Sunday, February 17, 2013

ಶ್ರೀ ಮಣಿಕಾಂತಕೋಪಾಕ್ಯಾನಾ - "ಅಪ್ಪ ಅಂದ್ರೆ ಆಕಾಶ" - ಒಂದು ಪುಸ್ತಕ ಬಿಡುಗಡೆ ಸಮಾರಂಭ

ಬಾಲ್ಯದಿಂದಲೂ ಭಾದ್ರಪದ ಮಾಸದಲ್ಲಿ ಶುಕ್ಲ ಪಕ್ಷದ ಚಂದ್ರನನ್ನು ನೋಡಿದರೆ ಸ್ಯಮಂತಕೋಪಾಕ್ಯಾನ ಕಥೆ ಕೇಳುವುದು ರೂಡಿಯಾಗಿತ್ತು. ಪಂಚಾಗ ತೆರೆದು ನೋಡಿದಾಗ.ಗೊತ್ತಾದದ್ದು ಇಂದು ರಥ ಸಪ್ತಮಿ...ಸೂರ್ಯನ ಜನುಮದಿನವೆಂದು ಗುರುತಿಸಲಾಗುತ್ತದೆ. ಅಂಥಹ ಶುಭದಿನದಂದು ಸತ್ರಾರ್ಜಿತನಿಗೆ ಸ್ಯಮಂತಮಕ ಮಣಿ ಸಿಕ್ಕಿದ ಹಾಗೆ ಶ್ರೀ ಮಣಿಕಾಂತ್ ಸರ್ ಅವರ "ಅಪ್ಪ ಅಂದ್ರೆ ಆಕಾಶ" ಎಂಬ ಅನರ್ಘ್ಯ ಮಣಿ ಬಿಡುಗಡೆ ಸಮಾರಂಭ ಎಂದು ತಿಳಿಯಿತು.

ಮಣಿಕಾಂತ್ ಸರ್ ಅವರ ಲೆಕ್ಕವಿಲ್ಲದಷ್ಟು ಅಭಿಮಾನಿಗಳು, ಬ್ಲಾಗ್ ಲೋಕದ ಅನೇಕ ತಾರೆಗಳು, ಇನ್ನು ಬರಿ ಫೇಸ್ ಬುಕ್, ಬ್ಲಾಗ್ ಗಳಲ್ಲಿ ಹಲ್ಲು ಗಿಂಚುತ್ತಾ ಇರುವ ಎಷ್ಟೋ ನಕ್ಷತ್ರಗಳು ಅವರ ಸ್ನೇಹದ ಅಂಬರದಲ್ಲಿ ಮಿನುಗಲು ಬರುವವರಿದ್ದರು. ಹಾಗಾಗಿ ಬೇಗ ಬೇಗ ಭಾನುವಾರದ ಕೆಲಸ! ಮುಗಿಸಿ ರವಿಂದ್ರ ಕಲಾಕ್ಷೇತ್ರದ ಕಡೆಗೆ ಹೆಜ್ಜೆ ಹಾಕಿದೆ ಕ್ಷಮಿಸಿ ಬೈಕ್ ಓಡಿಸಿದೆ..!

ಪಂಚಾಂಗದ ಪ್ರಕಾರದಿನ ವಿಶೇಷ  : ರಥಸಪ್ತಮಿ - ರವಿಯ ಜನುಮದಿನ
ವಾರ: ರವಿವಾರ
ಸ್ಥಳ: ರವಿಂದ್ರ ಕಲಾಕ್ಷೇತ್ರ (ರವಿ + ಇಂದ್ರ)
ಲೇಖಕ : ಮಣಿಕಾಂತ್ (ಸ್ಯಮಂತಕಮಣಿಕಾಂತ್)

ನೋಡಿ ಇಂದಿನ ವಿಶೇಷ..ಎಲ್ಲದರಲ್ಲೂ ಸೂರ್ಯ ನಗುತ್ತಿದ್ದಾನೆ.. !

ಸುಂದರ ಆಹ್ವಾನ ಪತ್ರಿಕೆ
ಬೈಕ್ ನಿಲ್ಲಿಸಿದಾಗ ಬದರಿ ಸರ್ ಅವರ ಮುಗ್ಧ ನಗೆಯ ಆಲಿಂಗನ ಸಿಕ್ಕಿತು, ಮಾತಾಡುತ್ತಾ ನಿಂತೆವು..ಫೇಸ್ ಬುಕ್ ಗುಂಪಿನ ಪದಾರ್ಥ ಚಿಂತಾಮಣಿಯ "ಪ್ರದೀಪ್ ರಾವ್" ಸಿಕ್ಕರು, ಅಷ್ಟರಲ್ಲಿ ಬಾಲೂ ಸರ್ ಅವರಿಗೆ ಕರೆಮಾಡಿದಾಗ ಕಲಾಕ್ಷೇತ್ರದ ಒಳಗೆ ಇದ್ದೇನೆ ಎನ್ನುವ ಉತ್ತರ ಬಂತು, ಅಲ್ಲಿ ಸತೀಶ್ ನಾಯಕ್, ಸಹೋದರಿಯರಾದ  ಸುಲತ ಶೆಟ್ಟಿ (ಎಸ್ ಎಸ್),  ಸುಷ್ಮಾ ಮೂಡಬಿದರೆ (ಪಿ.ಎಸ್), ಸಂಧ್ಯಾ ಭಟ್ (ಎಸ್.ಪಿ), ರಶ್ಮಿ ತೆಂಡೂಲ್ಕರ್, ವಿನಯ್, ಶಿವೂ ಸರ್ , ಪ್ರಕಾಶಣ್ಣ, ದಿಗ್ವಾಸ್, ಉಮೇಶ್ ದೇಸಾಯಿ ಸರ್, ಸವಿತಾ, ಪುಷ್ಪರಾಜ್ ಚೌಟ, ಸುರೇಶ ಹೆಗಡೆ, ಅಶೋಕ್ ಶೆಟ್ಟಿ, ಪ್ರವೀಣ್ ಸಂಪ, ತಿರುಮಲೈ ರವಿ ಸರ್, ಗಿರೀಶ್ ಸೋಮಶೇಖರ್,  ಗೋಪಾಲ ವಾಜಪೇಯಿ ಸರ್, ಹೀಗೆ ಇನ್ನೂ ಅನೇಕರು ಭೇಟಿಯಾದರು.

ಕಲಾಕ್ಷೇತ್ರದ ಆವರಣದ ಸುಂದರವಾದ ರಂಗ ಮಂಟಪದಲ್ಲಿ  ಶ್ರೀ ಉಪಾಸನ ಮೋಹನ್ ಅವರ ತಂಡದಿಂದ ಸೊಗಸಾದ ಹಾಡುಗಳು ತೇಲಿ ಬರುತಿದ್ದವು, ಎಲ್ಲರು ತಮಗೆ ಬೇಕಾದ ಆಸನಗಳನ್ನೂ ಹುಡುಕಿಕೊಂಡು ಕೂರಲು ಶುರುವಾದರು. ಒಂದಾದ ಮೇಲೆ ಒಂದರಂತೆ ಶ್ರೀ ಮೋಹನ ಅವರ ತಂಡ ಗಾನ ಮಾಧುರ್ಯದ ಅಲೆಗಳಲ್ಲಿ ನಮ್ಮನ್ನೆಲ್ಲ ತೇಲಿಸುತಿದ್ದರು.

ಸಮಾರಂಭದ ಅತಿಥಿಗಳೆಲ್ಲ ಬಂದು ಆಸನ ಗ್ರಹಣ ಮಾಡಿದರು. ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ಟರು (ಕನ್ನಡ ಪ್ರಭ ಮತ್ತು ಸುವರ್ಣ ನ್ಯೂ ವಾಹಿನಿಯ ಮುಖ್ಯ ಸಂಪಾದಕರು), ಮುಖ್ಯ ಅತಿಥಿ ಪ್ರಸಿದ್ಧ ಕವಿಗಳಾದ ಶ್ರೀ ಎಚ್ ಎಸ್ ವೆಂಕಟೇಶ್ ಮೂರ್ತಿಗಳು, "ಚಂದ್ರಮುಖಿ ಪ್ರಾಣಸಖಿ" ಚಿತ್ರದ ಅಭಿನಯದಿಂದ ನನಗೆ ಬಹಳ ಇಷ್ಟವಾದ ಚಿತ್ರ ತಾರೆ ಭಾವನ, ನನಗೆ ಬಹಳ ಇಷ್ಟವಾದ ಹಾಗೂ ಐವತ್ತು ಹೆಚ್ಚು ಬಾರಿ ನೋಡಿದ "ಮಠ" ಮತ್ತು "ಎದ್ದೇಳು ಮಂಜುನಾಥ" ಚಿತ್ರದ ನಿರ್ದೇಶಕ ಶ್ರೀ ಗುರುಪ್ರಸಾದ ಇವರೆಲ್ಲ ಶ್ರೀ ಮಣಿಕಾಂತ್ ಸರ್ ಅವರ ಪುಸ್ತಕದ ಲೋಕಾರ್ಪಣೆಗೆ ಬಂದಿದ್ದರು.

ಭಾವನ ಅವರ ಧ್ವನಿ ಒಂದು ತರಹ ಗುಂಗು ಹಿಡಿಸುತ್ತೆ..ಅವರು ಸುಲಲಿತವಾಗಿ ಪುಸ್ತಕದ ಬಗ್ಗೆ, ಪುಸ್ತಕ ಓದುವ ಹವ್ಯಾಸದ ಬಗ್ಗೆ ಚಿಕ್ಕ ಚೊಕ್ಕ ಮಾತುಗಳು ಅವರ ಮಾತನ್ನು ಇನ್ನಷ್ಟು ಕೇಳುವಾ ಅನ್ನಿಸಿತ್ತು ಅವರ ಧ್ವನಿ ಕೇಳಲೇ? ಇಲ್ಲಾ  ಅವರ ಸುಂದರ ಮುಖ ನೋಡಲೇ ಎನ್ನುವ ಗೊಂದಲದಲ್ಲಿದಾಗಲೇ ಅವರ ಮಾತುಗಳು ಮುಗಿದಿದ್ದವು.

ನಂತರ ಪ್ರಸಿದ್ಧ ಮುಖ್ಯ ಅತಿಥಿ ಕವಿಗಳಾದ ಶ್ರೀ ಎಚ್ ಎಸ್ ವೆಂಕಟೇಶ್ ಮೂರ್ತಿಗಳು ತಮ್ಮ ಕವನಗಳ ಹಾಗೆ ಮುತ್ತು ಪೋಣಿಸಿದ ಮಾತುಗಳು ಮಣಿಕಾಂತ್ ಅವರ ಸಾಧನೆಗೆ ಮುತ್ತಿನ ಮಣಿಹಾರವನ್ನೇ ತೊಡಿಸಿದರು. ಅವರು ಹೇಳಿದಂತೆ ವಾಲ್ಮೀಕಿಯ ಮಾತುಗಳನ್ನು ಉಲ್ಲೇಖಿಸಿದ ಒಂದು ಸಾಲು ನನ್ನನ್ನು ಕೆಲ ಕಾಲ ಮೌನಿಯಾಗಿಸಿತು. ಸಾಧನೆ ಮಾಡುವಾಗ "ಕಂಬನಿಯನ್ನು ಹಿಂಬಾಲಿಸು" ಎಂಥಹ ಮಾತುಗಳು!

ಶ್ರೀ ಗುರುಪ್ರಸಾದ್ ಅವರ ಚಿತ್ರಗಳಂತೆ ಅವರ ಮಾತುಗಳು ಬಂದೂಕಿನಿಂದ ಹೋರಟ ಗುಂಡಿನಂತೆ....ಸರಿಯಾದ ಗುರಿ ಸರಿಯಾದ ಮಾತು. ಹತ್ತು ಹದಿನೈದು ನಿಮಿಷ...ನಾನು ಹಾಗೂ ಸಮಾರಂಭಕ್ಕೆ ಬಂದಿದ್ದ ಎಲ್ಲರೂ ಮಾಡಿದ್ದು ಎರಡೇ ಕೆಲಸ..ಒಂದು ಇರುವ ಹಲ್ಲನ್ನೆಲ್ಲಾ ಬಿರಿಯುವಂತೆ ನಕ್ಕಿದ್ದು...ಎರಡು ಅಂಗೈಗಳು ನೋಯುವ ತನಕ ಚಪ್ಪಾಳೆ ಬಾರಿಸಿದ್ದು.  ಎಂಥಹ ಮಾತುಗಾರಿಕೆ..ನಗೆ ದೇವತೆ ಅವರ ಪ್ರತಿ ಪದಗಳನ್ನು ತಬ್ಬಿ ಹಿಡಿದಿದ್ದಳು. ಎದ್ದೇಳು ಮಂಜುನಾಥ ಚಿತ್ರದಲ್ಲಿ ಮಂಜುನಾಥನ ಪಾತ್ರ ಅವರ ತಾಯಿ ಕೊಟ್ಟಿದ್ದ ಐವತ್ತು ರೂಪಾಯಿ ನೋಟನ್ನು ನಾಣಿಯ ಪಾತ್ರಕ್ಕೆ ಕೊಟ್ಟು ಹೇಳುತ್ತಾರೆ " ಒಳ್ಳೆ ಕೆಲಸ ಮಾಡುವಾಗ ಈ ಹಣವನ್ನು ಉಪಯೋಗಿಸಿಕೊ ಎಂದು ನನ್ನತಾಯಿ ಕೊಟ್ಟಿದ್ದಳು..ಇವತ್ತು ನಿಮಗೆ ಕೊಡ್ತಾ ಇದ್ದೀನಿ...ನಿಮಗೆ ಒಳ್ಳೆದಾಗಲಿ" ...ಅದೇ ರೀತಿಯಲ್ಲಿ ಗುರುಪ್ರಸಾದ ಅವರ ತಂದೆ ಮಣಿಕಾಂತ್ ಸರ್ ಅವರ ಪುಸ್ತಕವನ್ನು ಕೊಂಡು ತರಲು ಆಶೀರ್ವಾದ ಮಾಡಿ ನೂರು ರೂಪಾಯಿಯನ್ನು ಕೊಟ್ಟಿದ್ದರಂತೆ. ಆ ಹಣವನ್ನು ಮಣಿಕಾಂತ್ ಸರ್ ಅವರಿಗೆ ಕೊಟ್ಟು ಈ ನೂರು ರೂಪಾಯಿ ಅಕ್ಷಯವಾಗಲಿ ಎನ್ನುವ ಮಾತನ್ನು ಹೇಳಿದರು. ಒಂದು ಸುಮಧುರ ಭಾವನೆಯನ್ನು ಹೊರಗಿಟ್ಟ ಅಪೂರ್ವ ಘಳಿಗೆ ಅದು. ಗುರುಪ್ರಸಾದ್ ಅವರ ಮಾತುಗಳು ಒಂದಕ್ಕಿಂತ ಒಂದು ಸೊಗಸಾಗಿದ್ದವು. ಅವರ ಚಿತ್ರಗಳು ಇನ್ನಷ್ಟು ಬರಲಿ ಎನ್ನುವ ಆಶಯ ನಮ್ಮೆಲರದು.

ಅಧ್ಯಕ್ಷ ಭಾಷಣ ಮಾಡಿದ ಶ್ರೀ ವಿಶ್ವೇಶ್ವರ ಭಟ್ಟರು ತಮ್ಮ ಹಾಗು ಮಣಿಕಾಂತ್ ಅವರ ಪರಿಚಯ, ಬೆಳೆದುಬಂದ ಹಾದಿ,  ಸಾಧನೆಯ ಶಿಖರದತ್ತ ಪಯಣ ಎಲ್ಲವನ್ನು ಸೊಗಸಾಗಿ ತೆರೆದಿಟ್ಟರು. ಮಣಿಕಾಂತ್ ಒಬ್ಬ ಸುಂದರ ಮಾನವ ಜೀವಿ ಎನ್ನುವ ಅವರ ಮಾತುಗಳು ಅಕ್ಷರಶಃ ನಿಜ.

ತೆರೆಯ ಹಿಂದೆ, ತೆರೆಯ ಮುಂದೆ ಈ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪ್ರತಿಯೊಬ್ಬರನ್ನು ಗೌರವಿಸಿದ್ದು ಶ್ಲಾಘನೀಯ. ಸುಂದರ ಮಾತುಗಳನ್ನು ಹೇಳಿದ ಮಣಿಕಾಂತ್ ಸರ್, ಈ ಪುಸ್ತಕವನ್ನು ಬರೆಯಲು ಅವರಿಗೆ ಹೆಗಲು ಕೊಟ್ಟು ನೆರವಾದ ತಮ್ಮ ಕುಟುಂಬದವರನ್ನು, ಸ್ನೇಹಿತರನ್ನು ನೆನೆದು ಗೌರವ ಸಲ್ಲಿಸಿದರು.

ಇಡಿ ಕಾರ್ಯಕ್ರಮದಲ್ಲಿ ಎದ್ದು ಕಂಡಿದ್ದು ಒಂದು ಸುಂದರ ವಾತಾವರಣ..ಹಾಗು ತಮ್ಮ ಸಾಧನೆಯಾ ಬಗ್ಗೆ ಹೆಚ್ಚು ಮಾತಾಡದೆ ತೆರೆಮರೆಯಲ್ಲಿ ಶ್ಲಾಘನೀಯ ಕೆಲಸ ಮಾಡಿ ತಮ್ಮಷ್ಟಕ್ಕೆ ತಾವು ಇರುವ ಅನೇಕರಲ್ಲಿ ಕೆಲವರನ್ನು ಪರಿಚಯ ಮಾಡಿಕೊಟ್ಟು ಅವರನ್ನು ವೇದಿಕೆಗೆ ಕರೆದು ಗೌರವಿಸಿದ್ದು. ಅನೇಕ ಬ್ಲಾಗ್ ಲೋಕದ ತಾರೆಗಳ ಪುಸ್ತಕ ಬಿಡುಗಡೆಯಲ್ಲಿ ಕೂಡ ಇಂತಹ ಹೃದಯ ಸ್ಪರ್ಶಿ ಘಟನೆಗಳನ್ನು ನಾನು ಕಂಡಿದ್ದೆ.

ರಥ ಸಪ್ತಮಿಯ ದಿನ ಸೂರ್ಯ ತನ್ನ ಸಪ್ತಾಶ್ವದ ರಥದಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ  ಉತ್ತರ ದಿಕ್ಕಿನೆಡೆ  ಸಂಚರಿಸುತ್ತಾನೆ ಎನ್ನುವಂತೆ..ಕೆಲವು ಸುಂದರ ಪುಟಗಳಲ್ಲಿ ಹಲವಾರು ಹೃದಯ ಸ್ಪರ್ಶಿ ಲೇಖನಗಳ ಮೂಲಕ ನಮಗೆಲ್ಲರಿಗೂ ಪರಿಚಯಿಸುತ್ತಿರುವ ಮಣಿಕಾಂತ್ ಅವರ ನೂತನ ಕೊಡುಗೆ "ಅಪ್ಪ ಅಂದ್ರೆ ಆಕಾಶ" ಎನ್ನುವ ಹೊತ್ತಿಗೆ ಬಿಡುಗಡೆ ಸಮಾರಂಭ ಸೊಗಸಾಗಿತ್ತು
ಸುಂದರ ಹೃದಯವಂತ ಗೆಳೆಯ - ಮಣಿಕಾಂತ್ ಸರ್ ! (ಚಿತ್ರಕೃಪೆ - ಪ್ರಕಾಶ ಹೆಗಡೆ) 


ಅಪ್ಪನ ದುಡ್ಡು ಎಣಿಸೋಕೆ ಆಗಲ್ಲ....ಅಮ್ಮನ ಸೀರೆ ಮಡಚೋಕೆ ಆಗೋಲ್ಲ..ಇದು ಗಾದೆ..ಅಮ್ಮನ ಸೀರೆಯ ಅಂಚಲ್ಲಿ ಕಂಡ ಬರುವ ಪ್ರೀತಿಯನ್ನು "ಅಮ್ಮ ಹೇಳಿದ ಎಂಟು ಸುಳ್ಳುಗಳು" ಎಂಬ ಹೃದಯ ಸ್ಪರ್ಶಿ ಪುಸ್ತಕದಲ್ಲಿ ಎಲ್ಲರ ಬದುಕಿನ ಮನೋಜ್ಞ ಮುಖವನ್ನು ಪರಿಚಯಿಸಿದ ಮಣಿಕಾಂತ್ ಸರ್ ....ಈಗ ಅಪ್ಪನ ದುಡ್ಡನ್ನು ಎಣಿಸದೆ ಅಪ್ಪ ಎನ್ನುವ ಒಂದು ಭಾವ ಜೀವಿ ನಮಗಾಗಿ ಕಟ್ಟಿ ಕೊಡುವ ಸುಂದರವಾದ ಅಂಬರವನ್ನು ಪರಿಚಯಿಸುತ್ತಿರುವ "ಅಪ್ಪ ಎಂದರೆ ಆಕಾಶ" ಹೊತ್ತಿಗೆಯ ಬಿಡುಗಡೆಯನ್ನು ಬರಸೆಳೆದುಕೊಂಡು ಓದಿ ಬಿಡುವ ಆತುರ ಹೆಚ್ಚಾಗುತ್ತಿದೆ..ಆ ಪುಸ್ತಕದ ಸಾರವನ್ನು ಸವಿಯೋಣ ..ನಮ್ಮ ಜೀವನದಲ್ಲಿ ಆ ಲೇಖನಗಳು ಸಾರುವ ಸಂದೇಶಗಳಲ್ಲಿ ಕೆಲವನ್ನಾದರೂ ಅಳವಡಿಸಿಕೊಂಡು ಬೆಳೆಯೋಣ ಎನ್ನುವ ಆಶಯದೊಂದಿಗೆ ಮಣಿಕಾಂತ್ ಸರ್ ಅವರಿಗೆ ಶುಭವಾಗಲಿ...!

40 comments:

  1. arre sreekanth sir karyakrama nodtane bardbitra hege.. olle karyakrama olle akshara niroopane

    ReplyDelete
    Replies
    1. ಧನ್ಯವಾದ ಪ್ರವೀಣ್..ಕಾರ್ಯಕ್ರಮದ ಸುಂದರ ನೋಟ..ಬರೆಯಲು ಪ್ರೇರೇಪಿಸಿತು...

      Delete
  2. Replies
    1. ಒಂದೊಳ್ಳೆ ಸಮಾರಂಭವನ್ನ, "ನಾವೂ ಸಮಾರಂಭದಲ್ಲಿ ಭಾಗಿಯಾಗಿದ್ದೆವೇನೋ" ಅನ್ನೋವಷ್ಟು ಅಚ್ಚುಕಟ್ಟಾಗಿ ಬರೆಯಿಸಿಕೊಂಡ ಸುಂದರ ಬರಹ......... ಪ್ರೀತಿ ತುಂಬಿದ ಬರಹ. ತುಂಬಾ ಖುಷಿಯಾಯಿತು ಓದಿ. :-)

      Delete
    2. ಧನ್ಯವಾದಗಳು ಎಸ್ . ಎಸ್..ಸುಂದರ ನಗೆ ನಿಮ್ಮ ಹೆಗ್ಗುರುತು...ಸುಂದರ ಕಾರ್ಯಕ್ರಮ ಮಣಿಕಾಂತ್ ಸರ್ ಅವರ ಹೆಗ್ಗುರುತು....

      Delete
    3. ಧನ್ಯವಾದಗಳು ರಾಘವ..ಸಮಾರಂಭ ನಮ್ಮದು ಎನ್ನುವ ಭಾವ ಎಲ್ಲರನ್ನು ತುಂಬಿತ್ತು...ಹಾಗಾಗಿ ಸಮಾರಂಭ ಅಚ್ಹುಕಟ್ಟಾಗಿತ್ತು..

      Delete
  3. hmm ...pustaka bidugadeya apoorva kaaryakramakke baradiddaru kannige kattuva tara nirupisiddeeri:p..alle kulitu ee progrm naa nodidantittu ...sogasaagide srikant ji ..

    ReplyDelete
    Replies
    1. ಓದುವ ಮನದಲ್ಲಿ ಆತ್ಮೀಯ ಭಾವ ಇದ್ದಾಗ ಓದಿದ್ದೆಲ್ಲ ಸುಂದರವಾಗಿ ಕಾಣುತ್ತದೆ..ಸುಂದರ ಅನಿಸಿಕೆ ಬಿ.ಪಿ. ಧನ್ಯವಾದಗಳು

      Delete
  4. ಶ್ರೀಕಾಂತ್ ಸರ್,

    ಮಣಿಕಾಂತ್‍ರವರ ಸರಳತೆ ಮತ್ತು ಬರವಣಿಗೆಯಲ್ಲಿನ ಪ್ರತಿಭೆ ಇಂಥ ಕಾರ್ಯಕ್ರಮದ ಅದ್ಬುತ ಯಶಸ್ಸಿಗೆ ಕಾರಣವೆಂದು ನನ್ನ ಭಾವನೆ. ನನಗೆ ತುಂಬಾ ಖುಷಿ ಕೊಟ್ಟ ಕಾರ್ಯಕ್ರಮಗಳಲ್ಲಿ ಇದು ಒಂದು. ಮೂರು ದಿನಗಳ ಮೊದಲು ಮಣಿಕಾಂತ್ ನಮ್ಮ ಮನೆಗೆ ಬಂದಾಗ "ಅಪ್ಪ ಅಂದ್ರೆ ಆಕಾಶ ಪುಸ್ತಕ" ತಂದಿದ್ದರು. ಅದರಲ್ಲಿ "ಎಮ್ಮೆ ಕಾಯುತ್ತಿದ್ದ ಹುಡುಗ ಎಂ.ಎ ಮಾಡಿದವರನ್ನು ಮೀರಿಸಿದ! ಲೇಖನದ ಬಗ್ಗೆ ನನಗೆ ವಿವರಿಸುತ್ತಿದ್ದಾಗ ತನ್ಮಯಳಾಗಿ ಕೇಳಿದ ನನ್ನ ಶ್ರೀಮತಿ ಮಣಿಕಾಂತ್ ಹೋದ ಮೇಲೆ, ನಾನು ಆ ಪುಸ್ತಕವನ್ನ ಓದಬೇಕು. ಅವರ ಪುಸ್ತಕವನ್ನು ತನ್ನಿ ಎಂದಳು. ಹೀಗೆ ಮಣಿಕಾಂತ್ ಪುಸ್ತಕ ಅದೆಷ್ಟೋ ಜನರಿಗೆ ಸ್ಪೂರ್ತಿ ನೀಡಿದೆ...

    ReplyDelete
    Replies
    1. ಹೌದು ಶಿವೂ ಸರ್..ನಿಮ್ಮ ಮಾತು ನಿಜ.ಲೇಖನಗಳು ಪರಿಣಾಮಕಾರಿಯಾಗಿದ್ದಾಗ ಮನಕ್ಕೆ ಹೊಸ ಹುರುಪನ್ನು ತಂದು ಕೊಡುತ್ತದೆ..ಧನ್ಯವಾದಗಳು..

      Delete
  5. ಶಬ್ಬಾಸ್ ಶ್ರೀಕಾಂತ್ ಒಳ್ಳೆಯ ಬರವಣಿಗೆ, ಕಾರ್ಯಕ್ರಮದ ಸೊಗಡನ್ನು ಚೆನ್ನಾಗಿ ಚಿತ್ರಿಸಿದ್ದೀರಿ.

    ReplyDelete
    Replies
    1. ನಿಮ್ಮ ಚಿತ್ರಗಳಿಗೆ ಕಾಯ್ತಾ ಇದ್ದೀವಿ ಬಾಲೂ ಸರ್...ಕಾರ್ಯಕ್ರಮದಲ್ಲಿ ನಿಮ್ಮ ಜೊತೆ ಇದ್ದದ್ದು ಇನ್ನಷ್ಟು ಖುಷಿ ತಂದಿತು..ಧನ್ಯವಾದಗಳು

      Delete
  6. ಇದುವರೆಗೂ ಯಾವುದೇ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು ಭಾಗವಹಿಸಿಯೇ ಇಲ್ಲ. ಪ್ರತಿಬಾರಿಯೂ ಚಿತ್ರಗಳಲ್ಲೋ, ಲೇಖನಗಳಲ್ಲೋ ಅಲ್ಲಿಯ ವೈಭವವನ್ನು ಅನುಭವಿಸ್ತಾ ಇದ್ದೀನಿ. ಧನ್ಯವಾದಗಳು ಶ್ರೀಕಾಂತ್.

    ReplyDelete
    Replies
    1. ಕಣ್ಣಿಗೆ ಕಾಣದಿರುವ ಪ್ರಪಂಚ ಇನ್ನಷ್ಟು ಸುಂದರವಾಗಿರುತ್ತೆ..ಒಂದು ಮಧುರ ಕ್ಷಣಗಳನ್ನು ಸವಿಯುವ ಇಂತಹ ಸಮಾರಂಭ ಆತ್ಮೀಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ..ಸುಂದರ ಅನಿಸಿಕೆ ನಿಮ್ಮದು..ಧನ್ಯವಾದಗಳು ಸಹೋದರಿ..

      Delete
  7. ಮೊದಲ ಓಪನಿಂಗ್ ಹೇಗಿರುತ್ತದಂತೆಯೋ ಅಂತೇಯೇ ಉಳಿದ ದಿನವಂತೆ!

    ಮೊದಲು ಸಿಕ್ಕಿದ್ದೇ ಸಖತ್ ಖುಷೀ ಮನುಷ್ಯ ಶ್ರೀಮಾನ್ ಅದಕ್ಕೇ ನನಗೆ ನಿನ್ನೆಯ ಸಮಾರಂಭ ಒಂದು ಅವಿಸ್ಮರಣೀಯ ದಿನ.

    ಆ ಮೂಲಕ ನನ್ನೆಲ್ಲ ಮುಖ ಪುಟ ಮತ್ತು ಬ್ಲಾಗ್ ದೇವಾನುದೇವತೆಗಳನ್ನು ಮುಖತಃ ಭೇಟಿಯಾದದ್ದು ಬಹಳವೇ ಆನಂದ ಕೊಟ್ಟಿತು.

    ಮಣಿಕಾಂತ್ ಸಾರ್ ಒಳ್ಳೆಯ ಪುಸ್ತಕಕ್ಕಾಗಿ ಧನ್ಯವಾದಗಳು.

    ReplyDelete
    Replies
    1. ಬದರಿ ಸರ್ ಇದು ಮೋಸ.ನನ್ನ ಮಾತನ್ನು ನೀವು ಹೇಳಿಬಿಟ್ಟರೆ ಹೆಂಗೆ..ಮೊದಲೇ ನೀವು ಸಿಕ್ಕದ್ದು ಜೋಶ್ ಬಂದ ಹಾಗೆ ಆಯಿತು...ನಿಮ್ಮೆಲ್ಲರ ಜೊತೆ ಕಳೆದ ಆ ಕೆಲ ಘಂಟೆಗಳು ನೆನಪಲ್ಲಿ ಉಳಿಯುವಂತವು..ಇದಕ್ಕೆ ಮಣಿಕಾಂತ್ ಸರ್ ಅವರಿಗೆ ಧನ್ಯವಾದಗಳು...ಸುಂದರ ಅನಿಸಿಕೆ ತಿಳಿಸಿದ ನಿಮಗೂ ಧನ್ಯವಾದಗಳು

      Delete
  8. ತುಂಬಾ ಸೊಗಸಾದ ಕಾರ್ಯಕ್ರಮ....

    ಕಣ್ ಮುಂದೆ ಕಟ್ಟುವಂಥಹ ನಿರೂಪಣೆ....

    ಮತ್ತೊಮ್ಮೆ ನಮಗೆಲ್ಲ ಸಿಹಿ ಬಡಿಸಿದ್ದಕ್ಕೆ ನಿಮಗೆ ಪ್ರೀತಿಯ ಜೈ ಹೋ !!

    ReplyDelete
    Replies
    1. ಪ್ರಕಾಶಣ್ಣ ಇಂತಹ ಕಾರ್ಯಕ್ರಮಗಳು ಭೂರಿ ಭೋಜನ ಒದಗಿಸುತ್ತವೆ...ಸುಂದರ ಕಾರ್ಯಕ್ರಮ..ಸುಂದರ ಚಿತ್ರಗಳು ನಿಮ್ಮದು...ಧನ್ಯವಾದಗಳು

      Delete
  9. ಶ್ರೀ ಸಾರ್.. ನಿನ್ನೆಯ ಕಾರ್ಯಕ್ರಮದ ಸೊಗಡಿನ ಅಂದವನ್ನ ನಿಮ್ಮ ಪದಮಾಲೆಗಳಲ್ಲಿ ಬಹಳ ಸುಂದರವಾಗಿ ಪೋಣಿಸಿ ಕೊಟ್ಟಿದ್ದೀರ. ತುಂಬಾನೆ ಇಷ್ಟವಾಯ್ತು. ನಿನ್ನೆ ಸೂರ್ಯನ ಬರ್ತ್ಡೇ ಅಂತ ಗೊತ್ತಿರಲಿಲ್ಲ ಗೊತ್ತಾಗಿ ಖುಷಿಯಾಯ್ತು. ಅಚ್ಚುಕಟ್ಟಾದ ಬರಹ. ಇಷ್ಟವಾಯ್ತು. :)

    ReplyDelete
    Replies
    1. ಸತೀಶ್ ಆಕಾಶ ನಿರ್ಮಲವಾಗಿದ್ದಾಗ ಪ್ರತಿಯೊಂದು ಹಕ್ಕಿಯ ಹಾರಾಟ ಸುಂದರವಾಗಿ ಕಾಣುತ್ತದೆ..ನಿಮ್ಮ ನಿರ್ಮಲ ಮನಸಲ್ಲಿ ಮೂಡಿದ ಭಾವಗಳಿಗೆ ನಾ ತಲೆ ಬಾಗಿ ನಮಿಸುವೆ...

      Delete

  10. ತುಂಬಾನೇ ಚೆನ್ನಾಗಿತ್ತು ನಿನ್ನೆಯ ದಿನ.. ನಿಮ್ಮ ಬರಹದಲ್ಲಿ ಮತ್ತೊಮ್ಮೆ ದೂರ ಕುಳಿತು ವೀಕ್ಷಿಸಿದಂತೆ ಆಗುತ್ತೆ.
    ಅಣ್ಣಾ small doubt .. ನನ್ನ ಪಕ್ಕ ಕುಳಿತ ನಿಮ್ಮ ಕೈ ಲಿ ಪೆನ್ನು ಪೇಪರ್ ಇರಲಿಲ್ಲ , mobile ತೆಗೆದೆದಿದ್ದು ನೋಡಿಲ್ಲ ..
    ಇದ್ಯಾವಾಗ ಬರದ್ರಿ??

    ReplyDelete
    Replies
    1. ಸುಮಧುರ ಮನಸಿನ ಬಳಗವನ್ನು ಭೇಟಿ ಮಾಡಲು ಒಂದು ಸುಂದರ ಅವಕಾಶ ಈ ಕಾರ್ಯಕ್ರಮದ್ದಾಗಿತ್ತು..ನಿನ್ನ ಅನುಮಾನಕ್ಕೆ ನನ್ನಲ್ಲಿ ಉತ್ತರವಿಲ್ಲ ಎಸ್.ಪಿ. ಹಹಹ ...ಧನ್ಯವಾದಗಳು

      Delete
  11. ಅವರುಗಳು ಮಾತಾಡಿದ್ದನ್ನ ಕೇಳಲಿಲ್ಲ, ಆದರೆ ನಿಮ್ಮ ಸೊಗಸಾದ ಬರಹ ನೋಡಿ
    ಕಾರ್ಯಕ್ರಮ ಕಣ್ಣ ಮುಂದೆ ಬಂತು. "ನಗೆ ದೇವತೆ ಅವರ ಪ್ರತಿ ಪದಗಳನ್ನು ತಬ್ಬಿ ಹಿಡಿದಿದ್ದಳು" ಸುಂದರ ಸಾಲು. ವಾಹ್ ವಾಹ್ ...ನೆನ್ನೆ ಅಮೃತ ವರ್ಷಿಣಿ ಬಾನುಲಿ ಕೆಂದ್ರದ ಆರ್.ಜೆ. ಪೂರ್ಣಿಮಾ ತಮ್ಮನ್ನ ತಾವು ಬಾನುಲಿ ಗೆಳತಿ ಅಂತ ಪರಿಚಸಿಕೊಂಡು ಸೂರ್ಯನ ಕಥೆ ಹೇಳಿದ್ರು. ನಿಮ್ಮ ಬರಹ ಓದಿ ಅವರ ಸುಶ್ರಾವ್ಯ ಕನ್ನಡ ನೆನಪಾಯಿತು . ಅಪ್ಪ ಅಂದ್ರೆ ಆಕಾಶ ಓದಬೇಕು

    ReplyDelete
    Replies
    1. ಕೆಲವರ ಮಾತುಗಳೇ ಹಾಗೆ..ಕೇಳುತ್ತಲೇ ಇರಬೇಕು ಅನ್ನಿಸುತ್ತೆ...ಸುಂದರವಾದ ಮಾತಿನ ಲಹರಿ ಇತ್ತು ಈ ಕಾರ್ಯಕ್ರಮದಲ್ಲಿ...ರಥ ಸಪ್ತಮಿಯ ದಿನ ಸುಂದರ ಅನೇಕ ಸೂರ್ಯರನ್ನು ನೋಡಿದ ಅನುಭವ ನನ್ನದಾಯಿತು...ಧನ್ಯವಾದಗಳು ಸ್ವರ್ಣ ಮೇಡಂ

      Delete
  12. ಸಮಾರಭಕ್ಕೆ ಬರಲಾಗದ್ದಕ್ಕೆ ಬೇಸರವಾಗಿತ್ತು ....... ನಿಮ್ಮ ಸ್ವಾರಸ್ಯ ವಾದ ನಿರೂಪಣೆ ಓದಿದಮೇಲೆ ಸಮಾಧಾನ ಆಯ್ತು .... ವಂದನೆಗಳು ಶ್ರೀಕಾಂತ್ ಜಿ ......

    ReplyDelete
    Replies
    1. ಧನ್ಯವಾದಗಳು ಉಮೇಶ್ ಸರ್..ರಥಸಪ್ತಮಿಯಂದು ಸೂರ್ಯನಿಗೆ ನಮಸ್ಕಾರ ಹಾಕುವ ನಿಮ್ಮ ಕಾರ್ಯಕ್ರಮ ಅಚ್ಹುಕಟ್ಟಾಗಿತ್ತು ಎನ್ನುವ ಮಾತನ್ನು ಕೇಳಿದಾಗ ಸಂತಸವಾಯಿತು..ಧನ್ಯವಾದಗಳು

      Delete
  13. ಅಣ್ಣಯ್ಯ... ಕಾರ್ಯಕ್ರಮದ ಬಗ್ಗೆ ಸೊಗಸಾಗಿ ಮತ್ತು ನಿಖರವಾಗಿ ಬರೆದಿದ್ದಿರಲ್ಲ ಓದುತ್ತಾ ಹೋದಂತೆ ಸಂಧ್ಯಾ ಗೆ ಬಂದ ಡೌಟ್ ನನಗೂ ಬಂದಿತು..ಚಂದದ ನಿರೂಪಣೆ. ಬ್ಲಾಗ್ ಲೋಕದ ತಾರೆಗಳನ್ನು ಬೇಟಿಯಾಗಿದ್ದು ಸೌಭಾಗ್ಯವೆಂದೇ ಭಾವಿಸುತ್ತೇನೆ..

    ReplyDelete
    Replies
    1. ನೋಡಿದ್ದನ್ನ ಬರೆದೆ...ಅಷ್ಟೇ..ನಿಮ್ಮನ್ನೆಲ್ಲ ಭೇಟಿ ಮಾಡಿದ್ದು ಖುಷಿಯಾಯಿತು...ನಿನ್ನ ಅನುಮಾನಕ್ಕಿಂತಲೂ...ಗಲಿಬಿಲಿ ಮುಖಭಾವ ಸೊಗಸಾಗಿತ್ತು...ಧನ್ಯವಾದಗಳು ಪಿ ಎಸ್

      Delete
  14. ಶ್ರೀಮನ್ ಯಾವಾಗಲೂ ಪ್ರಥಮ ಇಂತಹ ಕಾರ್ಯಕ್ರಮಗಳ ನಡೆದಂತೆ-ವಿವರಣೆ ನೋಡೋಕೆ...ಸೂಪರ್...ಬಟ್ ಸ್ಯಾಡೂ...ಬರ್ಲಿಕ್ಕಾಗ್ಲಿಲ್ಲ ಅಂತ....

    ReplyDelete
    Replies
    1. ಅಜಾದ್ ಸರ್..ನೀವು ದೂರದಿಂದ ಹಾರೈಸಿದ್ದು ಮಣಿಕಾಂತ್ ಸರ್ ಅವರಿಗೆ ತಲುಪಿತ್ತು...ಸುಂದರ ಕಾರ್ಯಕ್ರಮ..ಧನ್ಯವಾದಗಳು ನಿಮ್ಮ ಸುಂದರ ಪ್ರತಿಕ್ರಿಯೆಗೆ

      Delete
  15. ಸಖತ್ತಾಗಿದೆ ಶ್ರೀಕಾಂತ್ ಜೀ.. ಸುಂದರ ಸಮಾರಂಭವೊಂದನ್ನು ಇಲ್ಲಿಂದಲೇ ಸವಿದ ಅನುಭವವಾಯ್ತು.. ಒಂದೊಳ್ಳೆ ಕಾರ್ಯಕ್ರಮ ಮಿಸ್ ಮಾಡ್ಕೊಂಡೆನಲ್ಲಾ ಅನ್ನೋ ಬೇಸರವೂ ಆಯ್ತು :-(

    ReplyDelete
    Replies
    1. ನಿಮ್ಮ ಹೆಸರಲ್ಲಿ ನಿಮ್ಮ ಗೆಳೆಯರಿಗೆ ಬೇಕಾದ್ದು ಸಿಗುತ್ತದೆ..ಧನ್ಯವಾದಗಳು ನಿಮ್ಮ ಸುಂದರ ಅನಿಸಿಕೆಗೆ..ಬೇಸರ ಬೇಡ...ಬ್ಲಾಗ್ ಲೋಕದಲ್ಲಿ ಈ ತರಹ ಕಾರ್ಯಕ್ರಮಗಳು ಇದ್ದೆ ಇರುತ್ತವೆ..

      Delete
  16. ಮಣಿಕಾಂತರ ಪುಸ್ತಕ ಬಿಡುಗಡೆ ಸಮಾರಂಭದ ನೇರ ಪ್ರಸಾರ ಶ್ರೀಕಾಂತರ ರಸವತ್ತಾದ ನುಡಿಗಳಲ್ಲಿ. ಮನೆಯಲ್ಲೇ ಕೂತು ಒನ್ ಡೇ ಮ್ಯಾಚ್ ಕಾಮೆಂಟರಿ ಕೇಳಿದ (ನೋಡಿದ) ಹಾಗೆ! ಸ್ವಲ್ಪ ಪುಸ್ತಕ ವಿಮರ್ಶೆಯ ಕೆಲಸಕ್ಕೆ ಕೈ ಹಾಕಬಹುದೇ? ಆಲ್ ದಿ ಬೆಸ್ಟ್ ಶ್ರೀಕಾಂತ .........

    ReplyDelete
    Replies
    1. ದೂರದ ಭಾವ ಒಲವಿನ ಜೀವ ಒಂದಾಗಿ ಸೇರಿದೆ ನಿಮ್ಮ ಮಾತುಗಳಲ್ಲಿ...ಸುಂದರವಾದ ಅನಿಸಿಕೆ ಚಿಕ್ಕಪ್ಪ...ಖಂಡಿತ ಪುಸ್ತಕದ ಬಗ್ಗೆ ನನಗೆ ತೋಚಿದ ನಾಲ್ಕು ಮಾತುಗಳನ್ನು ನಿಮಗೆ ಹೇಳುತ್ತೇನೆ...ಓದಲೇ ಬೇಕಾದ ಪುಸ್ತಕ ಈ ಮಾತು ನಿಜ..

      Delete
  17. ಶ್ರೀ...
    ಯರ್ರಾ ಬಿರ್ರಿ ಧನ್ಯವಾದಗಳು ಬ್ಲಾಗಿಗರ ಲೋಕದ ವಿಷಯಗಳನ್ನು ತಿಳಿಸಿಕೊಡುವುದಕ್ಕಾಗಿ :)...
    ಅಲ್ಲಿಗೇ ಕರೆದೊಯ್ದಿದಿರಿ ನನ್ನ ....
    ಧನ್ಯವಾದಗಳು...
    ಸಿಗುವಾ :) :)

    ReplyDelete
    Replies
    1. ನಮ್ಮೆಲ್ಲರ ಮನಸು ಒಬ್ಬರ ಪಕ್ಕ ಒಂದು ನಿಂತಿದೆ.ಉಸಿರಾಟ ಕೂಡ ಇನ್ನೊಬ್ಬರಿಗೆ ಕಾಣುತ್ತದೆ..ಧನ್ಯವಾದಗಳು ಚಿನ್ಮಯ್

      Delete
  18. ಕಣ್ಣಿಗೆ ಕಟ್ಟುವಂತೆ ಬರೆಯುವುದು ಅಂದ್ರೆ ಇದೇನಾ??? ಸುಂದರ ಕಾರ್ಯಕ್ರಮ ಅದರ ಮೇಲೊಂದು ಸುಂದರ ವರದಿ.... ನಿಮ್ಮಂತ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟ ಕಾರ್ಯಕ್ರಮವೆನ್ನುವುದು ಸಂತಸಕ್ಕೆ ಇನ್ನೊಂದು ಕಾರಣ ...... ಬ್ಲಾಗ್ ಮಿತ್ರರನ್ನು ನೋಡಿ ಖುಷಿ ಐತು... ಒಂದು ಸುಂದರ ಭಾನುವಾರವನ್ನು ನಿಮ್ಮೆಲ್ಲರೊಡನೆ ಸೊಗಸಾಗಿ ಕಳೆದಿದ್ದಕ್ಕೆ ಸಂತಸವಿದೆ. ಅಭಿನಂದನೆ ಗಳು

    ReplyDelete
    Replies
    1. ಧನ್ಯವಾದಗಳು ಅಶೋಕ್ ಸರ್. ಪ್ರತಿ ದಿನ ನಿಮ್ಮ ಶುಭ ಮುಂಜಾನೆಯ ಸಂದೇಶ ಕಚಗುಳಿ ಕೊದುತಿತ್ತು. ಅಂದಿನ ದಿನದಂದು ನಿಮ್ಮ ಭೇಟಿ ಮನಕ್ಕೆ ಮುದ ತಂದಿತು. ಸುಂದರ ಪ್ರತಿಕ್ರಿಯೆ ನಿಮ್ಮದು.

      Delete
  19. Huttuhabbda subhashayagalu Akka....tadavaagi alla tumbaa tadavaagi.....Sundara Baraha sir....Nimma baalu sadaa hasiraagirali...

    ReplyDelete
    Replies
    1. ಧನ್ಯವಾದಗಳು ಅಶೋಕ್ ಸರ್. ನಿಮ್ಮ ಹಾರೈಕೆ ತಲುಪಿದೆ.

      Delete