Tuesday, January 26, 2021

ಪಂಚಮುಖಿಯ ಸಗ್ಗದಲ್ಲಿ ಗಣರಾಜ್ಯ ... !

ಚಂದವಳ್ಳಿ ತೋಟ ಕನ್ನಡದ ಅದ್ಭುತ ಚಿತ್ರದ ಅಂತಿಮ ದೃಶ್ಯದಲ್ಲಿ ಆ  ಊರಿನ ಪ್ರಮುಖರೊಬ್ಬರು ಹೇಳುವ ಮಾತು.. 

"ಅಣ್ಣ ತಮ್ಮಂದಿರು ಒಂದಾಗಿದ್ದರೇ ಮನೆ ಒಂದಾಗಿರುತ್ತದೆ.. 
ಮನೆ ಮನೆ ಒಂದಾಗಿದ್ದರೇ ಊರು ಒಂದಾಗಿರುತ್ತದೆ.. 
ಊರು ಊರು ಒಂದಾಗಿದ್ದರೆ ನಾಡು ಒಂದಾಗಿರುತ್ತದೆ.. 
ನಾಡು ಒಂದಾಗಿದ್ದರೆ ಯಾವ ಶಕ್ತಿನೂ ನಮ್ಮನ್ನು ಗೆಲ್ಲೋಕಾಗೋಲ್ಲ!!!!

ಅಂತಹ ಒಂದು ಅನುಭವ ಇಂದು ನನಗಾಯಿತು.. 

ವಠಾರದ ಜೀವನಕ್ಕೂ ಅಪಾರ್ಟ್ಮೆಂಟ್ ಜೀವನಕ್ಕೂ..  ಅಂತಹ ವ್ಯತ್ಯಾಸವಿಲ್ಲ.. ವಠಾರದ ಜೀವನ ಬಾಲ್ಯದಲ್ಲಿ ಕಂಡಿದ್ದೆ.. ಅಪಾರ್ಟ್ಮೆಂಟ್ ಜೀವನ ಅನುಭವಕ್ಕೆ ಈಗ ಬರುತ್ತಿದೆ.. 

ಪಂಚಮುಖಿ ಪ್ಯಾರಡೈಸ್ ಎನ್ನುವ ಈ ಪ್ಯಾರಡೈಸ್ ಗೆ ಬಂದು ಒಂದಾರು ತಿಂಗಳಾಯಿತು.. ಸ್ವತಂತ್ರ ದಿನಾಚರಣೆ ಸಂಭ್ರಮಕ್ಕೆ ಮೂಕ ಪ್ರೇಕ್ಷಕನಾಗಿದ್ದೆ.. ಗಣತಂತ್ರದ ದಿನಕ್ಕೆ ಅಳಿಲು ಸೇವೆ ಮಾಡುವ ಅವಕಾಶ ಸಿಕ್ಕಿತು. 

ಜೇನುಗಳೆಲ್ಲ ಅಲೆಯುತ್ತಾ ಹಾರಿ ಕಾಡೆಲ್ಲಾ ಕಾಡೆಲ್ಲಾ 
ಹನಿ ಹನಿ ಜೇನು ಸೇರಿಸಿದರೇನು.. ಬೇಕು ಎಂದಾಗ ತನ್ನದೆನ್ನುವ 

ಅಂತ ಅಣ್ಣಾವ್ರ ಹಾಡಿನಂತೆ.. ಪುಟ್ಟ ಪುಟ್ಟ ಹನಿಗಳು ಸೇರಿ ಈ ಸಂಭ್ರಮ ಅರಳಿತು .. 

ಒಬ್ಬೊಬ್ಬರೇ ಬಂದು ಸಮಾರಂಭಕ್ಕೆ ಸೇರಲು ಬರತೊಡಗಿದರು.. ನಮ್ಮ ದೇಶದ ಭವಿಷ್ಯ ಮಕ್ಕಳು ಓಡೋಡಿ ಬಂದರು 



ಶ್ರೀ ಸಮೀರ್ ಅವರ ಆರಂಭದ ಪುಟ್ಟ ಮಾತುಗಳು ಕಾರ್ಯಕ್ರಮಕ್ಕೆ  ಚಾಲನೆ ನೀಡಿತು.. 



ನಂತರ ಶ್ರೀ ಪದಕಿ ಅವರ ಅಮೃತ ಹಸ್ತದಲ್ಲಿ ನಮ್ಮ ದೇಶದ ಹೆಮ್ಮೆಯ ಸಂಕೇತ ತ್ರಿವರ್ಣ ಧ್ವಜರೋಹಣ ಮಾಡಿದರು.. 





ಎಲ್ಲರ ದೇಶಭಕ್ತಿ ಜಾಗೃತವಾಗುವಂತೆ ಒಂದೇ ದನಿಯಲ್ಲಿ ರಾಷ್ಟ್ರಗೀತೆ ಹಾಡಿದೆವು.. ಅದ್ಭುತ ಕ್ಷಣವಿದು.. 


ಕೊರೊನ ಎನ್ನುವ ಮಾಯಾಜಾಲದ ಜೀವಿಯನ್ನು ಎದುರಿಸುತ್ತ ಅದಕ್ಕೆ ಔಷಧಿ  ಕಂಡು ಹಿಡಿದ ನಮ್ಮ ಹೆಮ್ಮೆಯ ದೇಶದಲ್ಲಿ, ಆ ಚುಚ್ಚು ಮದ್ದನ್ನು ತೆಗೆದುಕೊಳ್ಳೋದ.. ಭಯವಾ.. ಧೈರ್ಯವಾ ಎನ್ನುವ ಗೊಂದಲಕ್ಕೆ ಶ್ರೀ ಪದಕಿಯವರ ಅನುಭವಾಮೃತ ಉಪಯುಕ್ತವಾಗಿತ್ತು.. 

ಅವರು ಹೇಳಿದ ಮಾತು "ಯುದ್ಧ ಅಂತ ಬಂದಾಗ ಮೊದಲು ಎದುರಿಸಿ ನಿಲ್ಲಬೇಕು ನಂತರ ಮಿಕ್ಕಿದ್ದು.. ಒಳ್ಳೆಯದೋ ಕೆಟ್ಟದಾಗುತ್ತೋ ಆಮೇಲೆ ಯೋಚನೆ ಮೊದಲು ಮುನ್ನುಗ್ಗಬೇಕು.. ಹಾಗಾಗಿ ಯೋಚನೆ ಮಾಡದೆ ಕೊರೊನಕ್ಕೆ ಚುಚ್ಚುಮದ್ದನ್ನು ತೆಗೆದುಕೊಳ್ಳಿ.. ನಾನೇ ಮೊದಲು ಮುಂದೆ ಬಂದು ಮದ್ದು ತೆಗೆದುಕೊಂಡೆ.. ಹೆಮ್ಮೆಯ ಕ್ಷಣವದು"  ಈ ರೀತಿಯ ಪ್ರೋತ್ಸಾಹದಾಯಕ ಮಾತುಗಳಿಗೆ ಅವರಿಗೆ ಧನ್ಯವಾದಗಳು.. !

ಶ್ರೀಮತಿ ಕಾವ್ಯ ದಂಪತಿಗಳು ದೇಶಭಕ್ತಿಯ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.. 


ಪುಟ್ಟ ಪುಟ್ಟ ಮಕ್ಕಳು ಎಲ್ಲರಿಗೂ ಚಾಕೊಲೇಟ್ ಕೊಟ್ಟು ಸಂಭ್ರಮಕ್ಕೆ ಒಂದು ಉಪಾಂತ್ಯ ಕೊಟ್ಟರು.. ಮುಂದೆ ಒಂದಷ್ಟು ಫೋಟೋಗಳು.. ಕಾರ್ಯಕ್ರಮ ಅಂತಿಮ ಹಂತಕ್ಕೆ ಬಂತು... !



ಇದಕ್ಕೂ ಮುಂಚೆ ಬಾವುಟವನ್ನು ಆರೋಹಣ ಮಾಡುವ ಅಭ್ಯಾಸ ಇರದ ನಮಗೆ.. ವರದಾನವಾದದ್ದು ಯು ಟ್ಯೂಬ್.. ಒಂದಷ್ಟು ವಿಡಿಯೋಗಳು.. ಒಂದಷ್ಟು ಪ್ರಯೋಗಗಳು.. ಕಡೆಯಲ್ಲಿ ಹಿರಿಯರೊಬ್ಬರ ಮಾರ್ಗದರ್ಶನದಿಂದ ಬಾವುಟದ ಆರೋಹಣಕ್ಕೆ ವೇದಿಕೆ ಸಿದ್ಧವಾಯಿತು.. !





ಒಂದು ಹೆಮ್ಮೆಯ ದಿನ  ಶುರುವಾಗಿದ್ದು ಹೀಗೆ.. !  ಆ ಕ್ಷಣದ ಕೆಲವು ಸುಂದರ  ಚಿತ್ರಗಳು ನಿಮಗಾಗಿ!














2 comments:

  1. ಚೊಕ್ಕವಾದ,ಸ್ಫುಟವಾದ ಒಕ್ಕಣೆ, ನಿಮ್ಮ ಬರಹಗಳು ಬಹುವಾಗಲಿ.

    ReplyDelete
  2. ಅದ್ಭೂತ ಮಾತುಗಳು.ಈ ಗಣತಂತ್ರ ದಿವಸ ಆಚರಣೆಯ ಒಂದು ಲಘು ಟಿಪ್ಪಣಿ ನಿಮ್ಮ ಅನುಭವ ಮತ್ತು ಪುಟಚಿತ್ರ ಮುಖಾಂತರ ನಮ್ಮೊಡನೆ ಹಂಚಿಕೊಳ್ಳಲಿಕ್ಕೇ ಧನ್ಯವಾದಗಳು.
    ಎಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತಾ ಈ ಮಹಾನ್ ವಾದ ದೇಶಕ್ಕೆ ನನ್ನ ಕೋಟಿ ಕೋಟಿ ನಮನಗಳು.
    ಜೈ ಹಿಂದ್.

    ReplyDelete