Friday, December 11, 2020

ಗುಂಡ ಮಾವ ಎನ್ನುವ ನನ್ನ ಬದುಕಿನ ಅದ್ಭುತ ವ್ಯಕ್ತಿ..!


 ಏನೋ ಶ್ರೀಕಾಂತ ಇದು...ಹೀಗಾಗಿ ಬಿಡ್ತು..

ಹೌದು ಕಣಮ್ಮ..ಈ ವರ್ಷದ ಮೇಲೆ ಜುಗುಪ್ಸೆ ಬರೋ ಹಾಗೆ ಆಗೋಯ್ತು...

ನನಗೆ ಗೊತ್ತು ನಿನ್ನ ಮನದಲ್ಲಿ ಓಡುತ್ತಿರುವ ಪದಗಳು..ನಾ ಹೇಳ್ತೀನಿ...ನೀ ಬರೀ..

ಅದ್ನೇ ಅಲ್ವಾ ನಾ ಯಾವಾಗಲೂ ಮಾಡೋದು..ನೀವುಗಳು ಹೇಳೊದನ್ನ ಬರೆಯೋದೆ ಕೆಲಸ ನನ್ನದು..!

****

ಅಮ್ಮ ನಾನು ಸೀಮಾಳನ್ನು ಮದುವೆಯಾಗುವ ನಿರ್ಧಾರ ಮಾಡಿದ್ದೀನಿ..ಶೀತಲ್ ಒಪ್ಪಿದ್ದಾಳೆ..ಮುಂದಿನ ಕಾರ್ಯಕ್ರಮ ನಿನಗೆ ಒಪ್ಪಿಸ್ಸಿದ್ದೀನಿ ಅಂದಾಗ..ನನ್ನ ತಲೆಯಲ್ಲಿ ಮಿಂಚಿನ ಯೋಚನೆಗಳು ಮೂಡಿದವು..

ಧಾರೆ ಎರೆಸಿಕೊಳ್ಳೋಕೆ ನಿನ್ನ ಅಣ್ಣ ಅತ್ತಿಗೆ ಇದ್ದಾರೆ..ಧಾರೆ ಎರೆದು ಕೊಡೋಕೆ ಸೀಮಾಳ ಅಪ್ಪ ಅಮ್ಮ ಈ ಹಾಳಾದ್ದು ಕೊರೊನಾ ಸಲುವಾಗಿ ಬರೋಕೆ ಆಗ್ತಾ ಇಲ್ಲ..ಏನು ಮಾಡೋದು..ಅಂತ ಯೋಚಿಸಿದೆ..

ತಕ್ಷಣ ನೆನಪಿಗೆ ಬಂದದ್ದು ಗುಂಡ..ಅವನನ್ನು ಕೇಳು ಅಂದೆ..ತಕ್ಷಣ ...ಓಕೆ ಓಕೆ..ನೀನೆ ಬರೀ...ನಿನ್ನ ಬರಹ ಓದೋಕೆ ಚೆನ್ನಾ ಅಂತ ಅಮ್ಮ ನಿಲ್ಲಿಸಿದರು..

ಮುಂದೆ ಡ್ರೈವರ್ ಸೀಟಿನಲ್ಲಿ ನಾ ಕುಳಿತೆ..

ಮದುವೆ ಹುಡುಗ ಹುಡುಗಿ..ಸ್ಥಳ..ಪುರೋಹಿತರು..ಊಟ ತಿಂಡಿಯ ವ್ಯವಸ್ಥೆ ಇವೆಲ್ಲವೂ ಸಿದ್ದವಾಗಿತ್ತು..ಮುಖ್ಯ ಧಾರೆ ಎರೆದು ಕೊಡುವ ಎರಡು ಸುಮಧುರ ಮನಸ್ಸುಗಳು ಬೇಕಿತ್ತು..

ಆಗ ಒಂದು ಕರೆ..ಚಟಾಪಟ ಮಾತಾಡುವ ಸುಧಾ ಅತ್ತೆ..ನಾನೂ ನಿನ್ನ ಮಾವ..ಡ್ರೆಸ್ ರೆಡಿ ಮಾಡ್ಕೋತೀವಿ...ನಮ್ಮನ್ನು ಕರೆದುಕೊಂಡು ಬಂದು ಕಳಿಸಿಕೊಡುವ ಜವಾಬ್ದಾರಿ ನಿನ್ನದು ಅಂದರು..

ನನ್ನ ಅಮ್ಮನ ಮೇಲೆ..ನಮ್ಮ ಮನೆಯ ಸದಸ್ಯರ ಮೇಲೆ ಗುಂಡ ಮಾವನಿಗೆ ಇರುವ ಅಭಿಮಾನ ಆ ಮಟ್ಟದ್ದು..

ಎರಡನೇ ಮಾತೇ ಇಲ್ಲ..ತಮಗೆ ಅಷ್ಟು ಹುಷಾರಿಲ್ಲದೇ ಹೋದರು ನನ್ನ ಬದುಕಿನ ತಿರುವಿಗೆ ಸಾಕ್ಷಿಯಾಗಿ ನಿಂತವರು ಗುಂಡ ಮಾವ..

ಸದಾ ಬಿರುಸು ಮಾತಿನಲ್ಲೇ ಬೈದರೂ ಅದರ ಹಿಂದೆ ಅಪಾರ ಪ್ರೀತಿ ಮಮಕಾರವಿತ್ತು..

ನಿಮಗೆ ಮನೆ ಬರೋಕೆ ಕರೆ ಕಳಿಸಬೇಕಾ..ಸುಮ್ಮನೆ ಬಂರ್ರೋ ಅಂತಾ ಸದಾ ಅಭಿಮಾನ ತುಂಬಿದ ಮಾತುಗಳ ಸರದಾರ ಗುಂಡ ಮಾವ..

ಫೇಸ್‌ಬುಕ್‌ ನಲ್ಲಿ ಅವರ ಆಹ್ವಾನ ಬಂದಾಗ..ಅವರ ನಿಜ ಹೆಸರೇ ಮರೆತು ಹೋಗಿದ್ದ ನನಗೆ ಅರೇ ಯಾರಿದು ಎಸ್ ಎ ನಾಗೇಶ್ ಅಂತ ಅವರಿಗೆ ಮೆಸೇಜ್ ಮಾಡಿ ಕೇಳಿದೆ..

ನನಗೆ ನೀವು ಹೇಗೆ ಗೊತ್ತು ಅಂದೆ..

ನಿಮ್ಮ ಮನೆಯವರೆಲ್ಲಾ ಗೊತ್ತು ನನಗೆ ಅಂದರು..

ಯಾವಾಗಿಂದ ಅಂದೆ

ನೀನು ಹುಟ್ಟುವುದಕ್ಕಿಂತ ಮೊದಲಿಂದಲೂ ಅಂದ್ರು..

ಆಗ ಪರಸ್ಪರ ಸ್ನೇಹಿತರ ಪಟ್ಟಿ ನೋಡಿದಾಗ ಗೊತ್ತಾಯಿತು..

ಅರೇ ಗುಂಡ ಮಾವ...ಕ್ಷಮಿಸಿ ಅಂತ ಕೆಟ್ಟದಾಗಿ ಹಲ್ಲು ಬಿಟ್ಟೆ..

ನಂತರ ಯಾವುದೋ ಒಂದು ಕಾರ್ಯಕ್ರಮದಲ್ಲಿ ಸಿಕ್ಕಾಗ..ನನ್ನ ನೋಡಿ ಜೋರಾಗಿ ನಕ್ಕರು..ನಾನು ಅವರನ್ನ ತಬ್ಬಿಕೊಂಡು ಹಲ್ಲು ಬಿಟ್ಟಿದ್ದೆ..

ನಮ್ಮ ಮನೆಯ ಯಾವುದೇ ಕಾರ್ಯಕ್ರಮವಾಗಲಿ ಗುಂಡಮಾವ ಸದಾ ಬರುತ್ತಿದ್ದರು..ನಮಗೆ ಮಾರ್ಗದರ್ಶನ ನೀಡುತ್ತಿದ್ದರು.

ನನನ ಬದುಕಿನ ತಿರುವಿಗೆ ಸಾಕ್ಷಿಯಾಗಿ ಜೊತೆಯಾಗಿ ನಿಂತಿದ್ದ ಗುಂಡ ಮಾವನ ಆಶೀರ್ವಾದ ಸದಾ ಹಸಿರಾಗಿರುತ್ತದೆ..!

**""

ಚಂದ ಕಣೋ ಶ್ರೀಕಾಂತ ಹೇಳಬೇಕಾದ್ದು ಸರಿಯಾಗಿದೆ..ಗುಂಡ ಜೀವನದಲ್ಲಿ ಕಷ್ಡ ಪಟ್ಟು ಮೇಲೆ ಬಂದವನು..ಆದರೆ ಗರ್ವ ಎಂದಿಗೂ ಅವನ ಸುತ್ರಾ ಸುಳಿಯಲಿಲ್ಲ..

ವಿಶಾಲು.. ಭಾವ ..ಅಂತ ಸದಾ ಪ್ರೀತಿ ‌ತೋರಿಸುತ್ತಿದ್ದ ಗುಂಡನನ್ನು ನನ್ನ ಕಡೆ ದಿನಗಳಲ್ಲಿ ನೋಡಲಾಗಲಿಲ್ಲ..ಆದರೆ ಈಗ ಇಲ್ಲಿಗೆ ಬರುತ್ತಿರುವುದು ನನಗೆ ತಡೆಯಲಾಗದಷ್ಡು ನೋವು ಕೊಡುತ್ತಿದೆ..

ಇಲ್ಲಿಗೆ ಬರುವ ವಯಸ್ಸಲ್ಲಾ..ತನ್ನ ಮಕ್ಕಳ ಏಳಿಗೆಯನ್ನು ಕಂಡು..ಮೊಮ್ಮಕ್ಕಳ ಜೊತೆಯಲ್ಲಿ ಮಡದಿಯ ಜೊತೆಯಲ್ಲಿ..ಇನ್ಮಷ್ಟು ವರ್ಷ ಇರಬೇಕಾದವನು ಹೀಗೆ ತಟಕ್ ಅಂತ ಹೊರಟಿದ್ದಾನೆ...ಆ ದೇವನ ಇಚ್ಚೆಯೇನೋ ಯಾರು ಬಲ್ಲರು..

****

ಗುಂಡ ಮಾವ..ಎಲ್ಲೇ ಇರಿ ಹೇಗೆ ಇರಿ ..ನಮ್ಮನ್ನೆಲ್ಲಾ ಸದಾ ಹರಸುತ್ತಿರಿ..!

8 comments:

  1. ಗುಂಡ ಮಾವನವರ ವ್ಯಕ್ತಿ ಚಿತ್ರಣ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದೀರ ಶ್ರೀಮಾನ್.
    ಅವರ ಕಣ್ಮರೆಯು ಬರಿಯ ಭೌತಿಕ, ಅವರು ಸದಾ ನಿಮ್ಮ ಮನದಲ್ಲೇ ನೆಲಸಿಹರು...

    ReplyDelete
  2. ಬಹಳ ದುಃಖಕರ ವಿಚಾರ, ನಿಜಕ್ಕೂ ಕಲ್ಪನೆ ಮಾಡಿಕೊಳ್ಳಲು ಆಗುತ್ತಿಲ್ಲ, ಭಗವಂತ ಗುಂಡನ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ ಓಂ ಶಾಂತಿಃ ಶಾಂತಿಃ ಶಾಂತಿಃ.

    ReplyDelete
  3. Nanna tammanege nanna ashru tarpana

    ReplyDelete
  4. Very nice.. True..there was father relation in last birth..completed in this birth and went.

    ReplyDelete
  5. *ದುಃಖದ ಸುದ್ದಿ*

    ನಮ್ಮ ಸೋದರಮಾವ (ನಮ್ಮ ಅಮ್ಮನ ಅಣ್ಣ - ಅನಂತ ಮಾವ)ನ ಮಗ ಗುಂಡ. ಅವರ ಅಪ್ಪ ಅಮ್ಮ ಇಟ್ಟ ಹೆಸರು ನಾಗೇಶ. ಆದರೆ ನೂರ್ಕಾಲ ಗುಂಡುಕಲ್ಲಿನಂತೆ ಬದುಕಲಿ ಎಂದು ಯಾರೋ ಹಿರಿಯರು ಗುಂಡ ಎಂದು ಕರೆಯಲಾರಂಭಿಸಿದರು ಅದು ಹಿರಿಕಿರಿಯರಾದಿಯಾಗಿ ಎಲ್ಲರಿಗೂ ಗುಂಡನೇ ಅದ. ನಮಗೆ ಗುಂಡ, ಕೆಲವರಿಗೆ ಗುಂಡ ಮಾವ, ಇನ್ನೂ ಕೆಲವರಿಗೆ ಗುಂಡ ಚಿಕ್ಕಪ್ಪ. ಒಟ್ಟಿನಲ್ಲಿ ಪರಿವಾರದವರಿಗೆ, ಅಕ್ಕ ಪಕ್ಕದ ಮನೆಯವರಿಗೆಲ್ಲಾ ಗುಂಡನೇ. ಇತ್ತೀಚೆಗೆ ಪರಿಚಯವಾದ ಕೆಲವೊಬ್ಬರಿಗೆ ಮಾತ್ರ ನಾಗೇಶ್. ಆದರೆ ಈ ಗುಂಡನ ದುರ್ದೈವವೆಂದರೆ ಬಾಲ್ಯದಲ್ಲೇ ಅಪ್ಪನನ್ನು ಕಳೆದುಕೊಂಡ. ಜೀವನದ ಸವಿಯನ್ನು ಅನುಭವಿಸಬೇಕಾದ ವಯಸ್ಸಿನಲ್ಲಿ ಮನೆ ನಿರ್ವಹಣೆಯ ಹೊಣೆಗಾರಿಕೆ ಮೈಮೇಲೆ ಬಂತು. ಯಾವುದೋ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಾ, ಮನೆಯಲ್ಲಿ ಉಪ್ಪಿನಕಾಯಿ, ಕೆಲವು ಪುಡಿಗಳನ್ನು ಮಾಡಿ ಮಾರಾಟಮಾಡುತ್ತಾ ಜೀವನ ನಿರ್ವಹಣೆ ಮಾಡಲು ಪ್ರಯತ್ನಿಸಿದರೂ, ಜೀವನಕ್ಕೆ ಸಾಕುಸಾಲದಾಯಿತು. ಕೊನೆಗೆ ಅವನನ್ನು ಹಿಡಿದ ವೃತ್ತಿ ತನ್ನ ಅಪ್ಪ, ಅಜ್ಜ ಮುತ್ತಜ್ಜರಿಂದ ಕುಲವೃತ್ತಿಯಾಗಿ ಬಂದಿದ್ದ "ಪೌರೋಹಿತ್ಯ". ಅದು ಗುಂಡನ ಜೀವನವನ್ನೇ ಬದಲಿಸಿತು. ಆ ವೃತ್ತಿಯನ್ನು ವ್ಯಾಪಾರಿ ದೃಷ್ಟಿಯಲ್ಲಿ ನೋಡದೆ, ಶ್ರದ್ಧೆಯಿಂದ ಮಾಡಲಾರಂಭಿಸಿದ. ಪರಿಣಾಮ ಜೀವನದಲ್ಲಿ ಒಂದು ರೀತಿಯ ನೆಮ್ಮದಿ ಕಾಣಲಾರಂಭಿಸಿತು. ತನ್ನಿಬ್ಬರು ಹೆಣ್ಣು ಮಕ್ಕಳಿಗೂ ಯೋಗ್ಯರೊಂದಿಗೆ ಮದುವೆ ಮಾಡಿ ಅನಂದವಾಗಿದ್ದ. ಆದರೆ, ಕಳೆದ ಎರಡು ವರ್ಷದ ಹಿಂದೆ ಗುಂಡನಿಗೆ ಕ್ಯಾನ್ಸರ್ ಮಾರಿ ಬರಸಿಡಿಲಿನಂತೆ ಅಪ್ಪಳಿಸಿತು. ಈ ಕಾರಣದಿಂದ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚುಮಾಡಿದ್ದರೂ ಗುಣವಾಗದೇ, ಇಂದು ಬೆಳಗ್ಗೆ 9.20ಕ್ಕೆ ನಮ್ಮನ್ನು ಅಗಲಿದ್ದಾನೆ. ಯಾರದೇ ಸಾವು ನೋವು ಸಂಭವಿಸಿದರೂ ಅಲ್ಲಿಗೆ ತಾನೇ ಮುಂದಾಗಿ ಹೋಗಿ ನಿಂತು ಎಲ್ಲವನ್ನೂ ನಿರ್ವಹಿಸುತ್ತಿದ್ದ ಗುಂಡ ಇನ್ನು ಇಲ್ಲವೆನ್ನುವುದೇ ಸಂಕಟದ ವಿಷಯ. ಅವನ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ. ಅವನ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ.
    ಓಂ ಶಾಂತಿಃ ಶಾಂತಿಃ ಶಾಂತಿಃ

    ReplyDelete
  6. ಅಣ್ಣ ನಿಮ್ಮ ಬರಹ ಹೃದಯ ಮತ್ತು ಕಣ್ಣು ತುಂಬಿ ಬಂತು ��

    ReplyDelete
  7. ಏನೂ ಬರೆಯಲು ಆಗುತ್ತಿಲ್ಲ. 42 ವರ್ಷಗಳ ಅನುಬಂಧದಲ್ಲಿ ಗುಂಡನ ವ್ಯಕ್ತಿವವನ್ನು ಕಂಡು, ಕೊನೆ ದಿನಗಳ ಅವನ ಮಾತುಗಳು ಕೇಳದ ಹಾಗೆ ಆಯಿತು. ಮೌನವಾಗಿ ವೇದನೆ ಅನುಭವಿಸಿದ ಪರಿ ಮರೆಯಲಾಗದು
    ನಿನ್ನ ಪ್ರೀತಿಯ ಮಾತುಗಳ ಅಶ್ರು ತರ್ಪಣ ಅವನಿಗೆ ಸಲ್ಲುತ್ತದೆ.

    ReplyDelete
  8. An incredible person with lot of credibility.

    ReplyDelete