Friday, February 7, 2014

"ಹುಟ್ಟು ಹಬ್ಬದ ಶುಭಾಶಯಗಳು ಟೀ"

ಶ್ರೀ : ದೇವರಗುಡಿಯ ಚಿತ್ರಗೀತೆ ಹೃದಯದಲ್ಲಿ ಹಾಡುತ್ತಿತ್ತು..  ತಲೆಗೂದಲನ್ನು ಹಾಗೆಯೇ ಬೆರಳಲ್ಲಿ ಸರಿ ಮಾಡಿಕೊಂಡು..
"ಕಣ್ಣು ಕಣ್ಣು ಒಂದಾಯಿತು.. 
ನನ್ನ ನಿನ್ನ ಮನಸೆರಿತು... 
ದಿನರಾತ್ರಿಯು ಕಂಡ ಕನಸು ನನಸಾಯಿತು"  ಹಾಡಿಕೊಂಡು ಬರುತ್ತಿದ್ದೆ ಸವಿ: "ಈ ಮೌನವ ತಾಳೆನು ಮಾತಾಡೆ ದಾರಿಯ ಕಾಣೆನು ಓ ರಾಜ" ಮಯೂರ ವರ್ಮ ಕನ್ನಡ ಕುಲದ ಮೊದಲ ರಾಜನಾದರೆ..ಆ ಮೌನದ ಮಾತಿಗೆ ಒರೆ ಹಚ್ಚಲು ಕಾಯುತ್ತ ನಿಂತಿದ್ದಳು ನನ್ನ ಮಾವನ ಮಗಳು!!!   

ಮನಸ್ಸು ತೆಳ್ಳಗೆ ಹಾರಾಡುತ್ತಿತ್ತು.. ಒಂದು ಸುಮಧುರ ಘಟನೆಗೆ ಸಾಕ್ಷಿಯಾಗಿತ್ತು ಗಡಿಯಾರ

ಶ್ರೀ: "ಈ ಸೊಗಸಾದ ಸಂಜೆ 
ನಿನ್ನನ್ನು ನೋಡುತಾ 
ನನ್ನನ್ನೇ ಮರೆತೇ.. "

ದೇವತಾ ಮನುಷ್ಯದಲ್ಲಿ ಅಣ್ಣಾವ್ರ ತರಹ ನಡೆಯುತ್ತಾ ಹಾಡುತ್ತಾ ಸಂಭ್ರಮಿಸಿದ್ದೆ.. ಕೊರಳಲ್ಲಿ ಮಫ್ಲರ್ ಇರಲಿಲ್ಲ ಅಷ್ಟೇ... ಹಾಗೆಯೇ ಆಟೋ ಹತ್ತಿ ಕೂತೆವು ಸವಿ : "ಸದಾ ಕಣ್ಣಲ್ಲೇ ಪ್ರಣಯದ ಕವಿತೆ ಹಾಡುವೆ 
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ"ಕವಿರತ್ನ ಆಗದಿದ್ದರೂ ಮುಂದೆ ಒಂದು ದಿನ ಶ್ರೀ...  ನೀವು ಕಪಿ(ಕನ್ಯಾ ಪಿತೃ)ರತ್ನ ಆಗುತ್ತೀರ ಎನ್ನುವ ಭರವಸೆ ಮೂಡಿದೇ ಮನದಲ್ಲಿ... 

ಶ್ರೀ: "ನನ್ನ ಆಸೆ ಹಣ್ಣಾಗಿ ನನ್ನ ಬಾಳ ಕಣ್ಣಾದೆ
       ಮನವನು ಸೇರಿದೆ ಸಂತೋಷ ತುಂಬಿದೆ
       ಆಟೋದಲ್ಲಿ "ಆಟೋ ರಾಜ"ನ ಹಾಗೆ ಸುಮಧುರ ನಗೆಯನು ಚೆಲ್ಲುತ್ತಾ ಸಾಗಿದೆ ಹೀಗೆ ಸಾಗಿತ್ತು ನಮ್ಮ ಸಂಭಾಷಣೆಯ ವೈಕರಿ.. ಸಿನಿಮಾ ಸಿನಿಮಾ ಸಿನಿಮಾ ಅದೇನು ಹುಚ್ಚೋ ಅನ್ನಿಸುವಷ್ಟು ಹುಚ್ಚು ಬೆಳೆದಿತ್ತು.. ನನಗೆ... ಪ್ರತಿ ಮಾತಿನಲ್ಲೂ ಸಿನಿಮಾ www.ಇಣುಕಿನೋಡು.com ವೆಬ್ ಸೈಟಿಗೆ ಲಗ್ಗೆ ಹಾಕುತ್ತಿತ್ತು.. 


"ಶ್ರೀಕಾಂತ ಇಳಿಯೋ.. ಏನು ಕನಸ್ಸು ಕಾಂತ ಇದ್ದೀಯಾ ಹೆಂಗೆ" ಅಚಾನಕ್ಕಾಗಿ ಕಣ್ಣು ಬಿಟ್ಟೆ.. ಆಗ ತಿಳಿಯಿತು ಇಷ್ಟು ಹೊತ್ತು ಕಂಡದ್ದು ಮುಂದೆ ನಡೆಯುವ ನನಸಿಗೆ ಸಿದ್ಧತೆಯ ಕನಸು ಎಂದು.. 

ಅಣ್ಣ ನನ್ನನ್ನು ಬಸ್ ಸ್ಟ್ಯಾಂಡ್ ಗೆ ಬಿಡಲು ವಿಜಯನಗರದ ಆಟೋದಲ್ಲಿ ನನ್ನನ್ನು ಕರೆ ತಂದಿದ್ದ .. ನಾನು ಆಫೀಸ್ ಹೋಗುವ ತರಹ ಶಿಸ್ತಾಗಿ ಟಾಕು ಟೀಕಾಗಿ ಟ್ರಿಮ್ ಆಗಿ ಬಂದಿದ್ದೆ.. ಅಣ್ಣ ಆರಾಮಾಗಿ ಟೀ ಶರ್ಟ್ ಜೀನ್ಸ್ ಚಪ್ಪಲಿ ಹಾಕಿದ್ದ.. 

ಆ ಕಡೆಯಿಂದ ಸವಿ ಬಂದಳು.. ಹಲ್ಲು ಕಿರಿದಳು.. ನಾನು ಹಹಹ ... ಅದಕ್ಕೆ ಏನು ಕಮ್ಮಿ ಇರಲಿಲ್ಲ.. ಇದ್ದ ಬದ್ದ ಹಲ್ಲುಗಳೆಲ್ಲ ಕತ್ತಲೆಯಲ್ಲೂ ಬೆಳಕಾಗಿ ಕಂಡವು.. 

ಗಡಿಯಾರ.. ಮತ್ತು ಹೃದಯ ಕಿರುಚುತಿತ್ತು ಹೊತ್ತಾಯಿತು ಹೊತ್ತಾಯಿತು ಎಂದು... ಅಯಸ್ಕಾಂತ....  ಶ್ರೀಕಾಂತ ಎರಡಕ್ಕೂ ಬೇಕಿದ್ದು ಏಕಾಂತ.. 

ಬಿಟ್ಟರೆ ಸಾಕು ಎನ್ನಿಸುತ್ತಿತ್ತು ಮನಸ್ಸು.. 

"ನೀವು ಹೋಗ್ತೀರಾ?"

ಸವಿ ಸೋದರ ಮಾವ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಮಯವಿರಲಿಲ್ಲ.. ಸುಮ್ಮನೆ ಹಲ್ಲು ಬಿಟ್ಟು ಇಬ್ಬರು ಬಸ್ ಹತ್ತಿದೆವು.. ಕೊಡೈಕೆನಾಲ್ ಬಸ್ಸ ಹಿಡಿಯಲು ಮಜೆಸ್ಟಿಕ್ ಸ್ಟ್ಯಾಂಡ್ ಗೆ.. 

ಸುಮಾರು ನಾಲ್ಕು ದಿನ ಪ್ರಣಯದ ಮಂಗಗಳ ಹಾಗೆ ಕೊಡೈ ಸುತ್ತಿದೆವು.. ಆದರೆ ನನ್ನ ತಲೆಯಲ್ಲಿ "ನೀವು ಹೋಗ್ತೀರಾ" ಪ್ರಶ್ನೆ ಘಟ್ಟ ಪ್ರದೇಶದಲ್ಲಿ ಬಳುಕುವ ರಸ್ತೆಯಂತೆ ಹಾಯುತ್ತಲೇ ಇತ್ತು.. 

ನನ್ನದು ಒಂದು ಕೆಟ್ಟ ಅಭ್ಯಾಸ.. ಯಾವುದೇ ವಿಚಾರ ತಲೆಗೆ ಬಂದರೆ.. ಆ ವಿಚಾರ ನಡೆದ ಸಮಯದ ಜೊತೆಯಲ್ಲಿ ಮತ್ತೆ ಹಿಂದೆ ನೆಡೆದು ಮತ್ತೆ ವರ್ತಮಾನಕ್ಕೆ ಬರುತ್ತೇನೆ.. 

ಸರಿ ಮತ್ತೆ rewind ಬಟನ್ ಒತ್ತಿದೆ.. ಹತ್ತು ನಿಮಿಷ.. 

ನಗಲು ಶುರು ಮಾಡಿದೆ.. 

"ಶ್ರೀ ಏನಾಯ್ತು ಶ್ರೀ ಏನಾಯ್ತು"

"ಹ ಹ ಹ ನಿನ್ನ ಸೋದರ ಮಾವ ಕೇಳಿದ ಪ್ರಶ್ನೆಯ ಅರ್ಥ ಈಗ ಗೊತ್ತಾಯಿತು.. "

"ಏನು ಅದು ಶ್ರೀ"

"ಮಧು ಚಂದ್ರಕ್ಕೆ ನಾನು ಆಫೀಸ್ಗೆ ಹೋಗುವಾ ಹಾಗೆ ಡ್ರೆಸ್ ಆಗಿದ್ದೆ.. ಅಣ್ಣ ಟೀ ಶರ್ಟ್ ಜೀನ್ಸ್ ಹಾಕಿಕೊಂಡು ಪ್ರವಾಸಕ್ಕೆ ಹೋಗುವ ತರಹ ಇದ್ದಾ.. ಹಾಗಾಗಿ ಅವರಿಗೆ ಈ ಸಂಶಯ ಬಂತು.. ಅಲ್ಲವೇ ಎಂದೇ"

ಸವಿ ನಗಲು ಶುರು ಮಾಡಿದಳು.. 

"ನನಗೂ ಹಾಗೆ ಆಗಿತ್ತು ಶ್ರೀ.. ನೀವು ನನ್ನನ್ನು ನೋಡಲು ಬಂದಾಗ... ನಿಮ್ಮ ಅಣ್ಣನೆ ಹುಡುಗ ಅಂದು ಕೊಂಡಿದ್ದೆ.. ನೀವೆಲ್ಲ ಹೋದಮೇಲೆಯೇ.. ತಿಳಿದದ್ದು.. ಈ ಕಪಿ ನನ್ನ ಬಾಳಿನ ನಾಯಕ ಎಂದು :-) "

ನಾನು ನಗಲೇ ಬೇಕಾಯಿತು.. ಕಾರಣ.. ಹೇಳಬೇಕೇ!!!!!!!

ಮನದಲ್ಲೇ ಹಾಡಿಕೊಂಡೆ.. 
"ಚೆಲುವೆಯ ನೋಟ ಚೆನ್ನಾ.. 
ಒಲವಿನ ಮಾತು ಚೆನ್ನ 
ಮಲ್ಲಿಗೆ ಹೂವೆ ನಿನ್ನ 
ನಗುವೂ ಇನ್ನೂ ಚೆನ್ನಾ"ಸವಿ : "ಶ್ರೀ ನಿಮ್ಮ ಸಿನಿಮಾ ಹುಚ್ಚು ಗೊತ್ತಾಗಿದೆ ನನಗೆ.. ನಿಮಗೋಸ್ಕರ ಒಂದು ಹಾಡು ಹೇಳಬೇಕು ಅನ್ನಿಸುತ್ತಿದೆ."

ಶ್ರೀ : ಓಹ್ ಹೌದಾ ಹೇಳು ಹೇಳು ನಾ ಕೇಳುವ 

ಸವಿ: "ನಾ ಬೆಂಕಿಯಂತೆ ನೀ ಗಾಳಿಯಂತೆ 
       ಈ ಜೋಡಿ ಮುಂದೆ". 


ಶ್ರೀ : ಅಯ್ಯೋ ಅಯ್ಯೋ.. ಏನಿದು.. 

ಸವಿ : ಶ್ರೀ ಸುಮ್ಮನೆ ತಮಾಷೆ ಮಾಡಿದೆ.. ನೋಡಿ ಈ ಹಾಡು ನಿಮಗಾಗಿ 
        
        ಆಕಾಶವೆ ಬೀಳಲಿ ಮೇಲೆ.. 
        ನಾನೆಂದು... "

       


ಶ್ರೀ : ಸೂಪರ್.. ಸೂಪರ್.. ನಾ ಹೇಳಬೇಕಾದ ಹಾಡು ನೀನು ಹೇಳುತ್ತಿದ್ದೀಯ.. 

ನೋಡು ನಾವಿಬ್ಬರು ಹೇಳಬೇಕಾದ ಹಾಡು ಇದು.. 

"ಜನುಮ ಜನುಮದ ಅನುಬಂಧ 
ಹೃದಯ ಹೃದಯಗಳ ಪ್ರೇಮಾನುಬಂಧ"
​​ಹೌದು ಶ್ರೀ ನಿಜವಾಗಿಯೂ ನಿಮ್ಮ ಮಾತು ಸರಿ.. ನಾವಿಬ್ಬರು ಹಾಗೆಯೇ ಇರೋಣ.. 

ಹೀಗೆ ಜೊತೆಯಲ್ಲಿ ಸಪ್ತಪದಿ ತುಳಿದ ನನ್ನ ಮನದನ್ನೆಗೆ ಇಂದು ಹುಟ್ಟಿದ ಹಬ್ಬದ ಸಂತಸ.. ಬಾಳಿನಲ್ಲಿ ಸಿಹಿಯು ಇರುತ್ತದೆ.. ಅತಿ ಸಿಹಿಯೂ ಬರುತ್ತದೆ.. ಅದನ್ನೆಲ್ಲ ಸಮನಾಗಿ ಸ್ವೀಕರಿಸಿ.. ಕಣ್ಣಿಗೆ ರೆಪ್ಪೆಯಂತೆ.. ಮೊಬೈಲ್ ಗೆ ಸಿಮ್ ಕಾರ್ಡ್ ತರಹ ಹೊಂದಿಕೊಂಡು  ಸಾಗುತ್ತಿರುವ ಜೀವನವನ್ನು ತುಂಬಿರುವ ಸವಿತಾಗೆ ಇಂದು ಜನುಮ ದಿನ.. ಪದಗಳ ಮಾಲಿಕೆಯನ್ನು ಈ ಶುಭಸಂಧರ್ಭದಲ್ಲಿ ನನ್ನ ಜೀವನದ ಸಂಗಾತಿಗೆ ಉಡುಗೊರೆಯಾಗಿ ಕೊಡುತ್ತಿದ್ದೇನೆ.. 

"ಅಪ್ಪಾ.. ಅಮ್ಮನಿಗೆ ಹೇಳುತ್ತೀರಲ್ಲ ಹಾಗೆ ಹೇಳಿ.. ವಿಶ್ ಮಾಡಿ ಅಪ್ಪ" ಅಂದಳು ನನ್ನ ಗೆಳತಿ ಹಾಗೂ ಮಗಳು ಶೀತಲ್.. 

"ಸರಿ ಪಾಪ ಹಾಗೆಯೇ ಹೇಳುತ್ತೇನೆ ಆಯ್ತಾ""ಹುಟ್ಟು ಹಬ್ಬದ ಶುಭಾಶಯಗಳು ಟೀ"

14 comments:

 1. ಹುಟ್ಟು ಹಬ್ಬದ ಶುಭಾಶಯಗಳು ಸವಿತಾ ರವರಿಗೆ ನಮ್ಮ ಕಡೆಯಿಂದಲೂ
  ಜೆ. ಎಂ. , ಸಮತಾ ಮತ್ತು ಧನುಶ್

  ReplyDelete
 2. ಸವಿತಾ ಮೇಡಂ ಜನುಮದಿನದ ಹಾರ್ದಿಕ ಶುಭಾಶಯಗಳು , ಒಲವಿನ ಬದುಕು ಶ್ರೀಕಾಂತ್ ಜೊತೆಗೆ ಹೀಗೆ ಸಾಗಲಿ, ಶ್ರೀಕಾಂತ್ ಜಿ ಪತ್ನಿಗೆ ಪ್ರೀತಿಯ ಹುಟ್ಟುಹಬ್ಬಕ್ಕೆ ಚಂದದ ಉಡುಗೊರೆ ನೀಡಿದ್ದೀರಿ , ನಿಮ್ಮಿಬ್ಬರ ದಾಂಪತ್ಯ ಹೀಗೆ ಸುಖವಾಗಿರಲಿ, ಹೀಗೆ ಶುಭ ಹಾರೈಸುವ ಭಾಗ್ಯ ನಮ್ಮದಾಗಲಿ, ಶುಭಮಸ್ತು

  ReplyDelete
 3. ಸವಿತಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
  ಯಾವಾಗಲೂ ಹಾಡ್ತಾ ನೇ ಇರಿ .

  ReplyDelete
 4. ಈ ಬಂಧ ಅನುಬಂಧ...

  ಶ್ರೀಮಾನ್ ತಮ್ಮ ಶ್ರೀಮತಿಯವರ ಜನುಮ ದಿನಕೆ ನಮ್ಮ ಶುಭಾಶಯಗಳನ್ನು ತಿಳಿಸಿರಿ. ನಿಮ್ಮ ಅನ್ಯೋನ್ಯತೆಯು ಅಗಣಿತವಾಗಿರಲಿ.

  ಬರುವ ವರ್ಷಗಳಲ್ಲಿ ನೀವು ಮೂರೂ ಜನ ಅಖಿಲ ಕರ್ನಾಟಕ, ವಿಶಾಲ ಭಾರತ ಮತ್ತು ಛಪ್ಪನ್ನಾರು ವಿದೇಶಗಳನ್ನೂ ಸುತ್ತಿಬನ್ನಿರಿ.

  ReplyDelete
 5. ಹುಟ್ಟು ಹಬ್ಬದ ಶುಭಾಶಯಗಳು ಸವಿತಾ... :)

  ReplyDelete
 6. Sri... convey my wishes on her birthday.....Savitha Many more happy returns of the day.........

  ReplyDelete
 7. ಸವಿತಾರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಜೋಡಿ ಹೀಗೆ ಸದಾ ನಗುತ್ತಿರಲಿ :)... ಸೂಪರಾಗಿ ವಿಶ್ ಮಾಡಿದ್ದಿರಿ ಶ್ರೀ

  ReplyDelete
 8. ಸವಿತಾಗೆ ನಾನಾ ಪರವಾಗಿ ಹುಟ್ಟು ಹಬದ್ಧ ಹಾರ್ದಿಕ ಸುಭಾಶಯಗಲ್ಲು......ನಿಮೆಬರ ಜೀವನ ಹೇಗೆಯೇ ಸಂತೋಷವಾಗಿ ಸಾಗಲಿ ಎಂದು ಆಶಯಿಸುಥ .....ಗೀತ

  ReplyDelete
 9. ಸವಿತಾರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಜೋಡಿ ಹೀಗೆ ಸದಾ ನಗುತ್ತಿರಲಿ :)... ಸೂಪರಾಗಿ ವಿಶ್ ಮಾಡಿದ್ದಿರಿ ಶ್ರೀ....Roopa

  ReplyDelete
 10. Savitha, wish you a very happy happy birthday. God bless you... I have always seen you calm and composed :) May you have the best of times ahead :) Nice way of wishing and bonding Sri :)

  Roopa Satish :)

  ReplyDelete
 11. ಪ್ರೀತಿಯ ಶ್ರೀಕಾಂತೂ...
  ನಿಮ್ಮಿಬ್ಬರ ಪ್ರೀತಿ ಹೀಗೆ ಇರಲಿ... ಕೆಟ್ಟ ದೃಷ್ಟಿ ಬೀಳದಿರಲಿ..
  ಭಗವಂತ ನಿಮಗೆ ಆಯುರಾರೋಗ್ಯ..
  ಸುಖ..
  ಶಾಂತಿ.. ಸಮೃದ್ದಿಯನ್ನು ದಯಪಾಲಿಸಲಿ..

  ಇದು ನಮ್ಮೆಲ್ಲರ ಶುಭ ಹಾರೈಕೆ..

  ಸವಿತಾರವರಿಗೂ ಹುಟ್ಟು ಹಬ್ಬದ ಶುಭಾಶಯಗಳು...
  ಅವರ ಆಸೆ.. ಕನಸುಗಳು ನನಸಾಗಲಿ..

  ಚಂದದ ಹಾಡುಗಳ ಜೊತೆ..
  ಮೂಡಿ ಬಂದ ಲೇಖನ ನೀವು ಬರೆದಿದ್ದಲ್ಲ..
  ಅದು ಹೃದಯದೊಳಗಿನ ಭಾವಗಳು...

  ಮತ್ತೊಮ್ಮೆ ಶುಭಾಶಯಗಳು..

  ReplyDelete
 12. Srikanth Sir nice wish... Madam ge nanna kade indalu Birthday wishes tilisi :) :)

  ReplyDelete