Thursday, July 26, 2012

ಪುಸ್ತಕದ ಮನೆ ಪರಿಚಯ...ದೂರದರ್ಶನ ಚಂದನದಲ್ಲಿ ಬಿತ್ತರವಾಯಿತು.


ಇಂದು ಮುಂಜಾನೆ ಕಛೇರಿಗೆ ಹೋಗುವ ತರಾತುರಿಯಲ್ಲಿದ್ದೆ.....(೨೬.೦೭.೨೦೧೨ ಬೆಳಿಗ್ಗೆ ೭.೦೦ - ೭.೩೦)

ಅವಸರ ಅವಸರವಾಗಿ ಹೊರಡುವ ತಯಾರಿ ನಡೆದಿತ್ತು...

ಹಿಂದಿನ ರಾತ್ರಿ ಒಂದು ಸಮಾರಂಭಕ್ಕೆ ಹೋಗಿ ಬಂದಿದ್ದು ರಾತ್ರಿ ಹನ್ನೆರಡಾಗಿತ್ತು..ಹಾಗಾಗಿ ಬೆಳಿಗ್ಗೆ ಎದ್ದದ್ದು ತಡವಾಗಿ ಕಛೇರಿಯ
ವಾಹನ ತಪ್ಪಿಸಿಕೊಂಡಿದ್ದರಿಂದ..ಹೊರಡುವ ಆತುರ ಇನ್ನು ಹೆಚ್ಚಿತ್ತು..

ಅಷ್ಟರಲ್ಲಿ..."ಅಪ್ಪಾಆಆಆ...ಅಪ್ಪಾಆಆಆಆಆಆ" ಮಗಳು ಕೂಗಿದಳು (ಕಿರುಚಿದಳು ಅಂದ್ರು ಪರವಾಗಿಲ್ಲ)
"ಏನು ಪಾಪ?"..ಅಂತ ಸಿದ್ದವಾಗುತ್ತ ಆ ಎಳೇ ಸ್ವರಕ್ಕೆ ಪೈಪೋಟಿಯಾಗಿ  ಕರ್ಕಶವಾಗಿಯೇ ನಾನು ಕಿರುಚಿದೆ..ಹೊರಡುವ

ಆತುರ... ಸಮಯ ಕಳೆದಂತೆ.... ಬಂಗಾರದ ದರದಂತೆ ಏರುತಿತ್ತು...

"ಅಪ್ಪ..ನಾವು ಬಸ್ಸಿನಲ್ಲಿ ಪುಸ್ತಕ ನೋಡೋಕೆ ಹೋಗಿದ್ದೆವಲ್ಲ ಅದು ಬರ್ತಾ ಇದೆ..."

ನನಗೆ ಅರ್ಥ ಆಗ್ಲಿಲ್ಲ..ಯಾವುದೋ  ಅರ್ಥವಾಗದ ಭಾಷೆಯ ಚಿತ್ರಗೀತೆ ಕೇಳಿದಂತೆ ಭಾಸವಾಯಿತು..

"ಯಾವುದು ಪಾಪ...?"

ಅಷ್ಟರಲ್ಲಿ..ನನ್ನ ಮುದ್ದಿನ (?) ಮಡದಿ.."ರೀ..ಬಾಲು ಸರ್, ಪ್ರಕಾಶ ಹೆಗ್ಗಡೆ ಅವರ ಜೊತೆ ಹೋಗಿದ್ದೆವಲ್ಲ.....ಅಂಕೆ ಗೌಡರ ಬಗ್ಗೆ ಟಿ.ವಿ. ಲಿ ಬರ್ತಾ ಇದೆ..."

ಭರದಿಂದ ಟಿ.ವಿ. ಮುಂದೆ ನಿಂತೇ...
ದೂರದರ್ಶನ ಚಂದನ ವಾಹಿನಿಯಲ್ಲಿ ಶ್ರೀ.ಅಂಕೆ ಗೌಡರ ಸಂದರ್ಶನ  ಬಿತ್ತರ ಆಗ್ತಾ ಇತ್ತು...
ನನ್ನ ವ್ಯಾವಹಾರಿಕ ಪ್ರಪಂಚದಿಂದ ಹೊರಗೆ ಬಂದು..ಅದರಲ್ಲೇ ಲೀನವಾದೆ..ಸುಮಾರು ಅರ್ಧ ಘಂಟೆ ಕಾರ್ಯಕ್ರಮ..ಸಮಯವಿರಲಿಲ್ಲ..ಆದ್ರೆ ಮನಸು ಬಿಡಲಿಲ್ಲ..

ಅರೆ..ನಾವು ನೋಡಿದ, ಓಡಾಡಿದ ಸ್ಥಳದ ಬಗ್ಗೆ ಎಲ್ಲಿಯಾದರೂ ನೋಡಿದರೆ..ಒಂದು ಹಿರಿಮೆ, ಗರಿಮೆ ಮನದಲ್ಲಿ ಮೂಡುತ್ತದೆ..ಆ ಭಾವ..ಬೇರೆ ಪರಿವೆಯನ್ನು ಬರಗೊಡದೆ...ತಡೆಯುತ್ತದೆ..

ಸಂದರ್ಶನ ಮುಗಿದಾಗ ಮನಸಿಗೆ ಸಂತೋಷ ವಾಯಿತು..ಮಕ್ಕಳಿಗೆ ಈ ಮಹಾನುಭಾವರ ಸಾಧನೆ, ಶ್ರಮ ತಲುಪುತ್ತಿದೆ ಅಂದ್ರೆ..ಅದು ಒಂದು ಮೆಟ್ಟಿಲಿನ ಗೆಲುವು ಅನ್ನಿಸಿತು....

ಬಹಳ ಉಪಯುಕ್ತ ಸಂದರ್ಶನ...ಅವರ ಪುಸ್ತಕದ ಮನೆ ಬೆಳಕಿಗೆ ಬರುತಿದೆ ಅನ್ನುವದಕಿಂತ..ಅದು ಅವಾಗಿನಿಂದಲೂ ಇತ್ತು...ನಮಗೆ ಅವರ ಬಗ್ಗೆ ಇತ್ತೀಚಿಗೆ ತಿಳಿದುದರಿಂದ..ನಮ್ಮ ಆಸಕ್ತಿ ಅಲ್ಲಿಗೆ ಸೆಳೆಯುತ್ತದ ಎನ್ನುವುದು ಸತ್ಯ...ಮಾಮೂಲಿ ದಿನದಲ್ಲಿ ಅಯ್ಯೋ ಬಿಡು ಅದೊಂದು ತಲೆನೋವಿನ ಸಂದರ್ಶನ ಎಂದು ಬೇರೆ ಚಾನೆಲ್ ಹಾಕುವ ಪ್ರವೃತ್ತಿಯಿಂದ..ಅರೆ..ನಾವು ಇದನ್ನ ನೋಡಿದ್ದೇವೆ..ಪೂರ ಸಂದರ್ಶನ ನೋಡಿಯೇ ಬಿಡೋಣ ಅನ್ನುವ ಮನಸ್ಥಿತಿ ತಲುಪಿದ್ದಕ್ಕೆ ಕಾರಣ..ಅಲ್ಲಿಗೆ ಭೇಟಿ ನೀಡಿದ್ದರಿಂದ ಅಲ್ಲವೇ...

ಸಂದರ್ಶನದಲ್ಲಿ ಬಹಳ ಅಚ್ಚುಕಟ್ಟಾಗಿ ಮಾತಾಡಿದರು ಶ್ರೀಮಾನ್ ಅಂಕೆ ಗೌಡರು..ಸಮಯದ ಪರಿಮಿತಿ ಅವರ ಉತ್ಸಾಹಕ್ಕೆ ತಡೆಯೊಡ್ದುತಿತ್ತು  ...ಅವರ ಅಗಾಧ ಹುಮ್ಮಸ್ಸು, ಮತ್ತು ತನ್ನ ಪುಸ್ತಕದ ಮನೆ ನಾಡಿನ ಮೂಲೆ ಮೂಲೆಗೂ ತಲುಪಬೇಕು..ಎಲ್ಲರಿಗೂ ಸಹಾಯವಾಗಬೇಕು ಅನ್ನುವ ಕಳಕಳಿ, ತವಕ ಅವರ ಮಾತಿನಲ್ಲಿ ಗೋಚರವಾಗುತಿತ್ತು..

ಇಂತಹ ಅಮೋಘ ಸ್ಥಳಕ್ಕೆ  ನನ್ನನ್ನು ಪರಿಚಯಿಸಿದ ಬಾಲು ಸರ್, ಪ್ರಕಾಶ್ ಹೆಗ್ಗಡೆ ಮತ್ತು ಬ್ಲಾಗಿಗರ ಗುಂಪು..ಎಲ್ಲರಿಗೂ ನನ್ನ ಅನಂತಾನಂತ ವಂದನೆಗಳು...

4 comments:

 1. ಶ್ರೀಕಾಂತ್..

  ನಾನು ಇನ್ನೊಮ್ಮೆ ಅಲ್ಲಿ ಹೋಗಿ ಬಂದೆ..
  ಪರಿಚಯದ ಹಿರಿಯರೊಬ್ಬರ ಬಳಿ ಅಮೂಲ್ಯ ಪುಸ್ತಕ ಸಂಗ್ರಹವಿತ್ತು...
  ಅಲ್ಲಿ ಹೋಗಿ ಕೊಟ್ಟು ಬಂದೆವು..

  ಆ ಹಿರಿಯರು ಕಷ್ಟಪಟ್ಟು ಸಂಪಾದಿಸಿದ ಆ ಪುಸ್ತಕಗಳು.
  ಅವರಿಗೂ ಒಂದೆಡೆ ಒಳ್ಳೆಯ .. ಯೋಗ್ಯವಾದ ಸ್ಥಳಕ್ಕೆ ಕೊಟ್ಟಿದ್ದೇನೆಂಬ ಕೃತಾರ್ಥ ಭಾವನೆ ಇತ್ತು...

  ಅಂಕೆ ಗೌಡರ ಬಗೆಗೆ ಕನ್ನಡಿಗರಿಗೆಲ್ಲ ಪರಿಚಯವಾಗಬೇಕು..
  ನಮ್ಮಲ್ಲಿಯ ಉತ್ತಮ ಪುಸ್ತಕಗಳು ಅಲ್ಲಿ ಸಂಗ್ರಹವಾಗಬೇಕು... ಅಲ್ಲವೆ?

  ReplyDelete
 2. ಪ್ರಕಾಶಣ್ಣ..
  ನಿಮ್ಮ ಪ್ರತಿಕ್ರಿಯಗೆ ಧನ್ಯವಾದಗಳು...
  ನಿಮ್ಮ ಅಭಿಪ್ರಾಯ ಸರಿ...ನದಿ ಕಡಲು ಸೇರಿದರೆ ಚೆನ್ನ..ಒಳ್ಳೆಯ ಅಮೂಲ್ಯವಾದ ಪುಸ್ತಕಗಳಿಗೆ ಸರಿಯಾದ ಸ್ಥಳ...ಅದು..
  ಬ್ಲಾಗಿಗರ ಗುಂಪಿನಿಂದ ಏನಾದರು ಅಳಿಲು ಸೇವೆ ಮಾಡಲು ಸಾಧ್ಯವೇ...

  ReplyDelete
 3. ಇಂತಹ ಪವಿತ್ರ ಪುಸ್ತಕ ಲೋಕಕ್ಕೆ ಬರಲಾಗದ ನನ್ನ ಅಸಹಾಯಕತೆಗೆ ನನಗೇ ಬೇಸರವಾಗುತ್ತದೆ.

  ReplyDelete
 4. ಬದರಿ ಸರ್...ಚಿಂತೆ ಏಕೆ ಮನವೇ..ಇನ್ನೊಂದು ಅವಕಾಶ ಇರಲು...
  ಯೋಚನೆ ಮಾಡಬೇಡಿ..ಖಂಡಿತ ಇನ್ನೊಮ್ಮೆ ಹೋಗುವ ಅವಕಾಶ ಸಿಕ್ಕೆ ಸಿಗುತ್ತದೆ..

  ReplyDelete