Thursday, April 24, 2014

ಆಹಾ ನನ್ನ ಜನ್ಮ ಪಾವನವಾಯಿತು!!!

ನಿನ್ನೆ ರಾತ್ರಿ ತಲೆ ಓಡುತ್ತಿರಲಿಲ್ಲ..ಸಾಮಾನ್ಯ ನನಗೆ ಹಾಗೆ ಆಗುವುದಿಲ್ಲ.. ಏನಾದರು ಬರೆಯಬೇಕು ಅಂದರೆ ಅಷ್ಟೇ ಬರುತ್ತದೆ..  

ಯಾಕೋ ಅಣ್ಣಾವ್ರು ಮನದಾಳಕ್ಕೆ ಬರಲು ಸತ್ಯಾಗ್ರಹ ಮಾಡುತ್ತಿದ್ದರು ಅನ್ನಿಸುತ್ತಿತು.. 

ಬೆಳಿಗ್ಗೆ ಇದ್ದೆ.. ಬರೆಯೋಕೆ ಶುರು ಮಾಡಿದೆ.. ಮುಗಿಯಿತು.. ಆಫೀಸ್ ಗೆ ಹೋದೆ.. ಕೆಲಸ ಕಾಯಕ ನಡೆಯುತ್ತಿತು.. 

ವಾಪಸ್ ಬರುವಾಗ.. ಯಾಕೋ ಅಣ್ಣಾವ್ರ ದರ್ಶನ ಮಾಡೋಣ ಅನ್ನಿಸಿತು... ಸರಿ ಕಾರನ್ನು ನಿಲ್ಲಿಸಿ ಸೀದಾ ಹೋದೆ.. 

ಹೆಜ್ಜೆ ಇಟ್ಟೆ.. 

"ಈ ನೋಡೋ ಇವನೇ ಕಣೋ.. ಚಿತ್ರಗಳನ್ನು ಹಾಕಿ ಲೇಖನ ಮಾಡಿದ್ದು.. ಇವನೇ ಕಣೋ ಶ್ರೀಕಾಂತ್ ಅಂದ್ರೆ" ಅಂತ ಯಾರೋ ಮಾತಾಡಿದ್ದು ಕೇಳಿಸಿತು.. 

ತಿರುಗಿ ನೋಡಿದೆ ಯಾರೂ ಕಾಣಲಿಲ್ಲ.. ಮೆಲ್ಲಗೆ ಕಣ್ಣರಳಿಸಿ ನೋಡಿದೆ.. ಕಿವಿಯಾನಿಸಿದೆ.. 

ಮೆಲ್ಲಗೆ ಅಣ್ಣಾವ್ರ ಅಕ್ಕ ಪಕ್ಕದಲ್ಲಿ ನಿಂತ ಶಿಲೆಗಳ ಮಧ್ಯೆದಲ್ಲಿ ಅರಳಿ ನಿಂತಿದ್ದ ಅಣ್ಣಾವ್ರ ಚಿತ್ರದ ಪಾತ್ರಗಳು ಮಾತಾಡುತ್ತಿರುವಂತೆ ಭಾಸವಾಯಿತು.. 

ನಿಧಾನವಾಗಿ ಅಣ್ಣಾವ್ರನ್ನು ನೋಡುತ್ತಲೇ ಮುಂದಡಿ ಇಟ್ಟೆ.. ಮಾತುಗಳು ಹೆಚ್ಚಾದವು.. ಅಲ್ಲಿದ್ದ ಎಲ್ಲಾ ಪಾತ್ರಗಳು ನನ್ನ ಕಂಡು ಸಂತಸದಿಂದ ಹರಸುತ್ತಿರುವಂತೆ  ಭಾಸವಾಯಿತು.. 

ಅಯ್ಯೋ ಇದೇನು ಕನಸೋ ನನಸೋ ಎಂದು ನನ್ನ ನಾನೇ ಚಿವುಟಿಕೊಂಡೆ.. 

"ಇದುವರೆವಿಗೂ ಶಿಲೆಯಾಗಿದ್ದ ನಮ್ಮನ್ನು ಅಲ್ಲಿಂದ ಎಬ್ಬಿಸಿ ಮಾತಾಡುವಂತೆ ಮಾಡಿದ್ದು ನೀನೆ ಕಾಂತ ಶ್ರೀಕಾಂತ..." 

ಒಂದೊಂದು ಪಾತ್ರಧಾರಿಯು ಹರಸುತ್ತಿದ್ದವು ಮಾತಾಡಿಸುತ್ತಿದ್ದವು.. 

ಸಂತಸಕ್ಕೆ ಎಣೆಯಿಲ್ಲ... 

ಹಾಗೆಯೇ ಸಾಗುತ್ತಾ ಭಕ್ತ ಕುಂಬಾರದ ಚಿತ್ರದ ಹತ್ತಿರ ಬಂದೆ..ವಿಠಲ ವಿಠಲ ಪಾಂಡುರಂಗ ಅನ್ನದೆ ಕಾಂತ ಕಾಂತ ಶ್ರೀಕಾಂತ ಎಂದ ಹಾಗೆ ಭಾಸವಾಯಿತು.. ಮನದಲ್ಲೇ ವಂದಿಸಿದೆ.. 

ನಾದಮಯ ಹಾಡಿನ ಚಿತ್ರದಲ್ಲಿ ಅಣ್ಣಾವ್ರು ತಾಳ ಮುದ್ರೆಯಿಂದ ಹೊರಬಂದು.. ಸೂಪರ್ ಅನ್ನುವ ಚಿನ್ಹೆಗೆ ತಮ್ಮಬೆರಳುಗಳನ್ನು ಮಡಚಿದರು.. ತುಂಬಾ ಚೆನ್ನಾಗಿದೆ ಕಾಂತ ಎನ್ನುವಂತೆ ಅರಿವಾಯಿತು., 

ಶಬ್ಧವೇದಿ ಚಿತ್ರದಲ್ಲಿ ಧೀರರ ಹಾಗೆ ಜೀಪಿನ ಜೊತೆಯಲ್ಲಿ ಸೊಂಟದ ಮೇಲೆ ಕೈಯನ್ನು ಇಟ್ಟುಕೊಂಡು.. ಗಂಭೀರವಾಗಿ ಅಂಗ್ಲ ಭಾಷೆಯಲ್ಲಿ 

"sri .. you gave a great article...great job...come back next time.. okey"  ಅಣ್ಣಾವ್ರ ಗಂಭೀರ ಕಂಠ ಉಲಿಯಿತು.. 

ಆನಂದಭಾಷ್ಪ..  ಆನಂದಭಾಷ್ಪ.. ಆನಂದಭಾಷ್ಪ.. ಆನಂದಭಾಷ್ಪ.. 

ತಡೆಯಲಾಗಲಿಲ್ಲ.. ಶಿರಬಾಗಿ ನಮಿಸಿ ಹೊರಬಂದೆ.. 

ಇಂದು ವಿಶೇಷ ದಿನ.. ಯಾಕೆ ಅಂದ್ರೆ ತುಂಬಾ ಸಲೀಸಾಗಿ ಬರೆದ ಲೇಖನ ಓದುಗರನ್ನು ಮುಟ್ಟಿದ್ದೆ ಅಲ್ಲದೆ ನನಗೆ ಒಂದು ಭಿನ್ನ ಅನುಭವ ಕೊಟ್ಟಿತು.. 

ಜೊತೆಯಲ್ಲಿ ಕೃಷ್ಣಮೂರ್ತಿ ಸರ್ ಕೊಟ್ಟ ತಾವೇ ರಚಿಸಿದ ಅಣ್ಣಾವ್ರ ರೇಖಾ ಚಿತ್ರ.. 


ಡಾ . ಕೃಷ್ಣ ಮೂರ್ತಿ ಸರ್ ರಚಿಸಿದ ಡಾ. ರಾಜ್ ಚಿತ್ರ 
ಶ್ರೀಯುತ ವೆಂಕಟೇಶ್ ಮೂರ್ತಿ ಸರ್ ಕೊಟ್ಟ ಅಣ್ಣಾವ್ರ ಹಸ್ತಾಕ್ಷರದ ಪ್ರತಿ... 

ಅಣ್ಣಾವ್ರ ಮುದ್ದಾದ ಬರಹ.. ಶ್ರೀ ವೆಂಕಟೇಶ್ ಮೂರ್ತಿ ಕೊಡುಗೆ

ಜೊತೆಯಲ್ಲಿ ಅಣ್ಣಾವ್ರ ಪಾತ್ರಗಳು ನನ್ನೊಡನೆ ಮಾತಾಡಿದ ಒಂದು ಅನುಭವ.. 

ಅಣ್ಣಾವ್ರ ಪಾತ್ರಗಳೊಡನೆ ಒಂದು ಕ್ಷಣ

ಅಣ್ಣಾವ್ರೆ ಇದುವರೆವಿಗೂ ನಿಮ್ಮ ಪುಣ್ಯ ಭೂಮಿಯ ಮುಂದೆ ಹಾದು ಹೋಗುವಾಗ ಅರಿವಿಲ್ಲದೆ ನನ್ನ ಕಾರಿನಲ್ಲಿ ನಿಮ್ಮ ಹಾಡುಗಳೇ ಬರುತ್ತಿದ್ದವು.. ಇಂದೂ ನೀವೇ ನನ್ನೊಡನೆ ಮಾತಾಡಲು ಬಂದಿದ್ದೀರಿ.. 


ನನಗೆ ಉತ್ಸಾಹ ಕೊಡುವ ತಾಣ.. ಇಂದು ಎಂದಿನಂತೆ ಅಲ್ಲ ತುಂಬಾ ತುಂಬಾ ವಿಶೇಷ

ನಿಮ್ಮ ಶೈಲಿಯಲ್ಲಿ ... "ಆಹಾ ನನ್ನ ಜನ್ಮ ಪಾವನವಾಯಿತು.. "


ಧನ್ಯೋಸ್ಮಿ ಅಣ್ಣಾವ್ರಿಗೆ.. !!! 

11 comments:

  1. ಅಭಿಮಾನಿ ದೇವರುಗಳ ದೇವರು ನಿಮ್ಮನ್ನು ಹರಸಲಿ .
    Nice...

    ReplyDelete
  2. ಅರೆ ವಾರೆ ವಾಹ್ , ನನಗೆ ನಿಮ್ಮ ಲೇಖನ ಓದಿದ ಅಣ್ಣಾವ್ರು , ಯಾಕಪ್ಪಾ ಯಾಕಪ್ಪಾ ನನ್ನ ಮೇಲೆ ಇಷ್ಟು ಅಭಿಮಾನ ನಿಮಗೆ, ನೀವೇ ಬೆಳೆಸಿದ ರಾಜ ಕುಮಾರ ನಾನು , ಇವತ್ತು ನಾನಿಲ್ಲದಿದ್ರೂ ನನ್ನ ಬಗ್ಗೆ ಮರೆಯದೆ ನಿಮ್ಮ ಹೃದಯದಲ್ಲಿ ಜಾಗ ಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದಗಳು ಅಂದಂತೆ ಭಾಸವಾಗುತ್ತಿದೆ , ನಿಮ್ಮ ಮನಸಿಗೆ ಎಷ್ಟು ಸಂತೋಷ ಆಗಿದೆ ಎಂಬ ಬಗ್ಗೆ ಲೇಖನದಲ್ಲಿ ನೀವು ಬಳಸಿರುವ ಪದಗಳೇ ಹೇಳುತ್ತಿವೆ . ನಿಮಗೆ ಬಂಡ ಕೊಡುಗೆಗಳು ಸಂಗ್ರಹ ಯೋಗ್ಯ ವಾಗಿವೆ, ನಿಮ್ಮ ಲೇಖನ ಓದಿದ ಅಣ್ಣಾವ್ರ ಪ್ರತಿಮೆಗಳು ನಿಮ್ಮ ಬಗ್ಗೆ ಖಂಡಿತಾ ಮಾತನಾಡಿರುತ್ತವೆ . ಜೈ ಹೊ ಶ್ರೀಕಾಂತ್ ಜಿ . ನಿಮ್ಮ ಸಂತೋಷದಲ್ಲಿ ನಾವೆಲ್ಲಾ ಪಾಲುದಾರರು

    ReplyDelete
  3. ತುಂಬಾ ಚೆನ್ನಾಗಿ ಮೂಡಿಬಂದಿದೆ ಶ್ರೀ, ಅದ್ಭುತ ಕಲ್ಪನೆ, aaaaaaaaaaaaawesome tribute to colossal giant _/\_

    ReplyDelete
  4. “ಯಾವ ಮೋಹನ ಮುರಳಿ ಕರೆಯಿತು
    ಇದ್ದಕಿದ್ದಲೇ ನಿನ್ನನು
    ಯಾವ ಬೃಂದಾವನವು ಚಾಚಿತು
    ತನ್ನ ಮಿಂಚಿನ ಕೈಯನು”....

    ಓದಿದ ತಕ್ಷಣ ಹೇಳಬೇಕು ಅನಿಸಿದ್ದು ಈ ಹಾಡು.

    ಕಲ್ಪನೆ ಎಂಬ ಬಂಗಾರದ ರೆಕ್ಕೆಗಳನ್ನು ಬಿಚ್ಚುವುದು ಸುಲಭದ ಮಾತಲ್ಲ. ನಿಮ್ಮ ಕಲ್ಪನೆಯ ಪಕ್ಷಿ ನೋಟಗಳ ಸವಿ ನಮಗೆ ಸಿಕ್ಕಿರುವುದು ಸಂತೋಷ. :)

    ReplyDelete
  5. ಲೇಖನ ತುಬ ,ತುಂಬಾ ಖುಷಿ ಕೊಟ್ಟಿತು.ಅಣ್ಣಾವ್ರು ನನಗೂ ಆರಾಧ್ಯ ದೈವ.ಅವರ ನೆನಪೇ ಮನಸ್ಸಿಗೆ ಮುದ ನೀಡು ವಂತಹುದು.ಅವರು ನಮ್ಮೆಲ್ಲರನ್ನೂ ಹರಸಲಿ.

    ReplyDelete
  6. ಪಾತ್ರಗಳು ಅದೇ ಧಾಟಿಯಲ್ಲಿ ಮಾತಾಡುತ್ತವೆ ಎಂದರೆ ಅದು ಸಾಕ್ಷಾತ್ಕಾರದ ನಿಜವಾದ ಸಾಕ್ಷಾತ್ಕಾರ.
    ವಿಶಿಷ್ಟ ಬರಹ.
    ಡಾ. ಕೃಷ್ಣಮೂರ್ತಿಯವರ ಅಣ್ಣಾವ್ರ ಚಿತ್ರವೂ ಸೂಪರ್.

    ReplyDelete
  7. Sri,
    Sooper.... Dr. Raj haagu neevu eshtu aaptharu antha namagellarigoo gottiruva sangathi, mattomme saabeetaaytu :) bahala khushiyaaytu. Annovra autograph naa noDe iralilla, noDide..... thank you for sharing this. Happy Birthday to you Sir.

    ReplyDelete
  8. ಪ್ರೀತಿಯ ಶ್ರೀ...

    ನೀವು ಅನುಭವಿಸಿ ಬರೆಯುತ್ತೀರಿ...
    ಹಾಗಾಗಿ ನಿಮ್ಮ ಬರವಣಿಗೆ ಆಪ್ತವೆನಿಸುತ್ತದೆ...

    ರಾಜಣ್ಣ ಕನ್ನಡಿಗರ ಕಣ್ಮಣಿ...

    ಅವರ ನೆನಪುಗಳನ್ನು ಸಿಹಿ ಸಿಹಿಯಾಗಿ ಮಾಡಿಕೊಟ್ಟಿದ್ದಕ್ಕೆ ಪ್ರೀತಿಯ ನಮನಗಳು....

    ReplyDelete
  9. Super sir... naanu annavra bhakta nimma haage...

    ReplyDelete
  10. ಅಭಿಮಾನಿ ದೇವರ ಆಭಿಮಾನದ ಮಾತುಗಳು...
    ಸರಳ ಮತ್ತು ಸುಂದರ.. ಜೊತೆಗೆ ಆಪ್ತ...

    ReplyDelete