Saturday, February 7, 2015

ಒಲವು ಅಂದ್ರೆ ಓ ಲವ್ವು!!!!...ಹ್ಯಾಪಿ ಬರ್ತ್ಡೇ

ಒಲವಿನ ಉಡುಗೊರೆ ಕೊಡಲೇನು?

ಬೇಡ ಶ್ರೀ... ಅಂಗಡಿಗೆ ಹೋಗಿ ಕೊತ್ತಂಬರಿ ತನ್ನಿ!!!

ಹೊಸ ಬಾಳಿಗೆ ನೀ ಜೊತೆಯಾದೆ.. ಹೊಸ ಆನಂದ ನೀನಿಂದು ತಂದೆ

ಶ್ರೀ ಮಗು ಸ್ಕೂಲ್ ಗೆ ಹೋಗೋಕೆ ಸಾಕ್ಸ್ ತಂದ್ರಾ 

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ 

ಶ್ರೀ ನಾನು ಜೊತೆಯಲ್ಲಿ ಬರ್ತೀನಿ.. ನೀವು ಆಫೀಸ್ ಗೆ ಹೋಗುವ ದಾರಿಯಲ್ಲಿಯೇ ಇರೋದು ನನ್ನ ಬಿಟ್ಟು ಹೋಗಿ 

ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ 

ಶ್ರೀ.. ಇಲ್ಲ ನನಗೆ ಬೇರೆ ಕೆಲಸ ಇದೆ.. 

ಒಂದು ಮಾತು ಒಂದು ಮಾತು ನಾನು ಹೇಳಲೇ

ಶ್ರೀ ನನಗೆ ಪುರುಸೊತ್ತು ಇಲ್ಲ.. ಆಮೇಲೆ ಫೋನ್ ಮಾಡಿ 

ಹೊಟ್ಟೆ ಹಸಿತಾ ಐತೆ ರಾಗಿ ಮುದ್ದೆ ತಿನ್ನೋ ಹೊತ್ತು 

ಶ್ರೀ.. ಅಡಿಗೆ ಮನೆಯಲ್ಲಿ ಅನ್ನ ಸಾರು ಇದೆ.. ಊಟ ಮಾಡಿ 

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಮಹಾರಾಣಿಯ ಹಾಗೆ 

ಶ್ರೀ.. ಮುದ್ದು ಬಂಗಾರ ನೀವು.. ಎಷ್ಟು ಒಳ್ಳೆಯವರು.. ಲವ್ ಯು ಸೊ ಮುಚ್ 

ಹ ಹ ಹ ಹ ಪುಟ ಗಟ್ಟಲೆ, ಪುಸ್ತಕಗಟ್ಟಲೆ, ಕಪಾಟಿನಲ್ಲಿ ಯಾವುದೇ ಪುಸ್ತಕ ತೆಗೆದರು.. ಒಂದೇ ಮನಸ್ಥಿತಿ, ಒಂದೇ ನಗು, ಒಂದೇ ಅನುಸರಿಸುವ ಗುಣ.. ಹೀಗೆ ವ್ಯಾಖ್ಯಾನ ಅನೇಕ, ಸಾವಿರಾರು ಪದಗಳಲ್ಲಿ ಹರಿದಾಡಿಬಿಟ್ಟಿರುತ್ತದೆ.. 

ಆದರೆ ನನಗೆ ಅನ್ನಿಸುವ ಮಾತು.. ಎರಡು ವಿರುದ್ಧ ಮನಗಳು ಜೊತೆಯಲ್ಲಿ ಹೆಜ್ಜೆ ಹಾಕಿದಾಗ ಬದುಕು ಸುಂದರ.. ಯಾಕೆ ಅಂದರೆ ಉತ್ತರ ಮತ್ತು ದಕ್ಷಿಣ ಧ್ರುವಗಳು ಅಲ್ಲವೇ ಅಯಸ್ಕಾಂತದಲ್ಲಿ ಆಕರ್ಷಣೆ ಹೊಂದುವುದು. 

ಹೀಗೆ ತಾಳ ಮೇಳವೇ ಇಲ್ಲದ ಮೇಲಿನ ಹಾಡಿನ ಸಂಭಾಷಣೆಯ ತರಹ ನನ್ನ ಬಾಳಿನಲ್ಲಿ ಬಂದು  ಶೀತಲವಾದ ಗಾಳಿಯನ್ನು ಬೀಸುತ್ತಲೇ ಮನೆಗೆ ಮನಕ್ಕೆ ಬೆಚ್ಚನೆಯ ಹಿತವಾದ ಶಾಖವನ್ನು ತಂದ ನನ್ನ ಮಡದಿ ಸವಿತಾಳಿಗೆ ಇಂದು ಜನುಮದಿನ.. 

ನಾವಿಬ್ಬರು ಬಾಳಿನ ಪಥದಲ್ಲಿ ಹೆಜ್ಜೆ ಹಾಕುತ್ತಿರುವ ಪಯಣಿಗರು.. ಇಬ್ಬರ ಗುರಿಯು ಒಂದೇ.. ಆದರೆ ಅದನ್ನು ನೋಡುವ ರೀತಿ ಮೇಲಿನ ಸಂಭಾಷಣೆಗಳಂತೆ.. ಎರಡು ವಿಭಿನ್ನ ಆದರೆ ಮನೆಯೊಳಗೆ ಇರುವ ಶಾಖ ಬೆಚ್ಚಗೆ ಇದುವಂತಹ ಪ್ರೀತಿ ಮಮತೆ ವಿಶ್ವಾಸ.. ಇಂಗ್ಲಿಷ್ ನಲ್ಲಿ LOVEEEEEEEEEEEEEEEEEEEEEEEEEEEEEEEEEEEEEEEEEEEEEEE 

ಬಣ್ಣ ವರ್ಣ ಎಲ್ಲಾ ಮನದಲ್ಲಿ .... ಹಾಗೆ ಒಂದು ಸುಂದರ ಚಿತ್ರ 

ಹ್ಯಾಪಿ ಬರ್ತ್ಡೇ ಸವಿತಾಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆ!!!! 



22 comments:

  1. ಜನುಮದಿನದ ಹಾರ್ದಿಕ ಶುಭಾಶಯಗಳು ಅತ್ತಿಗೆ , ನಿಮ್ಮ ಎಲ್ಲಾ ಒಳ್ಳೆಯ ಕನಸುಗಳು ನನಸಾಗಲಿ.

    ReplyDelete
    Replies
    1. ಧನ್ಯವಾದಗಳು ಬಾಲೂ ಸರ್. ಸಂಗಾತಿಯ ಜೊತೆಯಲ್ಲಿ ಹೆಜ್ಜೆ ಹಾಕುವಾಗ ಸಣ್ಣ ಸಣ್ಣ ಸಂಗತಿಯು ಸಂಗಡ ಬರುತ್ತದೆ. ಧನ್ಯೋಸ್ಮಿ

      Delete
  2. ಜನುಮದಿನದ ಹಾರ್ದಿಕ ಶುಭಾಶಯಗಳು ಅತ್ತಿಗೆ , ನಿಮ್ಮ ಎಲ್ಲಾ ಒಳ್ಳೆಯ ಕನಸುಗಳು ನನಸಾಗಲಿ. ಪೀತಿಯ ಮಡದಿಯ ಜನುಮದಿನಕ್ಕೆ ಒಲವಿನ ಉಡುಗೊರೆ ಚೆನ್ನಾಗಿದೆ ಶ್ರೀ ಕಾಂತ್ ಜಿ

    ReplyDelete
    Replies
    1. ಒಲವಿನ ಉಡುಗೊರೆ ಈ ರೀತಿಯಲ್ಲಿ ಕೊಡೋಣ ಅನ್ನಿಸಿತು. ಹಾಗಾಗಿ ಒಂದು ಪ್ರಯತ್ನ. ನಿಮ್ಮ ಶುಭಾಹಾರೈಕೆಗಳಿಗೆ ___/\___

      Delete
  3. Happy Birthday Attige ... ಅದೇನೋ ಬರಿಯೋಣ ಅಂದರೆ ನೆನಪಾಗ್ತರೋದು ಇಷ್ಟೇ .. ಪಡೆದ ಪ್ರೀತಿಗೆ .. ಅದನ್ನಾ ಹೇಳೋಕೆ ಪದಗಳು ಸಿಕ್ತಿಲ್ಲ... ಅಣ್ಣ @ಹಿಸ್ ಬೆಸ್ಟ್..... Have a lovely life with your "Best"....

    ReplyDelete
    Replies
    1. ಹಃ ಹಃ ಎಸ್ ಪಿ. ಪ್ರತಿಯೊಂದನ್ನು ಹಾಸ್ಯಭರಿತವಾಗಿ ನೋಡುವ ಅಭ್ಯಾಸ ಬೆಳೆದು ಹೋಗಿದೆ. ಧ್ರುವಗಳು ಯಾವುದೇ ಆದರೂ ಅದರ ನಡುವಿನ ಕಾಂತತೆ ಇದ್ದೆ ಇರುತ್ತೆ ಅಲ್ವೇ. ಧನ್ಯವಾದಗಳು ನಿನ್ನ ಶುಭ ಹಾರೈಕೆಗಳಿಗೆ

      Delete
  4. ಸವಿತಾ ಪುಟ್ಟಕ್ಕ...

    ನಿಮ್ಮ ಮನೆಗೆ ಬಂದಿದ್ದು ಒಂದೆ ಬಾರಿಯಾದರೂ..
    ನೀವು ತೋರಿದ ಆತ್ಮಿಯತೆ..
    ಪ್ರೀತಿ ಮಮತೆಗೆ ನಾವೆಲ್ಲ ಮಾರುಹೋಗಿದ್ದೇವೆ..

    ನೀವು ಬಡಿಸಿದ ಅಂದಿನ ಊಟ ಇನ್ನೂ ನೆನಪಿನಲ್ಲಿದೆ...

    ನಿಮ್ಮ
    ಪುಟ್ಟ
    ಗುಬ್ಬಚ್ಚಿಗೂಡಿನ ಸಂಸಾರದಲ್ಲಿ
    ಪ್ರೀತಿ.. ಸ್ನೇಹ
    ಎಂದಿಗೂ ಹೀಗೆ ನಗುತ್ತಿರಲಿ...

    ನಿಮ್ಮ ಪ್ರೇಮ
    ನನ್ನ ತಮ್ಮನ ಬಾಳಲ್ಲಿ ಬೆಳಕಾಗಿರಲಿ...

    ಸವಿತಾ ಪುಟ್ಟಕ್ಕ..
    ಹುಟ್ಟು ಹಬ್ಬದ ಶುಭಾಶಯಗಳು...

    ನಿಮ್ಮೆಲ್ಲ
    ಆಸೆ..
    ಕನಸುಗಳು ನನಸಾಗಿರಲಿ...

    ಪ್ರೀತಿಯಿಂದ
    ಪ್ರಕಾಶಣ್ಣ/ ಆಶಾ...

    ReplyDelete
    Replies
    1. ಒಂದು ನೆನಪು ನೂರು ಮಾಸಕ್ಕೆ ಅನ್ನುವ ಹಾಗೆ ಒಂದೇ ಸಾರಿ ಬಂದಿದ್ದರೂ ನಿಮ್ಮ ಪ್ರೀತಿ ವಿಶ್ವಾಸದ ಗುರುತು ನಮ್ಮ ಮನೆ ಮನದ ಮೇಲೆ ಸದಾ ಇದೆ. ಧನ್ಯವಾದಗಳು ಪ್ರಕಾಶಣ್ಣ

      Delete
  5. ಎರಡು ವಿರುದ್ಧ ಮನಗಳು ಜೊತೆಯಲ್ಲಿ ಹೆಜ್ಜೆ ಹಾಕಿದಾಗ ಬದುಕು ಸುಂದರ.. ಯಾಕೆ ಅಂದರೆ ಉತ್ತರ ಮತ್ತು ದಕ್ಷಿಣ ಧ್ರುವಗಳು ಅಲ್ಲವೇ ಅಯಸ್ಕಾಂತದಲ್ಲಿ ಆಕರ್ಷಣೆ ಹೊಂದುವುದು..... ಬಹಳ ಇಷ್ಟವಾದ ಸಾಲುಗಳು....ಎಷ್ಟು ಸುಂದರ ನಿಮ್ಮ ಜೋತೆಗಾರಿಕೆಯೋ ಅಷ್ಟೇ ಸುಂದರವಾದ ಬರಹ. ನಿಮ್ಮ ಜೋಡಿ ಹೀಗೆ ಇರಲಿ. ಸವಿತಕ್ಕ ಹುಟ್ಟು ಹಬ್ಬದ ಶುಭಾಶಗಳು. :)

    ReplyDelete
    Replies
    1. ನಿವಿ ನಿಮ್ಮ ಕುಟುಂಬದ ಪ್ರೀತಿ ವಿಶ್ವಾಸಗಳಿಗೆ ಚಿರ ಋಣಿ. ಸೊಗಸಾದ ಮಾತುಗಳು ಸೊಗಸಾದ ಬರಹಗಾರ್ತಿಯ ಕಡೆಯಿಂದ. ಮನಸ್ಸು ಹಕ್ಕಿಯ ಹಾಗೆ ಹಾರುತ್ತಿದೆ. ಧನ್ಯವಾದಗಳು

      Delete
  6. ಜನ್ಮ ದಿನದ ಈ ಸಂತಸದ ಸಂದರ್ಭದಲ್ಲಿ ನಿಮಗೆ ಸಾವಿರದೊಂದು ಸದಾಶಯಗಳು, ಮತ್ತು ಹಾರ್ದಿಕ ಶುಭಾಶಯಗಳು Savitaa Shrikanth... :)

    ReplyDelete
    Replies
    1. ಗುರುಗಳೇ ಧನ್ಯೋಸ್ಮಿ. ನಿಮ್ಮ ಹಾರೈಕೆ ಆಶಿರ್ವಾದಗಳು ಸದಾ ಕಾಯುವ ಶ್ರೀ ರಕ್ಷೆ. ಶಿರಸಾ ನಮಾಮಿ

      Delete
  7. ಮೇಡಂ ತಮಗೆ ಜನುಮದಿನದ ಶುಭಾಶಯಗಳು.
    ಈ ವರ್ಷ ೨೦೧೫ ಕಿಮಿ ಪ್ರತಿ ತಿಂಗಳೂ ತಮ್ಮ ಕುಟುಂಬವು ಯಾತ್ರೆ ಬೆಳೆಸಲಿ. :-)

    ReplyDelete
    Replies
    1. ಹಹಹ .. ಅಂತೂ ನನ್ನನ್ನು ಕಳಿಸುತ್ತೀರಾ ನೀವು ಬರೋಲ್ಲ.. ಬದರಿ ಸರ್ ಧನ್ಯವಾದಗಳು ನಿಮ್ಮ ಶುಭ ನುಡಿಗಳಿಗೆ

      Delete
  8. ಸವಿತಳ ಹುಟ್ಟು ಹಬ್ಬಕ್ಕೆ ನಮ್ಮ ಶುಭ ಹಾರೈಕೆಗಳು. ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಎನ್ನುವ ಗಂಡನ ಪಡೆದ ನೀನೇ ಧನ್ಯಳು. ನಿಮ್ಮ ಅನುರಾಗ ಅನುಬಂಧ ಹೀಗೆ ಅರ್ಥಪೂರ್ಣವಾಗಿರಲಿ. ಶ್ರೀಕಾಂತನ ಶುಭಾಶಯಗಳ ವಿಚಾರವೇ ಬೇರೆ, ವಿಭಿನ್ನ. ಇಬ್ಬರಿಗೂ ಶುಭಾಶಯಗಳು - ಶುಭಾಕಾಂಕ್ಷಿಗಳು
    ಚಿಕ್ಕಪ್ಪ ಚಿಕ್ಕಮ್ಮ

    ReplyDelete
    Replies
    1. ಚಿಕ್ಕಪ್ಪ ಚಿಕ್ಕಮ್ಮ ಶುಭಾ ಆಶೀರ್ವಾದ ನಮ್ಮ ಕಡೆ ಹರಿದು ಬಂದದ್ದು ಕುಶಿಯಾಯಿತು. ಧನ್ಯವಾದಗಳು. ಜೀವನವನ್ನು ನೋಡುವ ರೀತಿ ಅಷ್ಟೇ.. ಅದೇ ಸುಖ ನನ್ನ ಮಂತ್ರ ಅದು. ಧನ್ಯವಾದಗಳು

      Delete
  9. haapy happy birth day attige
    ಇದೆನ್ನ ಎರಡನೇ ಶುಭಾಶಯ.ಅವತ್ತು ನಂಗೊಬ್ಬ ತಂಗಿಯ ಜೊತೆಗೊಬ್ಬ ಪ್ರೀತಿಯ ಅತ್ತಿಗೆ ಕೂಡಾ ಸಿಕ್ಕಿದ್ರು.
    ಪ್ರೀತಿಯಿಂದ ಮಾತಾಡಿಸೋ,ಮಧ್ಯ ರಾತ್ರಿಗೆ ಕಾಫೀ ಬೇಕಂದ್ರೂ ಎದ್ದು ಮಾಡಿಕೊಡೋ, ನಿಂಗದು ಇಷ್ಟ ಅಲ್ವಾ ಅದನ್ನೆ ಮಾಡ್ತೀನಿ ಅಂತಂದು ಚಂದದ ಊಟ ಹಾಕೋ ಅತ್ತಿಗೆಯನ್ನ ಕೊಟ್ಟಿದ್ದಕ್ಕೆ ಥಾಂಕ್ಸ್ ಅಣ್ಣ.
    ಯಾವಾಗ್ಲೂ ಕಾಲೆಳೀತಾ,ಯಾವಾಗಲೂ ಕೀಟಲೆ ಮಾಡ್ತಾ,ಒಬ್ಬರಿಗೊಬ್ಬರು ಮುನಿಸಿಕೊಳ್ತಾ ಮರುಕ್ಷಣಕ್ಕೆ ಏನೂ ಆಗಿಯೇ ಇಲ್ಲ ಅಂತ ಮುಖ ತುಂಬಾ ನಗ್ತಾ ಇರೋ ಈ ಪ್ರೀತಿ,ಸ್ನೇಹ ಯಾವತ್ತಿಗೂ ಹೀಗೆಯೇ ಇರಲಿ.

    ReplyDelete
    Replies
    1. ಮಗಳೇ ನೀ ನಮ್ಮ ಜೀವನದಲ್ಲಿ ಬಂದದ್ದು ದೇವರೇ ಕಳಿಸಿದ ಉಡುಗೊರೆ ಎಂಬ ಮಾತು ನನ್ನದು. ಶೀತಲ್ ನ ಮುಂದಿನ ಜೀವನ ಹೇಗಿದೆ ಎನ್ನುವ ನೋಟ ನನಗೆ ನಿನ್ನ ಜೀವನದಿಂದ ಸಿಗುತ್ತಿದೆ. ಶೀತಲ್ ನ ಅಪ್ ಡೇಟೆಡ್ ವರ್ಷನ್ ನೀನು
      ಧನ್ಯವಾದಗಳು ಒಂದು ಪ್ರೀತಿಯ ಅಪ್ಪುಗೆ ಅತ್ತಿಗೆ ಕಡೆಯಿಂದ

      Delete
  10. Huttu Habbada Hardika Shubhashayagalu! Devaru nimage arogya, ayassu, aishwarya galannu karunisali endu haraisuva,

    Venki Sukhi Sowmya

    ReplyDelete
    Replies
    1. ಧನ್ಯವಾದಗಳು ವೆಂಕಿ ಸೌಮ್ಯ ಮತ್ತು ಸುಖಿ. ನಿಮ್ಮ ಶುಭ ಹಾರೈಕೆ ಇನ್ನಷ್ಟು ಸಂತಸವನ್ನು ತರಲಿದೆ

      Delete
  11. Many more happy returns of the day Savitha...Many all your dreams come true...

    PAPA

    ReplyDelete