇರಿತು.. ಕೊರೊನ ಮೂಡಿಸಿದ್ದ  ಹಿಂಜರಿಕೆಯಿಂದ ಮತ್ತು ತಾತ್ಕಾಲಿಕ ಅಡಚಣೆಗಳಿಂದ ಜೀವಮಾನದಲ್ಲಿ ಒಮ್ಮೆ ನೋಡಬಹುದಾದ ಇಂತಹ ಕಾರ್ಯಕ್ರಮವನ್ನು ನಾನು ಮತ್ತು ನನ್ನ ಕುಟುಂಬ ತಪ್ಪಿಸಿಕೊಂಡಿದ್ದರ ಬಗ್ಗೆ ಬೇಸರವಿದ್ದರೂ, ಈ ಅಡಚಣೆಗಳೆಲ್ಲ ಮುಗಿದ ನಂತರ ಅಲ್ಲಿ ಹೋಗಿಬರುವೆ .. ಹೋಗಿ ಬರುತ್ತಲೇ ಇರುವೆ.. 
















ಸುಮಾರು ಹದಿಮೂರು ವರ್ಷಗಳ ಅಂತರದಲ್ಲಿ ಆಶ್ರಮ ಬೆಳೆದು ಬಂದ ಚಿತ್ರಗಳನ್ನು ನನ್ನ ಕಣ್ಣಿಂದ ನನ್ನ ಮೂರನೇ ಕಣ್ಣು ಸೆರೆಹಿಡಿಯುವಂತೆ ಅನುಕೂಲ ಮಾಡಿಕೊಟ್ಟ ದೈವಪ್ರೇರಣೆಗೆ ನನ್ನದೊಂದು ನಮಸ್ಕಾರಗಳು.. 




















ನಾಗಭೂಷಣನ ಬಗ್ಗೆ ಹೇಳುವುದು ಬೇಕಾದಷ್ಟಿದೆ ಮುಂದಿನ ಕೆಲವು ಸರಣಿಗಳಲ್ಲಿ ಇನ್ನಷ್ಟು ನನ್ನ ಅನುಭವಗಳನ್ನು ತಿಳಿಸುವೆ. 

ಹತ್ತಾರು ಚಿತ್ರಗಳನ್ನು ಈ ಲೇಖನಕ್ಕೆ ಪೋಣಿಸುವೇ ನಿಮ್ಮ ಗಮನಕ್ಕಾಗಿ.. ಜೊತೆಗೆ ಹಾಸನ ಮಾರ್ಗವಾಗಿ ಹೋಗುವಾಗ ಚನ್ನರಾಯ ಪಟ್ಟಣದಿಂದ ಮುಂದೆ ಸಾಗಿ ಉದಯಪುರದ ನಂತರ ಜೋಡುಗಟ್ಟೆ ಗ್ರಾಮದ ಬಳಿ ಇರುವ ಶಿವನ ದೇವಾಲಯದ ಬಳಿ ಬಲ ತಿರುವುದು ತೆಗೆದುಕೊಂಡು ಸುಮಾರು ನಾಲ್ಕು ಕಿಮೀಗಳು ಕರಡೇವು  ಗ್ರಾಮದ ಹಾದಿಯಲ್ಲಿ ಸಿಗುವುದೇ ಈ ಭವ್ಯವಾದ ದಶವೇದ ಆಶ್ರಮ.. 

ಗೂಗಲ್ ನಲ್ಲಿ ಕಂಡ ಆಶ್ರಮ 

Dashaveda Ashrama in Google Search



ಇದರ ನಕ್ಷೆಯನ್ನು ಹಾಕುತ್ತೇನೆ (Google Map) .. ಜೊತೆಗೆ ನಾಗಭೂಷಣ ಅವರ ದೂರವಾಣಿ ಸಂಖ್ಯೆಯನ್ನು ಹಾಕುವೆ (+91 94489 20247).. ಆಸಕ್ತರು ಒಮ್ಮೆ ಭೇಟಿ ನೀಡಿ.  

ಹರಿವ ನದಿ ಸಾಗರವ ಸೇರುವ ಗುರಿ ಇಟ್ಟುಕೊಂಡಂತೆ.. ತನ್ನ ಸುತ್ತ ಮುತ್ತಲ ಜನತೆಗೆಶುಭವಾಗಲಿ , ಒಳ್ಳೆಯದಾಗಲಿ, ದೈವಾನುಗ್ರಹ ಎಲ್ಲರಿಗೂ ಆಗಲಿ ಎನ್ನುವ ಆಶಯ ಹೊತ್ತು ಸಾಧಿಸಿರುವ ಈ ದೇವಾಲಯ ಹಾಗೂ ಆಶ್ರಮದ  ಗುರಿ ಈಡೇರಲಿ... ಏನಂದೆ.. ಈಡೇರಲಿ ಅಲ್ಲ ಈಡೇರುತ್ತದೆ ಅನ್ನುವ ಖಾತ್ರಿ ನನಗಿದೆ... !

22 comments:

  1. ಶ್ರೀಯುತ ನಾಗಭೂಷಣ ಮತ್ತು ಅವರ ದಶವೇದ ಆಶ್ರಮದ ಬಗೆಗಿನ ಈ ವಿಸ್ತೃತವಾದ ಚಿತ್ರ ಲೇಖನ ಉಪಯೋಗಕಾರಿಯಾಗಿದೆ.

    ಒಮ್ಮೆಯಾದರೂ ಅಲ್ಲಿಗೆ ಭೇಟಿ ನೀಡಿ ನೆಮ್ಮದಿಯ ಬೆಳಕು ಕಾಣಬೇಕೆಂದಿದ್ದೇನೆ.

    ReplyDelete
  2. ಸಮಗ್ರವಾದ ನಿನ್ನ ಬರಹ ಎಂತಹವರನ್ನು ಉತ್ಸಾಹಿಗಳನ್ನಾಗಿ ಮಾಡಿ ಒಮ್ಮೆಯಾದರೂ ನೋಡಿಬರಬೇಕೆನ್ನುವ ಮನಸ್ಸು ಖಂಡಿತ ಮೂಡಿಬಿಡುತ್ತದೆ. ನೀನು ನನ್ನನ್ನು ಯಾವಾಗ ಕರೆದೊಯ್ಯುತ್ತೀಯ? ಬಹಳ ದಿನಗಳ ಬೇಡಿಕೆ ಬಾಕಿ ಇದೆ. ನಿನಗೆ ಜ್ಞಾಪಕ ಇದೆಯೆಂದು ಭಾವಿಸುತ್ತೇನೆ. ಯಾವಾಗ ಇದು ಕೈಗೂಡುತ್ತದೆ? ಆದಷ್ಟು ಬೇಗ ಆಗಲಿ ಎಂದು ಗುರುನಾಥರಲ್ಲಿ ಬೇಡುವೆ

    ReplyDelete
  3. ನೋ ಕಾಮೆಂಟ್ಸ್ ಅಂತ ಬೇರೆ ಮಾಡಿದ್ದೀಯಾ. ನಿಜಕ್ಕೂ ಅದ್ಭುತ ಪವಾಡವೇ ಸರಿ, ಪ್ರತಿಯೊಂದು ಘಟನೆಗಳನ್ನು ಮೈರೋಮಾಂಚನ ಗೊಳ್ಳುವ ರೀತಿ ವಿವರಿಸಿರುವೆ.ಈ ಪರಿಕಲ್ಪನಾ ಶೈಲಿ ಆವರಿಸುವುದು ನಿನ್ನಂತವನಿಗೆ ಆ ಗಣೇಶ ವರದಾನದಿಂದ ಮಾತ್ರ ಸಾಧ್ಯ.
    ನನಗೆ ಘೋರ ಕಷ್ಟಬಂದಿತ್ತು ಆಗ ನಮ್ಮ ಮಾವನ ಮಗ ವಿಶ್ವಣ್ಣ ಯಾಕೆ ಯೋಚನೆ ಮಾಡ್ತೀಯಾ ನಮ್ಮ ನಾಗಭೂಷಣ ಇದ್ದಾರೆ ಎಂದು ಅವರು ಭೇಟಿ ಮಾಡಿಸಿದ್ದು,ಆಗ ಅವರು ಕೂಲಂಕಷವಾಗಿ ಗಮನಿಸಿ ವೈಜ್ಞಾನಿಕ ಉದಾಹರಣೆಗಳೊಂದಿಗೆ ಎಲ್ಲಾ ವಿವರಿಸಿದ ಪರಿ, ಅದು ಇಂದಿಗೂ ಮೆಲುಕು ಹಾಕುತ್ತಾ ಹೋದರೆ ಸತ್ಯದ ಅರಿವನ್ನು ತೋರಿಸುತ್ತಿದೆ.
    ನೀನು ಬರೆದ ಲೇಖನ ಪೂರ್ತಿ ಓದಿದೆ, ಇದೆಲ್ಲ ದೈವಾನುಗ್ರಹದಿಂದ ಮಾತ್ರ ಸಾಧ್ಯ.
    ಇದನ್ನು ಕೈಪಿಡಿ ರೂಪದಲ್ಲಿ ಹೊರತಂದರೆ ಉಪಯುಕ್ತ ಮಾಹಿತಿಗಾಗಿ ಹೊರಹೊಮ್ಮುವುದು.
    ನಾಗಭೂಷಣ ಗುರುಗಳಿಗೆ ನನ್ನ ನಮನಗಳನ್ನು ತಿಳಿಸುತ್ತನೆ.ಜೈಗಣೇಶ.

    ReplyDelete
  4. Fantastic and very inspiring Sri, we will go there once everything becomes stable. Thanks for sharing the story about a wonderful human being.

    ReplyDelete
  5. Super anna Chennagide article mattu pictures

    ReplyDelete
  6. So inspiring......would definitely like to visit this place.

    ReplyDelete
  7. We need more and more such places to get good energy and peace of mind

    ReplyDelete
  8. Nimma styleginta bhinnavagide .Paper article s odida thara . Gambhirya ide. Vishaya spashtavagide. Chitragalu jothe li idrantu haralige bangara kattidante....

    ReplyDelete
  9. Wow superb sri..
    The way you explained creates an image...
    I would definitely want to visit Mom would love it

    ReplyDelete
  10. tumba chennagide sri

    ReplyDelete
  11. I am falling short of words
    I got goosebumps Reading
    ದೈವ ಪ್ರೇರಿತ ನಿಮ್ಮ ಪರಿಶುದ್ಧವಾದ ಬರವಣಿಗೆ
    ಇವರ ಬಗ್ಗೆ ಅನೇಕ ಸಲ prasthaapisdri. With due respect to a great man that he is
    Am sure this only help him achieve his goal ಎಂದಾದರೂ ಒಂದು ಸಲ ಹೋಗಲೇಬೇಕು ಅಲ್ಲಿಗೆ
    ನಿಮ್ಮ ಬರವಣಿಗೆ ಅಷ್ಟು ಪ್ರೇರೇಪಿಸಿದೆ

    ReplyDelete
  12. ನಾಗಭೂಷಣ ಮತ್ತು ದಶವೇದ ಆಶ್ರಮದ ಬೆರಗಿನ ಬೆಳವಣಿಗೆಯನ್ನ ತುಂಬ ಚೆನ್ನಾಗಿ ಹಂತಹಂತವಾಗಿ ತೆರೆದಿರಿಸಿದೆ ನಿನ್ನ ಬರೆವಣಿಗೆ. ಕೊನೆಯಲ್ಲಿ ನೀಡಿದ ಮಾಹಿತಿಯೂ ಬಹಳ ಉಪಯುಕ್ತವಾದ್ದು.

    ReplyDelete
  13. Sir i am awestruck with your article about Sri Nagabushan Guruji. When Gid permits I definitely want to visit the place and take the blessings. Gurubhuyo Namaha 🙏🙏🙏

    ReplyDelete
  14. ಶ್ರೀ, ನಿನ್ನ ಎಲ್ಲ ಬರಹಗಳು ತುಂಬಾ ಚೆನ್ನಾಗಿ ಇರುತ್ತದೆ. ನನ್ನ ಸ್ವಂತ ಅಭಿಪ್ರಾಯ, ಎಲ್ಲ ಬರಹಗಳಿಗೆ ಕಲಶ ಇಟ್ಟಂತೆ ಇದೆ ಈ ಲೇಖನ. ನನಗೆ ನಾಗಭೂಷಣ ಒಡನಾಟ, ನಡೆದು ಬಂದ ಹಾದಿ ಎಲ್ಲವನ್ನೂ ಚೆನ್ನಾಗಿ ತೆರೆದಿಟ್ಟಿತು ಈ ಬರಹ.

    ReplyDelete
  15. Wowww amazing informative article Sri.
    Really while reading it was felt like visit once antha.
    Next time when you go plz take me too kano I also feeling have a look n take blessings from him antha okay naaa

    ReplyDelete
  16. ತುಂಬಾ ಸೊಗಸಾದ ವಿಶ್ಲೇಷಣೆ ಮತ್ತು ಸುಂದರವಾದ ಚಿತ್ರಣವನ್ನು ಒಳಗೊಂಡತಹ ಬರಹ ಶ್ರೀ..... ಒಳ್ಳೆಯ ವಿಚಾರ ಮತ್ತು ಉತ್ತಮ ತಿಳುವಳಿಕೆ ಒಳಗೊಂಡಿದೆ. ಧನ್ಯವಾದಗಳು ಹೀಗೆ ಸಾಗಲಿ ನಿನ್ನ ಬರಹ ಎಂದು ಆಶಿಸುವೆ.
    ಸಾಧ್ಯವಾದರೆ ಒಮ್ಮೆ ಅಲ್ಲಿಗೆ ಹೋಗಬೇಕು ನೋಡುವ

    ReplyDelete
  17. I am blessed to see the pics

    Thanks Sree for sharing..

    ReplyDelete
  18. ಅಬ್ಬಾ.. ಇವರು ಅವತಾರಿ ಪುರುಷರ ಸಾಲಿಗೆ ಸೇರಿದವರು ಅನ್ನಿಸುತ್ತದೆ ಶ್ರೀ ಅಣ್ಣ.. ಅವರ ನಿಸ್ವಾರ್ಥ ಕನಸು, ಕಾರ್ಯ ತತ್ಪರತೆ, ಸಾಧನೆಯ ಹಾದಿ ಎಲ್ಲವೂ ಅದ್ಭುತ,ಆದರ್ಶನೀಯ..

    ReplyDelete
  19. The description and the flow of words makes it a worthy read. Am really convinced that this has to be seen and perceived and appreciated in person by being in this divine locale. Also to soak in the aura of this pious venue. Kudos to the single minded devotion and purpose of Sri Nagabhushana.

    ReplyDelete
  20. ಈ ಸಿದ್ಧಿಯ ಹಿಂದೆ ಅನೇಕ ಜನ್ಮಗಳ ಸಾಧನೆ ಇರಲೇ ಬೇಕು. ನಿಮ್ಮ ಪುಣ್ಯದಿಂದ ನಿಮಗೆ ಅವರ ನಿಕಟ ಸಾನ್ನಿಧ್ಯ ದೊರೆತಿದೆ. ಶುಭವಾಗಲಿ.

    ReplyDelete
  21. Nagabhushana avara ashramada bagge neevu barediruvu adhbutavagide...

    ReplyDelete