Saturday, December 8, 2012

ಏನು ಮಾಡಲಿ ನಾನು ಏನು ಹೇಳಲಿ....ಬ್ಲಾಗಿಗರ ಜೊತೆಯಲ್ಲಿ ಕಳೆದ ಕೆಲವು ಕ್ಷಣ

ತ್ರಿ ಮೂರ್ತಿ ಚಿತ್ರದಲ್ಲಿ ಅಣ್ಣಾವ್ರು .."ಏನು ಮಾಡಲಿ ನಾನು ಏನು ಹೇಳಲಿ...".

ಹೀಗೆ ನನ್ನ ತಲೆಯಲ್ಲೂ ಸಿನಿಮಾ  ಓಡುತ್ತಿತ್ತು...ಬರೆಯಲೇ ಬೇಡವೇ...ಬರೆಯಲೇ ಬೇಡವೆ...

ಸರಿ ರಾತ್ರಿ ಸುಮಾರು ೧೦ ಘಂಟೆಗೆ ಜ್ಞಾನೋದಯವಾಯಿತು...ಒಂದು ಅಭೂತಪೂರ್ವ ದೃಶ್ಯ ಮನಪಟಲದಲ್ಲಿ ಕೂತು ಬಿಟ್ಟಿತು....ಆ ದೃಶ್ಯವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದು ಹೊರಗೆ ಬಂದು ಕಾರಿನಲ್ಲಿ ಕೂತಾಗ...ಹಾಡು ತೇಲಿ ಬರುತಿತ್ತು...
"ಜನುಮ ಜನುಮದ ಅನುಬಂಧ..."  ವಾರೆ ವಾಹ್ ಸಿಕ್ಕೆ ಬಿಟ್ಟಿತು ಒಂದು ಎಳೆ ಬರೆಯೋಕೆ..ಸರಿ ಮನದಲ್ಲಿದುದನ್ನು ಕೀಲಿ ಮನೆಗೆ ಇಳಿಸುವ ಹೊರತು ನಿದ್ದೆ ಬರುವುದಿಲ್ಲ ಎನಗೆ..ಸರಿ...ಶುರುವಾಯಿತು ಪರದೆ ಜಾರಿತು...ಸಿನಿಮಾ ಶುರುವಾಯಿತು...

ಹಿನ್ನೋಟ...

ಕುವೈತ್ ದೇಶದಲ್ಲಿ ನೆಲೆಸಿರುವ ಕರುನಾಡಿನ ಅಜಾದ್ ಸರ್..ಬೆಂಗಳೊರಿಗೆ ಭೇಟಿ ನೀಡಲು ಬಂದಿದ್ದರು...ಬರುವಾಗ...
ಪ ಪ ಪ ಪ ಅಂತ ಒಂದು ಕಹಳೆಯನ್ನೇ ಮಿತ್ರರ ವಾಲ್ ನಲ್ಲಿ ಊದಿಬಿಟ್ಟಿದ್ದರು..ಒಬ್ಬೊಬ್ಬರಾಗಿ ಬೆಂಗಳೂರಿನ ಇತಿಹಾಸ ಪ್ರಸಿದ್ದ ಕಹಳೆ ಬಂಡೆಯ ಹತ್ತಿರ ಇರುವ ಕಾಮತ ಬುಗಲ್ ರಾಕ್ ರೆಸ್ಟೋರಂಟ್ ಬಳಿ ಜಮಾಯಿಸಲು ಶುರುಮಾಡಿದ್ದರು...
ಬ್ಲಾಗಿಗರ ಗುಂಪು! (ಚಿತ್ರ ಕೃಪೆ - ಅಜಾದ್ ಸರ್ )

ಮೊದಲಿಗೆ "ನಿಮ್ಮೊಳಗೊಬ್ಬ ಬಾಲೂ" ಬ್ಲಾಗಿನ ಬಾಲೂ ಸರ್ , ದಾಖಲೆ ಮಾರಾಟಗೊಂಡ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಪುಸ್ತಕ ಹಾಗು "ಹಾಡು ಹುಟ್ಟಿದ ಸಮಯ" ಹಾಗೂ ಇನ್ನು ಅನೇಕ ಪುಸ್ತಕಗಳ ಕತೃ ಮಣಿಕಾಂತ್ ಸರ್, ಸುಂದರ ನಗೆಯ ಸುಲತ ಹಾಗೂ ನಾನು ಕಾಯುತ್ತ ನಿಂತಿದ್ದೆವು. ಸಮಯ ಕಳೆಯಲೆಂದು ಕಲ್ಲಂಗಡಿ ರಸ ಕುಡಿಯುವ ಎಂದು ಚೀಟಿ ತೆಗೆದುಕೊಂಡೆವು.  ಸುಮಾರು ಅರ್ಧ ಘಂಟೆಯಾದರೂ ಪತ್ತೆ ಇಲ್ಲ...ಬಾಲೂ ಸರ್ ಏನ್ ಶ್ರೀಕಾಂತ್...ಇವರೇನು ತೋಟಕ್ಕೆ ಹೋಗಿದ್ದಾರ ಕಲ್ಲಂಗಡಿ ಬೆಳೆಯಲಿಕ್ಕೆ ಅಂದರು.....ಅಲ್ಲಿದ್ದ ಸುಂದರ (?) ತರುಣಿ ನಮ್ಮಿಬ್ಬರನ್ನೇ ನೋಡುತ್ತಾ ಕಡೆಗೆ ಬೇಜಾರಾಗಿ..ಪೋಸ್ಟ್ ಮಾರ್ಟಂ ಮಾಡುವ ರೀತಿ ಕಲ್ಲಂಗಡಿಯನ್ನ ಕೊಚ್ಚಲು (ಹಃ ಹಃ ಆಕೆ ಹೆಚ್ಚುತ್ತಾ ಇದ್ದದ್ದು ಹಾಗೆ ಇತ್ತು)..ಅಷ್ಟರಲ್ಲಿ ಆಕೆಯನ್ನು ರಕ್ಷಿಸಲು ಇನ್ನೊಬ್ಬ ಮಹನೀಯ ಬಂದು ಚಕ ಚಕಾ ಅಂತ ಜ್ಯೂಸು ಸಿದ್ಧ ಮಾಡಿಕೊಟ್ಟ....ಇನ್ನೇನು ಕುಡಿಯಬೇಕು ಅಷ್ಟರಲ್ಲಿ ಕೃಷ್ಣ-ಅರ್ಜುನರಂತೆ "ಇಟ್ಟಿಗೆ ಸಿಮೆಂಟ್ "ಬ್ಲಾಗಿನ ಪ್ರಕಾಶಣ್ಣ ಮತ್ತು "ಜಲನಯನ "ಮೇಡಂ" ಖ್ಯಾತಿಯ ಅಜಾದ್ ಸರ್ ಒಳಗೆ ಬಂದರು...ಅವರ ಹಿಂದೆಯೇ "ಛಾಯ ಕನ್ನಡಿಯ" ಪ್ರತಿಭೆ ಶಿವೂ ಸರ್ ಬಂದರು...ಸರಿ ಎಲ್ಲರೂ ಹಂಚಿಕೊಂಡು ಜ್ಯೂಸು ಕುಡಿದೆವು.

ಬದರಿನಾಥ್ ನಮ್ಮ ಜೊತೆ ಸೇರಲು ಅರ್ಧ ದಾರಿಗೆ ಬಂದಿದ್ದಾಗ ಕಚೇರಿಯಿಂದ ಮತ್ತೆ ಕರೆ ಬಂದು ಅವರು ವಾಪಸ್ ತಮ್ಮ ಕೆಲಸಕ್ಕೆ ಹೊರತು ಹೋದ ವಿಷಯ ಕೇಳಿ ಮನಸಿಗೆ ಬೇಜಾರಾಯಿತು..ಹಾಗೆಯೇ ಸಂಬಂಧಿಕರ ಅಕಾಲಿಕ ಮರಣ ಶಕುಂತಲ ಅಯ್ಯರ್ ಅವರನ್ನು ಗೈರು ಹಾಜರಿ ಹಾಕಿಸಿತು...ಶಮ್ಮಿ ಸಂಜೀವ್ ಕೆಲಸದ ಒತ್ತಡದ ಕಾರಣ ಬರಲಾಗಲಿಲ್ಲ ಎಂದು ತಿಳಿಸಿದರು.

ಅಜಾದ್ ಸರ್ ನಡೀರಿ ಮೇಲೆ ಹೋಗೋಣ ಅಂದರು...ಸುಲತ ಕಿಸಕ್ಕನೆ ನಕ್ಕು ಇಷ್ಟು ಬೇಗನಾ ..ಎಷ್ಟೋ ಕನಸುಗಳು ಬಾಕಿ ಇವೆ..ಎಂದರು...ಎಲ್ಲರು ಗೊಳ್ ಎಂದು ನಕ್ಕು..ಎರಡನೇ ಮಹಡಿಗೆ ಬಂದೆವು...

ಅಲ್ಲಿಗೆ "ಬಿಳಿಮುಗಿಲು" ಬ್ಲಾಗಿನ ರೂಪ ಸತೀಶ್, "ವಿಧ್ಯಾಇಲಾಖೆಯ" ಸುಮಾ ಮೇಡಂ, ಜ್ಯೋತಿ, "ಸ್ವಂತ ಪತ್ರಿಕೆ" ನಡೆಸುತ್ತಿರುವ ಗುರುನಾಥ್ ಬೋರಗಿ, "ಪೆನ್ನು ಪೇಪರ್" ಬ್ಲಾಗಿನ ನಾಗರಾಜ್ ಮತ್ತು ಅನಿಲ್ ಸೇರಿಕೊಂಡರು. ಒಂದು ಬಳಗವೇ ಆಯಿತು. ಎಲ್ಲರೂ ಸಂತಸ ಭರಿತರಾಗಿ ಒಂದು ಎರಡು ಬಾಳೆಲೆ ಹರಡು ಪದ್ಯವನ್ನು ನೆನೆಯುತ್ತ ಹಾಕಿದ್ದನ್ನು ಸರಿಯಾಗಿ ಬಾರಿಸಿದೆವು.  ಊಟದ ಮಧ್ಯೆ...ರಾಜಕೀಯ,  ಕಾವೇರಿ, ಬ್ಲಾಗ್ಗಳ ದುಸ್ಥಿತಿ, ನಗೆ ಚಟಾಕಿಗಳು, ಇದರ ಮಧ್ಯೆ ಛಾಯಾ ಚಿತ್ರಣ ಎಲ್ಲವು ನಡೆದಿತ್ತು...

ಇಡಿ ತಂಡದ ಒಂದು ಚಿತ್ರ ತೆಗೆದುಕೊಂಡು ಹೊರಡುವ ಅನ್ನುವಷ್ಟರಲ್ಲಿ ಮೈಸೂರಿನಿಂದ ಸತೀಶ್ ಕನ್ನಡಿಗ ಅವರು ಬಂದದ್ದು ಎಲ್ಲರಿಗೂ ಸಂತಸ ತಂದಿತು..ಅವರು ಊಟ ಮಾಡಿ ಎಲ್ಲರು ತಮ್ಮ ತಮ್ಮ ಮನೆ,  ಆಫೀಸ್ ಅಥವಾ ಬೇರೆ  ಕೆಲಸಗಳಿಗಾಗಿ ಹೊರಟರು...ಶಿವೂ ಸರ್ ತಮ್ಮ ಪ್ರಶಸ್ತಿ ವಿಜೇತ ಪುಸ್ತಕ "ವೆಂಡರ್ ಕಣ್ಣು" ಕೊಟ್ಟು ಈ ದಿನದ ಗೆಳೆಯರ ಭೇಟಿಯನ್ನು ಹಸಿರಾಗಿಸಿದರು..

ನಾನು ಸೀದಾ ಮನೆಗೆ ಬಂದು ಅಣ್ಣಾವ್ರು ಹೇಳಿದ ಹಾಡನ್ನೇ ಗುನುಗುನಿಸಿ ಕಡೆಗೆ ಏನು ಮಾಡುವುದು ಬೇಡ ಎಂದು...ಸುಮ್ಮನಾದೆ..

ಸಂಜೆ ಸುಮಾರು ಏಳುವರೆ ಘಂಟೆಗೆ ಪ್ರಕಾಶಣ್ಣ ಕರೆ ಮಾಡಿ ಬನ್ನಿ ಮನೆಗೆ ಅಂದರು. ಅವರ ಆಹ್ವಾನವನ್ನು ತಿರಸ್ಕರಿಸುವ ಮನಸಾಗಲಿಲ್ಲ...ಮಡದಿ, ಹಾಗು ನನ್ನ ಮುದ್ದಿನ ಸ್ನೇಹಿತೆ (ನನ್ನ ಮಗಳು) ತಮ್ಮ ದಂತ ಪಂಕ್ತಿಗಳನ್ನ ತೋರಿಸಿದರು. ಪರಿಣಾಮ ಸುಮಾರು ಒಂದು ತಾಸಿನ ನಂತರ ನಡೆದಾಡುವ ದೇವರು ಪ್ರಕಾಶ ಹೆಗಡೆಯವರ ತಾಯಿಯ ರೂಪದಲ್ಲಿ ಕಾಣಿಸಿದರು. ಆ ಮಾತೃ ಸ್ವರೂಪವನ್ನು ನೋಡಿ ಮನಸಿಗೆ ಆಹ್ಲಾದಕರ ಅನುಭವವಾಯಿತು. ಸುಮಾರು ಒಂದು ಘಂಟೆ ಅದು ಇದು ಅಂತ ಲೋಕಾಭಿರಾಮವಾಗಿ ಮಾತಾಡುತ್ತ ಆಶಾ ಅತ್ತಿಗೆ ಕೊಟ್ಟ ಉಪ್ಪಿಟ್ಟು, ಕಾಫಿ ಕುಡಿದು, ಪ್ರಕಾಶಣ್ಣ ಆಶೀರ್ವಾದ ಮಾಡಿ ಕೊಟ್ಟ ನನ್ನ ಮೆಚ್ಚಿನ ಲೇಖನ ಪೂರ್ಣ ಚಂದ್ರ ತೇಜಸ್ವಿ ಅವರ ಪುಸ್ತಕ, ಅಮ್ಮನ ಆಶೀರ್ವಾದ, ಹಾಗೂ ಅಮ್ಮ ಕಸೂತಿ ಮಾಡಿ ನಮಗಾಗಿ ಕೊಟ್ಟ ಸುಂದರ ಹಾಸು ತೆಗೆದುಕೊಂಡು ಮನೆಗೆ ತಲುಪಿದಾಗ  ಪ್ರಪಂಚವನ್ನೇ ಗೆದ್ದ ಸಂಭ್ರಮ..

ಮನೆ ಹತ್ತಿರ ಕಾರು ನಿಂತಾರ..ರೇಡಿಯೋದಲ್ಲಿ ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು ನಮ್ಮೆಲರನ್ನು ಮತ್ತೆ ಬಂಧಿಸಿಹುದೋ ಕಾಣೆ......

ಇದಲ್ಲವೇ ಭಾಗ್ಯ...ಸುಂದರ ದಿನ ಕಳೆಯಲು ಅನುವು ಮಾಡಿಕೊಟ್ಟ ಎಲ್ಲ ಬ್ಲಾಗ್ ಪ್ರಪಂಚದ ಮಿತ್ರರಿಗೆ ಈ ಲೇಖನ ಅರ್ಪಿತ..!!!

26 comments:

  1. ಶ್ರೀ ನಿನ್ನೆ ಚಿತ್ರಗಳನ್ನುವದನಮಸ್ತಕದ(facebook ಹಂಗೆ ಸುಮ್ನೆ!!!) ಮೇಲೆ ನೋಡಿದಾಗಿನಿಂದ ಈ ವರದಿಗೆ ಚಡಪಡಿಸುತ್ತಿದ್ದೆ...ಬ್ಲಾಗ್ ಲೋಕದ ಅತಿರಥ,ಮಹಾರಥರೆಲ್ಲಾ ಸೇರಿದ್ದು,ಯಾರು ಮೊದಲು ಬರೆಯಬಹುದು ಎಂದು ಯೋಚಿಸುತ್ತಿದ್ದೆ...ಧನ್ಯವಾದ ಒಪ್ಪವಾದ ಬರಹಕ್ಕಾಗಿ....ಬರೆಯುತ್ತಿರಿ..
    ಸಿಗಣಾ...

    ReplyDelete
    Replies
    1. ಸುಂದರ ಪ್ರತಿಕ್ರಿಯೆ..ಧನ್ಯವಾದಗಳು ಚಿನ್ಮಯ್...ಹೊಟ್ಟೆಯೊಳಗೆ ಗುಡುಗುಡಿಸುವ ಪದಗಳು ಹೊರಬಂದಾಗಲೇ ಅದಕ್ಕೆ ಸಾರ್ಥಕತೆ...

      Delete
  2. ನಿಮಗೆ ಆ ಹಾಡು ನೆನಪಾದರೆ ನನಗೆ ತಟ್ಟನೆ ನೆನಪಾದದ್ದು:
    "ಮೂಗನ ಕಾಡಿದರೇನು" ಅಂತ! :(

    ಆಜಾದ್ ಸಾರ್ ಅವರನ್ನು ಜೊತೆಗೆ ನಿಮ್ಮೆಲ್ಲರನ್ನು ಭೇಟಿಯಾಗುವ ಸದಾವಕಾಶ ಮತ್ತೆ ಕಳೆದೆಕೊಂಡೆ. ಬಹಳ ಬೇಜಾರಾಯಿತು.

    ಆದರೇನು "ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ" ಎನ್ನುವಂತೆ ನಿಮ್ಮ ನೆನಪುಗಳೇ ನನಗೆ ಹಸಿರು.

    ReplyDelete
    Replies
    1. ಬದರಿ ಸರ್..ಕೆಲವೊಮ್ಮೆ ಕರೆಗಳು ಕೆರೆಯುವಂತೆ ಮಾಡುತ್ತವೆ..ಬದುಕು ಸಾಗಲೇ ಬೇಕು...ಇನ್ನೊಮ್ಮೆ ಅವಕಾಶ ಇದ್ದೆ ಇರುತ್ತದೆ..ನಿರಾಶೆ ಬೇಡ..ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ..

      Delete
  3. ಆತ್ಮೀಯ ಶ್ರೀಕಾಂತ,
    ಬ್ಲಾಗಿಗರ ಕೂಟ ಬೆಂಗಳೂರಿನ ಮಿತ್ರರಿಗೆ ಮಾಡಿದ್ದು, ಈ ಬ್ಲಾಗಿಗನಿಗೆ ತುಸು ನಿರಾಸೆ ಎನಿಸಿತು. ಏನೇ ಆದರು ಜೀವನೋತ್ಸಾಹ ಅಂದರೆ ಇದೇನೇ. ಬಾಳಿನ ಪ್ರತಿಕ್ಷಣವನ್ನು ಅನುಭವಿಸಿ ಬಿಡುವುದು. ತುಂಬಾ ಖುಷಿಯಾಗುತ್ತೆ ನಿನ್ನ ಲೇಖನ ಓದುವಾಗ. ಹೀಗೆ ಖುಷಿಯಾಗಿ ಸಾಗಲಿ ನಿನ್ನ ಪಯಣ.

    ReplyDelete
    Replies
    1. ಚಿಕ್ಕಪ್ಪ.ಇದು ಬ್ಲಾಗಿಗರ ಕೂಟ ಒಂದು ರೀತಿ ಹೌದು..ಇನ್ನೊಂದು ರೀತಿಯಲ್ಲಿ ಅಲ್ಲ...ಅಜಾದ್ ಸರ್ ಕುವೈತ್ ಇಂದ ಇಲ್ಲಿ ಭೇಟಿ ನೀಡಿದ್ದ ಬಿಡುವಿನ ಸಮಯದಲ್ಲಿ ಎಲ್ಲರು ಸೇರಿದೆವು...ತುಂಬು ಮನಸಿನ ಹಾರೈಕೆಗಳಿಗೆ ಧನ್ಯವಾದಗಳು

      Delete
  4. Replies
    1. ಎಸ್.ಪಿ..ಬೇಸರ ಬೇಡ...ಇನ್ನೊಮ್ಮೆ ಎಲ್ಲರೂ ಅವಕಾಶವಾದಾಗ ಸೇರುವ....

      Delete
  5. Replies
    1. ಬಿಡದಿ ತಟ್ಟೆ ಇಡ್ಲಿಗೆ, ರಾಮನಗರ ರೇಷ್ಮೆ ಗೂಡಿಗೆ.ಚನ್ನಪಟ್ಟಣ ಮರದ ಗೊಂಬೆಗಳಿಗೆ, ಮದ್ದೂರ್ ವಡೆಗೆ, ಮಂಡ್ಯ ಸಕ್ಕರೆಗೆ ಹೆಸರುವಾಸಿ..ಹಾಗೆ ನಮ್ಮ ಎಸ್.ಎಸ್ ಸುಂದರ ನಗೆಗೆ ಹೆಸರುವಾಸಿ..ಅದೇ ಪ್ರತಿಕ್ರಿಯೆಯಾಗಿದ್ದು ನಮಗೆ ಖುಷಿ...

      Delete
  6. Naanu urinalli iruva kaarana miss maadikolluva haage ayithu.......

    ReplyDelete
    Replies
    1. ಒಮ್ಮೆ ಬೇಸರ ಮಾಡಿಕೊಂಡರೆ ಎರಡು ಬಾರಿ ಬೇಸರವಾಗುತ್ತೆ ಎನುವುದಕ್ಕೆ ಗಿರೀಶ್ ಕಳಿಸಿರುವ ಎರಡು ಸಂದೇಶಗಳೇ ಸಾಕ್ಷಿ...ಜನನಿಯಾ ಬಳಿ ಇದ್ದಾಗ ಎಂತಹ ಬೇಸರ ಗಾಳಿಗೆ ತೋರಿ ಹಳೆ ಬೀಡಾಗುತ್ತದೆ..ಧನ್ಯವಾದಗಳು ಗಿರೀಶ್

      Delete
  7. Naanu urinalli iruva kaarana miss maadikolluva haage ayithu.......

    ReplyDelete
    Replies
    1. ಒಮ್ಮೆ ಬೇಸರ ಮಾಡಿಕೊಂಡರೆ ಎರಡು ಬಾರಿ ಬೇಸರವಾಗುತ್ತೆ ಎನುವುದಕ್ಕೆ ಗಿರೀಶ್ ಕಳಿಸಿರುವ ಎರಡು ಸಂದೇಶಗಳೇ ಸಾಕ್ಷಿ...ಜನನಿಯಾ ಬಳಿ ಇದ್ದಾಗ ಎಂತಹ ಬೇಸರ ಗಾಳಿಗೆ ತೋರಿ ಹಳೆ ಬೀಡಾಗುತ್ತದೆ..ಧನ್ಯವಾದಗಳು ಗಿರೀಶ್

      Delete
  8. nimmellara bhEti....santasa :).... Missed many of them though....looking forward to meet you all soon again :).....

    ReplyDelete
    Replies
    1. ಧನ್ಯವಾದಗಳು ರೂಪ..ನಿಮ್ಮೆಲ್ಲರನ್ನು ಭೇಟಿ ಮಾಡಿದ್ದು ನಮಗೂ ಸಂತಸದಾಯಕ ವಿಷಯ...

      Delete
  9. ಶ್ರೀ ಸಾರ್..

    ಬಹಳ ಮುದ ಕೊಟ್ಟ ಬರಹ.. :) :)

    ಬ್ಲಾಗಿಗರೆಲ್ಲ ಭೇಟಿ ಆಗುವ ವಿಚಾರದ ಸಣ್ಣ ಸುಳಿವು ಸಿಕ್ಕಿದ್ದರೂ ಬರುವ ಪ್ರಯತ್ನ ನಡೆಸಬಹುದಿತ್ತು.. :( :(

    ಋಣಾನು ಬಂಧ ರೂಪೇಣ.. ಬ್ಯೂಗಲ್ ರಾಕ್ ಸಮನ್ವಯ.. ನಂಗೆ ಋಣ ಇರ್ಲಿಲ್ಲ ಅನ್ಸತ್ತೆ.. :(

    ಆದರು ನಿಮ್ಮ ಈ ಬರಹ ಕಂಡ ಮೇಲೆ ಅಲ್ಲೇ ನಿಮ್ಮ ಜೊತೆಯಲ್ಲೇ.. ನಿಮಗಾರಿಗೂ ಕಾಣದೆ ನಾ ಸುತ್ತಿ ಬಂದ ಸಾಕ್ಷಾತ್ ಅನುಭವಾಯಿತು.. :)

    ಆದರೆ ಕಲ್ಲಂಗಡಿ ಹಣ್ಣಿನ ಜ್ಯೂಸ್ ನ ಸ್ವಾದ ಮಾತ್ರ ಎಷ್ಟು ಪ್ರಯತ್ನ ಪಟ್ರೂ ಅಸ್ವಾಧಿಸೋಕಾಗ್ತಾ ಇಲ್ಲ.. ಇದೊಂದು ವಿಷಯದಲ್ಲಿ ಮಾತ್ರ ನನ್ನ ಪ್ರಯತ್ನ ನಂಗೆ ಅನ್ಯಾಯ ಮಾಡ್ತಾ ಇದೆ ಅಂದ್ರೆ ನೂರಕ್ಕೆ ನೂರು ಸುಳ್ಳಲ್ಲ.. :( :(

    ಅಷ್ಟು ದೂರದಿಂದ ಬಂದ ಆಜಾದ್ ಅಣ್ಣನನ್ನ ನೋಡೋ ಅವಕಾಶವನ್ನ.. ಇಷ್ಟೇ ಇಷ್ಟು ದೂರದಲ್ಲಿ.. ಇಷ್ಟೇ ಇಷ್ಟು negligency ಇಂದ miss ಮಾಡ್ಕೊಳ್ಳೋ ಹಾಗಾಯ್ತು. :( :(

    ಮತ್ತೆ ಎಲ್ಲರನ್ನು ನೋಡ್ಬೇಕು ಅಂದ್ರೆ ಮತ್ತೊಂದು ವಸಂತ ಕಾಲದಂತಾ ಸಮಯಕ್ಕೇನೆ ಕಾಯಬೇಕು... :( :(

    ಆ ಸಮಯ ಬೇಗ ಬರಲಿ ಅನ್ನೋದು ಸದ್ಯದ ಮಟ್ಟಿಗೆ ಬಹು ಮುಖ್ಯ ಆಶಯ.. :) :)

    ಬರಹ ಬಹಳಾನೇ ಹಿಡಿಸ್ತು.. :) :)

    ReplyDelete
    Replies
    1. "ನನ್ನ ಮೆಚ್ಚಿನ ಅಪ್ಪಾಜಿ"ಯ ಹಾಡಿನೊಂದಿಗೆ ಪ್ರಾರಂಭಿಸಿದ ನಿಮ್ಮ ಈ ಬರಹ,

      ಬ್ಲಾಗ್ ಲೋಕದ "ಒಡಹುಟ್ಟಿದವರ" ಹಾಗೆಯೇ ಇರುವ, "ಧ್ರುವತಾರೆ" ಗಳನ್ನ, ಇಂಥದೊಂದು "ಅಪೂರ್ವ ಸಂಗಮ"ವನ್ನ,

      ನೋಡಿ, ಓದಿ ತುಂಬಾ ಖುಷಿಯಾಯ್ತು ಶ್ರೀಕಾಂತ್ ಸಾರ್ :D

      "ಭಾಗ್ಯವಂತರು... ನಾವೇ ಭಾಗ್ಯವಂತರು...." ಹಾಡಿನೊಂದಿಗೆ ಮುಕ್ತಾಯಗೊಳಿಸಿದ್ದರೆ, ಐಸ್ ಕ್ರೀಮಿನ ಮೇಲೆ ಚೆರ್ರಿ ಹಣ್ಣನ್ನ ಇತ್ತಷ್ಟೇ ಆಕರ್ಷಕವಾಗಿರುತ್ತಿತ್ತು ;-)

      ಧನ್ಯವಾದಗಳು :-)

      Delete
    2. "ಸರ" ವಿರಲಿ..."ಸರ"ಸವಿರಲಿ...ನೇ"ಸರ" ಇರಲಿ...ಆದರೆ ಬೇಸರ ಎಂದಿಗೂ ಬೇಡ ಗೆಳೆಯ...ಯುಗಾದಿ ಮರಳಿ ಬರುವ ಹಾಗೆ..ಈ ತರಹದ ಭೇಟಿ ಕೂಡ ಮರಳಿ ಸಿಗುತ್ತದೆ..ಸುಂದರ ಪ್ರತಿಕ್ರಿಯೆ...ಖುಷಿ ನೀಡುತ್ತದೆ.ಧನ್ಯವಾದಗಳು ಸತೀಶ್

      Delete
    3. ಗೆಳೆತನಕ್ಕೆ ದುರ್ಯೋಧನ, ಕರ್ಣ ಸಾಕ್ಷಿ...ಜೋಡಿ ಜೀವಕ್ಕೆ ಗಂಡ ಭೇರುಂಡ ಸಾಕ್ಷಿ...ಒಬ್ಬರಿಗೊಬ್ಬರು ಒಡನಾಡಿ ಮಾತ್ರ ಅಲ್ಲದೆ ಪ್ರತಿಕ್ರಿಯೆ ಮಾಡುವಾಗ ಕೂಡ ಗೆಳೆತನ ಹಂಚಿಕೊಳ್ಳುವ ಅಪರೂಪದ ಗೆಳೆಯರು ಸತೀಶ್ ಹಾಗು ರಾಘವ...
      ರಾಘವ ಅವರೇ..ನಿಮ್ಮ ಪ್ರತಿಕ್ರಿಯೆಯಲ್ಲಿ ನನ್ನ ನೆಚ್ಚಿನ ಅಣ್ಣಾವ್ರ ಚಿತ್ರಗಳು ನುಸುಳಿಸಿರುವುದು ಸಕತ್...ಹೌದು ನೀವು ಹೇಳಿದ ಭಾಗ್ಯವಂತರು ನಾವೇ ಭಾಗ್ಯವಂತರು ಹಾಡು ಸರಿ ಹೋಗುತಿತ್ತು...ನಮ್ಮದು ಜನ್ಮ ಜನ್ಮಾಂತರದ ಸಂಬಂಧ ಎನ್ನುವ ಸಂತಸ ಬಂದಾಗ...ಭಾಗ್ಯವಂತರು ಕಾಣದಾಯಿತು...ಧನ್ಯವಾದಗಳು

      Delete
  10. ಶ್ರೀಕಾಂತ್...ಚಂದದ ಬರಹ...ಪ್ರೀತಿಯ ಸ್ನೇಹಿತರ ಸಂಗ ಇದ್ದರೆ...ಇನ್ನ್ಯಾವ ಐಶ್ವರ್ಯ ಬೇಕಲ್ಲವೇ...??

    ReplyDelete
    Replies
    1. ಸ್ನೇಹಾನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬ್ಲಾಗ್ ಲೋಕಕ್ಕೆ...ಬರಹಗಳೇ ಉಸಿರು...ಸುಂದರ ಪ್ರತಿಕ್ರಿಯೆ ಸುದೀಪ.

      Delete
  11. ಸಂತೋಷದ ಕ್ಷಣಗಳು ಬ್ರದರ್..
    ಹೀಗೆ ಬ್ಲಾಗಿಗರನ್ನು ಸೇರುವ ಅವಕಾಶ ನನಗೆಂದು ಸಿಗುವುದೋ ಎಂಬ ತವಕದಲ್ಲಿದ್ದೇನೆ..

    ReplyDelete
    Replies
    1. ಪಿ.ಎಸ್ ನಿಮ್ಮ ಪ್ರತಿಕ್ರಿಯೆ..ಅವಕಾಶಗಳು ಖಂಡಿತ ಬರುತ್ತವೆ....ನಿಮ್ಮೆಲ್ಲರ ಇನ್ನೊಮ್ಮೆ ಭೇಟಿ ಮಾಡುವ ತವಕ ನನಗೂ ಇದೆ.ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  12. ಏನ್ ಸರ್ ನಮಗೆ ಹೇಳೇ ಇಲ್ಲ.....ನಾನು ಬೆಂಗಳೂರಲ್ಲೇ ಇದ್ದು ಮಿಸ್ ಮಾಡ್ಕೊಂಡೆ ನೋಡಿ....ಹೀಗೆಲ್ಲ ನಮ್ಮನ್ನು ಬಿಟ್ಟು ನೀವೆಲ್ಲಾ ಸೇರಿದರೆ ಹೊಟ್ಟೆ ಕಿಚ್ಚು ಆಗೋದು ನೋಡಿ.......ಹೊಟ್ಟೆ ಉರಿ ತರಿಸಿದ ಬರಹ.......ಬ್ಲಾಗಿಗರ ಈ ಬಂಧ ಹೀಗೆ ಮುಂದುವರಿಯಲಿ.....

    ReplyDelete
    Replies
    1. ಸರ್ಜಿ...ಇದು ಅನ್ಯಾಯ.ಬೆಂಗಳೂರಿಗೆ ಬಂದಿದ್ದೀರಾ.ಒಂದು ಮೆಸೇಜ್ ಇಲ್ಲ...ಇರಲಿ...ಮತ್ತೆ ಬಂದಾಗ ಭೇಟಿ ಮಾಡುವ...ಬ್ಲಾಗ್ ಲೋಕ ಕೊಟ್ಟ ಅನೇಕ ಸುಂದರ ತಾರೆಗಳಲ್ಲಿ ಒಬ್ಬರಾದ ನಿಮ್ಮನ್ನು ನೋಡುವ ಅವಕಾಶ ನಮಗೂ ಸಿಗಲಿ..ಧನ್ಯವಾದಗಳು ಅಶೋಕ್ ಸರ್...

      Delete