ಭಕ್ತ ಕುಂಬಾರ ವಿಠಲನ ಬಳಿ ಮಾತಾಡುತ್ತಾ ಹೇಳುತ್ತಿದ್ದ..
"ಸ್ವಾಮೀ ಪಾಂಡುರಂಗ.. ಇದುವರೆಗೂ ನಾನು ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. ಮಣ್ಣಲಿ ಮಡಿಕೆ ಕುಡಿಕೆ ಮಾಡೋ ಕಾಯಕ ಹಿಡಿದ ಕುಂಬಾರ ನಾನು... ಜೀವಿಗಳೆಂಬೋ ಬೊಂಬೆಯ ಮಾಡೋ ಬ್ರಹ್ಮನ ತಂದೆ ಕುಂಬಾರ ನೀನು ಎಂದು ಸದಾ ಹಾಡುತ್ತಿದ್ದೆ.. ಆದರೆ"
"ಗೋರಾ.. ಏನು ಆದರೆ"
"ಇಂದು... ಕರ್ತಾರನ ಕಮ್ಮಟದಲ್ಲಿ ಒಂದು ವಿಭಿನ್ನ ಬೆಳವಣಿಗೆ ನಡೆಯಿತು.. "
ಬಭ್ರುವಾಹನದ ಚಿತ್ರಾಂಗಧಳ ಶೈಲಿಯಲ್ಲಿ "ಏನು ಗೋರಾ.. ಅದು.. ನನಗೂ ಸ್ವಲ್ಪ ಹೇಳು.. ನಿನ್ನ ಆನಂದದಲ್ಲಿ ನನಗೂ ಸ್ವಲ್ಪ ಪಾಲು ಕೊಡು"
"ಮುಖ ಪುಸ್ತಕದ ಗುಂಪಿನಲ್ಲಿ ಪದಾರ್ಥ ಚಿಂತಾಮಣಿ ತಂಡ ಆಯೋಜಿಸಿದ್ದ ಒಂದು ದಿನದ ಪದಕಮ್ಮಟ ಸಮಾರಂಭವನ್ನು ನನಗೆ ಅನ್ನಿಸಿದ ರೀತಿಯಲ್ಲಿ ಹೇಳುತ್ತೇನೆ.. ಕೇಳುವೆಯ ಪ್ರಭು"
"ಗೋರಾ ಮಣ್ಣಿನಲ್ಲಿ ನೀ ಮಾಡುವ ಗೊಂಬೆಗಳನ್ನು ನೋಡಿ ಬೆರಗಾಗಿದ್ದೇನೆ.. ಇನ್ನು ಪದಗಳನ್ನು ಕಲಸಿ ನೀ ಮಾಡುವ ಪದಗೊಮ್ಮಟವನ್ನು ನಾ ಓದಲು ನೋಡಲು ಕಾಯುತ್ತೇನೆ.. ಶುರು ಮಾಡು ಭಕ್ತ"
"ಪದಾರ್ಥ ಚಿಂತಾಮಣಿಯ ಸುಂದರ ತಂಡದ ಮನದಲ್ಲಿ ರೂಪುಗೊಂಡ ಈ ಕಾರ್ಯಕ್ರಮ ಶುರುವಾಗಿದ್ದು ವಾಮನನ ತರಹ.. ಆದರೆ ನಿಂತದ್ದು ತ್ರಿವಿಕ್ರಮನ ರೂಪದಲ್ಲಿ"
"ಹನಿ ಹನಿಗೂಡಿದರೆ ಹಳ್ಳ ಎನ್ನುವ ಹಾಗೆ ಪ್ರತಿಯೊಬ್ಬರೂ ಸೇರಿಸಿ ಕೂಡಿಸಿ ಜೋಡಿಸಿಟ್ಟ ಪದಗಳ ಮೆಟ್ಟಿಲ ಮೇಲೆ ಶುರು ಆಗಿದ್ದು ಈ ಕಮ್ಮಟ. ಅನೇಕ ಸಹೃದಯರ ಜೊತೆಯಲ್ಲಿ ವಿಷ್ಣುವಿನ ಪತ್ನಿಯ ಕೃಪಾಕಟಾಕ್ಷ ಸೇರಿಕೊಂಡು ಝರಿಯಂತಿದ್ದ ಸಣ್ಣ ಎಳೆ.. ಹೊನಲಾಯಿತು. ನದಿಯಾಯಿತು..ಕಡಲಾಯಿತು"
"ಸುಮಾರು ತಿಂಗಳುಗಳ ಸತತ ಪರಿಶ್ರಮ.. ಜನವರಿ ನಾಲ್ಕನೇ ತಾರೀಕು ೨೦೧೫ ರ ಭಾನುವಾರದಂದು ಬಿ ಪಿ ವಾಡಿಯ ಸಭಾಂಗಣದಲ್ಲಿ ಬೆಳಿಗ್ಗೆ ಸುಮಾರು ಒಂಭತ್ತು ಘಂಟೆಯಿಂದ ಶುರುವಾಯಿತು. "
"ಶತಾಯು ಶ್ರೀ ಪ್ರೊ. ಜಿ ವೆಂಕಟಸುಬ್ಬಯ್ಯನವರ ಪರಿಚಯ ಎಲ್ಲರಿಗೂ ಇದ್ದೆ ಇದೆ. ವಯಸ್ಸಿನಲ್ಲಿ ಶತಕ ಹೊಡೆದಿದ್ದರೂ ನವ ಯುವಕರಂತೆ ಇರುವ ಅವರ ಸೊಗಸಾದ ಮನಸ್ಸು.. ಅವರನ್ನು ಎಲ್ಲರ ಮನೆ ಮನದಲ್ಲಿ ಕೂರುವಂತೆ ಮಾಡಿದೆ. ಅವರ ಅಮೃತ ಹಸ್ತದಲ್ಲಿ ಉದ್ಘಾಟನೆ ಕಂಡ ಈ ಸಮಾರಂಭ ಮುಂದೆ ನಡೆದಿದ್ದು ಗಜ ಮಾರ್ಗದಲ್ಲಿ."
"ಪ್ರೊ ಕರಿಮುದ್ದೀನ್, ಶ್ರೀ ವಸಂತ್ ಕುಮಾರ್ ಪೆರ್ಲ, ಪ್ರೊ ಸುಧೀಂದ್ರ ಹಾಲ್ದೊಡ್ದೇರಿ, ಡಾ. ಎಂ ಏನ್ ಪಂಡಿತಾರಾಧ್ಯ, ಶ್ರೀ ಮಂಜುನಾಥ ಕೊಳ್ಳೇಗಾಲ ಇವರ ಜೊತೆಯಲ್ಲಿ ಪದಾರ್ಥ ಚಿಂತಾಮಣಿಯ ಅನೇಕ ಬಹುಮುಖ ಪ್ರತಿಭೆಯ ಸದಸ್ಯರು ಸೇರಿ
ನಡೆಸಿದ ಈ ಕಾರ್ಯಕ್ರಮ ಸುಂದರ ಅತಿ ಸುಂದರವಾಗಿತ್ತು"
"ಅಲ್ಲಿನ ಸಡಗರ ನೋಡಬೇಕಿತ್ತು.. ಪ್ರತಿಯೊಬ್ಬರಲ್ಲೂ ಹಬ್ಬದ ಸಡಗರ.. ತಳಿರು ತೋರಣಗಳನ್ನು ತಮ್ಮ ಹೃದಯದಲ್ಲಿ ಕಟ್ಟಿಕೊಂಡು ಹಸಿರು ಮನಸ್ಸಿನಿಂದ ನಿರ್ಮಲ ನಗೆಯನ್ನು ಹೊತ್ತು ಓಡಾಡುತ್ತಿದ್ದ ರೀತಿಯನ್ನು ನೋಡಿದಾಗ ನನಗೆ ಅಚ್ಚರಿಯಾಗುತ್ತಿತ್ತು. ಅರೆ ಭೂತಾಯಿ ಕೊಡುವ ಯಾವುದೇ ಮಣ್ಣಿನಿಂದ ಗೊಂಬೆಯನ್ನು ಮಾಡುವ ನಾನು ಕೆಲವೊಮ್ಮೊ ಒಂದೇ ತರಹದ ಮಡಿಕೆ, ಕುಡಿಕೆಗಳನ್ನು ಮಾಡಲು ಕೊಂಚ ಕಷ್ಟವಾಗುತ್ತದೆ. ಆದರೆ ಇಲ್ಲಿ ಪ್ರಪಂಚದ, ದೇಶದ, ರಾಜ್ಯದ, ನಗರದ ನಾನಾ ಮೂಲೆಯಿಂದ ಬಂದ ಈ ಸಹೃದಯದ ಮನಸ್ಕರು ಸಮಾನ ಮನೋಭಾವನೆಯಿಂದ ಕೂಡಿಕೊಂಡು ಸಮುದ್ರ ಮಂಥನ ಮಾಡಿ ಅಮೃತ ಕಡೆದಂತೆ ಒಂದು ಸುಂದರ ಸಮಾರಂಭವನ್ನು ಆಯೋಜಿಸಿ ಯಶಸ್ವೀ ಯಾಗಿದ್ದಾರೆ"
"ಪಾಂಡುರಂಗ ನನ್ನಲ್ಲಿರುವ ಪದ ಸಂಪತ್ತು ಖಾಲಿಯಾಗುತ್ತಿದೆ.. ಪದಗಳಿಗಾಗಿ ಪದಕಮ್ಮಟದ ಸಮಿತಿಯನ್ನೆ ಕೇಳಿ ಕಡ ತೆಗೆದುಕೊಳ್ಳಬೇಕು ಒಂದಷ್ಟು ಪದಗಳನ್ನು ಕೊಡಿ ಈ ಸಮಾರಂಭವನ್ನು ಬಣ್ಣಿಸಲು ಎಂದು"
"ಅರೆ ಗೋರಾ ಇದೇನು ಹೀಗೆ ಹೇಳಿಬಿಟ್ಟೆ.. ಈಗ ನಾ ಏನು ಮಾಡಲಿ.. ನನಗೆ ಈ ಸಮಾರಂಭದ ಬಗ್ಗೆ ಮಾಹಿತಿ ಬೇಕು.. ಹೇಗಾದರೂ ಕೊಡು.."
"ಪಾಂಡುರಂಗ.. ಸ್ವಲ್ಪ ತಾಳ್ಮೆ ಇರಲಿ.. ಪದಗಳ ಬದಲಾಗಿ ಚಿತ್ರಗಳ ಮೂಲಕ ಈ ಸಮಾರಂಭವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತೇನೆ.. ಈ ಕೆಳಗಿನ ಚಿತ್ರಗಳನ್ನು ನೋಡುತ್ತಾ ಇರು ಹಾಗೆ ಅದಕ್ಕೆ ಇರುವ ಅಡಿ ಟಿಪ್ಪಣಿಯನ್ನು ನೋಡುತ್ತಿರು... ಆಗ ತಿಳಿಯುತ್ತದೆ.."
"ಸರಿ ಗೋರಾ.. ಚಿತ್ರವಾರ್ತೆಯನ್ನು ಶುರು ಮಾಡು"
"ಇಲ್ಲಿ ನೋಡು ರಂಗಾ ಬಯಾಸ್ಕೋಪಿನಲ್ಲಿ.. ಚಿತ್ರವಾರ್ತೆ ಶುರು.. "
" ಗೋರಾ ಏನಪ್ಪಾ ನಿನ್ನ ಲೀಲೆ.. ಎಷ್ಟು ಸುಂದರವಾಗಿ ಇಡಿ ಕಾರ್ಯಕ್ರಮವನ್ನು ಬಣ್ಣಿಸಿದೆ.. ತುಂಬಾ ಸಂತೋಷ ಆಯಿತು.. ನನ್ನ ಅಭಯಪ್ರದ ಹಸ್ತ ಪದಾರ್ಥ ಚಿಂತಾಮಣಿಯ ಪ್ರತಿ ಸದಸ್ಯರ ಮೇಲೆ ಹಾಗೂ ಅವರು ಇಡುವ ಮುಂದಿನ ಹೆಜ್ಜೆಗಳು ಯಶಸ್ವಿಯಾದ ಮೈಲುಗಲ್ಲಾಗಲಿ ಎಂದು ವರ ನೀಡುವೆ.. "
"ರಂಗಾ ಪಾಂಡುರಂಗ ಕರುಣಾಂತರಂಗ.. ಕೊಡುವವನು ನೀನೆ ತೆಗೆದುಕೊಳ್ಳುವವನು ನೀನೆ.. ಕೊಟ್ಟು ಉದ್ದರಿಸುವವನು ನೀನೆ ಕೃತಾರ್ಥನಾದೆ ತಂದೆ.. ನಿನ್ನ ಅಭಯ ಹಸ್ತ ನಮ್ಮ ಈ ಕಮ್ಮಟದ ಪ್ರತಿಯೊಬ್ಬರ ಮೇಲೂ ಪ್ರಕಾಶಮಾನವಾಗಿ ಬೆಳಗಲಿ."
ಸರ್ವೇ ಜನೋ ಸುಖಿನೋ ಭವ೦ತು!!!!
ಕನ್ನಡ ಬೆಳೆಯಲಿ .... ಮೊಳಗಲಿ... ಬೆಳಗಲಿ.. !!!!
"ಸ್ವಾಮೀ ಪಾಂಡುರಂಗ.. ಇದುವರೆಗೂ ನಾನು ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. ಮಣ್ಣಲಿ ಮಡಿಕೆ ಕುಡಿಕೆ ಮಾಡೋ ಕಾಯಕ ಹಿಡಿದ ಕುಂಬಾರ ನಾನು... ಜೀವಿಗಳೆಂಬೋ ಬೊಂಬೆಯ ಮಾಡೋ ಬ್ರಹ್ಮನ ತಂದೆ ಕುಂಬಾರ ನೀನು ಎಂದು ಸದಾ ಹಾಡುತ್ತಿದ್ದೆ.. ಆದರೆ"
"ಗೋರಾ.. ಏನು ಆದರೆ"
"ಇಂದು... ಕರ್ತಾರನ ಕಮ್ಮಟದಲ್ಲಿ ಒಂದು ವಿಭಿನ್ನ ಬೆಳವಣಿಗೆ ನಡೆಯಿತು.. "
ಬಭ್ರುವಾಹನದ ಚಿತ್ರಾಂಗಧಳ ಶೈಲಿಯಲ್ಲಿ "ಏನು ಗೋರಾ.. ಅದು.. ನನಗೂ ಸ್ವಲ್ಪ ಹೇಳು.. ನಿನ್ನ ಆನಂದದಲ್ಲಿ ನನಗೂ ಸ್ವಲ್ಪ ಪಾಲು ಕೊಡು"
"ಮುಖ ಪುಸ್ತಕದ ಗುಂಪಿನಲ್ಲಿ ಪದಾರ್ಥ ಚಿಂತಾಮಣಿ ತಂಡ ಆಯೋಜಿಸಿದ್ದ ಒಂದು ದಿನದ ಪದಕಮ್ಮಟ ಸಮಾರಂಭವನ್ನು ನನಗೆ ಅನ್ನಿಸಿದ ರೀತಿಯಲ್ಲಿ ಹೇಳುತ್ತೇನೆ.. ಕೇಳುವೆಯ ಪ್ರಭು"
"ಗೋರಾ ಮಣ್ಣಿನಲ್ಲಿ ನೀ ಮಾಡುವ ಗೊಂಬೆಗಳನ್ನು ನೋಡಿ ಬೆರಗಾಗಿದ್ದೇನೆ.. ಇನ್ನು ಪದಗಳನ್ನು ಕಲಸಿ ನೀ ಮಾಡುವ ಪದಗೊಮ್ಮಟವನ್ನು ನಾ ಓದಲು ನೋಡಲು ಕಾಯುತ್ತೇನೆ.. ಶುರು ಮಾಡು ಭಕ್ತ"
"ಪದಾರ್ಥ ಚಿಂತಾಮಣಿಯ ಸುಂದರ ತಂಡದ ಮನದಲ್ಲಿ ರೂಪುಗೊಂಡ ಈ ಕಾರ್ಯಕ್ರಮ ಶುರುವಾಗಿದ್ದು ವಾಮನನ ತರಹ.. ಆದರೆ ನಿಂತದ್ದು ತ್ರಿವಿಕ್ರಮನ ರೂಪದಲ್ಲಿ"
"ಹನಿ ಹನಿಗೂಡಿದರೆ ಹಳ್ಳ ಎನ್ನುವ ಹಾಗೆ ಪ್ರತಿಯೊಬ್ಬರೂ ಸೇರಿಸಿ ಕೂಡಿಸಿ ಜೋಡಿಸಿಟ್ಟ ಪದಗಳ ಮೆಟ್ಟಿಲ ಮೇಲೆ ಶುರು ಆಗಿದ್ದು ಈ ಕಮ್ಮಟ. ಅನೇಕ ಸಹೃದಯರ ಜೊತೆಯಲ್ಲಿ ವಿಷ್ಣುವಿನ ಪತ್ನಿಯ ಕೃಪಾಕಟಾಕ್ಷ ಸೇರಿಕೊಂಡು ಝರಿಯಂತಿದ್ದ ಸಣ್ಣ ಎಳೆ.. ಹೊನಲಾಯಿತು. ನದಿಯಾಯಿತು..ಕಡಲಾಯಿತು"
"ಸುಮಾರು ತಿಂಗಳುಗಳ ಸತತ ಪರಿಶ್ರಮ.. ಜನವರಿ ನಾಲ್ಕನೇ ತಾರೀಕು ೨೦೧೫ ರ ಭಾನುವಾರದಂದು ಬಿ ಪಿ ವಾಡಿಯ ಸಭಾಂಗಣದಲ್ಲಿ ಬೆಳಿಗ್ಗೆ ಸುಮಾರು ಒಂಭತ್ತು ಘಂಟೆಯಿಂದ ಶುರುವಾಯಿತು. "
"ಶತಾಯು ಶ್ರೀ ಪ್ರೊ. ಜಿ ವೆಂಕಟಸುಬ್ಬಯ್ಯನವರ ಪರಿಚಯ ಎಲ್ಲರಿಗೂ ಇದ್ದೆ ಇದೆ. ವಯಸ್ಸಿನಲ್ಲಿ ಶತಕ ಹೊಡೆದಿದ್ದರೂ ನವ ಯುವಕರಂತೆ ಇರುವ ಅವರ ಸೊಗಸಾದ ಮನಸ್ಸು.. ಅವರನ್ನು ಎಲ್ಲರ ಮನೆ ಮನದಲ್ಲಿ ಕೂರುವಂತೆ ಮಾಡಿದೆ. ಅವರ ಅಮೃತ ಹಸ್ತದಲ್ಲಿ ಉದ್ಘಾಟನೆ ಕಂಡ ಈ ಸಮಾರಂಭ ಮುಂದೆ ನಡೆದಿದ್ದು ಗಜ ಮಾರ್ಗದಲ್ಲಿ."
"ಪ್ರೊ ಕರಿಮುದ್ದೀನ್, ಶ್ರೀ ವಸಂತ್ ಕುಮಾರ್ ಪೆರ್ಲ, ಪ್ರೊ ಸುಧೀಂದ್ರ ಹಾಲ್ದೊಡ್ದೇರಿ, ಡಾ. ಎಂ ಏನ್ ಪಂಡಿತಾರಾಧ್ಯ, ಶ್ರೀ ಮಂಜುನಾಥ ಕೊಳ್ಳೇಗಾಲ ಇವರ ಜೊತೆಯಲ್ಲಿ ಪದಾರ್ಥ ಚಿಂತಾಮಣಿಯ ಅನೇಕ ಬಹುಮುಖ ಪ್ರತಿಭೆಯ ಸದಸ್ಯರು ಸೇರಿ
ನಡೆಸಿದ ಈ ಕಾರ್ಯಕ್ರಮ ಸುಂದರ ಅತಿ ಸುಂದರವಾಗಿತ್ತು"
"ಅಲ್ಲಿನ ಸಡಗರ ನೋಡಬೇಕಿತ್ತು.. ಪ್ರತಿಯೊಬ್ಬರಲ್ಲೂ ಹಬ್ಬದ ಸಡಗರ.. ತಳಿರು ತೋರಣಗಳನ್ನು ತಮ್ಮ ಹೃದಯದಲ್ಲಿ ಕಟ್ಟಿಕೊಂಡು ಹಸಿರು ಮನಸ್ಸಿನಿಂದ ನಿರ್ಮಲ ನಗೆಯನ್ನು ಹೊತ್ತು ಓಡಾಡುತ್ತಿದ್ದ ರೀತಿಯನ್ನು ನೋಡಿದಾಗ ನನಗೆ ಅಚ್ಚರಿಯಾಗುತ್ತಿತ್ತು. ಅರೆ ಭೂತಾಯಿ ಕೊಡುವ ಯಾವುದೇ ಮಣ್ಣಿನಿಂದ ಗೊಂಬೆಯನ್ನು ಮಾಡುವ ನಾನು ಕೆಲವೊಮ್ಮೊ ಒಂದೇ ತರಹದ ಮಡಿಕೆ, ಕುಡಿಕೆಗಳನ್ನು ಮಾಡಲು ಕೊಂಚ ಕಷ್ಟವಾಗುತ್ತದೆ. ಆದರೆ ಇಲ್ಲಿ ಪ್ರಪಂಚದ, ದೇಶದ, ರಾಜ್ಯದ, ನಗರದ ನಾನಾ ಮೂಲೆಯಿಂದ ಬಂದ ಈ ಸಹೃದಯದ ಮನಸ್ಕರು ಸಮಾನ ಮನೋಭಾವನೆಯಿಂದ ಕೂಡಿಕೊಂಡು ಸಮುದ್ರ ಮಂಥನ ಮಾಡಿ ಅಮೃತ ಕಡೆದಂತೆ ಒಂದು ಸುಂದರ ಸಮಾರಂಭವನ್ನು ಆಯೋಜಿಸಿ ಯಶಸ್ವೀ ಯಾಗಿದ್ದಾರೆ"
"ಪಾಂಡುರಂಗ ನನ್ನಲ್ಲಿರುವ ಪದ ಸಂಪತ್ತು ಖಾಲಿಯಾಗುತ್ತಿದೆ.. ಪದಗಳಿಗಾಗಿ ಪದಕಮ್ಮಟದ ಸಮಿತಿಯನ್ನೆ ಕೇಳಿ ಕಡ ತೆಗೆದುಕೊಳ್ಳಬೇಕು ಒಂದಷ್ಟು ಪದಗಳನ್ನು ಕೊಡಿ ಈ ಸಮಾರಂಭವನ್ನು ಬಣ್ಣಿಸಲು ಎಂದು"
"ಅರೆ ಗೋರಾ ಇದೇನು ಹೀಗೆ ಹೇಳಿಬಿಟ್ಟೆ.. ಈಗ ನಾ ಏನು ಮಾಡಲಿ.. ನನಗೆ ಈ ಸಮಾರಂಭದ ಬಗ್ಗೆ ಮಾಹಿತಿ ಬೇಕು.. ಹೇಗಾದರೂ ಕೊಡು.."
"ಪಾಂಡುರಂಗ.. ಸ್ವಲ್ಪ ತಾಳ್ಮೆ ಇರಲಿ.. ಪದಗಳ ಬದಲಾಗಿ ಚಿತ್ರಗಳ ಮೂಲಕ ಈ ಸಮಾರಂಭವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತೇನೆ.. ಈ ಕೆಳಗಿನ ಚಿತ್ರಗಳನ್ನು ನೋಡುತ್ತಾ ಇರು ಹಾಗೆ ಅದಕ್ಕೆ ಇರುವ ಅಡಿ ಟಿಪ್ಪಣಿಯನ್ನು ನೋಡುತ್ತಿರು... ಆಗ ತಿಳಿಯುತ್ತದೆ.."
"ಸರಿ ಗೋರಾ.. ಚಿತ್ರವಾರ್ತೆಯನ್ನು ಶುರು ಮಾಡು"
"ಇಲ್ಲಿ ನೋಡು ರಂಗಾ ಬಯಾಸ್ಕೋಪಿನಲ್ಲಿ.. ಚಿತ್ರವಾರ್ತೆ ಶುರು.. "
ವಿಧ್ಯೆಯಲ್ಲಿ ವಿನಯವಿದೆ. .. ಮೊದಲ ಹೆಜ್ಜೆ ಎಂಬ ವಿನಯವಂತಿಗೆ ತೋರಿದ ಪಟ.. |
ಸುಂದರವಾದ ಆಹ್ವಾನ ಪತ್ರಿಕೆ |
ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಅಷ್ಟೇ ಅಚ್ಚುಕಟ್ಟಾದ ವಿವರಗಳು.. |
ಕಾರ್ಯಕ್ರಮದ ವಿವರಗಳು |
ಪದಗಳ ಬ್ರಹ್ಮರಿಂದ ದೀಪವನ್ನು ಬೆಳಗುವಿಕೆ.. (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ಬಹುಮುಖ ಪ್ರತಿಭೆ ಆಜಾದ್ ಸರ್ - (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ಸುಂದರ ಮನದ ಸುಗಣಕ್ಕಯ್ಯ - (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ಪರಿಶ್ರಮ ಹೊರುವ ಉಷಾ ಉಮೇಶ್ - (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ಉತ್ಸಾಹಕ್ಕೆ ಚೈತನ್ಯಕ್ಕೆ ಇನ್ನೊಂದು ಹೆಸರು ರೂಪ ಸತೀಶ್ - (ಚಿತ್ರಕೃಪೆ - ಪ್ರಕಾಶ್ ಹೆಗಡೆ |
ಔಟ್ಪುಟ್ಬ ತೋರಿಸುವ ಚಿನ್ಮಯ್ ಭಟ್ - (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ದೈತ್ಯ ಪ್ರತಿಭೆಗಳು ವೇದಿಕೆಯಲ್ಲಿ - (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ನೆನಪಿನ ಸಂಚಿಕೆ ಅನಾವರಣಗೊಂಡ ಮಧುರ ಕ್ಷಣ - (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ಕಿಕ್ಕಿರಿದು ನೆರೆದಿದ್ದ ಆಸಕ್ತ ಪ್ರತಿಭೆಗಳು - (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ಆಶೀರ್ವಚನ ನೀಡಿದ ಪ್ರೊ ಜಿ ವೆಂಕಟಸುಬ್ಬಯ್ಯ ಗುರುಗಳು - (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ವಿಶಾಲ ಪ್ರತಿಭೆ - ಪ್ರೊ ಕರಿಮುದ್ದೀನ್ - ಮೈಸೂರಿನಿಂದ ಈ ಕಾರ್ಯಕ್ರಮಕ್ಕೆ ಬಂದರು - (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ಸೂಪರ್ ಗುರುಗಳು ಶ್ರೀ ಮಂಜುನಾಥ ಕೊಳ್ಳೇಗಾಲ - (ಚಿತ್ರಕೃಪೆ - ಪ್ರಕಾಶ್ ಹೆಗಡೆ) |
ಪದಗಳ ಜಾದುಗಾರರು - ಪ್ರೊ. ಅ ರಾ ಮಿತ್ರ |
ಅಧ್ಯಕ್ಷರು - ಪ್ರೊ. ವಸಂತ್ ಕುಮಾರ್ ಪೆರ್ಲ |
ಸಿದ್ಧವಾದ ವೇದಿಕೆ |
ಪದವಷ್ಟೇ ಅಲ್ಲ ಚೆನ್ನಾದ ಪದಾರ್ಥ ಹಾಕಿ ಮಾಡಿದ ಭೂರಿ ಭೋಜನವೂ ಇತ್ತು |
ಇಬ್ಬರು ದೈತ್ಯ ಪ್ರತಿಭೆಗಳು |
ಪದಾರ್ಥ ಚಿಂತಾಮಣಿಯ ಮೊದಲ ಎರಡು ಇಟ್ಟಿಗೆಗಳು |
ಬಂದವರು ನೂರಾರು.. ಚಿತ್ರಕ್ಕೆ ಸಿಕ್ಕವರು ಈ ಪಾಟಿ ಆಸಕ್ತರು |
ಮಕ್ಕಳ ಮೊಗದಲ್ಲಿ ಸಂತಸ ತಂದರೆ ಆ ಕಾರ್ಯಕ್ರಮದ ಯಶಸ್ಸು ಕಟ್ಟಿಟ್ಟ ಬುತ್ತಿ.. ಅದನ್ನು ಪ್ರತಿಪಾದಿಸಿದ ಪುಟಾಣಿ |

ಮೊಗ ಎಂದರೆ ಪದ.. ಪದ ಎಂದರೆ ಕಮ್ಮಟ ಎನ್ನುವಷ್ಟು ಯಶಸ್ಸು ಈ ಕಾರ್ಯಕ್ರಮಕ್ಕೆ ಸಿಕ್ಕಿತು |
ಸರ್ವೇ ಜನೋ ಸುಖಿನೋ ಭವ೦ತು!!!!
ಕನ್ನಡ ಬೆಳೆಯಲಿ .... ಮೊಳಗಲಿ... ಬೆಳಗಲಿ.. !!!!
Super sir!!! ಮೊದಲಾರ್ಧದಲ್ಲಿ ನಿಮ್ಮನ್ನು ಮಿಸ್ ಮಾಡ್ಕೊಂಡ್ವಿ
ReplyDeleteಧನ್ಯವಾದಗಳು ಪ್ರದೀಪ್. ಕಾರಣಗಳು ಅಂತರಗಳನ್ನೇ ಹುಟ್ಟು ಹಾಕುತ್ತದೆ. ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ ನನಗೂ ಬೇಸರವಿದೆ
Deleteತುಂಬ ಆತ್ಮೀಯವಾದ ಬರಹವಿದು.
ReplyDeleteಕನ್ನಡ ಕೆಲಸಗಳಿಗೆ ಎಂದೆಂದಿಗೂ ಜಯವೇ ಅಂಕಿತನಾಮವಾಗಲಿ.
ಪಾಳಿಯಲ್ಲಿ ಸುಂದರ ಚಿತ್ರಗಳನ್ನು ತೆಗೆದುಕೊಟ್ಟ ತಮಗೂ ಪ್ರಕಾಶಣ್ಣನವರಿಗೂ ಅನಂತ ವಂದನೆಗಳು.
ಧನ್ಯವಾದಗಳು ಬದರಿ ಸರ್.. ಪೂರ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಆದ್ರೆ ಪ್ರಕಾಶಣ್ಣ ಕೊಟ್ಟ ಚಿತ್ರಗಳು ಸುಂದರ
Deleteಸಖತ್ತಾದ ಕಾರ್ಯಕ್ರಮ ಮಿಸ್ ಮಾಡಿಕೊಂಡ ಭಾವ :-( ಮುಂದಿನ ಸಲ ಆದ್ರೂ ಬರಬೇಕು ಅಂತಿದೆ
ReplyDeleteಒಳ್ಳೆಯ ಕಾರ್ಯಕ್ರಮ ನನಗೂ ಮಿಸ್ ಮಾಡಿಕೊಂಡ ಭಾವ.. ಆದ್ರೆ ಶೇಕಡ ಐವತ್ತು ಪ್ರತಿಶತ :-)
Deleteಧನ್ಯವಾದಗಳು ಗೆಳೆಯ
ಬಹಳ ಬಹಳ ವಿಶೇಷ ರೀತಿಯ ನಿಮ್ಮ ಪ್ರಸ್ತಾವನೆ ನಿಜಕ್ಕೂ ಆಸಕ್ತಿದಾಯಕ. ಶ್ರೀಮನ್ ನಿಮ್ಮನ್ನು ಪ್ರದೀಪ್ ಹೇಳಿದ ಹಾಗೆ ಮೊದಲ ಅರ್ಧದಲ್ಲಿ ಮಿಸ್ ಮಾಡ್ಕೊಂಡ್ವಿ... ಧನ್ಯವಾದ ಶ್ರೀಮನ್.
ReplyDeleteಬಿಡಲಾರದ ನಂಟು ಆಜಾದ್ ಸರ್.. ಅದು ಎಳೆದು ತಂದಿತು.. ಕಡೆ ಘಳಿಗೆಯಲ್ಲಿ ಬಂದರೂ ಕೂಡ ಮನಸ್ಸು ತುಂಬಿ ಬಂತು. ಧನ್ಯವಾದಗಳು ಸರ್ಜಿ
Delete