Sunday, November 1, 2020

ಅಮ್ಮ ಎನ್ನುವ ದೈತ್ಯ Server - ಭಾಗ ೩

ಜಗದಗಲದ ಹೃದಯದ ವಿಶಾಲುವಿನ ಸ್ವಗತ ಮಾತುಗಳು !!!

ಸಗ್ಗದಿಂದ ಸಗ್ಗಕ್ಕೆ  ನನ್ನ ಪಯಣದ ಹಾದಿಯಲ್ಲಿ ಬಂದ  ಹೂವಿನ ಪಥದಷ್ಟೆ ಕಲ್ಲಿನ ಏರು ಪೇರುಗಳ ಹಾದಿಯೂ ಕೂಡಿತ್ತು...!

ಸಗ್ಗ ಅಂದೇ ಅಲ್ವೇ...ಹೌದು ನಾ ಸುಮ್ಮನೇ ಹೇಳಿಲ್ಲ...ಕಿತ್ತಾನೆ ಎಂಬ ಸ್ವರ್ಗದಲ್ಲಿ ಹುಟ್ಟಿ ಬೆಳೆದ ನನಗೆ..ತಾತಾ ಬೊಬ್ಬೆ ರಾಮಯ್ಯ..ಅಜ್ಜಿ ಲಕ್ಷ್ಮಿ ದೇವಿ..ದೊಡ್ಡ ಮಾವ..ಸಣ್ ಮಾವ..ಅತ್ತೆಯಂದಿರು..ಎಲ್ಲರೂ  ನನಗೆ ಪ್ರೀತಿಯನ್ನು ಉಣ ಬಡಿಸಿದವರೇ..

ಅವರ ಮುಂದಿನ ಜನಾಂಗ ಕೂಡಾ..ವಿಶಾಲೂ ಎಂದರೆ ಸಾಕು ..ಮೊಗವರಳುತ್ತಿತ್ತು..ಅದೇನು ಪುಣ್ಯ ಮಾಡಿದ್ದೆನೋ...ನನ್ನ ಕಂಡರೆ ಹುಣ್ಣಿಮೆಯಲ್ಲಿ ಸಾಗರ ಉಕ್ಕುವ ಹಾಗೆ ಅವರ ಹೃದಯ ತುಂಬಿ ಬರುತ್ತಿತ್ತು..

ನಾ ಎಷ್ಟೇ ಜನ್ಮವೆತ್ತಿದರೂ ಈ ಋಣವನ್ನು ತೀರಿಸಲಾರೆ..

ಕಿತ್ತಾನೆಯ ಬೊಬ್ಬೆರಾಮಯ್ಯನವರ ವಂಶದ ಪ್ರತಿಯೊಬ್ಬರಿಗೂ ನನ್ನ ಶಿರಸಾ ನಮಾಮಿ..

ಇದಕ್ಕೆಲ್ಲಾ ಕಳಸವಿಟ್ಟಂತೆ ಹೋದ ವರ್ಷ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ನನ್ನನ್ನು ಸತ್ಕರಿಸಿ...ಗೌರವಿಸಿ ಅವರ ಅಭಿಮಾನದ ಕಿರೀಟವನ್ನು ತೊಡಿಸಿದ್ದು ನನ್ನ ಜೀವನದ ಸಾರ್ಥಕತೆಯ ಕ್ಷಣಗಳು...!

ಆ ಸಗ್ಗದಲ್ಲಿ ಬೆಳೆದು ..ಆಲೆಮನೆಯ ಕಬ್ಬಿನ ಹಾಲು..ತೋಟದ ಎಳನೀರು..ಗೆಡ್ಡೆ ಗೆಣಸುಗಳು ನನ್ನ ಬಾಲ್ಯವನ್ನು ಬೆಳೆಸಿತು!

ಪ್ರಾಯಕ್ಕೆ ಬರುವ ತನಕ..ನನಗೆ ತಾಯಿ ಇಲ್ಲ ಎನ್ನುವುದೇ ತಿಳಿದಿರಲಿಲ್ಲ...ನನಗೆ ಎರಡು ವರ್ಷವಿದ್ದಾಗಲೇ ಅಸುನೀಗಿದರು ಎಂಬ ಸತ್ಯ ಗೊತ್ತಾಗುವಷ್ಟರಲ್ಲಿ ಚಿಕ್ಕಮ್ಮ ಬಂದಾಗಿತ್ತು...

ಮುಂದಿನ ಬದುಕಿಗೆ ಪ್ರೀತಿ ಧಾರೆಯೆರೆದು ಹೆಮ್ಮರವಾಗಿಸಿದ್ದು ಶಂಖದ ಕುಟುಂಬ..ನನ್ನ ಪ್ರೀತಿಯ ರಾಮಣ್ಣ, ಕಿಟ್ಟಣ್ಣ, ಅನಂತ..ಹಾಗೂ ನನ್ನ ತವರು ಮನೆ ಮತ್ತು ಅವರ ಕುಟುಂಬದವರು ನನ್ನ ಬದುಕಿಗೆ ಇನ್ನಷ್ಟು ಹೊಳಪನ್ನು ನೀಡಿತು..

ನನ್ನ ಸೋದರತ್ತೆಯರಾದ ಕೌಶಿಕದ ಗೌರಮ್ಮ..ಹೊಳಲಕೆರೆಯ ಪುಟ್ಟಿ ಅಂತಾನೇ ಜನಜನಿತವಾಗಿದ್ದರು..ಕಿತ್ತಾನೆಯ ಅನ್ನಪೂರ್ಣೆ..ಸದ್ಯಕ್ಕೆ ವಯೋಸಹಜವಾಗಿ ಕೆಲವು ಹೆಸರುಗಳು ನನ್ನ ಮಾತಲ್ಲಿ ಇಲ್ಲದಿದ್ದರೂ..ನನ್ನ ಮನೆ ಮನದೊಳಗೆ ಸದಾ ಹಸಿರಾಗಿದ್ದಾರೆ...

ಕಿತ್ತಾನೆ, ಹಾಸನ, ಪಾಳ್ಯ, ಕೌಶಿಕ, ಶಿವಮೊಗ್ಗ, ಮೊಸಳೆ, ಕೋರವಂಗಲ..ಬೆಂಗಳೂರು..ಅದರ ಅಕ್ಕ ಪಕ್ಕದ ಊರುಗಳು ಎಲ್ಲೆಡೆ ಪಸರಿಸಿದ್ದ ನನ್ನ ಬಂಧುಮಿತ್ರರ ಸಹೃದಯತೆಗೆ ಮನಸ್ಸು ಕರಗಿ ನೀರಾಗಿತ್ತು!

ಮುಂದಿನ ಪೀಳಿಗೆ ಕೂಡಾ ತಮ್ಮ ಹೃದಯದೊಳಗೆ ವಿಶಿಷ್ಟವಾದ ಸ್ಥಾನ ನೀಡಿದರು..

ಕಿತ್ತಾನೆಯ ಗಿರಿಜಾ, ಮಂಗಳ,ಅನುಸೂಯ,ಪದ್ಮ, ಗಾಯಿತ್ರಿ, ಚಂದ್ರ, ಶ್ರೀರಾಮ,ಸತ್ಯನಾರಾಯಣ..ಮಂಜು..ಉಮೇಶ ದೇವರಸ್ವಾಮಿ,ಗೋಪಾಲ, ವಸಂತ..ಶ್ಯಾಮಲಾ ಕುಮಾರಿ..ಶಾಮಣ್ಣ..ಸೂರಾ..ಶ್ರೀಧರ ..ಮತ್ತುಅವರೆಲ್ಲರ ಕುಟುಂಬ ನನ್ನ ಉಡಿಯನ್ನು ತುಂಬಿಸಿಕೊಟ್ಟ ಪ್ರೀತಿಗೆ ಬೆಲೆಕಟ್ಟಲಸಾಧ್ಯ

ಒಂದೇ ತಾಯಿಯ ಮಕ್ಕಳಲ್ಲದಿದ್ದರೂ..ಒಡಹುಟ್ಟಿದವಳಿಗಿಂತ ಹೆಚ್ಚು ಪ್ರೀತಿ ತೋರಿಸಿದ ಗೋಪಾಲ..ಶಂಕರ..ರಾಜಾ..ಸರೋಜ ಇವರ ಪ್ರೀತಿಯನ್ನು ಹೇಗೆ ಮರೆಯಲಿ..ಅವರ ಕುಟುಂಬ ಮತ್ತು ಮಕ್ಕಳು ಕೂಡ ನನ್ನನ್ನು ಅಷ್ಟೇ ಅಕ್ಕರೆಯಿಂದ ನೋಡಿಕೊಂಡರು... 

ನನ್ನ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾದ ವಿಶ್ವ, ಅಣ್ಣಯ್ಯ, ರಾಜು..ಸರಸ್ವತಿ.. ಉಮಾ..ಗುಂಡಾ..ಕಮಲ..ಶೈಲಾ..ಮಣಿ... ಗೀತಾ..ಶಾರದ..ವೀಣಾ...ತ್ರಿವೇಣಿ..ಮತ್ತು ಅವರ ಕುಟುಂಬದವರ ಪ್ರೀತಿ ನನ್ನ ಮೂಖನನ್ನಾಗಿಸಿತು...

ಬಾಳ ಸಂಗಾತಿಯಾಗಿ ನನ್ನ ಬದುಕಿಗೆ ಹಾಲು ಜೇನು ಉಣಬಡಿಸಿದ ನನ್ನ ಯಜಮಾನರನ್ನು ಹೇಗೆ ಮರೆಯಲಿ..!

ಮಂಜಿನಂತಹ ತಣ್ಣಗಿನ ವ್ಯಕ್ತಿತ್ವ..ಮೃದು ಮಾತು..ಗುರಿ ಸಾಧಿಸುವ ಛಲ..ಕುಹಕಗಳು ಹಾದಿಯಲ್ಲಿ ಬಂದರೂ ತಲೆ ಕೆಡಿಸಿಕೊಳ್ಳದೇ ತಾನು ನಂಬಿದ್ದ ಹಾದಿಯನ್ನು ಬಿಡದೇ ನನ್ನನ್ನು ಅದೇ ಮಾರ್ಗದಲ್ಲಿ ನೆಡೆಸಿದ..ನನ್ನ ಪತಿರಾಯರ ಸಂಗವೇ ಸಗ್ಗವಾಗಿತ್ತು!

ಅವರು ಕೊಟ್ಟ ನಾಲ್ಕು ಮುದ್ದಿನ ಮಣಿಗಳು .. ನಮಗೆ ಯೋಗ್ಯತೆಯಿತ್ತೋ .ಮಕ್ಕಳಿಗೆ ಯೋಗವಿತ್ತೋ ಅರಿಯೆನು.. ಆದರೆ  ನಮಗೆ ಸಲ್ಲಬೇಕಾದ ಪ್ರತಿ ಸಂಸ್ಕಾರವನ್ನೂ ಮಾಡಿದರು ..ಅರವತ್ತನೇ ವರ್ಷದ ಶಾಂತಿ..ಎಪ್ಪತ್ತನೇ ವರ್ಷದ ಶಾಂತಿ ಭರ್ಜರಿಯಾಗಿ ನೆಡೆಸಿದರು..ನಮ್ಮ ಮದುವೆಯಾಗಿ ಐವತ್ತು ವರ್ಷಗಳ ಸಂಭ್ರಮವನ್ನು ಅದ್ದೂರಿಯಾಗಿ ಮಾಡಿದರು.. 

ಎಪ್ಪತ್ತನೇ ವರ್ಷದ ಶಾಂತಿ ಮಾಡಿದಾಗ ಬೆಂಗಳೂರಿಗೆ ಬರಲು ಪ್ರೇರೇಪಿಸಿದ ಶಿವಮೊಗ್ಗದ ಶೋಮಿ (ಅರ್ಥಾತ್ ನಾಗರತ್ನ ಮಗ ಸೋಮಶೇಖರ್) ಹೇಳಿದ್ದು.. ಮಂಜಣ್ಣ ಇಂತಹ ಮಕ್ಕಳನ್ನು ಪಡೆದ ನೀನೆ ಧನ್ಯ.. ಎಂದಾಗ ನನ್ನ ಯಜಮಾನರ ಕಣ್ಣಲ್ಲಿ ಸಾರ್ಥಕತೆ ಜಿನುಗಿತ್ತು.. 

ಶಿವಮೊಗ್ಗದ ಕಷ್ಟದ ದಿನಗಳಲ್ಲಿ ಸಹಾಯಕ್ಕೆ ನಿಂತಿದ್ದ ಕಿತ್ತಾನೆಯ ಸುರೇಶನನ್ನು ಮರೆಯಲಾರೆ.. 

ಬೆಂಗಳೂರಿಗೆ ಬಂದಾಗ "ದೊರೆ ನೀನು ನೆಲೆ ನಿಂತು ನಂತರ ನಿನ್ನ ಪರಿವಾರವನ್ನು ಕರೆದುಕೊಂಡು ಬಾ" ಎಂದು ಹುರಿದುಂಬಿಸಿ.. ನೆರಳಾಗಿ ನಿಂತ ನನ್ನ ಯಜಮಾನರ ಸೋದರತ್ತೆ ಮಗ ಗುಂಡನ ಸಹಾಯವನ್ನು ಸದಾ ನೆನಪಲ್ಲಿ ಇಟ್ಟುಕೊಂಡಿದ್ದೆ.. 

ಮಕ್ಕಳು ಸಹಸ್ರ ಚಂದ್ರ ದರ್ಶನ ಮಾಡಬೇಕಿತ್ತು ಅಂತ ಪ್ಲಾನ್ ಮಾಡಿದ್ದರು ..ಸಾಕು ಕಣೇ ಅಂತ ಅವರು ಹೊರಟು ಬಿಟ್ಟರು.. ನನಗೆ ಮಾಡಬೇಕು ಅಂತ ಮಕ್ಕಳು ಪ್ಲಾನ್ ಮಾಡಿದರು..ಮಕ್ಕಳೇ ನನಗೆ ಸಾಕು ದಣಿವಾಗಿದೆ ಅಂತ ನಾನೂ ಹೊರಟು ಬಿಟ್ಟೆ...!

ನನ್ನತ್ತೆ ತಾಯಿ ಪ್ರೀತಿ ತೋರಿಸಿದರು..ಸುಬ್ಬನರಸಮ್ಮನನ್ನು ನರಸು ಅಂತ ಮದುವೆಗೆ ಮುಂಚೆ ಕರೆಯುವಷ್ಟು ಸಲುಗೆ ಇತ್ತು..ನಾಗರತ್ನ..ಜಯ..ಸುಬ್ಬಲಕ್ಷಮ್ಮ ಎಲ್ಲರೂ ನನ್ನ ಪ್ರೀತಿಸಿದರು‌...ಆಶೀರ್ವದಿಸಿದರು!

ನನ್ನ ಅತ್ತೆ ಮಾವನ ಜೊತೆ..ನನ್ನ ಭಾವ..ಮೈದುನರಾದ ಅಪ್ಪು..ಕೃಷ್ಣ..ಕುಮಾರ..ನಾಗರಾಜ..ಮತ್ತು ಅವರ ಪತ್ನಿಯರಾದ ಸರಸ್ವತಿ..ರಾಧ..ಉಷಾ..ಪದ್ಮ..ಎಲ್ಲರ ಪ್ರೀತಿ ಗೌರವಗಳು ಅವರ ಮಕ್ಕಳ ಪರಂಪರೆಯಲ್ಲೂ ಮುಂದುವರೆಯಿತು!  

ನನ್ನ ಯಜಮಾನರ ಜೊತೆ ಬೆರೆತು..ಹಾಸನ ..ಶಿವಮೊಗ್ಗದಲ್ಲಿ..ಬೆಳೆಸಿದ ನನ್ನ ಸಂಸಾರ ಮಾಯನಗರಿಯಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡಿದ್ದು ನನಗೆ ಬಹಳ ನೆಮ್ಮದಿ ನೀಡಿತು..

ಕೃಷ್ಣವೇಣಿ ಹೋರಾಟದ ಬದುಕು ಕಂಡು..ಮನೆ ಮಾಡಿದಳು..ವಿಜಯ ಅಪ್ಪ ಹಾಕಿದ ಆಲದ ಮರದಿಂದಲೇ ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಟ್ಟು ಮನೆ ಕಟ್ಟಲು ಅಣಿಯಾಗಿದ್ದಾನೆ...ಶ್ರೀಕಾಂತನ ಬದುಕು ಹಠಾತ್ ತಿರುವು ಕಂಡರೂ ಅದನ್ನು ಎದುರಿಸಿ ಮತ್ತೆ ಬದುಕು ಕಟ್ಟಿಕೊಂಡಿದ್ದಾನೆ ...ಮುರುಳಿಯ ಬದುಕು ಶೀಘ್ರದಲ್ಲಿಯೇ ಹಸನಾಗುತ್ತದೆ...

ನನ್ನ ಸೊಸೆಯರಾದ ವಿಜಯನ ಮಡದಿ ವಾಣಿ, ಸ್ವರ್ಗದಲ್ಲಿರುವ ಶ್ರೀಕಾಂತನ ಸವಿತಾ.. ಮತ್ತೆ ಅವನ ಬದುಕನ್ನು ಹಸನು ಮಾಡಿದ ಸೀಮಾ.. ಮೊಮ್ಮಕ್ಕಳು ಆದಿತ್ಯ, ವರ್ಷ, ಶೀತಲ್, ವಿಷ್ಣು, ಐಶ್ವರ್ಯ ಎಲ್ಲರೂ ನನ್ನ ಕುಟುಂಬವನ್ನು ಬೆಳೆಸಿದ್ದಾರೆ.. 

ನನ್ನ ಅನುಗ್ರಹ ಸದನ ಸದಾ ಸಂತಸದಿಂದ ತುಂಬಿರುತ್ತೆ.. ಇದು ನನ್ನ ಆಶೀರ್ವಾದ.. 

ವಿಶಾಲವಾದ ಜಗದಲ್ಲಿ ನನ್ನ ಕುಟುಂಬಕ್ಕೂ ಜಾಗಕೊಟ್ಟ ಈ ಜಗಕ್ಕೆ ವಂದಿಸುತ್ತಾ..ಹೊರಟಿದ್ದೇನೆ ..ನನ್ನ ಕುಟುಂಬವನ್ನು ಹರಸಿ ..ಬೆಳೆಸಿ..!

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು!!

ಮತ್ತೆ....... ಹೋಗಿ ಬರಲೇ!

7 comments:

 1. ಅಬ್ಬಾ.. ಅದೆಷ್ಟು ಹೆಸರುಗಳು, ಸಂಬಂಧಗಳು ಎಲ್ಲವನ್ನೂ ನೆನಪಿನಾಳದಿಂದ ತೆಗೆದು ಯಾರ ಹೆಸರು ಮರೆಯದಂತೆ ನಿಗಾವಹಿಸಿ ಬರೆದು ಎಲ್ಲರಿಗೂ ಸಮನಾದ ಪ್ರೀತಿಯನ್ನು ಉಣಬಡಿಸಿ, ಪ್ರೀತಿಯಿಂದ ಪ್ರೀತಿ ಪಡೆದ ಧನ್ಯತಾ ಭಾವ ಪ್ರದರ್ಶಿಸಿ ಅಮ್ಮ ಎನ್ನುವ ಅನರ್ಘ್ಯ ರತ್ನವನ್ನು ಶಿರವೇರಿಸಿದ ಶ್ರೀಕಾಂತ ನಿನ್ನ ಹೃದಯ ವಿಶಾಲತೆಗೆ ಮಾತು ಬೇಕಿಲ್ಲ.

  ReplyDelete
 2. Super agide maga.. nimma nentarella Khushi padtare

  ReplyDelete
 3. ವಿಶಾಲವಾದ ವಿಶಾಲು ಆಂಗ್ಲಪದ ನೆರೇಟಿಂಗ್ ಬಹಳ ಪ್ರಾಸಬದ್ಧ ವಿಶ್ಲೇಷಣೆ ಅಚ್ಚುಕಟ್ಟಾಗಿ ಮೂಡಿಬಂದಿದೆ.
  ದೇವರು ಭಟ್ಟರ, ಬೊಬ್ಬೆರಾಮಯ್ಯ, ಕೋರವಂಗಲದ ರಂಗಸ್ವಾಮಿಗಳ ವಂಶವೃಕ್ಷನ ಒಬ್ಬಿಬರ ಹೆಸರನ್ನೂ ಬಿಡದೆ ರಚಿಸಿ ಮರಿ ಶ್ರೀ ಭೈರಪ್ಪನವರಾಗಿ ಅವರು ಶೈಲಿಯಲ್ಲಿ ಎಳೆ ಎಳೆಯಾಗಿ ಬಿಡಿಸಿ ಓದುಗರಿಗೆ ಮುದನೀಡಿರುವೆ.
  "ಜನ್ಮನೀಡಿದ ಕಿತ್ತಾನೆಹಾಸನನಾ ನಾ ಹೇಗೆತಾನೆ ಮರೆಯಲಿ" ಸಾರ್ಥಕ ಜೀವನದ ಏಳುಬೀಳುಗಳು,
  ಈ ಕಥೆ ಇಂದಿನ ಪೀಳಿಗೆಗೆ ಆದರ್ಶವಾಗಿದೆ.
  ವಿಶಾಲು ಎಲ್ಲೂಹೋಗಿಲ್ಲಾ ಬಂಧು ಬಳಗದ ಒಳಗೆ ಒಬ್ಬಳಾಗಿ ಇದ್ದಾಳೆ ಅನ್ನಿಸುತ್ತೆ.
  ದೇವರು ಕುಟುಂಬ ವರ್ಗಕ್ಕೂ ಸುಖಶಾಂತಿ ಆಯುರಾರೋಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ರಾಮು.

  ReplyDelete
 4. ಪ್ರೀತಿ ತುಂಬಾ ಚೆನ್ನಾಗಿದೆ. ಧನ್ಯವಾದಗಳು.

  ReplyDelete
 5. ಇಂತಹ ಪ್ರೀತಿಯನ್ನು ಕೊಟ್ಟ ನಿಮ್ಮ ಬಂಧುವರ್ಗ ಹಾಗು ಇಂತಹ ಪ್ರೀತಿಯನ್ನು ಪಡೆದ ನೀವು ಧನ್ಯರು. ಈ ಪ್ರೀತಿಯಲ್ಲಿ ನೀವೆಲ್ಲರೂ ಸದಾ ಮೀಯುತ್ತಲಿರಿ ಎಂದು ಹಾರೈಸುತ್ತೇನೆ.

  ReplyDelete
 6. Speech less Sri
  ಅಧ್ಬುತ ಅತ್ಯಧ್ಬುತವಾದ ಬರಹ ವಿಶ್ಲೇಷಣೆಗೂ ಮೀರಿದ್ದು ಅಣ್ಣಯ್ಯ ನಿನ್ನ ಶಕ್ತಿಗೆ ಜ್ಞಾನಕ್ಕೆ ಶರಣು ಧನ್ಯೋಸ್ಮಿ

  ReplyDelete
 7. ಓಂ ಶಾಂತಿ.
  ತಾಯಿಯೆಂಬ ದೇವರನ್ನು ಕುರಿತಾದ ಮೂರೂ ಲೇಖನಗಳನ್ನು ಓದಿದೆ ಸಾರ್.
  ಅವರ ವ್ಯಕ್ತಿತ್ವದ ಔನತ್ಯದ ಅರಿವಾಯಿತು. ಅವರ ಆಶೀರ್ವಾದದವು ಸದಾ ಕಾಯುವುದು ನಮ್ಮೆಲ್ಲರನು.

  ReplyDelete