Thursday, March 6, 2014

ಮರೋ ಚರಿತ್ರಾ... ಕಾದು ಕಾದು ಮರೆಯಲಾರದ ಚರಿತ್ರಾ

ಕಾದು ಕುಳಿತಿವೆ..

ಅರಳಿ ಎಲೆಗಳ ನೆರಳು ಬಿಸಿಲಿನ ಆಟದ ಮಧ್ಯದಲ್ಲಿ.. 

ಮರದಲ್ಲಿದ್ದ ಹಕ್ಕಿಗಳು ತಮ್ಮಮರಿಗಳಿಗೆ ಅಲ್ಲಿ ಇಲ್ಲಿ ಹೆಕ್ಕಿ ತಂದಿದ್ದ ಕಾಳುಗಳನ್ನು ತಿನ್ನಿಸುತ್ತಿದ್ದವು..

"ಕೋಟಿ ದಂಡಾಲೋ ಶತ ಕೋಟಿ ದಂಡಾಲೋ"

ಗಣೇಶನ ಮೂರ್ತಿಯನ್ನು ಕೂರಿಸಿದ್ದ ಮಂಟಪದಿಂದ ಆಗಷ್ಟೇ ಬಿಡುಗಡೆಯಾಗಿ ಅಪಾರ ಸುದ್ಧಿ ಮಾಡಿದ್ದ "ಮರೋ ಚರಿತ್ರಾ" ಚಲನ ಚಿತ್ರದ ಹಾಡು ಕಿರುಚುತಿತ್ತು..

ಹಸಿದು ಬೆಂಡಾಗಿದ್ದ ಹಕ್ಕಿಯ ಮರಿಗಳು ತನ್ನ ತಾಯಿ ಹಕ್ಕಿ ಉಣಿಸಿದ್ದ ಕಾಳುಗಳನ್ನು ತಿಂದು ಸಂತೃಪ್ತರಾಗಿ ಹಾಡಿಗೆ ಹಿಮ್ಮೇಳದಂತೆ ಗಾನ ಸೇರಿಸುತ್ತಿದ್ದವು..

ಅಣ್ಣಾವ್ರ ಕವಿರತ್ನ ಕಾಳಿದಾಸ ಚಲನ ಚಿತ್ರ ಬರಲು ಇನ್ನು ಹಲವಾರು ವರ್ಷಗಳು ಇದ್ದವು ಇಲ್ಲ ಅಂದ್ರೆ...

"ಹೊಟ್ಟೆ ಚುರುಗುಟ್ ತಾ ಐತೆ ರಾಗಿ ಮುದ್ದೆ ತಿನ್ನೋ ಹೊತ್ತು" ಅಂತ ಹಾಡುತ್ತಿದ್ದವು ಆ ಮರದ ನೆರಳಲ್ಲಿ ಕೂತಿದ್ದರೂ ಹೊಟ್ಟೆಯ ಹಸಿವಿನ ಬೇಗೆ ತಾಳದೆ ಬಳಲುತಿದ್ದ ಎರಡು ಮುದ್ದು ಕಂದಮ್ಮಗಳು.. ತಮ್ಮ ತಾಯಿಯ ಬರುವಿಗೆ ಕಾಯುತ್ತಾ ಕುಳಿತಿದ್ದವು..

*********************************************************************************
"open it carefully..there is a surprise for you"

೧೯೯೪ ಮಾರ್ಚ್ ೨ ರಂದು ಬೆಳಿಗ್ಗೆ ಎದ್ದಾಗ ನನ್ನ ಪಕ್ಕದಲ್ಲಿ ಒಂದು ಲಕೋಟೆಯ ಮೇಲೆ ಈ ಮುದ್ದಾದ ಬರಹಗಳನ್ನು ಕಂಡು ಆಶ್ಚರ್ಯವಾಗಿತ್ತು.. ನಿಧಾನವಾಗಿ ತೆರೆದೇ..

"HMT" ಕೈಗಡಿಯಾರ ನಸು ನಗುತ್ತಿತ್ತು.. ಜೊತೆಯಲ್ಲಿ ಒಂದು ಸುಂದರ ಶುಭಾಶಯದ ಪತ್ರ "Happy Birthday Dear brother"  

ಪ್ರೀತಿಯ ಅಣ್ಣನಿಂದ ನನಗೆ ಸುಂದರ ಕೈಗಡಿಯಾರ ಮತ್ತು ಶುಭ ಹಾರೈಕೆ ಹೊತ್ತ ಗ್ರೀಟಿಂಗ್ ಕಾರ್ಡ್!

ಜೀವನದಲ್ಲಿ ಸಮಯ ನೋಡಿಕೊಳ್ಳಲು ಕೈಗೆ ಬಂದ ಮೊದಲ ನನ್ನದೇ ಅನ್ನಿಸುವ ಕೈಗಡಿಯಾರ!
*********************************************************************************
ಆಗ ತಾನೇ ಕಂಪ್ಯೂಟರ್ ಯಂತ್ರ ಕಣ್ಣು ಬಿಡುತ್ತಿದ್ದ ಸಮಯ.. ಜಗತ್ತನ್ನೆಲ್ಲ ಅದರಲ್ಲೂ ಭಾರತವನ್ನು ಈ ಕಂಪ್ಯೂಟರ್ ಎನ್ನುವ ಮಾಂತ್ರಿಕ ಶಕ್ತಿ ತನ್ನ ಕಬಂಧ ಬಾಹುಗಳಲ್ಲಿ ಸೆಳೆದುಕೊಳ್ಳಲು ಹವಣಿಸುತ್ತಿದ್ದ ಕಾಲ..

"ನೀನು ಕಂಪ್ಯೂಟರ್ ಕೋರ್ಸ್  ಗೆ ಸೇರಿಕೋ.. ಹೊಸದನ್ನು ಕಲಿ.. ನಾ ಅದಕ್ಕೆ ದುಡ್ಡು ಕೊಡುವೆ.. " ಎನ್ನುವ ೧೯೯೪-೯೫ ರಲ್ಲಿ ನಡೆದ ಈ ಮಾತುಗಳು ನನಗೆ ಒಂದು ಕ್ಷಣ ಗಾಬರಿ ಇನ್ನೊಂದು ಕಡೆ ಸಂತಸ ತಂದಿತ್ತು..

ಆಗ ಐದು ರುಪಾಯಿಗೆ ಈಗಿನ ಐವತ್ತು ರೂಪಾಯಿಯಷ್ಟು ಬೆಲೆ.. ಆಗಿನ ಕಾಲಕ್ಕೆ ಸುಮಾರು ಹದಿನೈದು ಸಾವಿರ ರೂಪಾಯಿಗಳಷ್ಟು ವ್ಯಯ ಮಾಡಿ ವಿಜಯನಗರದಲ್ಲಿನ ಕಂಪ್ಯೂಟರ್ ಪಾಯಿಂಟ್ ಎನ್ನುವ ಒಂದು ಕಲಿಕಾ ಶಾಲೆಯಲ್ಲಿ ಕಂಪ್ಯೂಟರ್ ಯಂತ್ರ ಅಂದರೆ ಏನು ಎಂದು ತಿಳಿದುಕೊಳ್ಳಲು ಸಹಾಯ ಮಾಡಿದ್ದು ನನ್ನ ಜೀವನಕ್ಕೆ ಒಂದು ಮಹತ್ತರ ತಿರುವು ನೀಡಿದ ನನ್ನ ಅಕ್ಕಾ..

ಅಲ್ಲಿಂದ ಆಚೆಗೆ ಜೀವನದಲ್ಲಿ ಮತ್ತೆ ತಿರುಗಿ ನೋಡುವ ಪ್ರಮೇಯ ಬರಲಿಲ್ಲ.. ದೇವರ ಅನುಗ್ರಹ..
*********************************************************************************
"ಬನ್ನಿ ಶ್ರೀ.. ಒಂದು ಪುಸ್ತಕ ಬಿಡುಗಡೆ ಸಮಾರಂಭ ಇದೆ.. ಹೋಗಿ ಬರೋಣ.. ".. ನನಗೆ ಈ ಸಭೆ ಸಮಾರಂಭಗಳು ಅಲರ್ಜಿ ಎನ್ನಿಸುತ್ತಿದ್ದ ಕಾಲ.. ಆದರೆ ಸ್ನೇಹಿತನ ಬಲವಂತಕ್ಕೆ ಹೋದೆ..

"ಇವರು ಶ್ರೀಕಾಂತ್ ಮಂಜುನಾಥ್ ಅಂತ.. ಬರೀತಾ ಇರ್ತಾರೆ.. "

"ಒಹ್ ಹೌದಾ ದ ನಮಸ್ಕಾರ ಚೆನ್ನಾಗಿದ್ದೀರಾ .. ಬನ್ನಿ ತಿಂಡಿ ತಿನ್ನಿ.. ಸಿಗ್ತೀನಿ ಮತ್ತೆ"

ಇದು ಪ್ರಕಾಶ್  ಹೆಗ್ಗಡೆ ಅವರನ್ನು ಮೊಟ್ಟ ಮೊದಲ ಬಾರಿ ಭೇಟಿ ಪ್ರಸಂಗ..
*********************************************************************************
ಹಾಗೆ ಸುಮ್ಮನೆ ಒಂದು ಫೇಸ್ ಬುಕ್ ಗೊಡೆಯಲ್ಲಿನ ಬರಹಕ್ಕೆ ಲೈಕ್ ಬಟ್ಟನ್ ಒತ್ತಿದೆ...

ತಕ್ಷಣ ಒಂದು ಸಂದೇಶ ಬಂದಿತು.. ಶ್ರೀಕಾಂತ್ ಮಂಜುನಾಥ್.. ನೀವು ನಿಮ್ಮ ಕುಟುಂಬದ ಸಂಗಡ ಬನ್ನಿ.. ನಾವೆಲ್ಲಾ ಒಂದು ಸುಂದರ ಜಾಗಕ್ಕೆ ಹೋಗುತ್ತಿದ್ದೇವೆ..

ಸರಿ ಸರ್ಜಿ.. ಬರುವುದಾದರೆ ಹೇಳುವೆ ಎಂದಿದ್ದೆ..

ಜೂನ್ ೨೩ ೨೦೧೨.. ಬೆಳಿಗ್ಗೆ ಆರು ಘಂಟೆಗೆ.. ಎದ್ದು ಹೊರಟಿದ್ದೆವು.. ಬಸ್ಸಲ್ಲಿ ಜನವೋ ಜನ.. ಯಾರ ಮುಖವೂ ಪರಿಚಯವಿಲ್ಲ.." ಶ್ರೀಕಾಂತ್ ಮಂಜುನಾಥ್ ಚೆನ್ನಾಗಿದ್ದೀರಾ.." ಎಂದ ಅಜಾದ್ ಸರ್.. ಕಾಂತ ಎಂದ ಮಹೇಶ್.. ಶ್ರೀಕಾಂತ್ ಮಂಜುಂಥ್ ಎಂದ ರೂಪ ಸತೀಶ್.. ಶ್ರೀಕಾಂತ್ ಎಂದ ಸಂಧ್ಯಾ ಭಟ್.. ಸುಮಧುರ ನಗೆ ನಕ್ಕ ಸುಲತ.. ಸರ್ ನಿಮ್ಮ ಕಾಮೆಂಟ್ ಗಳು ಸೂಪರ್ ಎಂದ ಸುದೇಶ್.. ಒಬ್ಬರೇ ಇಬ್ಬರೇ ಗುರುಪ್ರಸಾದ್, ಉಮೇಶ್ ದೇಸಾಯಿ ಸರ್, ನವೀನ ಮಾಸ್ಟರ್, ಗಿರೀಶ್, ಬನ್ನಿ ಸರ್ ನೀವು ಎಂದ ಶಿವೂ ಸರ್.. ಹೀಗೆ ಹೆಸರಿಸಲು ಜಾಗವೇ ಸಾಲದೇ ಕಡೆಗೆ ನನ್ನ ಎಲ್ಲರಿಗೂ ಪರಿಚಯಿಸಿದ ಪ್ರಕಾಶ್ ಹೆಗ್ಗಡೆ.. "ಇವರು ಶ್ರೀಕಾಂತ್ ಮಂಜುನಾಥ್ ಅಂತ .. ನನ್ನ ಬ್ಲಾಗ್ ನಲ್ಲಿ ಸುಂದರ ಕಾಮೆಂಟ್ ಹಾಕ್ತಾರೆ.. "...  ಹೀಗೆ ಶುರುವಾಯಿತು ಸುಮಧುರ ವ್ಯಕ್ತಿಗಳ ಪರಿಚಯ.. ಒಬ್ಬರಾದ ಮೇಲೆ ಒಬ್ಬರು ನನ್ನ ಮನಸನ್ನು ಆಕ್ರಮಿಸಿಕೊಳ್ಳುತ್ತಾ ಹೋದರು.. ಇಂದು ಬೆರಳಿಗೆ ಸಿಕ್ಕದ..  ಲೆಕ್ಕಕ್ಕೆ ಎಟುಕದಷ್ಟು ಪ್ರೀತಿ ವಿಶ್ವಾಸ ಹರಿಸುವ ಸುಮಧುರ ಹೃದಯಗಳ ಸಾಗರವೇ ನನ್ನನ್ನು ಆವರಿಸಿಕೊಂಡಿವೆ..
********************************************************************************
ಶ್ರೀಕಾಂತ್ ಜಿ ಆನೆ ನಡೆದದ್ದೇ ದಾರಿ.. ನಿಮಗೆ ಅನ್ನಿಸಿದ್ದು ನೀವು ಬರೆಯಿರಿ.. ಓದಲು ನಾವು ಇದ್ದೇವೆ.. ಇದನ್ನು ನಿಮ್ಮೊಳಗೆ ನಾನೊಬ್ಬ ಎಂದು ಆದರಿಸುವ.. ಬಾಲೂ ಸರ್.. ಬನ್ನಿ ಸರ್ ಮೈಸೂರಿಗೆ ಎಂದರು.. ಸರಿ ಹೋಗಿಯೇ ಬಿಡೋಣ ಅಂತ ಮೈಸೂರಿಗೆ ಹೋಗಿಯೇ ಬಿಟ್ಟೆವು.. . ಕೆಲವು ತಿಂಗಳ ಹಿಂದೆ ಸರ್ ಎಂದು ಮಾತಾಡುತಿದ್ದ ಸಂಧ್ಯಾ, ಸುಲತ, ಸುಷ್ಮಾ..  ಭಾಗ್ಯ.. .. ಬನ್ನಿ ಅಣ್ಣ.. ಹೋಗೋಣ ಅಂತ ತಮ್ಮ ಹೃದಯ ಸಿಂಹಾಸನದಲ್ಲಿ ಅಣ್ಣ ಎಂದು ನನಗೆ ಜಾಗ ಕೊಟ್ಟು.. ಆದರಿಸಲು ಶುರು ಮಾಡಿದರು...
********************************************************************************
ನಾನೂ.. ಕಾಮೆಂಟ್ ಹಾಕಲು ಭಯ ಪಡುತ್ತೇನೆ.. ಈ ಮಹಾನುಭಾವ ನೆಗೆಟಿವ್ ಕಾಮೆಂಟ್ ಹಾಕಿದರೆ ಸಾಕು ಎಲ್ಲಿಂದಲೋ ಫೋನ್ ಮಾಡಿ ಹೆದರಿಸುತ್ತಾರೆ ಎನ್ನುತ್ತಾ ಆತ್ಮೀಯರಾಗಿರುವ ಬದರಿ ಸರ್.. ನನ್ನನ್ನು ಲಾಫ್ಟರ್ ಚಾಂಪಿಯನ್ ಎನ್ನುವ ಪ್ರದೀಪ್.. ಕಾಂತ  ಎನ್ನುತ್ತಾ ಅಪ್ಪಿ ಕೊಳ್ಳುವ ಮಹೇಶ್.. ಹೀಗೆ ಬರೆಯುತ್ತಾ ಹೋದರೆ ಹನುಮನ ಬಾಲಕ್ಕಿಂತ ದೊಡ್ಡದಾಗುವ ದೊಡ್ಡ ಪಡೆಯೇ ಇದೆ.. ನಿಮ್ಮನ್ನು "ಶ್ರೀ" ಎನ್ನುತ್ತೇನೆ ಎನ್ನುವ ಸ್ಪೂರ್ತಿಗೆ ಹೆಸರಾದ ರೂಪ ಸತೀಶ್.. ಇವರನ್ನು ಅಕ್ಕ ಎನ್ನಲೇ, ದೇವಿ ಎನ್ನಲೇ.. ತಂಗಿ ಎನ್ನಲೇ.. ತಾಯಿ ಎನ್ನಲೇ.. ಊಹೂ ಇದಕ್ಕಿಂತ ಮಿಗಿಲು.. ಇವರನ್ನು ಶ್ರೀಮಾನ್ ಎನ್ನುತ್ತೇನೆ. ಆ ಹೆಸರು ನಾನೇ ಇಟ್ಟದ್ದು ಎನ್ನುವ ಉತ್ಸಾಹದ ಚಿಲುಮೆ ಅಜಾದ್ ಸರ್.. "ಶ್ರೀಕಾಂತ್  ಮಂಜುನಾಥ್ " ಎನ್ನುತ್ತಾ ಅಪ್ಪಿಕೊಂಡು ಪುಟ್ಟ ಕಂದನನ್ನು ಮುದ್ದು ಮಾಡುವಷ್ಟೇ ಆಪ್ತತೆಯಿಂದ ಪ್ರೀತಿಸುವ ಡಾಕ್ಟರ್ ಡಿ. ಟಿ. ಕೃಷ್ಣಮೂರ್ತಿ.. ಅಬ್ಬಾ ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳು ತಮ್ಮ ಸ್ನೇಹದ ಸಂಕೋಲೆಯಲ್ಲಿ ನನ್ನನ್ನು ಬಂಧಿಸುವ ಇಂಥಹ ಬಳಗ ದೇವರು ಕೊಟ್ಟ ವರವೇ ಸರಿ
********************************************************************************
ಅಣ್ಣಾ ನಿಮ್ಮ ಶೈಲಿಯಲ್ಲಿ ಬರೆದಿದ್ದೇನೆ ನೋಡಿ ಎನ್ನುತ್ತಾ ಹುಟ್ಟು ಹಬ್ಬಕ್ಕೆ ಅಮೋಘ ಬರಹ ಕೊಟ್ಟ ಸತೀಶ್ ಬಿ ಕನ್ನಡಿಗ...

ಶ್ರೀ ನೀವು ಒಬ್ಬ ಉತ್ತಮಾತೀತ ಸ್ನೇಹಿತ.. ನಿಮ್ಮ ಹುಟ್ಟು ಹಬ್ಬಕ್ಕೆ ನಿಮ್ಮದೇ ಶೈಲಿಯಲ್ಲಿ ಉಡುಗೊರೆ ಕೊಡಬೇಕು ಅನ್ನಿಸಿತು.. ನನ್ನ ಅಪ್ಪನ ಹುಟ್ಟು ಹಬ್ಬದಂದೇ ನಿಮ್ಮ ಹುಟ್ಟು ಹಬ್ಬ... ಅದಕ್ಕಿಂತ ಇನ್ನೇನು ಬೇಕು ನನಗೆ.. ಎನ್ನುವ ನಿವೇದಿತ ಚಿರಂತನ್..

ಅಣ್ಣ ನಿಮ್ಮ ಹತ್ತಿರ ಮಾತಾಡುತ್ತಿದ್ದರೆ.. ನನ್ನ ಜೊತೆಯಲ್ಲಿ ಮಾತಾಡುತ್ತಿದ್ದೇನೆ ಎನ್ನಿಸುತ್ತದೆ.. ಎನ್ನುವ ಸಂಧ್ಯಾ ಪುಟ್ಟಿ..

ಅಣ್ಣಯ್ಯ ನೆಗೆಟಿವ್ ಕತೆಗೂ ಪಾಸಿಟಿವ್ ಕಾಮೆಂಟ್ ನೀಡುವ ನಿಮಗೆ ಹಾಟ್ಸ್ ಆಫ್ ಎನ್ನುತ್ತಾ ಗುಳಿ ಕೆನ್ನೆಯಲ್ಲಿ ನಗುವ ಪುಟ್ಟಿ ಸುಷ್ಮಾ

ಅಣ್ಣ ಎನ್ನಲೇ ಅಪ್ಪ ಎನ್ನಲೇ ಎಂದು ಗೊಂದಲವೇ ಕಾಣದ ಅಪ್ಪನಂತಿರೋ ಅಣ್ಣ ಎಂದು ಹೇಳುತ್ತಾಳೆ ತುಂಟ ಭಾಗ್ಯ ಪುಟ್ಟಿ..
ಸಾರೀ ಶ್ರೀ.. ನಿಮ್ಮ ತರಹ ಬರೆಯೋಕೆ ಬರೋಲ್ಲ.. ಆದರೂ ಶುಭಾಷಯ ಹೇಳುವೇ ಎನ್ನುವ ರೂಪ ಸತೀಶ್..

ಇವರ ಜೊತೆ ಮಡದಿ ಸವಿತಾ.. ಹಾಗೂ ನನ್ನ ಸ್ನೇಹಿತೆ ಕಂ ಮಗಳು ಶೀತಲ್ ಎಲ್ಲರೂ ಸೇರಿ ಹರಟಿದ್ದು ಬೆಳಗಿನ ಜಾವ ಮೂರು ಘಂಟೆಯ ತನಕ.. ಬೆಳಿಗ್ಗೆ ಎದ್ದ ಮೇಲೆ ಇನ್ನೊಮ್ಮೆ ಶುಭಾಶಯಗಳ ಜೊತೆಯಲ್ಲಿ ಕೇಕ್ ತಂದು.. ಇನ್ನೊಮ್ಮೆ ಆಚರಣೆ..

ಇತಿಹಾಸದಲ್ಲಿ ಕಂಡರಿಯದ ಈ ಶುಭಾಶಯಸಾಗರದ ಅಲೆಗಳು ಬಡಿದು ಬಡಿದು ಕಣ್ಣಲ್ಲಿ ಹಾಗೆಯೇ...

*********************************************************************************
ಇದೆಲ್ಲಾ ಸಾಧ್ಯವೇ.. ಎನ್ನುತ್ತಾ ಕಳೆದ ನಲವತ್ತೊಂದು ವರ್ಷಗಳ ಇತಿಹಾಸದ ಪುಟವನ್ನು ತಿರುವು ಹಾಕಿದರೆ... ಆಹಾ... ಯೋಚಿಸುತ್ತಾ ಕುಳಿತಿದ್ದಾಗ...

ಶ್ರೀ ಶ್ರೀ .. ಎಂದು ಯಾರೋ ಕೂಗಿದ ಹಾಗೆ ಆಯಿತು.. ಯಾರಪ್ಪ ಎಂದು ತಿರುಗಿದರೆ..

"ಅಲ್ಲಾ ಶ್ರೀ.. ನಿನಗೆ ಶುಭಾಶಯಗಳ ಮಹಾಪೂರವೇ ಹರಿಯಿತು ಅಂತ ನನ್ನನ್ನೇ ಮರೆತು ಬಿಡೋದೇ. .ಇಡಿ ರಾತ್ರಿ ಚಳಿಯಲ್ಲಿ ಒಬ್ಬನೇ ನಿಂತಿದ್ದೆ.. "

ಅಯ್ಯೋ ಗೊತ್ತಾಗಲೇ ಇಲ್ಲ ಪುಟ್ಟಾ.. ಇವರ ಪ್ರೀತಿಯ ಕಂಡು ನಾ ಮೂಕನಾಗಿ ಬಿಟ್ಟಿದ್ದೆ.. ಕಾರಣ ಇಡಿ ರಾತ್ರಿ ನನ್ನ ಪ್ರೀತಿ ಪಾತ್ರವಾದ ವಿಕ್ಟರ್ ಬೈಕನ್ನು ಗೇಟಿನ ಹೊರಗೆ ರಸ್ತೆಯಲ್ಲಿಯೇ ಮರೆತು ನಿಲ್ಲಿಸಿದ್ದೆ..

ಇಲ್ಲ ಬಿಡು ಶ್ರೀ ನನಗೆ ಅರ್ಥ ವಾಗುತ್ತೆ..  "ಅಂದು ಹೊಟ್ಟೆಗೆ  ಇಲ್ಲದೆ ತಾಯಿಯ ಬರುವನ್ನೇ ಕಾಯುತ್ತಾ ಕುಳಿತಿದ್ದಾ ಆ ಕಂದಮ್ಮ ಇಂದು ಮನಸ್ಸಿಗೆ ಹಸಿವೆ ಇಲ್ಲದಷ್ಟು ಪ್ರೀತಿ ವಿಶ್ವಾಸಗಳನ್ನು ಉಂಡು ಸಂತೃಪ್ತಿ ನಗೆಯ ಚೆಲ್ಲುವ ವ್ಯಕ್ತಿಯಾಗಿದ್ದಾನೆ ಎನ್ನುವ ಮಾತು ನಿಜವಾಗಿದ್ದರೆ ಅದಕ್ಕೆಲ್ಲ ಕಾರಣ ನಿನ್ನ ಸ್ನೇಹದ ಬಳಗ.. ಅಲ್ಲವೇ...ನೂರಕ್ಕೂ ಹೆಚ್ಚು ಶುಭಾಶಯ ಸಂದೇಶಗಳು.. ಮೆಚ್ಚುಗೆಗಳು, ಚಿತ್ರಗಳು.. ಕರೆಗಳು ಓಹ್.. ಇದೆಲ್ಲ ಒಂದು ಚರಿತ್ರೆಯೇ ಅಲ್ಲವೇ " ಎಂದಾಗ

ಅದರ ಜೊತೆಯಲ್ಲಿ ನಿಂತಿದ್ದ ನನ್ನ ರಿಟ್ಜ್  ಕಾರು.. ನಕ್ಕು ಕಣ್ಣು ಹೊಡೆದು ಸಮ್ಮತಿಸಿತು .

ಇದಕ್ಕೆಲ್ಲಾ ಕಾರಣೀಕರ್ತರು ಯಾರು ಗೊತ್ತೇ..

ನೀವೇ.. ಅಂದರೆ ಈ ಲೇಖನವನ್ನು ಓದುತ್ತಿರುವ ನನ್ನ ಕುಟುಂಬದ ಸದಸ್ಯರೇ ಆಗಿರುವ ನೀವೇ..

ಅದಕ್ಕೆ ಕಣ್ಣೊರೆಸಿಕೊಂಡು ಹೇಳುವೆ..

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು.. !!!

 ಅದಕ್ಕೆ ಹೇಳಿದ್ದು ಮರೋ ಚರಿತ್ರ ಅಲ್ಲವೇ ಅಲ್ಲಾ ಇದು ಮರೆಯಲಾರದ ಮರೆಯಲಾಗದ ಚರಿತ್ರೆ... !!!

12 comments:

  1. ಪ್ರೀತಿಯ ಶ್ರೀ...

    ನಿಮ್ಮ ಹುಟ್ಟು ಹಬ್ಬದಂದು ಊರಲ್ಲಿದ್ದೆ... ಸಂಪರ್ಕ ಅಲ್ಲಿ ಕಷ್ಟ...

    ತಡವಾಗಿ ಶುಭಾಶಯ ಹೇಳುತ್ತಿರುವೆ ಕ್ಷಮೆ ಇರಲಿ..

    "ಜನುಮ ದಿನದ ಶುಭಾಶಯಗಳು...
    ನಿಮ್ಮೆಲ್ಲ
    ಆಸೆ.
    ಕನಸುಗಳು ನನಸಾಗಲಿ..." ( ಪ್ರಕಾಶಣ್ಣ.. ಆಶಾ.. ಆಯಿ... ಆಶೀಶ್...)

    ಸಧ್ಯದಲ್ಲಿಯೇ ನಾವೆಲ್ಲ ಸೇರೋಣ....
    ತುಂಬಾ ದಿನಗಳಾಅಯ್ತು...

    ಅಲ್ಲಿ ಮತ್ತೊಮ್ಮೆ ನಿಮ್ಮ ಜನ್ಮ ದಿನ ಆಚರಿಸೋಣ...

    ನಿಮ್ಮ ಬರವಣಿಗೆ..
    ಸ್ಪೂರ್ತಿ ಕೊಡುವಂಥಹ "ಪ್ರತಿಕ್ರಿಯೆಗಳ" ಕಾಯಕ ಮುಂದುವರೆಯಲಿ...

    ಯಾವ ಜನ್ಮದ ಬಂಧವೊ... ನಾವೆಲ್ಲ ಸ್ನೇಹಿತರಾಗಿದ್ದೆವೆ...
    ಆತ್ಮೀಯರಾಗಿದ್ದೆವೆ...

    ಲೇಖನ ಓದುತ್ತ ಓದುತ್ತ ಕಣ್ಣಲ್ಲಿ ನೀರಾಡಿತು...

    ಮತ್ತೊಮ್ಮೆ ಜನ್ಮ ದಿನದ ಶುಭಾಶಯಗಳು... ಆಶೀರ್ವಾದಗಳು...

    ReplyDelete
  2. Annanillavalla endukolluttiddavalige annaniginta migilaagi toruva prakashanna kotta udugore blog lokada adeshto annandiru... Avaralli hesarillade bari "anna"endu obbarannu kareyuttenendare adu nimmanne ... Nanna mirror image neevu ...
    Mattomme happy Birthday...
    Love you Anna ...

    ReplyDelete
  3. ನಿಜ ಹೇಳಲಾ ಶ್ರೀ ಕಾಂತ್ ನಿಮ್ಮ ಈ ಲೇಖನವನ್ನು ನನ್ನದೇ ಶಿಲಿಯಲ್ಲಿ ಬರೆಯಲು ಹೊರಟಿದ್ದೆ, ಹೌದು ಬ್ಲಾಗ್ ಪ್ರಪಂಚದಲ್ಲಿ ನಮಗೆ ಸಿಕ್ಕ ವ್ಯಕ್ತಿಗಳೇ ಹಾಗೆ ಪ್ರಕಾಶ್ ಹೆಗ್ಡೆ, ಬದರೀನಾಥ್ ಪಲವಲ್ಲಿ , ಅನಿಲ್ ಬೇಡಗಿ , ಶಿವಪ್ರಕಾಶ್, ರಾಘು, ನವೀನ ಮಿಂಚು, ರೂಪ ಸತೀಶ್ ,ಶಿವೂ, ಅಜಾದ್ , ಗುರುಮೂರ್ತಿ ಹೆಗ್ಡೆ, ನೀವೂ , ಪ್ರದೀಪ್, ಸಂಧ್ಯಾಭಟ್ , ಸುಷ್ಮಾಮೂದಬಿದ್ರೀ , ಭಾಗ್ಯ ಭಟ್, ಸುಲತ ಶೆಟ್ಟಿ, ನಮ್ಮ ಡಾಕ್ಟರ್ ಕೃಷ್ಣ ಮೂರ್ತಿ ಸರ್, ಗಿರೀಶ್ ಸೋಮಶೇಖರ್, ಮಣಿಕಾಂತ್ , ಓಂ ಶಿವಪ್ರಕಾಶ್ , ಸತೀಶ್ ಕನ್ನಡಿಗ, d .o .m ಮಹೇಶ್ ಹೀಗೆ ಹೇಳ್ತಾ ಹೋದರೆ ಇನ್ನೂ ಸುಮಾರು ನೂರಾರು ಒಳ್ಳೆಯ ವ್ಯಕ್ತಿಗಳ ಹೆಸರು ಬರುತ್ತೆ, ನನಗೂ ಕೆಲವೊಮ್ಮೆ ಪ್ರಶ್ನೆಗಳು ಹುಟ್ಟುತ್ತವೆ , ಇವರೆಲ್ಲಾ ಯಾರು?, ಯಾಕೆ ನಮ್ಮ ಜೀವನದೊಳಗೆ ಬಂದು ಇಷ್ಟು ಪ್ರಾಮುಖ್ಯತೆ ಪಡೆದರು? ಇವರಿಗೆಲ್ಲಾ ಯಾಕೆ ಇಷ್ಟು ಒಳ್ಳೆಯ ಮನಸು ಕೊಟ್ಟಿದ್ದಾನೆ ದೇವರು? ಇವರಲ್ಲಿರುವ ಜ್ಞಾನ ನನಗೆ ಏಕೆ ಇಲ್ಲಾ,? ಹೀಗೆ ಆದರೆ ನನ್ನ ಬ್ಲಾಗ್ ಲೋಕದ ಯಾರಾದರು ಸಾಧನೆ ಮಾಡಿದಾಗ ಮನಸು ಹರುಷ ಗೊಳ್ಳುತ್ತದೆ . ಇವರೆಲ್ಲರ ಪ್ರೀತಿಯ ಗೆಳೆತನ ಜೀವನದಲ್ಲಿ ಹೊಸ ತಿರುವು ಕೊಟ್ಟಿರೋದಂತೂ ಸತ್ಯ. ಒಳ್ಳೆಯ ಲೇಖನ ಶ್ರೀಕಾಂತ್ ಜಿ . ನಮ್ಮಿಬ್ಬರ ಯೋಚನೆ ಒಂದೇ ಅಂತಾ ಅನ್ನಿಸಿತು ಈ ಲೇಖನ ಓದಿ . ಹಾಗೆ ನಿಮಗೆ ಪ್ರೋತ್ಸಾಹ ನೀಡಿದ ನಿಮ್ಮ ಮನೆಯ ಹಿರಿಯರ, ನಿಮ್ಮ ಕುಟುಂಬದ ಸದಸ್ಯರ ಬಗ್ಗೆ ಗೌರವ ಮೂಡಿತು ಜೈ ಹೊ ಶ್ರೀಕಾಂತ್ ಜಿ ಎಲ್ಲರ ಪ್ರೀತಿ ವಿಶ್ವಾಸ ಹೀಗೆ ಮುಂದುವರೆಯಲಿ ಎಂಬ ಹಾರೈಕೆ ನನ್ನದು .

    ReplyDelete
    Replies
    1. ‍ನಿಜ ಬಾಲಣ್ಣಾ...
      ಒಂದು ಸಣ್ಣ ಪರಿಚಯ ಅದೆಷ್ಟು ಆತ್ಮೀಯತೆಯನ್ನ ಹುಟ್ಟಿಸಿಬಿಡುತ್ತಲ್ವಾ...
      ಇಲ್ಲೊಂದಿಷ್ಟು ಪ್ರೀತಿಯಿದೆ..ಪ್ರೀತಿಸೋ ಅಣ್ಣಂದಿರಿದ್ದೀರಿ..ಮುದ್ದು ಮಾಡೋ ಅಕ್ಕಂದಿರಿದ್ದಾರೆ..ತರ್ಲೆ ಮಾಡೋ ಗೆಳೆಯರಿದ್ದಾರೆ...ಮನೆಯಷ್ಟೇ ಪ್ರೀತಿ ನನಗಿಲ್ಲಿ ಸಿಕ್ಕಿದ್ದು..ಕಾರಣರು ನೀವುಗಳು ಅನ್ನೋ ಖುಷಿ..
      ಅದಕ್ಕೆ ಏನೋ ಅವತ್ತು (ಮಾರ್ಚ್ ಒಂದಕ್ಕೆ) ನಿಮ್ಮನ್ನ ನಾವೆಲ್ರೂ ತುಂಬಾ ಮಿಸ್ ಮಾಡ್ಕೊಂಡ್ವಿ...
      ನಿಮ್ಮೀ ಪ್ರೀತಿ ಆತ್ಮೀಯತೆಗೆ..
      ಪ್ರೀತಿಯಿಂದ

      Delete
  4. ಶ್ರೀಮಾನ್, ನಾನು ಸಂಗ್ರಹಿಸಿ ಇಡಬೇಕಾದ ಬರಹವಿದು. ನೀವು ಸ್ನೇಹ ಸಮುದ್ರ, ನಿಮ್ಮಲ್ಲಿ ಐಕ್ಯವಾದ ನದಿಗಳೆನಿತೋ.
    ಈ ಮುಖಪುಟ ಮತ್ತು ಬ್ಲಾಗ್ ಲೋಕ ನಮಗೆ ಹಲವು ಭಗವತ್ ಸ್ವರೂಪರನ್ನು ಭೆೇಟಿ ಮಾಡಿಸಿದೆ. ಎಲ್ಲರ ಪ್ರೀತಿಯಿಂದ ಅಮೃತ ಸಮಾನ.
    ಈ ಪರಿಚಯವೇ ನನ್ನನ್ನು ಕವನ ಸಂಕಲನ ಪ್ರಕಟಿಸಿದ ಕವಿಯಾಗಿಸಿತು.
    ನಿಮ್ಮ ೧೭ನೆೇ ಜನುಮದಿನಕೆ ಬ್ಲಾಗಿಸಿದ ಈ ಬರಹಕ್ಕಿಂತಲೂ ೧೮ ನೇ ಜನುಮದಿನಕ್ಕೆ ಸ್ನೇಹಿತರು ದ್ವಿಗುಣವಾಗಲಿ.

    ಷರಾ: ಈ ಕಮೆಂಟಿನಲ್ಲಿ ನೆಗೆಟಿವ್ ಇಲ್ಲದಂತೆ ಎಲ್ಲ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ.

    ReplyDelete
  5. ಶ್ರೀಕಾಂತ್:ನೀವು ಸುಂದರ ಬರಹಗಳ ಸರದಾರ ಮಾತ್ರವಲ್ಲ ಸುಂದರ ಮನಸ್ಸಿನ ಸರದಾರ!!!! ನಾನು ನನ್ನ ಅರವತ್ತು ವರ್ಷಗಳಲ್ಲಿ ಕಂಡ ಅತ್ಯಂತ ಸ್ನೇಹ ಪೂರ್ಣ ವ್ಯಕ್ತಿಗಳಲ್ಲಿ ನೀವೂ ಒಬ್ಬರು.ನಿಮ್ಮ ನಿಷ್ಕಲ್ಮಶ ಮನಸ್ಸು ಆ ಭಗವಂತನ ಅನುಗ್ರಹ.ನಿಮ್ಮಂತಹ ಸ್ನೇಹಿತರು ಸಿಕ್ಕಿರುವುದು ನಮ್ಮ ಸೌಭಾಗ್ಯ!!! ನಗು ನಗುತ್ತಾ ಹೀಗೆ ನೂರಾರು ವರುಷ ಸಂತಸದಿಂದ ಇರಿ.ಎಂದುರೋ ಮಹಾನುಭಾವುಲು......!!! :-)

    ReplyDelete
  6. ಹುಟ್ಟು ಹಬ್ಬದ ಶುಭಾಷಯಗಳು :)..ಬರೀತಾ ಇರಿ :) :....
    ನೀವೋ ನಿಮ್ಮ ಕಥೆಗಳೋ...ನಿಮ್ಮ ಕಮೆಂಟುಗಳೋ,,,ಜೈ ಹೋ...

    ReplyDelete
  7. ನಮ್ಮ ಬದುಕಲ್ಲಿ ಯಾವ ವ್ಯಕ್ತಿ ಯಾವ ರೀತಿ ಬೆರೆಯುತ್ತಾನೆ ಅಂತ ಗೊತ್ತಿರೊಲ್ಲ... ನನ್ನ ಹೊಸ ಬ್ಲಾಗಿನ ಓದುಗನಾಗಿ, ಮೆಚ್ಚಿ ಕಮೆಂಟ್ ಬರೆದು ಗೆರೆಯರಾದ ನೀವು ಇಂದಿಗೆ ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು.. ನಿಮ್ಮ ಸ್ನೇಹಕ್ಕೆ ನಾನು ಶರಣು.. ಯಾಕೆಂದರೆ ಇವತ್ತಿನ ತನಕ ಯಾಕೆ ಏನು ಅಂತ ಪ್ರಶ್ನಿಸದೆ ನನ್ನ ಎಲ್ಲ ರಾಮಾಯಣವನ್ನು ಆಲಿಸಿದವರಲ್ಲಿ ನಿಮ್ಮ ಸಹನೆ ಮೆಚ್ಕಾಲೇ ಬೇಕು ...

    ReplyDelete
  8. Sri, you deserve nothing but the best :) ee sneha heege irali .... nimma ondondu maatu nija, manasige hattiravaagide :)

    ReplyDelete
  9. ಹೊಟ್ಟೆಯ ಹಸಿವಿನ ಬೇಗೆ ತಾಳದೆ ಬಳಲುತಿದ್ದ ಎರಡು ಮುದ್ದು ಕಂದಮ್ಮಗಳು.. ತಮ್ಮ ತಾಯಿಯ ಬರುವಿಗೆ ಕಾಯುತ್ತಾ ಕುಳಿತಿದ್ದವು......
    ಈ ಸಾಲುಗಳು ಹಳೆಯ ನೆನಪನ್ನು ಮೆಲುಕು ಹಾಕಿತು ... ಹೃದಯಸ್ಪರ್ಶಿ ಲೆಖನ.....

    ReplyDelete
  10. ಶ್ರೀಕಾಂತ್ ಭಾಯ್ , ಇವತ್ತು ಓದಿದೆ.
    ಈ ಚರಿತ್ರ ಮತ್ತೆ ಮತ್ತೆ ರಿಪೀಟ್ ಆಗ್ತಾನೇ ಇರ್ಲಿ :)

    ReplyDelete
  11. ಅಣ್ಣಾ...
    ಏನೆಂದು ಕರೆಯಲಿ ನಾನೀ ಚಂದದ ಪ್ರೀತಿ ಆತ್ಮೀಯತೆಗಳಿಗೆ..
    ನಿಮ್ಮೀ ಭಾವವ ಓದೋವಾಗಲೆಲ್ಲಾ ನನ್ನಲ್ಲೇನೊ ಅವ್ಯಕ್ತ ಖುಷಿ..
    ಭಾವಗಳ ತೇರಲ್ಲಿ ಜೊತೆಯಾಗಿ ,ಮಾತೇ ಆಡದ ಹುಡುಗಿಯನ್ನ ಮಾತಿಗೆ ಕೂರಿಸಿ ಇವತ್ತು ಬರಿಯ ಬ್ಲಾಗಿಗ ಅಣ್ಣನಲ್ಲ...ಅಪ್ಪನಂತಿರೋ ಅಣ್ಣನಾಗಿರೋ ನಿಮಗೊಂದು ನಮನ.
    ಅದೆಷ್ಟು ಚಂದದಿ ನೆನಪುಗಳ ಜೋಪಾನ ಮಾಡ್ತೀರ ಅಲ್ವಾ ನೀವು..ಕಲಿಯಬೇಕಿದೆ ನಾನೂ ನಿಮ್ಮಿಂದ,ಭಾವಗಳ ಜೋಪಾನ ಮಾಡೋಕೆ ,ನೆನಪುಗಳ ಪ್ರೀತಿಸೋಕೆ.
    ಪ್ರೀತಿ ಸ್ನೇಹದಲ್ಲಿ ಮನೆ ಮಗಳ ಸ್ಥಾನ ಕೊಟ್ಟು ನಿಮ್ಮ ಜನುಮ ದಿನವ ನಮ್ಮಗಳ ಜೊತೆ ಆಚರಿಸಿ ,ಅದೆಷ್ಟೋ ಅಣ್ಣ ಅಕ್ಕಂದಿರನ್ನ ಬ್ಲಾಗಿನಿಂದ ಪರಿಚಯಿಸಿ ನನ್ನೆಲ್ಲಾ ಭಾವಗಳನ್ನೂ ಪ್ರೀತಿಯಿಂದಲೇ ಓದೋಕೆ ಶುರುವಿಡೋ ನಿಮಗೆ ಪ್ರೀತಿಯಿಂದೊಂದು ಹಗ್ ಜೊತೆಗೆ...
    ಮಗಳು,
    ಬಿಪಿ

    ReplyDelete